ಬಿಸಿಸಿಐ ಮಂಡಳಿ ವಿರುದ್ಧ ಆಸೀಸ್‌ಗೆ ಜಯ
Team Udayavani, Sep 13, 2017, 7:15 AM IST
ಚೆನ್ನೈ: ನಿರೀಕ್ಷೆಯಂತೆ ಪ್ರವಾಸಿ ಆಸ್ಟ್ರೇಲಿಯ ತಂಡ ಏಕದಿನ ಅಭ್ಯಾಸ ಪಂದ್ಯವನ್ನು ದೊಡ್ಡ ಅಂತರದಿಂದ ಜಯಿಸಿದೆ. ಮಂಗಳವಾರ ಇಲ್ಲಿನ “ಎಂ.ಎ. ಚಿದಂಬರಂ ಸ್ಟೇಡಿಯಂ’ನಲ್ಲಿ ನಡೆದ ಮುಖಾಮುಖೀಯಲ್ಲಿ ಅದು ಮಂಡಳಿ ಅಧ್ಯಕ್ಷರ ಬಳಗಕ್ಕೆ 103 ರನ್ನುಗಳ ಸೋಲುಣಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯ 50 ಓವರ್‌ಗಳಲ್ಲಿ 7 ವಿಕೆಟಿಗೆ 347 ರನ್ ಪೇರಿಸಿ ಸವಾಲೊಡ್ಡಿದರೆ, ಅನನುಭವಿ ತಂಡವಾದ ಮಂಡಳಿ ಅಧ್ಯಕ್ಷರ ಬಳಗ 48.2 ಓವರ್‌ಗಳಲ್ಲಿ 244ಕ್ಕೆ ಸರ್ವಪತನ ಕಂಡಿತು.
ಆಸೀಸ್ ಸರದಿಯಲ್ಲಿ 4 ಅರ್ಧ ಶತಕ ದಾಖಲಾದರೆ, ಆತಿಥೇಯರ ಸರದಿಯಲ್ಲಿ ಒಂದೂ ಶತಕಾರ್ಧ ಕಂಡುಬರಲಿಲ್ಲ. 4 ಮಂದಿ 40ರ ಗಡಿ ತಲುಪಿದರು. ಇವರಲ್ಲಿಬ್ಬರು ಬೌಲರ್‌ಗಳಾಗಿದ್ದರು. ಆರಂಭಕಾರ ಶ್ರೀವತ್ಸ ಗೋಸ್ವಾಮಿ 43, ಮಾಯಾಂಕ್ ಅಗರ್ವಾಲ್ 42, ಕುಶಾಂಗ್ ಪಟೇಲ್ 41 ಹಾಗೂ ಅಕ್ಷಯ್ ಕರ್ನೇವಾರ್ 40 ರನ್ ಹೊಡೆದರು. ನಾಯಕ ಮಾನ್ ಗಳಿಕೆ 27 ರನ್. ತ್ರಿಪಾಠಿ 7, ರಾಣ 19 ರನ್ ಮಾಡಿ ನಿರ್ಗಮಿಸಿದರು.
ಒಂದು ಹಂತದಲ್ಲಿ 8 ವಿಕೆಟಿಗೆ 156 ರನ್ ಮಾಡಿ ಬೇಗನೇ ಆಲೌಟ್ ಆಗುವ ಸೂಚನೆ ನೀಡಿದ್ದ ತಂಡವನ್ನು ಪಟೇಲ್-ಕರ್ನೇವಾಲ್ ಸೇರಿಕೊಂಡು ಇನ್ನೂರೈವತ್ತರ ಆಸುಪಾಸಿಗೆ ತಂದು ನಿಲ್ಲಿಸುವಲ್ಲಿ ಯಶಸ್ವಿಯಾದರು. ಆಸ್ಟ್ರೇಲಿಯ ಪರ ಎಡಗೈ ಸ್ಪಿನ್ನರ್ ಆ್ಯಶrನ್ ಅಗರ್ 44ಕ್ಕೆ 4 ವಿಕೆಟ್ ಉರುಳಿಸಿದರು.
ಆಸ್ಟ್ರೇಲಿಯ ರನ್ ರಾಶಿ
ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯ ರನ್ ರಾಶಿಯನ್ನೇ ಪೇರಿಸಿತು. ಆರಂಭಕಾರ ಹಿಲ್ಟನ್ ಕಾರ್ಟ್‌ರೈಟ್ ಹಾಗೂ ಮಧ್ಯಮ ಕ್ರಮಾಂಕದ ಅಪಾಯಕಾರಿ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಹೊರತುಪಡಿಸಿ ಪ್ರವಾಸಿ ತಂಡದ ಉಳಿದೆಲ್ಲ ಆಟಗಾರರೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನವಿತ್ತರು. ಕಾರ್ಟ್‌ರೈಟ್ ತಂಡದ ರನ್ ಖಾತೆ ತೆರೆಯುವ ಮೊದಲೇ ಆವೇಶ್ ಖಾನ್‌ಗೆ ವಿಕೆಟ್ ಒಪ್ಪಿಸಿದರೆ, ಹೆಡ್ 14 ರನ್ನಿಗೆ ಆಟ ಮುಗಿಸಿದರು.
