ದ. ಆಫ್ರಿಕಾದೆದುರು ಮೊದಲ “ಕ್ಲೀನ್‌ಸ್ವೀಪ್’
Team Udayavani, Oct 23, 2019, 4:36 AM IST
ರಾಂಚಿ: ನಿರೀಕ್ಷೆಯಂತೆ ಪ್ರವಾಸಿ ದಕ್ಷಿಣ ಆಫ್ರಿಕಾವನ್ನು ಇನ್ನಿಂಗ್ಸ್ ಅಂತರದಿಂದ ಬಗ್ಗುಬಡಿದ ಬಲಿಷ್ಠ ಭಾರತವು ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್‌ಸ್ವೀಪ್ ಮೂಲಕ ಗೆದ್ದ ಸಾಧನೆ ಮಾಡಿತು.
ಇಲ್ಲಿ ನಡೆದ ಮೂರನೇ ಅಂತಿಮ ಟೆಸ್ಟ್ ನಲ್ಲಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಇನ್ನಿಂಗ್ಸ್ ಮತ್ತು 202 ರನ್ನುಗಳಿಂದ ಜಯಭೇರಿ ಬಾರಿಸಿತು. ಟೆಸ್ಟ್‌ಗೆ ಪದಾರ್ಪ ಣೆಗೈದ ಎಡಗೈ ಸ್ಪಿನ್ನರ್ ಶಾಬಾಜ್ ನದೀಮ್ ನಾಲ್ಕನೇ ದಿನದ ಎರಡನೇ ಓವರಿನಲ್ಲಿ ಇನ್ನುಳಿದ ಎರಡು ವಿಕೆಟ್ ಕಿತ್ತು ದಕ್ಷಿಣ ಆಫ್ರಿಕಾದ ಕತೆ ಮುಗಿಸಿದರು. 8ಕ್ಕೆ 132 ರನ್ನುಗಳಿಂದ ದಿನದಾಟ ಆರಂಭಿಸಿದ ಪ್ರವಾಸಿ ತಂಡ ಇನ್ನೊಂದು ರನ್ ಗಳಿಸುವಷ್ಟರಲ್ಲಿ ಆಲೌಟಾಯಿತು. ಕೊನೆಯ ಎರಡು ವಿಕೆಟ್ ನದೀಮ್ ಪಾಲಾಯಿತು. ಮೊದಲ ಇನ್ನಿಂಗ್ಸ್‌ಗಿಂತ 30 ರನ್ ಕಡಿಮೆ ಮೊತ್ತಕ್ಕೆ ದಕ್ಷಿಣ ಆಫ್ರಿಕಾ ಸರ್ವಪತನ ಕಂಡು ನಿರಾಸೆ ಅನುಭವಿಸಿತು.
11ನೇ ಸರಣಿ ಜಯ
ಇದು ನಾಯಕರಾಗಿ ವಿರಾಟ್ ಕೊಹ್ಲಿ ಅವರ 11ನೇ ಸರಣಿ ಗೆಲುವು ಆಗಿದೆ. ಮಾತ್ರವಲ್ಲದೇ ತವರಿನ ನೆಲದಲ್ಲಿ ಇದು ಭಾರತದ ಸತತ 11ನೇ ಸರಣಿ ಗೆಲುವು ಕೂಡ ಆಗಿದೆ. ಭಾರತೀಯರಿಗೆ ಯಾವುದೇ ರೀತಿಯಲ್ಲೂ ಪ್ರತಿರೋಧ ವ್ಯಕ್ತಪಡಿಸದ ದಕ್ಷಿಣ ಆಫ್ರಿಕಾ ವಿರುದ್ಧ ಇದು ಭಾರತದ ಮೊದಲ ಕ್ಲೀನ್‌ಸ್ವೀಪ್ ಗೆಲುವಿನ ಸಾಧನೆಯಾಗಿದೆ.
