ಕ್ಯಾಪ್ಟನ್ ಕೊಹ್ಲಿ ನೂರರ ಆಟ
Team Udayavani, Aug 3, 2018, 9:50 AM IST
ಎಜ್‌ಬಾಸ್ಟನ್: ಇಂಗ್ಲೆಂಡ್ ಪಾಲಿನ ಸಾವಿರನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಕಪ್ತಾನ ವಿರಾಟ್ ಕೊಹ್ಲಿ ನೂರರ ಆಟದ ಮೂಲಕ ರಂಜಿಸಿದ್ದಾರೆ. ಅವರು 149 ರನ್ ಬಾರಿಸಿ ಕುಸಿದ ಭಾರತಕ್ಕೆ ಆಸರೆಯಾಗಿ ನಿಂತರು. ಇಂಗ್ಲೆಂಡಿನ 287 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಜವಾಬು ನೀಡಿದ ಭಾರತ 274ಕ್ಕೆ ಆಲೌಟ್ ಆಯಿತು. 100 ರನ್ನಿಗೆ 5 ವಿಕೆಟ್ ಉರುಳಿಸಿಕೊಂಡು ತೀವ್ರ ಸಂಕಟದಲ್ಲಿದ್ದ ಭಾರತವನ್ನು ಕೊಹ್ಲಿ ಅಮೋಘ ಬ್ಯಾಟಿಂಗ್ ಹೋರಾಟದ ಮೂಲಕ ಮೇಲೆತ್ತಿದರು.
ಇದು 67ನೇ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಬಾರಿಸಿದ 22ನೇ ಶತಕ. 172 ಎಸೆತಗಳಲ್ಲಿ ಅವರ ಈ ಆಪತ್ಕಾಲದ ಶತಕ ದಾಖಲಾಯಿತು. ಒಟ್ಟು 225 ಎಸೆತ ಎದುರಿಸಿದ ಕೊಹ್ಲಿ 22 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರು. ಪಂದ್ಯದ ದ್ವಿತೀಯ ದಿನವಾದ ಗುರುವಾರ ಇಂಗ್ಲೆಂಡ್ 287 ರನ್ನುಗಳಿಗೆ ಸರ್ವಪತನ ಕಂಡಿತ್ತು. ಬಳಿಕ ಮಧ್ಯಮ ವೇಗಿಗಳಾದ ಸ್ಯಾಮ್ ಕರನ್ ಮತ್ತು ಬೆನ್ ಸ್ಟೋಕ್ಸ್ ಪ್ರವಾಸಿಗರ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದ್ದರು. ಆದರೆ ಕೊಹ್ಲಿ ಕಪ್ತಾನನ ಆಟದ ಮೂಲಕ ಆಂಗ್ಲರ ದಾಳಿಯನ್ನು ಮೆಟ್ಟಿ ನಿಂತರು. ಮೊದಲ ದಿನದಾಟದ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 285 ರನ್ ಮಾಡಿದ್ದ ಇಂಗ್ಲೆಂಡ್, 2 ರನ್ ಸೇರಿಸುವಷ್ಟರಲ್ಲಿ ಆಲೌಟ್ ಆಯಿತು. ಸ್ಯಾಮ್ ಕರನ್ ಅವರನ್ನು ಕೀಪರ್ ಕಾರ್ತಿಗೆ ಕ್ಯಾಚ್ ಕೊಡಿಸಿದ ಮೊಹಮ್ಮದ್ ಶಮಿ ಇಂಗ್ಲೆಂಡ್ ಸರದಿಗೆ ತೆರೆ ಎಳೆದರು.
ಶಮಿ ಸಾಧನೆ 64ಕ್ಕೆ 3. ಆದರೆ 62 ರನ್ನಿಗೆ 4 ವಿಕೆಟ್ ಕಿತ್ತ ಸ್ಪಿನ್ನರ್ ಆರ್. ಅಶ್ವಿನ್ ಹೆಚ್ಚಿನ ಯಶಸ್ಸು ಸಾಧಿಸಿದರು. ಉಳಿದಂತೆ ಉಮೇಶ್ ಯಾದವ್, ಇಶಾಂತ್ ಶರ್ಮ ಒಂದೊಂದು ವಿಕೆಟ್ ಉರುಳಿಸಿದರು.
