ಗೇಮ್ಸ್ ಬಹಿಷ್ಕಾರ ವಾಪಸ್ ಪಡೆದ ಭಾರತ
2026 ಅಥವಾ 2030ರ ಗೇಮ್ಸ್‌ಗೆ ಐಒಎ ಬಿಡ್
Team Udayavani, Dec 31, 2019, 5:03 AM IST
ಹೊಸದಿಲ್ಲಿ: ಶೂಟಿಂಗ್ ಸ್ಪರ್ಧೆ ಕೈಬಿಟ್ಟ ಹಿನ್ನೆಲೆಯಲ್ಲಿ 2022ರ ಕಾಮನ್‌ವೆಲ್ತ್ ಗೇಮ್ಸ್ ಬಹಿಷ್ಕರಿಸುವ ಬೆದರಿಕೆಯನ್ನು ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಸೋಮವಾರ ಹಿಂದೆ ಗೆದುಕೊಂಡಿದೆ. ಇದೇ ವೇಳೆ ಭಾರತವು 2026 ಅಥವಾ 2030ರ ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯ ವಹಿಸಲು ಬಿಡ್ ಸಲ್ಲಿಸಲಿದೆ ಎಂದು ಪ್ರಕಟಿಸಿದೆ.
ಕಾಮನ್‌ವೆಲ್ತ್ ಗೇಮ್ಸ್ ಸಂಘಟಿಸುವ ನಿಟ್ಟಿನಲ್ಲಿ ಅಗತ್ಯವಿರುವ ಅನುಮತಿ ಪಡೆಯಲು ಐಒಎ ಸರಕಾರದ ಜತೆ ಚರ್ಚೆ ನಡೆಸಲಿದೆ. ಸೋಮವಾರ ನಡೆದ ಐಒಎ ವಾರ್ಷಿಕ ಮಹಾಸಭೆಯಲ್ಲಿ ಗೇಮ್ಸ್‌ನ ಆತಿಥ್ಯಕ್ಕೆ ಬಿಡ್ ಸಲ್ಲಿಸುವ ನಿರ್ಧಾರಕ್ಕೆ ಬರಲಾಗಿದೆ. ಭಾರತವು ಈ ಹಿಂದೆ ಹೊಸದಿಲ್ಲಿಯಲ್ಲಿ 2010ರಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಕೂಟವನ್ನು ಯಶಸ್ವಿಯಾಗಿ ಸಂಘಟಿಸಿತ್ತು.
ಸಿಜಿಎಫ್ ಸ್ವಾಗತ
2026 ಅಥವಾ 2030ರ ಕಾಮನ್‌ವೆಲ್ತ್ ಗೇಮ್ಸ್ ಆಯೋ ಜಿಸುವ ನಿಟ್ಟಿನಲ್ಲಿ ನಾವು ಬಿಡ್ ಸಲ್ಲಿಸಲು ಮತ್ತು ಇದೇ ವೇಳೆ 2022ರ ಗೇಮ್ಸ್‌ಗೆ ಭಾರತೀಯ ತಂಡವನ್ನು ಬರ್ಮಿಂಗ್‌ಹ್ಯಾಮ್‌ಗೆಕಳುಹಿಸಲು ಕೂಡ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ¤ ಹೇಳಿದ್ದಾರೆ. ಭಾರತದ ನಿರ್ಧಾರವನ್ನು ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್ (ಸಿಜಿಎಫ್) ಅಧ್ಯಕ್ಷ ಡಾಮಿ ಲೂಯಿಸ್ ಮಾರ್ಟಿನ್ ಸ್ವಾಗತಿಸಿದ್ದಾರೆ.
ಬರ್ಮಿಂಗ್‌ಹ್ಯಾಮ್ ಗೇಮ್ಸ್‌ನಲ್ಲಿ ಭಾರತ ಭಾಗವಹಿಸಲು ಆಸಕ್ತಿ ವಹಿಸಿದ್ದಕ್ಕೆ ಮತ್ತು ಮತ್ತೂಮ್ಮೆ ಗೇಮ್ಸ್ ಆಯೋಜಿಸಲು ಬಿಡ್ ಸಲ್ಲಿಸಲು ಭಾರತ ನಿರ್ಧರಿಸಿದ್ದಕ್ಕೆ ಸಿಜಿಎಫ್ ರೋಮಾಂಚನಗೊಂಡಿದೆ. ಕೊನೆಗೂ ಭಾರತ ಭವಿಷ್ಯದಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯ ವಹಿಸಲು ಉತ್ಸುಕತೆ ತೋರಿಸಿದೆ ಎಂದು ಲೂಯಿಸ್ ತಿಳಿಸಿದರು.
ಪ್ರತ್ಯೇಕ ಶೂಟಿಂಗ್ ಸ್ಪರ್ಧೆ ?
2022ರ ಗೇಮ್ಸ್‌ನಿಂದ ಶೂಟಿಂಗ್ ಕೈಬಿಟ್ಟ ಹಿನ್ನೆಲೆಯಲ್ಲಿ ಗೇಮ್ಸ್‌ಗೆ ಮುಂಚಿತವಾಗಿ ಪ್ರತ್ಯೇಕವಾಗಿ ಕಾಮನ್‌ವೆಲ್ತ್ ಶೂಟಿಂಗ್ ಚಾಂಪಿಯನ್‌ಶಿಪ್ ನಡೆಸಬೇಕೆಂಬ ಭಾರತೀಯ ರಾಷ್ಟ್ರೀಯ ರೈಫಲ್ ಅಸೋಸಿ ಯೇಶನ್‌ನ (ಎನ್‌ಆರ್‌ಎಐ) ಪ್ರಸ್ತಾವಕ್ಕೆ ಐಒಎ ಒಪ್ಪಿಗೆ ಸೂಚಿಸಿದೆ. ಎನ್‌ಆರ್‌ಎಐಯ ಪ್ರಸ್ತಾವವನ್ನು ಐಒಎ ತತ್‌ಕ್ಷಣವೇ ಸಿಜಿಎಫ್ಗೆ ಕಳುಹಿಸಲಿದೆ. ಈ ಪ್ರಸ್ತಾವವು ಸಿಜಿಎಫ್ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.