ಈ ಸರಣಿಯ ಫಲಿತಾಂಶವನ್ನು ನೋಡಿ ದರೆ ಸಾಕು ಭಾರತ ಎಷ್ಟರಮಟ್ಟಿಗೆ ಪ್ರವಾಸಿ ತಂಡದೆದುರು ಪ್ರಾಬಲ್ಯ ಸ್ಥಾಪಿಸಿದೆ ಎಂಬುದು ತಿಳಿಯುತ್ತದೆ. ಟೀಮ್ ಇಂಡಿಯಾದ ಬ್ಯಾಟಿಂಗ್ ಮತ್ತು ತೀಕ್ಷ್ಣ ವೇಗದ ಬೌಲರ್‌ಗಳ ಆಕ್ರಮಣಕ್ಕೆ ದಕ್ಷಿಣ ಆಫ್ರಿಕಾ ಶರಣಾಗಿದೆ. ಯಾವುದೇ ಹಂತದಲ್ಲೂ ಪ್ರತಿರೋಧ ನೀಡಲು ಅದಕ್ಕೆ ಸಾಧ್ಯವಾಗಲೇ ಇಲ್ಲ. ವೇಗದ ದಾಳಿಯ ನೇತೃತ್ವ ವಹಿಸಿದ ಮೊಹಮ್ಮದ್ ಶಮಿ ಈ ಸರಣಿಯಲ್ಲಿ 13 ಏಕೆಟ್ ಕಿತ್ತು ಸಂಭ್ರಮಿಸಿದ್ದಾರೆ.
ಆರನೇ ಕ್ಲೀನ್‌ಸ್ವೀಪ್
ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತವರಿನಲ್ಲಿ ಇದು ಭಾರತದ ಆರನೇ ಕ್ಲೀನ್‌ಸ್ವೀಪ್ ಸಾಧನೆಯಾಗಿದೆ. ಸರಣಿ ವೇಳೆ ಭಾರತ ಒಮ್ಮೆಯೂ ತಪ್ಪು ಹೆಜ್ಜೆ ಹಾಕಲೇ ಇಲ್ಲ. ಮೊದಲ ಟೆಸ್ಟ್ ಪಂದ್ಯವನ್ನು 203 ರನ್ನುಗಳಿಂದ ಜಯಿಸಿದ್ದ ಭಾರತ ದ್ವಿತೀಯ ಪಂದ್ಯವನ್ನು ಇನ್ನಿಂಗ್ಸ್ ಮತ್ತು 137 ರನ್ನುಗಳಿಂದ ಗೆದ್ದಿತ್ತು.
ಆರಂಭಿಕನಾಗಿ ಹೊಸ ಪಾತ್ರವಹಿಸಿದ್ದ ರೋಹಿತ್ ಶರ್ಮ ಅವರದ್ದು ಮಾಸ್ಟರ್‌ಸ್ಟ್ರೋಕ್ ಸಾಹಸವಾಗಿದೆ. ಶತಕ ಮತ್ತು ದ್ವಿಶತಕ ಬಾರಿಸಿದ ಮಾಯಾಂಕ್ ಅಗರ್ವಾಲ್ ಟೆಸ್ಟ್ ನಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿದ್ದಾರೆ. ಈ ಮೂಲಕ ಭಾರತದ ದೀರ್ಘ ಸಮಯದ ಉತ್ತಮ ಆರಂಭಿಕರ ಸಮಸ್ಯೆಯನ್ನು ಇವರಿಬ್ಬರು ಪರಿಹರಿಸಿದ್ದಾರೆ.