ಭಾರತದ ಭರವಸೆಯ ಆರಂಭ
ಇಂಗ್ಲೆಂಡಿನ ಸಾಮಾನ್ಯ ಮೊತ್ತಕ್ಕೆ ಉತ್ತರವಾಗಿ ಭಾರತ ಭರವಸೆಯ ಆರಂಭವನ್ನೇ ಮಾಡಿತ್ತು. ಮುರಳಿ ವಿಜಯ್-ಶಿಖರ್ ಧವನ್ 13.4 ಓವರ್ ನಿಭಾಯಿಸಿ (70 ಎಸೆತ) ಮೊದಲ ವಿಕೆಟಿಗೆ ಭರ್ತಿ 50 ರನ್ ಪೇರಿಸಿದ್ದರು. ಆದರೆ ಈ ಹಂತದಲ್ಲಿ ಘಾತಕ ದಾಳಿ ಸಂಘಟಿಸಿದ ಎಡಗೈ ಮಧ್ಯಮ ವೇಗಿ ಸ್ಯಾಮ್ ಕರನ್ ಪ್ರವಾಸಿಗರಿಗೆ ಕಂಟಕವಾಗಿ ಪರಿಣಮಿಸಿದರು. ಕೇವಲ 8 ಎಸೆತಗಳ ಅಂತರದಲ್ಲಿ ಮುರಳಿ ವಿಜಯ್ (20), ಶಿಖರ್ ಧವನ್ (26) ಮತ್ತು ಕೆ.ಎಲ್. ರಾಹುಲ್ (4) ವಿಕೆಟ್ ಉಡಾಯಿಸಿ ಇಂಗ್ಲೆಂಡಿಗೆ ಮೇಲುಗೈ ಒದಗಿಸಿದರು. ಇವರಲ್ಲಿ ವಿಜಯ್ ಮತ್ತು ರಾಹುಲ್ ಅವರನ್ನು ಒಂದೇ ಓವರಿನಲ್ಲಿ ಪೆವಿಲಿಯನ್ನಿಗೆ ಅಟ್ಟಿದರು. ಪೂಜಾರ ಬದಲು ಅವಕಾಶ ಪಡೆದ ರಾಹುಲ್ ಮೊದಲ ಎಸೆತವನ್ನೇ ಬೌಂಡರಿಗೆ ಅಟ್ಟಿದರೂ ಮರು ಎಸೆತದಲ್ಲೇ ಬೌಲ್ಡ್ ಆದರು! ನೋಲಾಸ್ ಐವತ್ತರಲ್ಲಿದ್ದ ಭಾರತ, 59ಕ್ಕೆ ತಲುಪುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತ್ತು. ಕೊಹ್ಲಿ ಪಡೆಯ ಲಂಚ್ ಸ್ಕೋರ್ 3ಕ್ಕೆ 76 ರನ್. ದ್ವಿತೀಯ ಅವಧಿಯಲ್ಲೂ ಭಾರತ 3 ವಿಕೆಟ್‌ಗಳನ್ನು ಉರುಳಿಸಿಕೊಂಡಿತು. ಆಗ ಪ್ರವಾಸಿಗರನ್ನು ಕಾಡಿದವರು ಬೆನ್ ಸ್ಟೋಕ್ಸ್. ಅವರು ರಹಾನೆ ಮತ್ತು ಕಾರ್ತಿಕ್ ವಿಕೆಟ್ ಹಾರಿಸಿದರು. 22 ರನ್ ಗಳಿಸಿದ ಪಾಂಡ್ಯ ಕರನ್‌ಗೆ ಲೆಗ್ ಬಿಫೋರ್ ಆದರು.
ಚಹಾ ವಿರಾಮದ ವೇಳೆ ಭಾರತ 6 ವಿಕೆಟ್ ಕಳೆದುಕೊಂಡು 160 ರನ್ ಮಾಡಿತ್ತು. ಕೊಹ್ಲಿ ಜತೆಗೆ ಅಶ್ವಿನ್ ಕ್ರೀಸಿನಲ್ಲಿದ್ದರು. ಕೊಹ್ಲಿ ಅವರ 50 ರನ್ ಸರಿಯಾಗಿ 100 ಎಸೆತಗಳಲ್ಲಿ ಬಂತು. ಅವರ ಶತಕ ಸಾಧನೆಗೆ ಇಶಾಂತ್ ಶರ್ಮ ಉತ್ತಮ ಬೆಂಬಲ ಒದಗಿಸಿದರು.
