ಭಾರತ-ಜಪಾನ್ ಸೆಮಿಫೈನಲ್ ಮುಖಾಮುಖೀ
ಇನ್ನೊಂದು ಸೆಮಿಯಲ್ಲಿ ಅಮೆರಿಕ-ದಕ್ಷಿಣ ಆಫ್ರಿಕಾ ಸ್ಪರ್ಧೆ
Team Udayavani, Jun 14, 2019, 6:12 AM IST
ಭುವನೇಶ್ವರ: “ಎಫ್ಐಎಚ್ ಹಾಕಿ ಸೀರಿಸ್ ಫೈನಲ್’ ಕೂಟದ ಸೆಮಿಫೈನಲ್ ಪಂದ್ಯದಲ್ಲಿ ಭಾರತ- ಜಪಾನ್ ಶುಕ್ರವಾರ ಸೆಣಸಲಿವೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಉಜ್ಬೆಕಿಸ್ಥಾನದ ವಿರುದ್ಧ ಭರ್ಜರಿ 10-0 ಅಂತರದ ಗೆಲುವು ಸಾಧಿಸಿತ್ತು. ಇನ್ನೊಂದೆಡೆ ಜಪಾನ್ ಕ್ರಾಸ್ ಓವರ್ ಪಂದ್ಯದಲ್ಲಿ 6-2 ಅಂತರದಿಂದ ಪೋಲೆಂಡ್‌ಗೆ ಆಘಾತವಿಕ್ಕಿತು.
ಬಲಾಬಲದ ಲೆಕ್ಕಾಚಾರದಲ್ಲಿ ಭಾರತಕ್ಕೆ ಹೆಚ್ಚು ಅವಕಾಶ ಇರುವು ದನ್ನು ಅಲ್ಲಗಳೆಯುಂತಿಲ್ಲ. ಮನ್‌ಪ್ರೀತ್ ಪಡೆ ಕೂಟದ ಅಜೇಯ ತಂಡವಾಗಿ ಮೂಡಿಬಂದಿದೆ. ರಶ್ಯ ವಿರುದ್ಧ 10-0, ಪೋಲೆಂಡ್ ವಿರುದ್ಧ 3-1, ಉಜ್ಬೆಕಿಸ್ಥಾನದ ವಿರುದ್ಧ ಗೆಲುವು ದಾಖಲಿಸಿ ಮೆರೆದಿತ್ತು. ಇನ್ನೊಂದೆಡೆ ಭಾರತಕ್ಕೆ ಇದು ತವರಿನ ಪಂದ್ಯವಾಗಿದೆ. ಮನ್‌ಪ್ರೀತ್ ಸಿಂಗ್ ಬಳಗ ಇದರ ಲಾಭ ಎತ್ತುವುದನ್ನು ನಿರೀಕ್ಷಿಸಲಾಗಿದೆ.
ಭಾರತ ತಂಡದಲ್ಲಿ ಆಕಾಶ್ ದೀಪ್ ಸಿಂಗ್, ನಾಯಕ ಮನ್‌ದೀಪ್ ಸಿಂಗ್ ಎದುರಾಳಿ ಕೋಟೆಗೆ ಲಗ್ಗೆ ಹಾಕಿ ಗೋಲು ದಾಖಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಯುವ ಆಟಗಾರ ಗುರುಸಾಹಿಬ್‌ಜೀತ್ ಸಿಂಗ್ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿ ಕೊಂಡಿದ್ದಾರೆ. ಭಾರತ ಕಳೆದ ಮಾರ್ಚ್ ನಲ್ಲಿ ನಡೆದ ಸುಲ್ತಾನ್ ಅಜ್ಲಾನ್ ಷಾ ಹಾಕಿ ಕೂಟದಲ್ಲಿ ಜಪಾನ್ ವಿರುದ್ಧ 2-0 ಗೆಲುವು ಸಾಧಿಸಿತ್ತು.
ಜಪಾನ್ ಕ್ರಾಸ್ ಓವರ್ ಪಂದ್ಯ
ಏಶ್ಯನ್ ಗೇಮ್ಸ್ ಚಾಂಪಿಯನ್ ಜಪಾನ್ ತಂಡವನ್ನು ಯಾವ ಕಾರ ಣಕ್ಕೂ ಕಡೆಗಣಿಸುವಂತಿಲ್ಲ. ಅದು ಈಗಾಗಲೇ ಟೋಕಿಯೋ ಒಲಿಂಪಿಕ್ಸ್ ಪ್ರವೇಶ ಪಡೆದಾಗಿದೆ. ಉತ್ತಮ ಡಿಫೆಂಡಿಂಗ್ ಜಪಾನ್‌ಗೆ ಹೆಚ್ಚು ಬಲ ತುಂಬಿದೆ. ಫೈನಲ್‌ನಲ್ಲಿ ಭಾರತವನ್ನು ಎದುರಿಸಿ ಹೆಚ್ಚಿನ ರ್‍ಯಾಂಕಿಂಗ್ ಅಂಕ ಸಂಪಾದಿಸುವುದು ಜಪಾನ್ ಯೋಜನೆಯಾಗಿತ್ತು. ಆದರೆ ಅಂತಿಮ ಲೀಗ್ ಪಂದ್ಯದಲ್ಲಿ ಅಮೆರಿಕ ವಿರುದ್ಧ 2-2 ಡ್ರಾ ಸಾಧಿಸಿದ್ದು ಜಪಾನ್‌ಗೆ ಮುಳುವಾಯಿತು. ಹೀಗಾಗಿ “ಬಿ’ ವಿಭಾಗದಲ್ಲಿ ಅದು ದ್ವಿತೀಯ ಸ್ಥಾನಿಯಾಗಿ ನೇರ ಸೆಮಿಫೈನಲ್ ಕಾಣುವ ಬದಲು ಕ್ರಾಸ್ ಓವರ್ ಪಂದ್ಯವನ್ನು ಆಡಬೇಕಾಯಿತು.
ಉತ್ತಮ ಪ್ರದರ್ಶನದ ಭರವಸೆ: ಗ್ರಹಾಂ ರೀಡ್
“ಅತ್ಯಂತ ಕಡಿಮೆ ಅವಧಿಯಲ್ಲಿ ನಾವು ತಂಡದಲ್ಲಿ ಅನೇಕ ಬದಲಾವಣೆ ಮಾಡಿಕೊಂಡಿದ್ದರಿಂದ ಈ ಹಂತಕ್ಕೆ ತಲುಪಿದ್ದೇವೆ. ಜಪಾನ್ ವಿರುದ್ಧ ಭಾರತ ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ’ ಎಂದು ಭಾರತ ತಂಡದ ಕೋಚ್ ಗ್ರಹಾಂ ರೀಡ್ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.