ಆಸ್ಟ್ರೇಲಿಯದಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿರುವುದು ಸಂತೋಷವಾಗಿದೆ ಮತ್ತು ಈ ಮೂಲಕ ತಂಡಕ್ಕೆ ಕಿರು ಕೊಡುಗೆ ಸಲ್ಲಿಸಿದ್ದೇನೆ. ಆ ಬಳಿಕ ಆಟದ ಹಲವು ವಿಷಯದಲ್ಲಿ ಕಠಿನ ಪ್ರಯತ್ನ ನಡೆಸಿದ್ದರಿಂದ ಈ ಸರಣಿಯಲ್ಲಿ ಉತ್ತಮ ನಿರ್ವಹಣೆ ದಾಖಲಿಸಲು ಸಾಧ್ಯವಾಯಿತು ಎಂದು ಮಾಯಾಂಕ್ ಹೇಳಿದ್ದಾರೆ.
ಬೌಲರ್‌ಗಳ ಪರಾಕ್ರಮ
ಟೆಸ್ಟ್ ಸರಣಿ ಗೆಲುವಿನನಲ್ಲಿ ಬೌಲರ್‌ಗಳ ಸಾಧನೆ ಅಮೋಘವಾಗಿದೆ. ಟೀಮ್ ಇಂಡಿಯಾದ ಪ್ರಮುಖ ವೇಗಿ ಬುಮ್ರಾ ಅನುಪಸ್ಥಿತಿಯ ನಡುವೆಯೂ ಬೌಲರ್‌ಗಳು ಈ ರೀತಿಯ ಪರಾಕ್ರಮ ಮೆರೆದಿರುವುದು ಪ್ರಶಂಸೆಗೆ ಪಾತ್ರವಾಗಿದೆ. ದಾಳಿಯ ನೇತೃತ್ವ ವಹಿಸಿದ್ದ ಮೊಹಮ್ಮದ್ ಶಮಿ ಈ ಸರಣಿಯಲ್ಲಿ 13 ವಿಕೆಟ್ ಕಿತ್ತು ಮಿಂಚಿದ್ದಾರೆ. ಅವರ ಜತೆ ಉಮೇಶ್ ಯಾದವ್ 11 ಮತ್ತು ಇಶಾಂತ್ 2 ವಿಕೆಟ್ ಕಿತ್ತಿದ್ದಾರೆ. ಈ ಮೂವರು ಒಟ್ಟಾರೆ 26 ವಿಕೆಟ್ ಪಡೆದಿದ್ದಾರೆ. ಸ್ಪಿನ್ನರ್‌ಗಳಾದ ಆರ್. ಅಶ್ವಿನ್ (15 ವಿಕೆಟ್) ಮತ್ತು ರವೀಂದ್ರ ಜಡೇಜ (13 ವಿಕೆಟ್) ಒಟ್ಟು 28 ವಿಕೆಟ್ ಕೆಡಹಿದ್ದಾರೆ.
ಸ್ಕೋರ್ ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್
9 ವಿಕೆಟಿಗೆ ಡಿಕ್ಲೇರ್ 497
ದಕ್ಷಿಣ ಆಫ್ರಿಕಾ ಪ್ರಥಮ ಇನ್ನಿಂಗ್ಸ್ 162
ದಕ್ಷಿಣ ಆಫ್ರಿಕಾ ದ್ವಿತೀಯ ಇನ್ನಿಂಗ್ಸ್
(3ನೇ ದಿನದಾಟದ ಅಂತ್ಯಕ್ಕೆ 8 ವಿಕೆಟಿಗೆ 132)
ಡಿ ಬ್ರುಯಿನ್ ಸಿ ಸಾಹಾ ಬಿ ನದೀಮ್ 30
ಅನ್ರಿಚ್ ನೋರ್ಜೆ ಔಟಾಗದೆ 5
ಲುಂಗಿ ಎನ್‌ಗಿಡಿ ಸಿ ಮತ್ತು ಬಿ ನದೀಮ್ 0
ಇತರ 6
ಒಟ್ಟು (ಆಲೌಟ್) 133
ವಿಕೆಟ್ ಪತನ: 1-5, 2-10, 3-18, 4-22, 5-36, 6-67, 7-98, 8-121, 9-133.
