ವನಿತಾ ತ್ರಿಕೋನ ಸರಣಿ: ಸೇಡು ತೀರಿಸಿಕೊಂಡ ಇಂಗ್ಲೆಂಡ್
ಭಾರತಕ್ಕೆ 4 ವಿಕೆಟ್ ಸೋಲು ; ಇಂದು ಆಸ್ಟ್ರೇಲಿಯ ಎದುರಾಳಿ
Team Udayavani, Feb 7, 2020, 10:26 PM IST
ಮೆಲ್ಬರ್ನ್: ವನಿತಾ ತ್ರಿಕೋನ ಟಿ20 ಸರಣಿಯಲ್ಲಿ ಭಾರತ ಸತತ 2ನೇ ಸೋಲುಂಡಿದೆ. ಶುಕ್ರವಾರ ಆರಂಭಗೊಂಡ ದ್ವಿತೀಯ ಸುತ್ತಿನ ಸ್ಪರ್ಧೆಯಲ್ಲಿ ಇಂಗ್ಲೆಂಡ್ ಕೈಯಲ್ಲಿ 4 ವಿಕೆಟ್ಗಳ ಹೊಡೆತ ಅನುಭವಿಸಿದೆ. ಇದರೊಂದಿಗೆ ಇಂಗ್ಲೆಂಡ್ ಮೊದಲ ಸುತ್ತಿನ ಸೋಲಿಗೆ ಸೇಡು ತೀರಿಸಿಕೊಂಡಿತು.
ಮೆಲ್ಬರ್ನ್ನ “ಜಂಕ್ಷನ್ ಓವಲ್’ನಲ್ಲಿ ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ 6 ವಿಕೆಟಿಗೆ ಕೇವಲ 123 ರನ್ ಗಳಿಸಿದರೆ, ಇಂಗ್ಲೆಂಡ್ 19 ಓವರ್ಗಳಲ್ಲಿ 6 ವಿಕೆಟಿಗೆ 124 ರನ್ ಹೊಡೆದು ಗೆದ್ದು ಬಂದಿತು. ಶನಿವಾರ ಭಾರತ ಆತಿಥೇಯ ಆಸ್ಟ್ರೇಲಿಯವನ್ನು ಎದುರಿಸಲಿದೆ. ಫೈನಲ್ ಪ್ರವೇಶಿಸಲು ಹರ್ಮನ್ಪ್ರೀತ್ ಪಡೆಗೆ ಇಲ್ಲಿ ಗೆಲುವು ಅನಿವಾರ್ಯ.
ಮಿಂಚಿದ ಮಂಧನಾ
ಭಾರತದ ಪರ ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಮತ್ತು ವನ್ಡೌನ್ನಲ್ಲಿ ಬಂದ ಜೆಮಿಮಾ ರೋಡ್ರಿಗಸ್ ಮಾತ್ರ ಇಂಗ್ಲೆಂಡ್ ದಾಳಿಯನ್ನು ತಡೆದು ನಿಂತರು. 10ನೇ ಓವರ್ ತನಕ ಕ್ರೀಸ್ನಲ್ಲಿ ಉಳಿದ ಮಂಧನಾ ಆಕ್ರಮಣಕಾರಿಯಾಗಿ ಆಡಿ 40 ಎಸೆತಗಳಿಂದ 45 ರನ್ ಬಾರಿಸಿದರು. ಇದರಲ್ಲಿ 7 ಬೌಂಡರಿ ಹಾಗೂ ಇನ್ನಿಂಗ್ಸಿನ ಏಕೈಕ ಸಿಕ್ಸರ್ ಸೇರಿತ್ತು. ಜೆಮಿಮಾ 20 ಎಸೆತಗಳಿಂದ 23 ರನ್ ಮಾಡಿದರು (3 ಬೌಂಡರಿ).
ಎರಡಂಕೆಯ ಗಡಿ ದಾಟಿದ ಮತ್ತೋರ್ವ ಆಟಗಾರ್ತಿ ನಾಯಕಿ ಹರ್ಮನ್ಪ್ರೀತ್ ಕೌರ್ (14). ಶಫಾಲಿ ವರ್ಮ (8), ವೇದಾ ಕೃಷ್ಣಮೂರ್ತಿ (2), ತನಿಯಾ ಭಾಟಿಯ (8) ವೈಫಲ್ಯ ಅನುಭವಿಸಿದರು. ಅನ್ಯಾ ಶ್ರಬೊÕàಲ್ (31ಕ್ಕೆ 3), ಕ್ಯಾಥರಿನ್ ಬ್ರಂಟ್ (23ಕ್ಕೆ 2) ಭಾರತವನ್ನು ಕಾಡಿದರು.
ಶೀವರ್ ಅರ್ಧ ಶತಕ
ಚೇಸಿಂಗ್ ವೇಳೆ ಇಂಗ್ಲೆಂಡ್ 28ಕ್ಕೆ 3 ವಿಕೆಟ್ ಕಳೆದುಕೊಂಡಿತಾದರೂ ನಥಾಲಿ ಶೀವರ್ ಅರ್ಧ ಶತಕದ ಮೂಲಕ ತಂಡಕ್ಕೆ ಆಸರೆಯಾದರು (38 ಎಸೆತ, 50 ರನ್, 6 ಬೌಂಡರಿ, 1 ಸಿಕ್ಸರ್). ನಾಯಕಿ ಹೀತರ್ ನೈಟ್ 18, ಫ್ರಾನ್ ವಿಲ್ಸನ್ ಔಟಾಗದೆ 20 ರನ್ ಮಾಡಿದರು.
ಸಂಕ್ಷಿಪ್ತ ಸ್ಕೋರ್
ಭಾರತ-6 ವಿಕೆಟಿಗೆ 123 (ಮಂಧನಾ 45, ಜೆಮಿಮಾ 23, ಶ್ರಬೊÕàಲ್ 31ಕ್ಕೆ 3, ಬ್ರಂಟ್ 23ಕ್ಕೆ 2). ಇಂಗ್ಲೆಂಡ್-19 ಓವರ್ಗಳಲ್ಲಿ 6 ವಿಕೆಟಿಗೆ 124 (ಶೀವರ್ 50, ಫ್ರಾನ್ ಔಟಾಗದೆ 20, ನೈಟ್ 18, ರಾಜೇಶ್ವರಿ 23ಕ್ಕೆ 3).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
3rd ODI ವನಿತಾ ಏಕದಿನ: ವಿಂಡೀಸ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್ಗೆ ಭಾರತ ಸಜ್ಜು
PAK Vs SA: ಸೆಂಚುರಿಯನ್ ಟೆಸ್ಟ್ ಪಾಕಿಸ್ಥಾನ 211ಕ್ಕೆ ಆಲೌಟ್
Test cricket: ಮ್ಯಾಚ್ ರೆಫರಿಯಾಗಿ ನೂರು ಟೆಸ್ಟ್ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್
Pro Kabaddi League: ಯುಪಿ ಯೋಧಾಸ್,ಪಾಟ್ನಾ ಪೈರೇಟ್ಸ್ ಸೆಮಿಫೈನಲಿಗೆ
IND Vs AUS ಬಾಕ್ಸಿಂಗ್ ಡೇ ಟೆಸ್ಟ್: ಆಸ್ಟ್ರೇಲಿಯ ರನ್ ಓಟಕ್ಕೆ ಬುಮ್ರಾ ಬ್ರೇಕ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.