ಜಾಸ್ ಬಟ್ಲರ್ ಆಸ್ಪತ್ರೆಗೆ…
ಟೆಸ್ಟ್ ಪಂದ್ಯದ 2ನೇ ದಿನ ಕ್ಷೇತ್ರರಕ್ಷಣೆ ವೇಳೆ ಕೈಬೆರಳಿಗೆ ಪೆಟ್ಟು ಮಾಡಿಕೊಂಡ ಇಂಗ್ಲೆಂಡಿನ ಜಾಸ್ ಬಟ್ಲರ್ ಲಂಚ್ ಬ್ರೇಕ್ ವೇಳೆ ಎಕ್ಸ್-ರೇಗಾಗಿ ಆಸ್ಪತ್ರೆಗೆ ತೆರಳಿದರು. ವಿರಾಟ್ ಕೊಹ್ಲಿ ಬಾರಿಸಿದ ಚೆಂಡನ್ನು ತಡೆಯುವ ಯತ್ನದಲ್ಲಿ ಗಲ್ಲಿ ವಿಭಾಗದಲ್ಲಿದ್ದ ಬಟ್ಲರ್ ವಿಫಲ ಪ್ರಯತ್ನ ಮಾಡಿದ್ದರು. ಆಗ ಚೆಂಡು ಎಡಗೈಗೆ ಬಡಿಯಿತು. ಮಧ್ಯದ ಬೆರಳಿಗೆ ತೀವ್ರ ನೋವಾದ್ದರಿಂದ ಬಟ್ಲರ್ ಆಸ್ಪತ್ರೆಗೆ ಹೋದರು.
ಎಕ್ಸ್‌ಟ್ರಾ ಇನ್ನಿಂಗ್ಸ್
(ಎಜ್‌ಬಾಸ್ಟನ್ ಟೆಸ್ಟ್: ಮೊದಲ ದಿನ)
* ಆರ್. ಅಶ್ವಿನ್ ಏಶ್ಯದ ಹೊರಗೆ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ “4 ಪ್ಲಸ್’ ವಿಕೆಟ್ ಉರುಳಿಸಿದ ಭಾರತದ 4ನೇ ಸ್ಪಿನ್ನರ್ ಎನಿಸಿದರು. ಉಳಿದವರೆಂದರೆ ಬಿ.ಎಸ್. ಚಂದ್ರಶೇಖರ್ (1976, ನ್ಯೂಜಿಲ್ಯಾಂಡ್), ಬಿಷನ್ ಸಿಂಗ್ ಬೇಡಿ (1977-78, ಆಸ್ಟ್ರೇಲಿಯ) ಮತ್ತು ಅನಿಲ್ ಕುಂಬ್ಳೆ (2007-08, ಆಸ್ಟ್ರೇಲಿಯ).
* ಅಶ್ವಿನ್ ಈಗ 7 ಕ್ರಿಕೆಟ್ ರಾಷ್ಟ್ರಗಳಲ್ಲಿ 4 ಪ್ಲಸ್ ವಿಕೆಟ್ ಉರುಳಿಸಿದ ಸಾಧನೆಗೈದರು. ಅವರಿನ್ನೂ ನ್ಯೂಜಿಲ್ಯಾಂಡ್, ಜಿಂಬಾಬ್ವೆ, ಪಾಕಿಸ್ಥಾನ/ಯುಎಇಯಲ್ಲಿ ಟೆಸ್ಟ್ ಆಡಿಲ್ಲ. ಭಾರತದ ಪರ ಅನಿಲ್ ಕುಂಬ್ಳೆ, ಜಹೀರ್ ಖಾನ್ ಎಲ್ಲ 10 ರಾಷ್ಟ್ರಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಹರ್ಭಜನ್ ಸಿಂಗ್ ಮತ್ತು ಇಶಾಂತ್ ಶರ್ಮ 7 ರಾಷ್ಟ್ರಗಳಲ್ಲಿ 4 ಪ್ಲಸ್ ವಿಕೆಟ್ ಬೇಟೆಯಾಡಿದ್ದಾರೆ.
* ಅಲಸ್ಟೇರ್ ಕುಕ್ ಟೆಸ್ಟ್ ಕ್ರಿಕೆಟ್‌ನಲ್ಲಿ 8 ಸಲ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. ಕುಕ್ ಅವರನ್ನು 8 ಸಲ ಔಟ್ ಮಾಡಿದ ಮತ್ತೂಬ್ಬ ಬೌಲರ್ ನಥನ್ ಲಿಯೋನ್. ಅಶ್ವಿನ್‌ಗೆ ಅತ್ಯಧಿಕ ಸಲ ವಿಕೆಟ್ ಒಪ್ಪಿಸಿದ ಆಟಗಾರನೆಂದರೆ ಡೇವಿಡ್ ವಾರ್ನರ್ (9).
