ಭಾರತ -ಕೆನಡ: ಡೇವಿಸ್ ಮುಖಾಮುಖಿ
Team Udayavani, Sep 15, 2017, 8:20 AM IST
ಎಡ್ಮಂಟನ್: ಭಾರತೀಯ ಡೇವಿಸ್ ಕಪ್ ತಂಡವು ಶುಕ್ರವಾರದಿಂದ ಆರಂಭವಾಗುವ ಡೇವಿಸ್ ಕಪ್ ವಿಶ್ವ ಬಣ ಪ್ಲೇ ಆಫ್ ಹೋರಾಟ ದಲ್ಲಿ ಕೆನಡ ತಂಡವನ್ನು ಎದುರಿಸಲಿದೆ. ವಿಶ್ವ ಬಣಕ್ಕೆ ತೇರ್ಗಡೆಯಾಗಲು ಭಾರತವು ತನ್ನ ಯುವ ಆಟಗಾರರಾದ ಯೂಕಿ ಭಾಂಬ್ರಿ ಮತ್ತು ರಾಮ್‌ಕುಮಾರ್ ರಾಮನಾಥನ್ ಅವರನ್ನು ಅವಲಂಬಿಸಿದೆ.
ಭಾರತ ಮತ್ತು ಕೆನಡ ನಡುವಣ ಈ ಹೋರಾಟ ಯುವ ಆಟಗಾರರ ಜತೆ ನಡೆಯುವುದು ವಿಶೇಷವಾಗಿದೆ. ಹಾಗಾಗಿ ಎಲ್ಲ ಪಂದ್ಯಗಳು ತೀವ್ರ ಪೈಪೋಟಿಯಿಂದ ಸಾಗುವ ನಿರೀಕ್ಷೆ ಮಾಡಲಾಗಿದೆ. ಡೆನಿಸ್ ಶಪೋವಾಲೋವ್ ನೇತೃತ್ವದ ಕೆನಡ ತಂಡ ಬಲಿಷ್ಠವಾಗಿದೆ. 18 ಹರೆಯದ ವಿಶ್ವದ 51ನೇ ರ್‍ಯಾಂಕಿನ ಶಪೋವಾಲೋವ್ ಮಾಂಟ್ರಿಯಲ್ ಮಾಸ್ಟರ್ ಟೆನಿಸ್ ಕೂಟದಲ್ಲಿ ರಫೆಲ್ ನಡಾಲ್ ಅವರನ್ನು ಸೋಲಿಸಿದ ಸಾಧನೆ ಮಾಡಿದ್ದಾರೆ. ಆಬಳಿಕ ಯುಎಸ್ ಓಪನ್ ಕೂಟ ದಲ್ಲಿ ನಾಲ್ಕನೇ ಸುತ್ತಿಗೇರಿದ ಅತೀ ಕಿರಿಯ ಆಟಗಾರ ಎಂದೆನಿಸಿಕೊಂಡಿದ್ದಾರೆ. ಇದು ಅವರ ಕೇವಲ ಎರಡನೇ ಗ್ರ್ಯಾನ್ ಸ್ಲಾಮ್ ಕೂಟವಾಗಿತ್ತು.
ಕಳೆದ ಕೆಲವು ತಿಂಗಳಲ್ಲಿ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಮತ್ತು ಜೋ ವಿಲ್‌ಫ್ರೆಡ್ ಸೋಂಗ ಅವರನ್ನು ಉರುಳಿಸಿದ ಶಪೋವಲೋವ್ ವಿಶ್ವ ಟೆನಿಸ್‌ನಲ್ಲಿ ಶರವೇಗದಲ್ಲಿ ಉನ್ನತ ಸ್ಥಾನಕ್ಕೇರಿದ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಹಾಗಾಗಿ ಭಾರತ ಬಹಳ ಎಚ್ಚರಿಕೆಯಿಂದ ಶಪೋವಲೋವ್ ಅವರನ್ನು ಎದುರಿಸಬೇಕಾಗಿದೆ.
ಇದೇ ವೇಳೆ ಭಾರತವು ಯೂಕಿ ಮತ್ತು ರಾಮ್‌ಕುಮಾರ್ ಅವರನ್ನು ಅವಲಂಬಿಸಿದೆ. ಅವರಿಬ್ಬರೂ ಕೂಡ ಇತ್ತೀಚೆಗಿನ ದಿನಗಳಲ್ಲಿ ಗೇಲ್ ಮಾನ್‌ಫಿಲ್ಸ್ ಮತ್ತು ಡೊಮಿನಿಕ್ ಥೀಮ್ ಅವರನ್ನು ಸೋಲಿಸಿ ಸುದ್ದಿ ಮಾಡಿದ್ದಾರೆ. ಭಾರತೀಯ ಯುವ ಆಟಗಾರರಿಂದ ಬಹಳಷ್ಟು ನಿರೀಕ್ಷೆ ಮಾಡಲಾಗಿದೆ. ಅವರಿಬ್ಬರು ಶಪೋವಲೋವ್ ಅವರ ಅಬ್ಬರಕ್ಕೆ ಬ್ರೇಕ್ ನೀಡುವಲ್ಲಿ ಯಶಸ್ವಿಯಾದರೆ ಭಾರತ ಮೇಲುಗೈ ಸಾಧಿಸಬಹುದಾಗಿದೆ.
