ಭಾರತ-ಕಿವೀಸ್ ಟೆಸ್ಟ್ ವಿಶ್ವಕಪ್ ಫೈನಲ್ : 4 ಸಾವಿರ ಪ್ರೇಕ್ಷಕರಿಗೆ ಅನುಮತಿ
Team Udayavani, May 21, 2021, 7:10 AM IST
ಸೌತಾಂಪ್ಟನ್: ಭಾರತ-ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ 4,000 ವೀಕ್ಷಕರ ಸಮ್ಮುಖದಲ್ಲಿ ನಡೆಯಲಿದೆ ಎಂದು ಹ್ಯಾಂಪಶೈರ್ ಕೌಂಟಿ ಕ್ಲಬ್ನ ಮುಖ್ಯಸ್ಥ ರಾಡ್ ಬ್ರಾನ್ಸ್ ಗ್ರೋವ್ ತಿಳಿಸಿದ್ದಾರೆ.
“ಬ್ರಿಟನ್ನಲ್ಲಿ ಕೋವಿಡ್-19 ಪರಿಸ್ಥಿತಿ ಸುಧಾರಿಸಿದೆ. ಇತ್ತೀಚೆಗಷ್ಟೇ ಲೀಸೆಸ್ಟಶೈರ್-ಹ್ಯಾಂಪಶೈರ್ ಕೌಂಟಿ ಪಂದ್ಯಕ್ಕೆ ಒಂದೂವರೆ ಸಾವಿರ ಪ್ರೇಕ್ಷಕರಿಗೆ ಅನುಮತಿ ನೀಡಲಾಗಿತ್ತು. ಇದೀಗ ಜೂ. 18ರಿಂದ ನಡೆಯಲಿರುವ ವಿಶ್ವಕಪ್ ಟೆಸ್ಟ್ ಫೈನಲ್ ಪಂದ್ಯಕ್ಕೂ ವೀಕ್ಷರಿಗೆ ಅನುಮತಿ ನೀಡಲಾಗುವುದು’ ಎಂದು ಬ್ರಾನ್ಸ್ಗ್ರೋವ್ ತಿಳಿಸಿದರು.
“2019ರ ಸೆಪ್ಟೆಂಬರ್ ಬಳಿಕ ಇಂಗ್ಲೆಂಡ್ನಲ್ಲಿ ಇದೇ ಮೊದಲ ಬಾರಿ ನಾಲ್ಕು ದಿನಗಳ ಕೌಂಟಿ ಕ್ರಿಕೆಟ್ ಪ್ರಾರಂಭಿಸಿದ್ದೇವೆ. ಈ ಪಂದ್ಯಕ್ಕೂ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಕೊರೊನಾ ಪೂರ್ವದಂತೆ ಮತ್ತೆ ಇಂಗ್ಲೆಂಡ್ನಲ್ಲಿ ಕ್ರಿಕೆಟ್ ಚಟುವಟಿಕೆ ಆರಂಭಗೊಳ್ಳಲಿದೆ’ ಎಂದರು.
ಮಾರಾಟಕ್ಕೆ 2 ಸಾವಿರ ಟಿಕೆಟ್ :
“ಶೇ. 50 ರಷ್ಟು ಟಿಕೆಟ್ಗಳನ್ನು ಐಸಿಸಿ ತನ್ನ ಪ್ರಾಯೋಜಕರಿಗೆ ಹಾಗೂ ಇತರ ಪಾಲುದಾರರಿಗೆ ನೀಡುತ್ತದೆ. ಉಳಿದ ಎರಡು ಸಾವಿರ ಟಿಕೆಟ್ಗಳನ್ನು ನಾವು ಮಾರಾಟ ಮಾಡುತ್ತೇವೆ. ಈಗಾಗಲೇ ಎರಡು ಪಟ್ಟು ಅಭಿಮಾನಿಗಳಿಂದ ಅರ್ಜಿ ಗಳನ್ನು ಸ್ವೀಕರಿಸಲಾಗಿದೆ’ ಎಂದು ಬ್ರಾನ್ಸ್ಗ್ರೋವ್ ಮಾಹಿತಿ ನೀಡಿದರು.
ಭಾರತ್ ಆರ್ಮಿ ರೆಡಿ! :
ವಿಶ್ವಕಪ್ ಫೈನಲ್ ಪಂದ್ಯಕ್ಕೆ 4 ಸಾವಿರ ವೀಕ್ಷಕರಿಗೆ ಪ್ರವೇಶ ನೀಡಲು ನಿರ್ಧರಿಸಿದ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ತಂಡದ ಬೆಂಬಲಕ್ಕಿರುವ “ಭಾರತ್ ಆರ್ಮಿ’ ಭಾರೀ ಸಂತಸ ವ್ಯಕ್ತಪಡಿಸಿದೆ. ಇಂಗ್ಲೆಂಡ್ನಲ್ಲಿರುವ ಈ ಅಭಿಮಾನಿಗಳ ಬಳಗ ಭಾರತ ತಂಡಕ್ಕೆ ಚಿಯರ್ ಹೇಳಲು ಸ್ಟೇಡಿಯಂಗೆ ತೆರಳಲು ನಿರ್ಧರಿಸಿದ್ದಾಗಿ ಭಾರತ್ ಆರ್ಮಿಯ ಸಂಸ್ಥಾಪಕ ರಾಕೇಶ್ ಪಟೇಲ್ ಹೇಳಿದ್ದಾರೆ.
ಕೇವಲ 48 ಗಂಟೆಗಳಲ್ಲಿ ಭಾರತ್ ಆರ್ಮಿ ಕಡೆಯಿಂದ ಟಿಕೆಟ್ಗಾಗಿ ಎರಡು ಸಾವಿರ ಅರ್ಜಿ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.