* ಜೋ ರೂಟ್ ಭಾರತದ ವಿರುದ್ಧ ಆಡಿದ ಎಲ್ಲ 12 ಟೆಸ್ಟ್‌ಗಳಲ್ಲೂ 50 ಪ್ಲಸ್ ರನ್ ಬಾರಿಸಿದರು. ಉಳಿದವರ್ಯಾರೂ ಒಂದೇ ರಾಷ್ಟ್ರದ ವಿರುದ್ಧ ಸತತ ಹತ್ತಕ್ಕಿಂತ ಹೆಚ್ಚು ಸಲ 50 ಪ್ಲಸ್ ರನ್ ಹೊಡೆದಿಲ್ಲ.
* ರೂಟ್ ಕೇವಲ 5 ವರ್ಷ, 231 ದಿನಗಳಲ್ಲಿ 6 ಸಾವಿರ ರನ್ ಪೂರೈಸಿ ನೂತನ ದಾಖಲೆ ಸ್ಥಾಪಿಸಿದರು (ಟೆಸ್ಟ್ ಪಾದಾರ್ಪಣೆಯ ದಿನದಿಂದ). ಈ ಸಂದರ್ಭದಲ್ಲಿ ಅಲಸ್ಟೇರ್ ಕುಕ್ ಅವರ ದಾಖಲೆ ಪತನಗೊಂಡಿತು (5 ವರ್ಷ, 342 ದಿನ).
* ರೂಟ್ 6 ಸಾವಿರ ರನ್ ಪೂರ್ತಿಗೊಳಿಸಿದ 3ನೇ ಅತೀ ಕಿರಿಯ ಬ್ಯಾಟ್ಸ್‌ಮನ್ ಎನಿಸಿದರು (27 ವರ್ಷ, 214 ದಿನ). ಸಚಿನ್ ತೆಂಡುಲ್ಕರ್ (26 ವರ್ಷ, 313 ದಿನ್) ಮತ್ತು ಅಲಸ್ಟೇರ್ ಕುಕ್ (27 ವರ್ಷ, 43 ದಿನ) ಮೊದಲೆರಡು ಸ್ಥಾನದಲ್ಲಿದ್ದಾರೆ.
* ಇಂಗ್ಲೆಂಡ್ ಒಂದು ಸಾವಿರ ಟೆಸ್ಟ್ ಪಂದ್ಯ ಆಡಿದ ವಿಶ್ವದ ಮೊದಲ ತಂಡವೆನಿಸಿದರೆ, ಭಾರತ ಏಶ್ಯದ ಹೊರಗೆ ತನ್ನ 200ನೇ ಟೆಸ್ಟ್ ಆಡಲಿಳಿಯಿತು.
ಸ್ಕೋರ್‌ಪಟ್ಟಿ
ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್
(ನಿನ್ನೆಯಿಂದ ಮುಂದುವರಿದುದು)
ಜೋ ರೂಟ್ ರನೌಟ್ 80
ಜಾನಿ ಬೇರ್‌ಸ್ಟೊ ಬಿ ಯಾದವ್ 70
ಬೆನ್ ಸ್ಟೋಕ್ಸ್ ಸಿ ಮತ್ತು ಬಿ ಅಶ್ವಿನ್ 21
ಜಾಸ್ ಬಟ್ಲರ್ ಎಲ್‌ಬಿಡಬ್ಲ್ಯು ಅಶ್ವಿನ್ 0
ಸ್ಯಾಮ್ ಕರನ್ ಸಿ ಕಾರ್ತಿಕ್ ಬಿ ಶಮಿ 24
ಆದಿಲ್ ರಶೀದ್ ಎಲ್‌ಬಿಡಬ್ಲ್ಯು ಇಶಾಂತ್ 13
ಸ್ಟುವರ್ಟ್ ಬ್ರಾಡ್ ಎಲ್‌ಬಿಡಬ್ಲ್ಯು ಅಶ್ವಿನ್ 1
ಜೇಮ್ಸ್ ಆ್ಯಂಡರ್ಸನ್ ಔಟಾಗದೆ 2
ಇತರ 13
ಒಟ್ಟು (89.4 ಓವರ್‌ಗಳಲ್ಲಿ ಆಲೌಟ್) 287
ವಿಕೆಟ್ ಪತನ: 4-216, 5-223, 6-224, 7-243, 8-278, 9-283.
