ರೋಚಕ ಜಯದೊಂದಗೆ ಇಂಗ್ಲೆಂಡ್‌ಗೆ ಸರಣಿ
Team Udayavani, Mar 10, 2019, 12:30 AM IST
ಗುವಾಹಟಿ: ಇಂಗ್ಲೆಂಡ್ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ಭಾರತ 1 ರನ್‌ನಿಂದ ಹೀನಾಯವಾಗಿ ಸೋತು ಸರಣಿಯಲ್ಲಿ ವೈಟ್‌ವಾಶ್ ಅನುಭವಿಸಿದೆ.
ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 6 ವಿಕೆಟ್ ಕಳೆದುಕೊಂಡು 119 ರನ್ ದಾಖಲಿಸಿತು. ಈ ಸಾಧಾರಣ ಮೊತ್ತದ ಬೆನ್ನತ್ತಿದ್ದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿ ಒಂದು ರನ್‌ಗಳ ಹಿನ್ನಡೆಯಿಂದ ಸೋತು ಟೂರ್ನಿಯನ್ನು ಕೊನೆಗೊಳಿಸಿದೆ.
ಕೊನೆಯ ಓವರ್‌ನಲ್ಲಿ ಎಡವಿದ ಭಾರತ
ಸುಲಭ ಮೊತ್ತದ ಬೆನ್ನೇರಿದ ಭಾರತ ಆರಂಭಿಕ ಆಟಗಾರ್ತಿ ಹಲೀìನ್ ಡಿಯೋಲ್ ಅವರನ್ನು ಬೇಗನೇ ಕಳೆದುಕೊಂಡರೂ, ನಾಯಕಿ ಸ್ಮತಿ ಮಂಧನಾ ಎಚ್ಚರಿಕೆ ಆಟವಾಡಿ ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾದರು. ಮೊದಲೆರಡು ಪಂದ್ಯಗಳಲ್ಲೂ ವಿಫಲರಾಗಿದ್ದ ಸ್ಮತಿ ಇಲ್ಲಿ 58 ರನ್ ಬಾರಿಸಿ ಮಿಂಚಿದರು. ಯುವ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಗಳಿಸಿದ್ದು 11 ರನ್. ಇವರ ಬಳಿಕ ಬಂದ ಮಿಥಾಲಿ ರಾಜ್ ಎಚ್ಚರಿಕೆಯ ಆಟವಾಡಿ ಸ್ಮತಿ ಜತೆ ಸೇರಿ ತಂಡವನ್ನು ದಡ ತಲುಪಿಸುವ ಪ್ರಯತ್ನಪಟ್ಟರು. ಆದದೆ ಸ್ಮತಿ ಬಳಿಕ ಬಂದ ಆಟಗಾರ್ತಿಯರು ಮಿಥಾಲಿಗೆ (32 ಎಸೆತಗಳಲ್ಲಿ 30 ರನ್) ಸಾಥ್ ನೀಡದ ಕಾರಣ ತಂಡಕ್ಕೆ ಮುಳುವಾಗಿ ಪರಿಣಮಿಸಿತು. ಸ್ಮತಿ ಬಳಿಕ ಬಂದ ಭಾರತಿ 13 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿ ದುಬಾರಿಯಾದರು. ಕೊನೆಯ ಓವರ್‌ನಲ್ಲಿ ಭಾರತಕ್ಕೆ ಬೇಕಾಗಿದ್ದದ್ದು ಕೇವಲ 3 ರನ್. 19. 4 ಎಸೆತದಲ್ಲಿ ಭಾರತಿ, 19.5 ಎಸೆತದಲ್ಲಿ ಅನುಜಾ ಪಾಟೀಲ್ ವಿಕೆಟ್ ಒಪ್ಪಿಸಿದ ಕಾರಣ ಭಾರತ 1 ರನ್‌ನಿಂದ ಸೋತಿತು. ಕೊನೆಯವರೆಗೂ ಮೈದಾನದಲ್ಲಿ ಮಿಥಾಲಿ ಇದ್ದರೂ ಕೊನೆಯ ಓವರಿನ ಒಂದೇ ಒಂದು ಎಸೆತ ಎದುರಿಸುವ ಅವಕಾಶ ಸಿಗದೆ ಭಾರತ ಸೋಲುವ ಪರಿಸ್ಥಿತಿ ಬಂದೊದಗಿತು.
ಇಂಗ್ಲೆಂಡ್ ಭರ್ಜರಿ ಆಟ
ಟಾಸ್ ಗೆದ್ಧು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್‌ಗೆ ಉತ್ತಮ ಆರಂಭವೇ ದೊರಕಿತು. 7 ಓವರ್‌ಗಳಲ್ಲಿ ಆರಂಭಿಕ ಆಟಗಾರರಿಂದ ಭರ್ಜರಿ 51 ರನ್ ಹರಿದು ಬಂತು. ಆದರೆ ಈ ಜೋಡಿಗೆ ಅನುಜಾ ಪಾಟೀಲ್ ಬ್ರೇಕ್ ಹಾಕಿದರು. ಆನಂತರ ಬಂದ ಆಟಗಾರರು ರನ್ ಗಳಿಸಲು ವಿಫಲರಾದರು. 5ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಆ್ಯಮಿ ಜೋನ್ಸ್‌ರವರ ತಾಳ್ಮೆಯ ಬ್ಯಾಟಿಂಗ್ ನೆರವಿನಿಂದ ತಂಡದ ಮೊತ್ತ 100 ಗಡಿ ದಾಟಿತು. ಭಾರತದ ಪರ ಅನುಜಾ ಪಾಟೀಲ್, ಹಲೀìನ್ ಡಿಯೋಲ್ ತಲಾ 2 ವಿಕೆಟ್ ಕಿತ್ತರು.
ಈ ಸೋಲಿನಿಂದ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿ ಫಲಿತಾಂಶ ಮತ್ತೆ ಮರುಕಳಿಸಿದೆ. ನ್ಯೂಜಿಲ್ಯಾಂಡ್‌ನಲ್ಲಿ ಏಕದಿನ ಸರಣಿ ಗೆದ್ದ ಭಾರತ ಟಿ20 ಸರಣಿಯಲ್ಲೂ 0-3 ಅಂತರದಿಂದ ಸೋತು ತವರಿಗೆ ವಾಪಾಸಾಗಿತ್ತು.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್- 20 ಓವರ್‌ಗಳಲ್ಲಿ 6 ವಿಕೆಟ್‌ಗೆ 119( ಆ್ಯಮಿ ಜೋನ್ಸ್ 26, ಟಾಮಿ ಬೇಮಂಟ್ 29, ಅನುಜಾ ಪಾಟೀಲ್ 13ಕ್ಕೆ 2, ಹಲೀìನ್ ಡಿಯೋಲ್ 13ಕ್ಕೆ 2), ಭಾರತ-20 ಓವರ್‌ಗಳಲ್ಲಿ 6 ವಿಕೆಟ್‌ಗೆ 118(ಸ್ಮತಿ ಮಂಧನಾ 58, ಮಿಥಾಲಿ ರಾಜ್ ಔಟಾಗದೆ 30, ಕೇಟ್ ಕ್ರೊಸ್ 24ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.