ಆರಂಭಕಾರ ಡೇವಿಡ್ ವಾರ್ನರ್, ನಾಯಕ ಸ್ಟೀವನ್ ಸ್ಮಿತ್, ಟ್ರ್ಯಾವಿಸ್ ಹೆಡ್, ಮಾರ್ಕಸ್ ಸ್ಟೊಯಿನಿಸ್ ಅವರಿಂದ ಅರ್ಧ ಶತಕ ದಾಖಲಾಯಿತು. ಕೀಪರ್ ಮ್ಯಾಥ್ಯೂ ವೇಡ್ ಬಿರುಸಿನ ಗತಿಯಲ್ಲಿ 45 ರನ್ ಬಾರಿಸಿದರು. ಗಾಯಾಳು ಓಪನರ್ ಆರನ್ ಫಿಂಚ್ ಈ ಪಂದ್ಯದಿಂದ ಹೊರಗುಳಿದರು.
ಕಾರ್ಟ್‌ರೈಟ್ ಶೂನ್ಯಕ್ಕೆ ನಿರ್ಗಮಿಸಿದ ಬಳಿಕ ಜತೆಗೂಡಿದ ವಾರ್ನರ್-ಸ್ಮಿತ್ ದ್ವಿತೀಯ ವಿಕೆಟಿಗೆ 14.2 ಓವರ್‌ಗಳಿಂದ 196 ರನ್ ಪೇರಿಸಿದರು. ಈ ಹಂತದಲ್ಲಿ 48 ಎಸೆತಗಳಿಂದ 64 ರನ್ (11 ಬೌಂಡರಿ) ಬಾರಿಸಿದ ವಾರ್ನರ್ ಔಟಾದರು. 134ರ ಮೊತ್ತದಲ್ಲಿ ಸ್ಮಿತ್ ವಿಕೆಟ್ ಬಿತ್ತು. ಅವರ 55 ರನ್ 68 ಎಸೆತಗಳಿಂದ ಬಂತು (4 ಬೌಂಡರಿ, 1 ಸಿಕ್ಸರ್).
5ನೇ ವಿಕೆಟಿಗೆ ಜತೆಯಾದ ಹೆಡ್-ಸ್ಟೊಯಿನಿಸ್ ಆತಿಥೇಯರ ಬೌಲರ್‌ಗಳ ಮೇಲೆ ಸವಾರಿ ಮಾಡತೊಡಗಿದರು. ಹೆಡ್ 63 ಎಸೆತಗಳಿಂದ 65 ರನ್ (5 ಬೌಂಡರಿ, 1 ಸಿಕ್ಸರ್) ಹೊಡೆದರೆ, ಸ್ಟೊಯಿನಿಸ್ ಸರ್ವಾಧಿಕ 76 ರನ್ ಸಿಡಿಸಿದರು. 60 ಎಸೆತಗಳ ಈ ಆಕ್ರಮಣಕಾರಿ ಬ್ಯಾಟಿಂಗ್ ವೇಳೆ 5 ಸಿಕ್ಸರ್, 4 ಬೌಂಡರಿ ಸಿಡಿಯಲ್ಪಟ್ಟಿತು. ಕೀಪರ್ ವೇಡ್ ಕೇವಲ 24 ಎಸೆತ ಎದುರಿಸಿ 45 ರನ್ ಚಚ್ಚಿದರು (4 ಸಿಕ್ಸರ್, 2 ಬೌಂಡರಿ).
ಆಸೀಸ್ ಬ್ಯಾಟ್ಸ್‌ಮನ್‌ಗಳಿಗೆ ನಿಯಂತ್ರಣ ಹೇರಿದ ಏಕೈಕ ಬೌಲರ್ ವಾಷಿಂಗ್ಟನ್ ಸುಂದರ್. ಚೆನ್ನೈಯವರೇ ಆದ ವಾಷಿಂಗ್ಟನ್ 8 ಓವರ್‌ಗಳಲ್ಲಿ ಕೇವಲ 23 ರನ್ ನೀಡಿ 2 ವಿಕೆಟ್ ಕಿತ್ತರು. ಮಧ್ಯಮ ವೇಗಿ ಕುಶಾಂಗ್ ಪಟೇಲ್ ಕೂಡ 2 ವಿಕೆಟ್ ಪಡೆದರಾದರೂ ಇದಕ್ಕೆ 58 ರನ್ ಬಿಟ್ಟುಕೊಟ್ಟರು. ಆವೇಶ್ ಖಾನ್, ಕುಲ್ವಂತ್ ಖೆಜೊÅàಲಿಯ ಮತ್ತು ಅಕ್ಷಯ್ ಕರ್ನೇವಾಲ್ ಒಂದೊಂದು ವಿಕೆಟ್ ಉರುಳಿಸಿದರು. ಭಾರತ-ಆಸ್ಟ್ರೇಲಿಯ ನಡುವಿನ ಮೊದಲ ಏಕದಿನ ಪಂದ್ಯ ರವಿವಾರ ಇದೇ ಅಂಗಳದಲ್ಲಿ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-50 ಓವರ್‌ಗಳಲ್ಲಿ 7 ವಿಕೆಟಿಗೆ 347 (ವಾರ್ನರ್ 64, ಸ್ಮಿತ್ 55, ಹೆಡ 65, ಸ್ಟೊಯಿನಿಸ್ 76, ವೇಡ್ 45, ವಾಷಿಂಗ್ಟನ್ 23ಕ್ಕೆ 2, ಪಟೇಲ್ 58ಕ್ಕೆ 2). ಮಂಡಳಿ ಅಧ್ಯಕ್ಷರ ಇಲೆವೆನ್-48.2 ಓವರ್‌ಗಳಲ್ಲಿ ಆಲೌಟ್ 244 (ಗೋಸ್ವಾಮಿ 43, ಅಗರ್ವಾಲ್ 42, ಪಟೇಲ್ 41, ಕರ್ನೇವಾರ್ 40, ಅಗರ್ 44ಕ್ಕೆ 4, ರಿಚರ್ಡ್‌ಸನ್ 36ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.