ಬೌಲಿಂಗ್:
ಉಮೇಶ್ ಯಾದವ್ 17-2-56-1
ಇಶಾಂತ್ ಶರ್ಮ 17-1-46-1
ಆರ್. ಅಶ್ವಿನ್ 26-7-62-4
ಮೊಹಮ್ಮದ್ ಶಮಿ 19.4-2-64-3
ಹಾರ್ದಿಕ್ ಪಾಂಡ್ಯ 10-1-46-0
ಭಾರತ ಪ್ರಥಮ ಇನ್ನಿಂಗ್ಸ್
ಮುರಳಿ ವಿಜಯ್ ಎಲ್‌ಬಿಡಬ್ಲ್ಯು ಕರನ್ 20
ಶಿಖರ್ ಧವನ್ ಸಿ ಮಾಲನ್ ಬಿ ಕರನ್ 26
ಕೆ.ಎಲ್. ರಾಹುಲ್ ಬಿ ಕರನ್ 4
ವಿರಾಟ್ ಕೊಹ್ಲಿ ಸಿ ಬ್ರಾಡ್ ಬಿ ರಶೀದ್ 149
ಅಜಿಂಕ್ಯ ರಹಾನೆ ಸಿ ಜೆನ್ನಿಂಗ್ಸ್ ಬಿ ಸ್ಟೋಕ್ಸ್ 15
ದಿನೇಶ್ ಕಾರ್ತಿಕ್ ಬಿ ಸ್ಟೋಕ್ಸ್ 0
ಹಾರ್ದಿಕ್ ಪಾಂಡ್ಯ ಎಲ್‌ಬಿಡಬ್ಲ್ಯು ಕರನ್ 22
ಆರ್. ಅಶ್ವಿನ್ ಬಿ ಆ್ಯಂಡರ್ಸನ್ 10
ಮೊಹಮ್ಮದ್ ಶಮಿ ಸಿ ಮಾಲನ್ ಬಿ ಆ್ಯಂಡರ್ಸನ್ 2
ಇಶಾಂತ್ ಶರ್ಮ ಎಲ್‌ಬಿಡಬ್ಲ್ಯು ರಶೀದ್ 5
ಉಮೇಶ್ ಯಾದವ್ ಔಟಾಗದೆ 1
ಇತರ 20
ಒಟ್ಟು (ಆಲೌಟ್‌ೆ) 274
ವಿಕೆಟ್ ಪತನ: 1-50, 2-54, 3-59, 4-100, 5-100, 6-148, 7-169, 8-182, 9-217.
ಬೌಲಿಂಗ್:
ಜೇಮ್ಸ್ ಆ್ಯಂಡರ್ಸನ್ 22-7-41-2
ಸ್ಟುವರ್ಟ್ ಬ್ರಾಡ್ 10-2-40-0
ಸ್ಯಾಮ್ ಕರನ್ 17-1-74-4
ಆದಿಲ್ ರಶೀದ್ 8-0-31-2
ಬೆನ್ ಸ್ಟೋಕ್ಸ್ 19-4-73-2
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್ ಬುಮ್ರಾ ಹೆಸರು
First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್ ಡ್ರಾ
ದಕ್ಷಿಣ ಭಾರತದ ಕುಸ್ತಿ ಚಾಂಪಿಯನ್‌ಶಿಪ್: ಚಿನ್ನ ಗೆದ್ದ ಧಾರವಾಡದ ಹಳ್ಳಿ ಪೈಲ್ವಾನ್
INDvAUS; ಅಭಿಮಾನಿಗಳ ಕಣ್ಣು ಕೆಂಪಗಾಗಿಸಿದ ಹೆಡ್ ವಿಚಿತ್ರ ಸೆಲೆಬ್ರೇಶನ್: ಇದರ ಅರ್ಥವೇನು?
INDvsAUS; ಮಾನಸಿಕವಾಗಿ ಕಾಡುತ್ತಿದೆ..: ಮೆಲ್ಬೋರ್ನ್ ಸೋಲಿನ ಬಳಿಕ ನಾಯಕ ರೋಹಿತ್ ಮಾತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.