Asian Games ; ಪದಕ ಪಟ್ಟಿಯಲ್ಲಿ ಭಾರತದ ಶತಕದ ನಿರೀಕ್ಷೆ ಹುಸಿಯಾಗಲಿಲ್ಲ
ದಾಖಲೆ ಮುರಿಯುವ ಕ್ರೀಡಾಳುಗಳ ಅಭಿಯಾನ ಯಶಸ್ವಿ
Team Udayavani, Oct 6, 2023, 5:29 PM IST
ಹ್ಯಾಂಗ್ ಝೂ: 2023 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತವು 100-ಪದಕಗಳ ಗಡಿಯನ್ನು ದಾಟುವುದು ಖಚಿತವಾಗಿದೆ. ಇದೇ ಮೊದಲು ಏಷ್ಯನ್ ಗೇಮ್ಸ್‌ನಲ್ಲಿ ಭಾರತವು 100 ಪದಕಗಳ ಗಡಿ ದಾಟುತ್ತಿರುವುದು ದೊಡ್ಡ ದಾಖಲೆಯಾಗಿದೆ.
ಭಾರತ ಈಗಾಗಲೇ 92 ಪದಕಗಳನ್ನು ಗೆದ್ದಿದ್ದು, ಉಳಿದ ಎಂಟು ಪದಕಗಳು ಖಚಿತವಾಗಿವೆ. ಗುರುವಾರ ಪುರುಷರ ಹಾಕಿ ತಂಡ ಜಪಾನ್ ತಂಡವನ್ನು(5-1 ) ಸೋಲಿಸಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
22 ಚಿನ್ನ, 34ಬೆಳ್ಳಿ,39 ಕಂಚಿನ ಪಾದಕಗಳೊಂದಿಗೆ ಒಟ್ಟು 95 ಪದಕಗಳನ್ನು ಭಾರತ ಈಗಾಗಲೇ ಗೆದ್ದಿದೆ.ಪುರುಷರ ಕ್ರಿಕೆಟ್ ನಲ್ಲಿ ಚಿನ್ನದ ಪದಕದ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.
ಮಹಿಳೆಯರ 62 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಭಾರತದ ಸೋನಮ್ ಮತ್ತು ಕಿರಣ್ ಚೀನಾದ ಜಿಯಾ ಲಾಂಗ್ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದಿದ್ದಾರೆ.
ಬ್ರಿಡ್ಜ್ – ಪುರುಷರ ಟೀಮ್ ಈವೆಂಟ್ ನಲ್ಲಿ ಜಗ್ಗಿ ಶಿವದಾಸನಿ, ರಾಜೇಶ್ವರ್ ತಿವಾರಿ, ಸಂದೀಪ್ ಥಕ್ರಾಲ್, ರಾಜು ತೋಲಾನಿ, ಅಜಯ್ ಖರೆ ಮತ್ತು ಸುಮಿತ್ ಮುಖರ್ಜಿ ಬೆಳ್ಳಿ ಗೆದ್ದರು
ಕುಸ್ತಿ- ಮಹಿಳೆಯರ 62 ಕೆಜಿ ಫ್ರೀಸ್ಟೈಲ್ ನಲ್ಲಿ ಸೋನಮ್ ಮಲಿಕ್ ಕಂಚು, ಮಹಿಳೆಯರ 76 ಕೆಜಿ ಫ್ರೀಸ್ಟೈಲ್ – ಕಿರಣ್ ರೆಪಿಚೇಜ್ ಸುತ್ತಿನಲ್ಲಿ ಕಂಚು ಗೆದ್ದರು ಪುರುಷರ ಫ್ರೀಸ್ಟೈಲ್ 57 ಕೆಜಿ – ಅಮನ್ ಕಂಚಿನ ಪದಕ ಗೆದ್ದರು
ಸೆಪಕ್ಟಕ್ರಾ ಮಹಿಳಾ ತಂಡ- ಪ್ರಿಯಾ ದೇವಿ ಎಲಂಗ್‌ಬಾಮ್, ಬಿ ದೇವಿ ಎಲಂಗ್‌ಬಾಮ್, ಖುಷ್ಬೂ, ಚಾವೋಬಾ ದೇವಿ ಓಯಿನಮ್ ಮತ್ತು ಮೈಪಕ್ ದೇವಿ ಆಯೆಕ್‌ಪಾಮ್ ಕಂಚು ಗೆದ್ದರು.
ಆರ್ಚರಿ – ಮಹಿಳೆಯರ ರಿಕರ್ವ್ ತಂಡ- ಅಂಕಿತಾ ಭಕತ್, ಭಜನ್ ಕೌರ್ ಮತ್ತು ಸಿಮ್ರಂಜೀತ್ ಕೌರ್ ಕಂಚು ಗೆದ್ದರು. ಆರ್ಚರಿ – ಪುರುಷರ ರಿಕರ್ವ್ ತಂಡ – ಅತಾನು ದಾಸ್, ಧೀರಾಜ್ ಮತ್ತು ತುಷಾರ್ ಪ್ರಭಾಕರ್ ಬೆಳ್ಳಿಗೆ ತೃಪ್ತಿಪಟ್ಟರು.ಬ್ಯಾಡ್ಮಿಂಟನ್ – ಪುರುಷರ ಸಿಂಗಲ್ಸ್ -ಎಚ್ ಎಸ್ ಪ್ರಣಯ್ ಬೆಳ್ಳಿಗೆ ತೃಪ್ತಿಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.