Clean sweep ನಿರೀಕ್ಷೆಯಲ್ಲಿ ಭಾರತ: ಬಾಂಗ್ಲಾ ವಿರುದ್ಧದ ದ್ವಿತೀಯ ಟೆಸ್ಟ್ ಇಂದಿನಿಂದ
Team Udayavani, Sep 27, 2024, 6:45 AM IST
ಕಾನ್ಪುರ: ಅಗ್ರ ಕ್ರಮಾಂಕದ ಆಟಗಾರರ ಬ್ಯಾಟಿಂಗ್ ವೈಫಲ್ಯದ ಹೊರತಾ ಗಿಯೂ ಆರ್. ಅಶ್ವಿನ್, ರವೀಂದ್ರ ಜಡೇಜ, ರಿಷಭ್ ಪಂತ್ ಅವರ ಅವಿಸ್ಮರಣೀಯ ಆಟದಿಂದಾಗಿ ಚೆನ್ನೈಯಲ್ಲಿ ನಡೆದ ಪಂದ್ಯ ದಲ್ಲಿ ಪ್ರವಾಸಿ ಬಾಂಗ್ಲಾದೇಶವನ್ನು ಮಣಿಸಿ ರುವ ಭಾರತ ತಂಡವು ಶುಕ್ರವಾರದಿಂದ ಆರಂಭವಾಗುವ ದ್ವಿತೀಯ ಟೆಸ್ಟ್ ಪಂದ್ಯ ದಲ್ಲಿ ಹೋರಾಡಲು ಸಿದ್ಧವಾಗಿದೆ. ಅನುಭವಿ ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಕೆಎಲ್ ರಾಹುಲ್ ಸಿಡಿಯುವ ವಿಶ್ವಾಸದಲ್ಲಿರುವ ಭಾರತೀಯ ತಂಡವು ಕ್ಲೀನ್‌ಸಿÌàಪ್ ಮೂಲಕ ಗೆಲ್ಲುವ ಗುರಿ ಇಟ್ಟುಕೊಂಡಿದೆ.
ಚೆನ್ನೈ ಟೆಸ್ಟ್‌ನ ಮೊದಲ ದಿನ ಬಾಂಗ್ಲಾ ಬೌಲರ್‌ಗಳ ದಾಳಿಗೆ ಸಿಲುಕಿ ತತ್ತರಿಸಿದ್ದ ಭಾರತೀಯ ತಂಡವನ್ನು ಅಶ್ವಿನ್, ಜಡೇಜ ಮತ್ತು ಪಂತ್ ಮೇಲಕ್ಕೆತ್ತಿದ್ದರು. ಅಶ್ವಿನ್ ಅವರ ಆಲ್‌ರೌಂಡ್ ಪ್ರದರ್ಶನ, ರವೀಂದ್ರ ಜಡೇಜ ಅವರ ಉತ್ತಮ ಗುಣಮಟ್ಟದ ಆಟ ಮತ್ತು ಸುದೀರ್ಘ ಸಮಯದ ಬಳಿಕ ಟೆಸ್rಗೆ ಮರಳಿದ ರಿಷಭ್ ಪಂತ್ ಅವರ ಮನಮೋಹಕ ಬ್ಯಾಟಿಂಗ್ ಬಲದಿಂದ ಭಾರತ ಚೆನ್ನೈಯಲ್ಲಿ ಭರ್ಜರಿ ಜಯ ಸಾಧಿಸುವಂತಾಯಿತು.
ಮೊದಲ ದಿನ ನಾಟಕೀಯ ಕುಸಿತಕ್ಕೆ ಒಳಗಾದರೂ ಅದ್ಭುತ ಹೋರಾಟದ ಮೂಲಕ ತಿರುಗಿ ಬಿದ್ದ ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ಅದರಲ್ಲಿಯೂ ತವರಿನಲ್ಲಿ ತನ್ನ ಪ್ರಾಬಲ್ಯವನ್ನು ಮತ್ತೆ ದೃಢಪಡಿಸಿತು. ಇದೀಗ ತವರಿನಲ್ಲಿ ದಾಖಲೆ 18ನೇ ಟೆಸ್ಟ್ ಸರಣಿ ಗೆಲುವಿನತ್ತ ಹೊರಟಿದೆ.
