Asian Games 2023: ಕಬಡ್ಡಿಯಲ್ಲಿ ಚಿನ್ನ: 100ನೇ ಪದಕಕ್ಕೆ ಮುತ್ತಿಕ್ಕಿ ಇತಿಹಾಸ ಬರೆದ ಭಾರತ
ಕಬಡ್ಡಿಯಲ್ಲಿ ಭಾರತ ಮಹಿಳಾ ತಂಡಕ್ಕೆ ಚಿನ್ನದ ಗರಿ..
Team Udayavani, Oct 7, 2023, 8:42 AM IST
ಹ್ಯಾಂಗ್ ಝೂ: 2023 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಇತಿಹಾಸವನ್ನೇ ನಿರ್ಮಿಸಿದೆ, ಬಿಲ್ಲುಗಾರಿಕೆಯಲ್ಲಿ ಭಾರತ ನಾಲ್ಕು ಪದಕಗಳನ್ನು ಬಾಚಿಕೊಂಡ ಬೆನ್ನಲ್ಲೇ ಭಾರತದ ಪದಕದ ಪಟ್ಟಿ 99ಕ್ಕೆ ಏರಿತ್ತು ಇದೀಗ ಮಹಿಳೆಯರ ಕಬಡ್ಡಿಯಲ್ಲಿ ಭಾರತ ತಂಡ ಗೆದ್ದು ಚಿನ್ನಕ್ಕೆ ಮುತ್ತಿಡುವ ಮೂಲಕ ಶತಕದ ಸಾಧನೆಯನ್ನು ಪೂರ್ಣಗೊಳಿಸಿ ಏಷ್ಯನ್ ಗೇಮ್ಸ್‌ನಲ್ಲಿ ದೊಡ್ಡ ಇತಿಹಾಸವನ್ನೇ ಬರೆದಿದೆ.
ನಿವಾರ ನಡೆದ ಏಷ್ಯನ್ ಗೇಮ್ಸ್ನ ಆರ್ಚರಿ ಮಹಿಳೆಯರ ಸಂಯುಕ್ತ ವೈಯಕ್ತಿಕ ಸ್ಪರ್ಧೆಯಲ್ಲಿ ಜ್ಯೋತಿ ಸುರೇಖಾ ಚಿನ್ನದ ಪದಕ ಹಾಗೂ ಅದಿತಿ ಸ್ವಾಮಿ ಕಂಚಿನ ಪದಕಕ್ಕೆ ಕೊರೊಳಡ್ಡಿದ್ದಾರೆ. ಮತ್ತೊಂದು ಕಡೆ ಪುರುಷರ ವೈಯಕ್ತಿಕ ಕಾಂಪೌಂಡ್ ಸ್ಪರ್ಧೆಯಲ್ಲಿ ಭಾರತದ ಬಿಲ್ಲುಗಾರ ಓಜಸ್ ಡಿಯೋಟಾಲೆ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಇನ್ನು ಅಭಿಷೇಕ್ ವರ್ಮಾ ಬೆಳ್ಳಿಯ ಪದಕವನ್ನು ಗೆದ್ದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಭಾರತದ ಮಹಿಳಾ ಕಬಡ್ಡಿ ತಂಡ ಫೈನಲ್‌ನಲ್ಲಿ ಚಿನ್ನ ಗೆದ್ದುಕೊಂಡಿದೆ.
ಮಹಿಳಾ ಕಬಡ್ಡಿಯಿಂದ ನೂರನೇ ಪದಕ:
ಭಾರತಕ್ಕೆ ನೂರನೇ ಪದಕ ಬಂದಿದ್ದು ಮಹಿಳೆಯರ ಕಬಡ್ಡಿಯಿಂದ. ಈ ರೋಚಕ ಪಂದ್ಯದಲ್ಲಿ ಭಾರತ 26-25 ಅಂಕಗಳಿಂದ ಚೈನೀಸ್ ತೈಪೆಯನ್ನು ಸೋಲಿಸಿ ಚಿನ್ನವನ್ನು ಗೆದ್ದು 2023 ರ ಏಷ್ಯನ್ ಗೇಮ್ಸ್‌ನಲ್ಲಿ ಇತಿಹಾಸವನ್ನು ಸೃಷ್ಟಿಸಿತು. ಅಷ್ಟೇ ಅಲ್ಲ ಈ ಮೂಲಕ ಭಾರತಕ್ಕೆ ಏಷ್ಯನ್ ಗೇಮ್ಸ್‌ನಲ್ಲಿ ಇದುವರೆಗೂ 25 ಚಿನ್ನ, ಬೆಳ್ಳಿ 35, 40 ಕಂಚಿನ ಪದಕಗಳು ಲಭಿಸಿದಂತಾಗಿದೆ. ಇನ್ನಷ್ಟು ಚಿನ್ನದ ಪದಕಗಳು ಪದಕ ಪಟ್ಟಿ ಸೇರುವ ಸಾಧ್ಯತೆಗಳೂ ಇವೆ.
ಇದನ್ನೂ ಓದಿ: Horoscope: ನಿಮ್ಮ ಸಾಧನೆಗಳು ಸಾಕೆಂಬ ಭಾವನೆ ಬಾರದಿರಲಿ,ಹಲವು ಬಗೆಯ ಪರೀಕ್ಷೆಗಳು ಎದುರಾಗಲಿವೆ
It is a historic moment for India at the Asian Games. Our Kabaddi Women’s team has clinched the Gold! This victory is a testament to the indomitable spirit of our women athletes. India is proud of this success. Congrats to the team. My best wishes for their future endeavours. pic.twitter.com/amfPaGmiHt
— Narendra Modi (@narendramodi) October 7, 2023
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.