ಟಿ20 ಸರಣಿ ಗೆದ್ದ ಭಾರತ
Team Udayavani, Nov 8, 2018, 6:10 AM IST
ಲಕ್ನೋ: ಸತತ 2ನೇ ಟಿ20 ಪಂದ್ಯದಲ್ಲಿ ಎದುರಾಳಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದ ರೋಹಿತ್ ಶರ್ಮ ನಾಯಕತ್ವದ ಭಾರತೀಯ ತಂಡ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿಯಿರುವಂತೆಯೇ ಗೆದ್ದಿದೆ. 11ನೇ ತಾರೀಖೀನಂದು ಚೆನ್ನೈನಲ್ಲಿ ನಡೆಯುವ 3ನೇ ಪಂದ್ಯ ಔಪಚಾರಿಕವಾಗಿದೆ. ರೋಹಿತ್ ಅಬ್ಬರಕ್ಕೆ ನಡುಗಿದ ವಿಂಡೀಸ್ ಸೊಲ್ಲೆತ್ತದೆ 71 ರನ್‌ಗಳಿಂದ ಶರಣಾಗಿದೆ. ವೆಸ್ಟ್ ಇಂಡೀಸ್ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ತನ್ನ ವೈಫಲ್ಯವನ್ನು ಮುಂದುವರಿಸಿದೆ.
ಏಕದಿನ ಸರಣಿಯಲ್ಲಿ ಬ್ಯಾಟಿಂಗ್‌ನಲ್ಲಿ ಮೆರೆದಿದ್ದ ವಿಂಡೀಸ್ ಕಡೆಕಡೆಗೆ ವೈಫಲ್ಯ ಅನುಭವಿಸಿತ್ತು. ಅದನ್ನು ಟಿ20ಯಲ್ಲೂ ಮುಂದುವರಿಸಿದೆ. ಟಾಸ್ ಸೋತು ಕ್ಷೇತ್ರರಕ್ಷಣೆ ಆಯ್ದುಕೊಂಡರೂ ಅದರ ಹಣೆಬರಹವೇನು ಬದಲಾಗಲಿಲ್ಲ. ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಂಡ ರೋಹಿತ್ ಬರೀ 61 ಎಸೆತಗಳಲ್ಲಿ 8 ಬೌಂಡರಿ, 7 ಸಿಕ್ಸರ್ ನೆರವಿನಿಂದ 111 ರನ್ ಬಾರಿಸಿ ಹಲವು ದಾಖಲೆಗಳೊಂದಿಗೆ ಸಿಂಗಾರಗೊಂಡರು. ಧವನ್ ನಿಧಾನಗತಿಯಲ್ಲಿ 43 ರನ್ ಬಾರಿಸಿದರೆ, ರಾಹುಲ್ ಸ್ಫೋಟಕ 26 ರನ್ ಚಚ್ಚಿದರು. ಭಾರತ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 195 ರನ್ ಗಳಿಸಿತು.
196 ರನ್ ಗುರಿಯಿಟ್ಟುಕೊಂಡು ಮುನ್ನುಗ್ಗಿದ ವಿಂಡೀಸ್ 9 ವಿಕೆಟ್ ಕಳೆದುಕೊಂಡು ಗಳಿಸಿದ್ದು 124 ರನ್ ಮಾತ್ರ. ಆ ತಂಡದ ಪರ ಡ್ಯಾರೆನ್ ಬ್ರಾವೊ ಗಳಿಸಿದ 23 ರನ್ನೇ ಗರಿಷ್ಠ ಸಾಧನೆ. ಭಾರತದ ಪರ ಬೌಲರ್‌ಗಳು ಸಂಘಟಿತ ಯಶಸ್ಸು ಸಾಧಿಸಿದರು. ಭುವಿ, ಖಲೀಲ್, ಬುಮ್ರಾ, ಕುಲದೀಪ್ ತಲಾ 2 ವಿಕೆಟ್ ಗಳಿಸಿದರು.
ಎಕ್ಸ್‌ಟ್ರಾ ಇನ್ನಿಂಗ್ಸ್
ಭಾರತ-ವೆಸ್ಟ್‌ಇಂಡೀಸ್
* ರೋಹಿತ್ ಶರ್ಮ ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ನಾಲ್ಕು ಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಮೂರು ಶತಕ ಹೊಡೆದಿರುವ ಕಾಲಿನ್ ಮುನ್ರೊ ಎರಡನೇ ಸ್ಥಾನದಲ್ಲಿದ್ದಾರೆ. ಇತರ ಯಾವುದೇ ಆಟಗಾರ ಎರಡಕ್ಕಿಂತ ಹೆಚ್ಚಿನ ಶತಕ ಹೊಡೆದಿಲ್ಲ.