ಇಲ್ಲಿನ ಪಿಚ್ ಸ್ಪಿನ್‌ಗೆ ಹೆಚ್ಚು ಅನುಕೂಲ ಇರುವ ಕಾರಣ ಭಾರತ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಅಶ್ವಿನ್, ಜಡೇಜ ಅವರಲ್ಲದೇ ಕುಲದೀಪ್ ಯಾದವ್ ಎದುರಾಳಿಯ ರನ್‌ವೇಗಕ್ಕೆ ಕಡಿವಾಣ ಹಾಕುವ ಸಾಧ್ಯತೆಯಿಲ್ಲ. ಪಂದ್ಯ ಸಾಗುತ್ತಿ ದ್ದಂತೆ ಪಿಚ್ ನಿಧಾನಗತಿಗೆ ತಿರುಗುವ ಸಾಧ್ಯತೆಯಿದೆ. ಹೀಗಾಗಿ ತಂಡ ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕೆ ಇಳಿಸುವ ಸಂಭವವಿದೆ. ಹೀಗಾಗದಲ್ಲಿ ಆಕಾಶ್ ದೀಪ್ ಅವರು ಕುಲದೀಪ್ ಯಾದವ್ ಅವರಿಗೆ ಜಾಗ ಕೊಡಬಹುದು.
ಕೊಹ್ಲಿ, ರೋಹಿತ್ ಮೇಲೆ ನಿರೀಕ್ಷೆ
ಚೆನ್ನೈ ಟೆಸ್ಟ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ನಾಯಕ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರಿಂದ ಈ ಪಂದ್ಯದಲ್ಲಿ ಶ್ರೇಷ್ಠ ನಿರ್ವಹಣೆ ನಿರೀಕ್ಷಿಸ ಲಾಗಿದೆ. ಮುಂದಿನ ದಿನಗಳಲ್ಲಿ ಬಹಳಷ್ಟು ಟೆಸ್ಟ್ ಪಂದ್ಯಗಳು ನಡೆಯುವ ಕಾರಣ ಅವರಿಬ್ಬರು ಬ್ಯಾಟಿಂಗ್‌ನಲ್ಲಿ ಮಿಂಚವುದು ಅಗತ್ಯವಾಗಿದೆ. ಇವರಿಬ್ಬರ ಜತೆ ದೀರ್ಘ ಸಮಯದ ಬಳಿಕ ಟೆಸ್ಟ್‌ಗೆ ಮರಳಿದ ರಿಷಭ್ ಪಂತ್ ಚೆನ್ನೈಯಲ್ಲಿ ಅಮೋಘ ಬ್ಯಾಟಿಂಗ್ ನಿರ್ವಹಣೆ ನೀಡಿ ತನ್ನ ಪುನರಾಗಮನವನ್ನು ಯಶಸ್ವಿಯಾಗಿ ಸಾರಿದ್ದಾರೆ.
ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಬಾಂಗ್ಲಾದೇಶ ಈ ಪಂದ್ಯದಲ್ಲಿ ಎಚ್ಚರಿಕೆಯಿಂದ ಆಡುವ ಸಾಧ್ಯತೆಯಿದೆ. ಪಿಚ್ ಸ್ಪಿನ್‌ಗೆ ನೆರವಾಗುವ ಕಾರಣ ಬಾಂಗ್ಲಾ ಕೂಡ ಮೇಲುಗೈ ಸಾಧಿಸುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಈ ಪಂದ್ಯ ತೀವ್ರ ಕುತೂಹಲದಿಂದ ಸಾಗಬಹುದು. ಚೆನ್ನೈಯಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಬೆರಳಿಗೆ ಗಾಯ ಮಾಡಿಕೊಂಡಿರುವ ಶಕಿಬ್ ಅಲ್ ಹಸನ್ ಕಾನ್ಪುರದಲ್ಲಿ ಆಡುವುದು ಸಂಶಯ ಎನ್ನಲಾಗಿದೆ. ಆದರೆ ಕೋಚ್ ಚಂಡಿಕಾ ಹತುರುಸಿಂಘ ಅವರ ಪ್ರಕಾರ ಶಕಿಬ್ ಆಯ್ಕೆಗೆ ಲಭ್ಯರಿರುತ್ತಾರೆ ಎಂದು ಹೇಳಿದ್ದಾರೆ.
