ಒಲಿಂಪಿಕ್ಸ್ ವನಿತಾ ಫುಟ್‌ಬಾಲ್ “ಎ’ ಗುಂಪಿನಲ್ಲಿ ಭಾರತ
Team Udayavani, Feb 14, 2019, 1:20 AM IST
ಹೊಸದಿಲ್ಲಿ: ಒಲಿಂಪಿಕ್ಸ್ ವನಿತಾ ಫುಟ್‌ಬಾಲ್ ಕೂಟಕ್ಕಾಗಿ ನಡೆಯಲಿರುವ ಏಶ್ಯ ಮಟ್ಟದ ದ್ವಿತೀಯ ಅರ್ಹತಾ ಸುತ್ತಿನಲ್ಲಿ ಭಾರತ “ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ.
ಎಪ್ರಿಲ್ ಒಂದರಿಂದ 9ರ ವರೆಗೆ ಮ್ಯಾನ್ಮಾರ್‌ನಲ್ಲಿ ನಡೆಯಲಿರುವ ಈ ಅರ್ಹತಾ ಸುತ್ತಿನ “ಎ’ ಗುಂಪಿನಲ್ಲಿ ಭಾರತದ ಜತೆ ಅತಿಥೇಯ ಮ್ಯಾನ್ಮಾರ್, ಇಂಡೋನೇಶ್ಯ ಮತ್ತು ನೇಪಾಲ ತಂಡಗಳಿವೆ.
ಈಗಾಗಲೇ ಭಾರತದ ತಂಡ ಈ ಮೂರೂ ತಂಡಗಳ ವಿರುದ್ಧ ಕನಿಷ್ಠ ಒಂದು ಬಾರಿಯಾದರೂ ಆಡಿದೆ. ಭುವನೇಶ್ವರದಲ್ಲಿ ನಡೆಯುತ್ತಿರುವ ಹೀರೋ ಗೋಲ್ಡ್ ಕಪ್ ಕೂಟಕ್ಕೂ ಮುನ್ನ ಭಾರತದ ವನಿತೆಯರು ಜಕಾರ್ತಾದಲ್ಲಿ ಇಂಡೋನೇಶ್ಯ ವಿರುದ್ಧ 2 ಸೌಹಾರ್ದ ಪಂದ್ಯಗಳನ್ನಾಡಿದ್ದರು. ಗೋಲ್ಡ್ ಕಪ್‌ನಲ್ಲಿ ಭಾರತ ತಂಡ ನೇಪಾಲ ವಿರುದ್ಧ 1-2 ಅಂತರದಿಂದ ಸೋತಿದೆ.
ಭಾರತಕ್ಕೆ ಮಿಶ್ರ ಫಲ
ಒಲಿಂಪಿಕ್ಸ್ ಪುಟ್‌ಬಾಲ್‌ನ ಮೊದಲ ಅರ್ಹತಾ ಸುತ್ತಿನಲ್ಲಿ ಭಾರತ ತಂಡ ನೇಪಾಲ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ವಿರುದ್ಧ ಆಡಿತ್ತು. ಇಲ್ಲಿ ಭಾರತದ ವನಿತೆಯರು ನೇಪಾಲ ವಿರುದ್ಧ 1-1 ಡ್ರಾ ಸಾಧಿಸಿದರೆ, ಬಾಂಗ್ಲಾದೇಶದ ವಿರುದ್ಧ 7-1 ಅಂತರದ ಭರ್ಜರಿ ಜಯ ಗಳಿಸಿದ್ದರು. ಆದರೆ ಮ್ಯಾನ್ಮಾರ್ ವಿರುದ್ಧ 1-2 ಅಂತರದ ಸೋಲುಭವಿಸಿ 4 ಅಂಕಗಳೊಂದಿಗೆ ದ್ವಿತೀಯ ಅರ್ಹತಾ ಸುತ್ತಿಗೆ ಪ್ರವೇಶಿಸಿದೆ.
2ನೇ ಅರ್ಹತಾ ಸುತ್ತಿನಲ್ಲಿ ಜಯಿಸಿದ 3 ತಂಡಗಳು ಅಂತಿಮ ಅರ್ಹತಾ ಸುತ್ತಿನಲ್ಲಿ ಆಸ್ಟ್ರೇಲಿಯ, ಡಿಪಿಆರ್ ಕೊರಿಯಾ, ಕೊರಿಯಾ ರಿಪಬ್ಲಿಕ್, ಚೀನ ಹಾಗೂ ಥಾಯ್ಲೆಂಡ್ ತಂಡಗಳನ್ನು ಕೂಡಕೊಳ್ಳಲಿವೆ. ಇಲ್ಲಿ ಗೆದ್ದ 4 ತಂಡಗಳು ಆತಿಥೇಯ ಜಪಾನ್‌ನೊಂದಿಗೆ ಏಶ್ಯದ 5 “ಪ್ರತಿನಿಧಿ’ಗಳಾಗಿ 2020ರ ಟೋಕಿಯೋ ಒಲಿಂಪಿಕ್ಸ್ ವನಿತಾ ಫುಟ್‌ಬಾಲ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ.
ದ್ವಿತೀಯ ಅರ್ಹತಾ ಸುತ್ತು
“ಎ’: ಮ್ಯಾನ್ಮಾರ್, ಭಾರತ, ಇಂಡೋನೇಶ್ಯ, ನೇಪಾಲ.
“ಬಿ’: ವಿಯೆಟ್ನಾಂ, ಜೋರ್ಡಾನ್, ಹಾಂಕಾಂಗ್, ಉಜ್ಬೇಕಿಸ್ಥಾನ.
“ಸಿ’: ಚೈನೀಸ್ ತೈಪೆ, ಇರಾನ್, ಫಿಲಿಪ್ಪೀನ್ಸ್, ಪಾಲೆಸ್ಟೈನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.