* ಟಿ20ಯಲ್ಲಿ ಇದು ರೋಹಿತ್ ಅವರ ಆರನೇ ಶತಕವಾಗಿದೆ. ಕೇವಲ ನಾಲ್ಕು ಆಟಗಾರರು ಗರಿಷ್ಠ ಶತಕ ಹೊಡೆದಿದ್ದಾರೆ. 21 ಶತಕ ಹೊಡೆದಿರುವ ಕ್ರಿಸ್ ಗೇಲ್ ಅಗ್ರಸ್ಥಾನದಲ್ಲಿದ್ದಾರೆ. ಬ್ರೆಂಡನ್ ಮೆಕಲಮ್, ಲ್ಯೂಕ್ ರೈಟ್ ಮತ್ತು ಮೈಕಲ್ ಕ್ಲಿಂಗರ್ ತಲಾ ಏಳು ಶತಕ ಹೊಡೆದಿದ್ದಾರೆ. ನಾಲ್ಕು ಅಂತಾರಾಷ್ಟ್ರೀಯ ಶತಕ ಸಹಿತ ಇನ್ನೆರಡು ಶತಕಗಳು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ಐಪಿಎಲ್‌ನಲ್ಲಿ ಬಂದಿವೆ.
* ಟ್ವೆಂಟಿ20ರಲ್ಲಿ ರೋಹಿತ್ 50 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು 19 ಬಾರಿ ದಾಖಲಿಸಿದ್ದಾರೆ. ಈ ಸಾಧನೆಯಲ್ಲಿ ಅವರು ಕೊಹ್ಲಿ (18 ಸಲ) ಅವರನ್ನು ಹಿಂದಿಕ್ಕಿದ್ದಾರೆ.
* ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ರೋಹಿತ್ 2203 ರನ್ ಪೇರಿಸಿ ಕೊಹ್ಲಿ, ಮೆಕಲಮ್ ಮತ್ತು ಶೋಯಿಬ್ ಮಲಿಕ್ ಅವರನ್ನು ಹಿಂದಿಕ್ಕಿದ್ದಾರೆ.
* ರೋಹಿತ್ 2018ರಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟಾರೆ 69 ಸಿಕ್ಸರ್ ಬಾರಿಸಿದ್ದಾರೆ. ಒಂದು ಕ್ಯಾಲೆಂಡರ್ ವರ್ಷದಲ್ಲಿ ಇದು ಬ್ಯಾಟ್ಸ್‌ಮನ್ ಓರ್ವರ ಗರಿಷ್ಠ ಸಾಧನೆಯಾಗಿದೆ. ರೋಹಿತ್ ಕಳೆದ ವರ್ಷ 65 ಸಿಕ್ಸರ್ ಬಾರಿಸಿದ್ದು ಈ ಬಾರಿ ಅದನ್ನು ಮುರಿದಿದ್ದಾರೆ. ರೋಹಿತ್ ಈ ವರ್ಷ ಏಕದಿನದಲ್ಲಿ 39, ಟ್ವೆಂಟಿ20ಯಲ್ಲಿ 29 ಮತ್ತು ಟೆಸ್ಟ್‌ನಲ್ಲಿ ಒಂದು ಸಿಕ್ಸರ್ ಬಾರಿಸಿದ್ದಾರೆ.
* ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ರೋಹಿತ್ ಮತ್ತು ಧವನ್ ಜತೆಯಾಗಿ 1268 ರನ್ ಹೊಡೆದಿದ್ದಾರೆ. ಇದು ಜೋಡಿಯಾಗಿ ಗರಿಷ್ಠ ಸಾಧನೆಯಾಗಿದೆ. ಈ ಮೂಲಕ ಡೇವಿಡ್ ವಾರ್ನರ್ ಮತ್ತು ಶೇನ್ ವಾಟ್ಸನ್ ಜತೆಯಾಗಿ 1154 ರನ್ ಪೇರಿಸಿದ ಸಾಧನೆಯನ್ನು ಹಿಂದಿಕ್ಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ
Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.