18ನೇ ಟೆಸ್ಟ್ ಸರಣಿ ಗೆಲುವಿಗೆ ಪ್ರಯತ್ನ
ಭಾರತೀಯ ತಂಡ 2012-13ರ ಬಳಿಕ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಒಮ್ಮೆಯೂ ಸೋಲನ್ನು ಕಂಡಿಲ್ಲ. 2012- 13ರಲ್ಲಿ ಧೋನಿ ನೇತೃತ್ವದ ಭಾರತೀಯ ತಂಡ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿತ್ತು. ಆಬಳಿಕ ತವರಿನಲ್ಲಿ ನಡೆದ
ಕಳೆದ ಫೆಬ್ರವರಿಯಲ್ಲಿ ರಾಂಚಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯ ಗಳ ಸರಣಿಯಲ್ಲಿ 3-1 ಮುನ್ನಡೆ ಸಾಧಿಸುವ ಮೂಲಕ ಮುನ್ನಡೆ ಸಾಧಿಸಿದ ಭಾರತ ತನ್ನ ಸತತ ಟೆಸ್ಟ್ ಸರಣಿ ಗೆಲುವನ್ನು ದಾಖಲೆ 17ಕ್ಕೇರಿಸಿಕೊಂಡಿತ್ತು. ಇದೀಗ ಬಾಂಗ್ಲಾ ವಿರುದ್ಧ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಅದನ್ನು 18ಕ್ಕೇರಿಸುವ ವಿಶ್ವಾಸದಲ್ಲಿದೆ.
ಪಿಚ್ ಸ್ಪಿನ್‌ಗೆ ನೆರವು
ಗ್ರೀನ್ ಪಾರ್ಕ್ ಪಿಚ್ ನಿಧಾನ ಗತಿಯ ಟ್ರ್ಯಾಕ್ ಆಗಿದ್ದು ಸ್ಪಿನ್ನರ್‌ಗಳಿಗೆ ನೆರವು ನೀಡ ಲಿದೆ. ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ಸ್ವಲ್ಪ ನೆರವು ನೀಡಿದರೂ ಪಂದ್ಯ ಸಾಗುತ್ತಿದ್ದಂತೆ ಪಿಚ್ ನಿಧಾನಗತಿಗೆ ತಿರುಗಲಿದೆ.
300 ವಿಕೆಟ್ ನಿರೀಕ್ಷೆಯಲ್ಲಿ ಜಡೇಜ
ರವೀಂದ್ರ ಜಡೇಜ ಟೆಸ್ಟ್‌ನಲ್ಲಿ 300 ವಿಕೆಟ್ ಪಡೆಯುವ ಸನಿಹದಲ್ಲಿದ್ದಾರೆ. ಇಷ್ಟರವರೆಗೆ ಆಡಿದ 73 ಟೆಸ್ಟ್‌ಗಳಲ್ಲಿ ಅವರು 299 ವಿಕೆಟ್ ಮತ್ತು 3122 ರನ್ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ 300 ವಿಕೆಟ್ ಮತ್ತು 3 ಸಾವಿರ ರನ್ ಅನ್ನು ಅತೀ ವೇಗವಾಗಿ ಪೂರ್ತಿಗೊಳಿಸಿದ 2ನೇ ಆಟಗಾರ ಎಂದೆನಿಸಿಕೊಳ್ಳಲು ಜಡೇಜ ಅವರಿಗೆ ಇನ್ನೊಂದು ವಿಕೆಟ್ ಬೇಕಾಗಿದೆ.
ಭಾರತ-ಬಾಂಗ್ಲಾ
ಟೆಸ್ಟ್ ಮುಖಾಮುಖಿ
ಒಟ್ಟು ಪಂದ್ಯ 14
ಭಾರತ ಜಯ 12
ಬಾಂಗ್ಲಾ ಜಯ 0
ಡ್ರಾ 2
ಕಾನ್ಪುರದಲ್ಲಿ ಭಾರತ
ಟೆಸ್ಟ್ 23
ಗೆಲುವು 7
ಸೋಲು 3
ಡ್ರಾ 13
ಪಂದ್ಯ ಆರಂಭ: ಬೆಳಗ್ಗೆ 9.30
ನೇರ ಪ್ರಸಾರ: ಸ್ಪೋರ್ಟ್ಸ್-18
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.