ಯೂಕಿ-ರಾಮ್ ಮೇಲೆ ನಿರೀಕ್ಷೆ
ಕೆನಡ ತಂಡದ ಇನ್ನೋರ್ವ ಸಿಂಗಲ್ಸ್ ಆಟಗಾರ ವಾಸೆಕ್ ಪಾಸ್ಪಿಸಿಲ್ ಭಾರತೀಯ ಆಟಗಾರರಿಗಿಂತ ಉನ್ನತ ರ್‍ಯಾಂಕ್ ಹೊಂದಿದ್ದರೂ (82ನೇ ರ್‍ಯಾಂಕ್) ಅವರನ್ನು ಎದುರಿಸುವುದು ಯೂಕಿ ಮತ್ತು ರಾಮ್‌ಕುಮಾರ್ ಅವರಿಗೆ ಅಷ್ಟೊಂದು ಕಷ್ಟವಾಗಲಿಕ್ಕಿಲ್ಲ. ಯಾಕೆಂದರೆ ಅವರು ಯುಎಸ್ ಓಪನ್‌ನ ಮೊದಲ ಸುತ್ತು ಸಹಿತ ಎಟಿಪಿ ಟೂರ್‌ನಲ್ಲಿ ಸತತ ಐದು ಪಂದ್ಯಗಳಲ್ಲಿ ಸೋತು ಇಲ್ಲಿಗೆ ಬಂದಿದ್ದಾರೆ. 2014ರಲ್ಲಿ ಯೂಕಿ ಅವರು ಪಾಸ್ಪಿಸಿಲ್ ಅವರನ್ನು ಎದುರಿಸಿದ್ದರು. ಚೆನ್ನೈ ಓಪನ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಯೂಕಿ ಅವರು ಪಾಸ್ಪಿಸಿಲ್‌ಗೆ ಶರಣಾಗಿದ್ದರು. ಆದರೆ ರಾಮ್‌ಕುಮಾರ್ ಒಮ್ಮೆಯೂ ಪಾಸ್ಪಿಸಿಲ್ ಅವರನ್ನು ಎದುರಿಸಿಲ್ಲ. ಮೊದಲ ದಿನದ ಎರಡು ಸಿಂಗಲ್ಸ್ ಪಂದ್ಯಗಳಲ್ಲಿ ಒಂದು ವೇಳೆ ಭಾರತ ಒಂದು ಪಂದ್ಯ ಗೆದ್ದರೆ ಫಲಿತಾಂಶ ಯಾವ ರೀತಿ ಕೂಡ ಸಾಗಬಹುದು. ಡಬಲ್ಸ್‌ನಲ್ಲಿ ಭಾರತೀಯ ಆಟಗಾರರಾದ ಬೋಪಣ್ಣ ಮತ್ತು ಮೈನೇನಿ ಉತ್ತಮ ನಿರ್ವಹಣೆ ನೀಡುತ್ತಿದ್ದಾರೆ.
ವಿಶ್ವ ಬಣಕ್ಕೇರಲು ಉತ್ತಮ ಅವಕಾಶ
ವಿಶ್ವದ 11ನೇ ರ್‍ಯಾಂಕಿನ ಮಿಲೋಸ್ ರಾನಿಕ್ ಅವರ ಅನುಪಸ್ಥಿತಿಯಿಂದಾಗಿ ಭಾರತಕ್ಕೆ ಕೆನಡ ವಿರುದ್ಧ ಗೆಲುವು ಸಾಧಿಸಿ ವಿಶ್ವ ಬಣಕ್ಕೇರಲು ಉತ್ತಮ ಅವಕಾಶ ಸಿಕ್ಕಿದೆ ಎಂದು ನಂಬಲಾಗಿದೆ. ಭಾರತ ಸತತ 4ನೇ ವರ್ಷ ವಿಶ್ವಬಣಕ್ಕೆ ತೇರ್ಗಡೆ ಯಾಗಲು ಪ್ರಯತ್ನಿಸುತ್ತಿದೆ. ಕಳೆದ ಮೂರು ವರ್ಷ ನಡೆದ ಪ್ಲೇ ಆಫ್ ಹೋರಾಟಗಳಲ್ಲಿ ಭಾರತ ಸರ್ಬಿಯಾ (2014-ಬೆಂಗಳೂರು), ಜೆಕ್ ಗಣರಾಜ್ಯ (2015-ಹೊಸದಿಲ್ಲಿ) ಮತ್ತು ಸ್ಪೇನ್ (2016-ಹೊಸದಿಲ್ಲಿ)ಗೆ ಶರಣಾಗಿತ್ತು. ಭಾರತ ಈ ಹಿಂದೆ 2011ರಲ್ಲಿ ವಿಶ್ವಬಣದಲ್ಲಿ ಆಡಿದೆ. ಆದರೆ ಹಾಲಿ ಚಾಂಪಿಯನ್ ಸರ್ಬಿಯಾ ವಿರುದ್ಧ 1-4 ಅಂತರದಿಂದ ಸೋತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.