ಬೌಲಿಂಗ್:
ಮೊಹಮ್ಮದ್ ಶಮಿ 10-6-10-3
ಉಮೇಶ್ ಯಾದವ್ 9-1-35-2
ರವೀಂದ್ರ ಜಡೇಜ 13-5-36-1
ಶಾಬಾಜ್ ನದೀಮ್ 6-1-18-2
ಆರ್. ಅಶ್ವಿನ್ 10-3-28-1
ಎಕ್ಸ್‌ಟ್ರಾ ಇನ್ನಿಂಗ್ಸ್
– ಮೂರು ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳ ಟೆಸ್ಟ್ ಸರಣಿ ವೇಳೆ ದಕ್ಷಿಣ ಆಫ್ರಿಕಾ ಆರನೇ ಸಲ ವೈಟ್‌ವಾಶ್‌ಗೆ ಒಳಗಾಗಿದೆ. ಈ ಹಿಂದೆ 2006ರಲ್ಲಿ ಆಸ್ಟ್ರೇಲಿಯ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವೈಟ್‌ವಾಶ್ ಆಗಿತ್ತು. ಕಳೆದ ಐದು ಬಾರಿ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ವಿರುದ್ಧವೇ ದ.ಆಫ್ರಿಕಾ ವೈಟ್‌ವಾಶ್ ಆಗಿತ್ತು.
– ಈ ಸರಣಿಯಲ್ಲಿ ಭಾರತ ಆಡಿದ ನಾಲ್ಕು ಇನ್ನಿಂಗ್ಸ್ ವೇಳೆ ಡಿಕ್ಲೇರ್ ಮಾಡಿಕೊಂಡಿದ್ದರೆ ದಕ್ಷಿಣ ಆಫ್ರಿಕಾ ಆರು ಇನ್ನಿಂಗ್ಸ್ ನಲ್ಲೂ ಆಲೌಟ್ ಆಗಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎಲ್ಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ ಮತ್ತು ಎದುರಾಳಿ ತಂಡದ ಎಲ್ಲ ಇನ್ನಿಂಗನ್ನು ಆಲೌಟ್ ಮಾಡಿಸಿದ ಎರಡನೇ ತಂಡವೆಂಬ ಹೆಮ್ಮೆಗೆ ಭಾರತ ಪಾತ್ರವಾಗಿದೆ. ಶ್ರೀಲಂಕಾ ಈ ಸಾಧನೆ ಮಾಡಿದ ಮೊದಲ ತಂಡವಾಗಿದೆ.
– ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಒಮ್ಮೆಯೂ ಆಲೌಟ್ ಆಗದೇ ಉಳಿದ ಕೇವಲ ಎಂಟನೇ ತಂಡವಾಗಿದೆ. ಭಾರತ ಈ ರೀತಿಯ ಸಾಧನೆ ಮಾಡಿರುವುದು ಇದೇ ಮೊದಲು.
– ಈ ಸರಣಿಯಲ್ಲಿ ಭಾರತೀಯ ವೇಗಿಗಳು 17.5 ಬೌಲಿಂಗ್ ಸರಾಸರಿ ದಾಖಲಿಸಿದ್ದಾರೆ. ಇದು ಮೂರು ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳ ಸರಣಿ ವೇಳೆ ಭಾರತೀಯ ವೇಗಿಗಳ ಶ್ರೇಷ್ಠ ನಿರ್ವಹಣೆಯಾಗಿದೆ. ಈ ಹಿಂದಿನ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತೀಯ ವೇಗಿಗಳು 12.57 ಸರಾಸರಿ ದಾಖಲಿಸಿದ್ದು ಉತ್ಕೃಷ್ಟ ನಿರ್ವಹಣೆಯಾಗಿದೆ.
