ಪುರುಷರ ಹಾಕಿಯಲ್ಲಿ ರಜತ; ಆಸ್ಟ್ರೇಲಿಯ ವಿರುದ್ಧ ಫೈನಲ್‌ನಲ್ಲಿ ಭಾರತಕ್ಕೆ 7-0 ಸೋಲು
Team Udayavani, Aug 8, 2022, 9:41 PM IST
ಬರ್ಮಿಂಗ್‌ಹ್ಯಾಮ್ : ಸೋಮವಾರ ನಡೆದ ಪುರುಷರ ಹಾಕಿ ಫೈನಲ್‌ನಲ್ಲಿ ಚಾಂಪಿಯನ್ನರ ಆಟವಾಡಲು ವಿಫಲವಾದ ಭಾರತದ ಪುರುಷರ ಹಾಕಿ ತಂಡ ಆಸ್ಟ್ರೇಲಿಯನ್ನರ ಅಬ್ಬರಕ್ಕೆ ತತ್ತರಿಸಿತು. ಏಕಪಕ್ಷೀಯ ಪಂದ್ಯದಲ್ಲಿ 0-7 ಅಂತರದ ಹೀನಾಯ ಸೋಲುಂಡು ಬೆಳ್ಳಿಗೆ ಸಮಾಧಾನಪಟ್ಟಿತು.
ಆಸ್ಟ್ರೇಲಿಯ ಪರ ಬ್ಲೇಕ್ ಗೋವರ್, ನಥನ್ ಇಫ್ರಾಮ್ಸ್, ಜೇಕಬ್ ಆ್ಯಂಡರ್ಸನ್, ಟಾಮ್ ವಿಕ್‌ಹ್ಯಾಮ್ ಮತ್ತು ಫಿನ್ ಒಗಿಲ್ವಿ ಗೋಲುಗಳ ಸುರಿಮಳೆಗೈದರು. 8ನೇ ಗೋಲು “ರೂಲ್ಡ್ ಔಟ್’ ಎನಿಸಿತು. ಮನ್‌ಪ್ರೀತ್ ಸಿಂಗ್ ಪಡೆ ಅಸಹಾಯಕವಾಗಿ ಇದನ್ನೆಲ್ಲ ನೋಡುತ್ತ ಉಳಿಯಿತು. ಒಂದೂ ಗೋಲು ಹೊಡೆಯಲು ಸಾಧ್ಯವಾಗದಿದ್ದುದು ಭಾರತೀಯ ಹಾಕಿಯ ದುರಂತವೆನಿಸಿತು.
ಮೊದಲ ಕ್ವಾರ್ಟರ್‌ನಲ್ಲಿ 2-0, ಅರ್ಧ ಹಾದಿ ಕ್ರಮಿಸುವಾಗ 5-0 ಮುನ್ನಡೆ ಹೊಂದಿದ ಆಸ್ಟ್ರೇಲಿಯ, ಭಾರತದ ಮೇಲೆ ಸಂಪೂರ್ಣ ಪ್ರಭುತ್ವ ಸಾಧಿಸಿತು. ಕಾಂಗರೂಗಳ ಈ ಬಿಗಿಯಾದ ಹಿಡಿತದಿಂದ ತಪ್ಪಿಸಿಕೊಳ್ಳಲು ಮನ್‌ಪ್ರೀತ್ ಬಳಗಕ್ಕೆ ಕೊನೆಯ ತನಕವೂ ಸಾಧ್ಯವಾಗಲಿಲ್ಲ.
ಭಾರತಕ್ಕೆ ಗೋಲು ಸಿಡಿಸುವ ಏಕೈಕ ಅವಕಾಶ ಲಭಿಸಿದ್ದು 24ನೇ ನಿಮಿಷದಲ್ಲಿ. ಆದರೆ ಆಕಾಶ್‌ದೀಪ್ ಸಿಂಗ್ ಅವರ ರಿವರ್ಸ್ ಹಿಟ್ ಅನ್ನು ಆಸ್ಟ್ರೇಲಿಯದ ಗೋಲಿ ಚಾರ್ಟರ್ ಯಶಸ್ವಿಯಾಗಿ ತಡೆದರು. 1998ರಲ್ಲಿ ಮೊದಲ ಸಲ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಹಾಕಿಯನ್ನು ಅಳವಡಿಸಿದ ಬಳಿಕ ಆಸ್ಟ್ರೇಲಿಯವೇ ಬಂಗಾರ ಗೆಲ್ಲುತ್ತ ಬಂದಿದೆ. ಕಾಂಗರೂಗಳ ಪ್ರಭುತ್ವವನ್ನು ಕೊನೆಗಾಣಿಸಲು ಈವರೆಗೆ ಯಾರಿಂದಲೂ ಸಾಧ್ಯವಾಗಿಲ್ಲ.
ಅಂದಹಾಗೆ ಇದು ಕಾಮನ್‌ವೆಲ್ತ್ ಗೇಮ್ಸ್ ಫೈನಲ್‌ನಲ್ಲಿ ಆಸ್ಟ್ರೇಲಿಯದ ಕೈಯಲ್ಲಿ ಭಾರತ ಅನುಭವಿಸಿದ 3ನೇ ಸೋಲು. ಇದಕ್ಕೂ ಮೊದಲು 2010 ಮತ್ತು 2014ರಲ್ಲೂ ಮುಗ್ಗರಿಸಿತ್ತು. 2010ರ ತವರಿನ ಕೂಟದಲ್ಲಂತೂ (ನವದೆಹಲಿ) ಭಾರತ 0-8 ಅಂತರದ ದೊಡ್ಡ ಸೋಲನ್ನು ಹೊತ್ತುಕೊಂಡಿತ್ತು.
ಮನ್‌ಪ್ರೀತ್‌ಗೆ ಏಟು: ದ್ವಿತೀಯ ಕ್ವಾರ್ಟರ್ ವೇಳೆ ನಾಯಕ ಮನ್‌ಪ್ರೀತ್ ಸಿಂಗ್ ಆಸೀಸ್ ಆಟಗಾರನಿಗೆ ಢಿಕ್ಕಿ ಹೊಡೆದದ್ದು ಕೂಡ ಭಾರತದ ಹಿನ್ನಡೆಗೆ ಕಾರಣ. ಗಾಯಾಳಾದ ಅವರು ಕೊನೆಯ 2 ಕ್ವಾರ್ಟರ್‌ಗಳಲ್ಲಿ ಆಡಲಿಳಿಯಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.