– ಭಾರತೀಯ ನಾಯಕರಾಗಿ ವಿರಾಟ್ ಕೊಹ್ಲಿ ಎಂಟು ಬೇರೆ ಬೇರೆ ಟೆಸ್ಟ್‌ಗಳಲ್ಲಿ ಫಾಲೋ ಆನ್ ಹೇರಿದ್ದು ಅಜರುದ್ದೀನ್ ಸಾಧನೆಯನ್ನು ಹಿಂದಿಕ್ಕಿದ್ದಾರೆ. ಅಜರುದ್ದೀನ್ 7 ಬಾರಿ ಫಾಲೋ ಆನ್ ಹೇರಿದ್ದರು.
– ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಇದೀಗ 105 ಪಂದ್ಯಗಳನ್ನು ಗೆದ್ದಿದೆ. ಈ ಮೂಲಕ ಅಜರುದ್ದೀನ್ ಸಾಧನೆ ಹಿಂದಿಕ್ಕಿದ್ದಾರೆ. ಅಜರುದ್ದೀನ್ 104 ಪಂದ್ಯ ಜಯಿಸಿದ್ದರು. 178 ಪಂದ್ಯ ಗೆದ್ದಿರುವ ಧೋನಿ ಅಗ್ರಸ್ಥಾನದಲ್ಲಿದ್ದಾರೆ.
– ಉಮೇಶ್ ಯಾದವ್ ಭಾರತದಲ್ಲಿ ಸತತ ಐದು ಟೆಸ್ಟ್ ಇನ್ನಿಂಗ್ಸ್ ವೇಳೆ ತ್ರಿ ಪ್ಲಸ್ ವಿಕೆಟ್ ಕಿತ್ತ ಎರಡನೇ ವೇಗಿಯಾಗಿದ್ದಾರೆ. ಭಾರತೀಯ ನೆಲದಲ್ಲಿ ಕೋಟ್ನಿ ವಾಲ್ಶ್ ಸತತ ಏಳು ಇನ್ನಿಂಗ್ಸ್‌ಗಳಲ್ಲಿ ತ್ರಿ ಪ್ಲಸ್ ವಿಕೆಟ್ ಕಿತ್ತಿದ್ದಾರೆ.
– ಈ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ಒಟ್ಟು 65 ಸಿಕ್ಸರ್ ಬಾರಿಸಿದ್ದು ಜಂಟಿ ಗರಿಷ್ಠ ಸಾಧನೆಯಾಗಿದೆ. 2013-14ರ ಆ್ಯಶಸ್ ಟೆಸ್ಟ್ ವೊಂದರಲ್ಲಿ ಉಭಯ ತಂಡಗಳು 65 ಸಿಕ್ಸರ್ ಬಾರಿಸಿದ್ದವು. ಈ ಸರಣಿಯಲ್ಲಿ ಭಾರತ 47 ಸಿಕ್ಸರ್ ಬಾರಿಸಿದ್ದು ಯಾವುದೇ ತಂಡದ ಗರಿಷ್ಠ ಸಾಧನೆಯಾಗಿದೆ. ಇದರಲ್ಲಿ 19 ಸಿಕ್ಸರನ್ನು ರೋಹಿತ್ ಬಾರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಕಿವೀಸ್ ಸರ್ಜನ್ ಭೇಟಿಯಾದ ಬುಮ್ರಾ: ಚಾಂಪಿಯನ್ಸ್ ಟ್ರೋಫಿಗೆ ಅನುಮಾನ?
SUFC: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಿಂದ ಮೊಟ್ಟಮೊದಲ ಇಂಟರ್-ಸಿಟಿ ಪಂದ್ಯಾವಳಿ ಆಯೋಜನೆ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
AUSvSL: ಲಂಕಾ ಸರಣಿಗೆ ಆಸೀಸ್ ತಂಡ ಪ್ರಕಟ: ಸ್ಟೀವ್ ಸ್ಮಿತ್ ಗೆ ನಾಯಕತ್ವ ಪಟ್ಟ
Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್ ಆಟ
MUST WATCH
ಹೊಸ ಸೇರ್ಪಡೆ
Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.