ಕೊಹ್ಲಿ 50ನೇ ಶತಕ, ಭುವಿ 4 ವಿಕೆಟ್: ಆದರೂ ತಪ್ಪಿತು ಲಂಕಾ ಸೋಲು
Team Udayavani, Nov 20, 2017, 7:37 PM IST
ಕೋಲ್ಕತ : ಭಾರತ ವಿಜಯದತ್ತ ಸಾಗುವ ಎಲ್ಲ ಸಾಧ್ಯತೆಗಳಿದ್ದ ಅತ್ಯಂತ ರೋಚಕ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯವನ್ನು ಲಂಕಾ, ಬೆಳಕಿನ ಕೊರತೆಯ ನೆರವಿನಿಂದ, ಕೊನೆಗೂ ಡ್ರಾ ಮಾಡಿಕೊಳ್ಳುವಲ್ಲಿ ಸಫಲವಾಯಿತು.
ಸಾಮಾನ್ಯವಾಗಿ ಈಡನ್ ಗಾರ್ಡನ್ಸ್ ಅಂಗಣ ಭಾರತಕ್ಕೆ ಖಚಿತ ಗೆಲವು ತಂದುಕೊಡುವ ತಾಣವಾಗಿದ್ದರೂ ಪ್ರವಾಸಿ ಲಂಕಾ ಅದೃಷ್ಟಬಲದಿಂದ ಸೋಲು ತಪ್ಪಿಸಿಕೊಂಡು ಭಾರತಕ್ಕೆ ನಿರಾಶೆ ಉಂಟುಮಾಡಿತು.
ಭಾರತದ ಎರಡನೇ ಇನ್ನಿಂಗ್ಸ್ ನಲ್ಲಿ ನಾಯಕ ವಿರಾಟ್ ಕೊಹ್ಲಿ ಅಜೇಯ, ಕಳಂಕರಹಿತ 104 ರನ್ ಬಾರಿಸಿ ಭಾರತದ ವಿಜಯ ಸಾಧ್ಯತೆಗೆ ಭದ್ರ ಬುನಾದಿ ಹಾಕಿಕೊಟ್ಟರು.
ದಿನದ ಕೊನೆಯ ಒಂದೇ ಅವಧಿಯಲ್ಲಿ ಪಂದ್ಯ ಗೆಲ್ಲಲು 231 ರನ್‌ಗಳ ಅಸಾಧ್ಯ ಗುರಿ ಪಡೆದ ಲಂಕಾ, ಭುವನೇಶ್ವರ ಕುಮಾರ್ (11-8-8-4) ಅವರ ಅತ್ಯಂತ ಚುರುಕಿನ, ಮಾರಕ ಬೌಲಿಂಗ್‌ನಲ್ಲಿ ಮರ್ಮಾಘಾತಕ್ಕೆ ಗುರಿಯಾಗಿ ವಿಲವಿಲನೆ ಒದ್ದಾಡಿತು.
ಭುವನೇಶ್ವರ್ ಕುಮಾರ್‌ಗೆ ಒಳ್ಳೆಯ ಸಾಥ್ ನೀಡಿದ ಮೊಹಮ್ಮದ್ ಶಮಿ (2/34 9.3 ಓವರ್) ಮತ್ತು ಉಮೇಶ್ ಯಾದವ್ (1/25) ಲಂಕೆಯ ಬೆನ್ನೆಲುಬು ಮುರಿಯುವಲ್ಲಿ ಸಫಲರಾದರು.
ಬೆಳಕಿನ ಕೊರತೆಯಿಂದ ಆಟ ನಿಲ್ಲಿಸಲ್ಪಟ್ಟಾಗ ಲಂಕಾ ಖಚಿತ ಸೋಲಿನ ದವಡೆಯಿಂದ ಕೊನೆಗೂ ಪಾರಾದುದಕ್ಕೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿತು.
ಇನ್ನೂ ಐದಾರು ಓವರ್‌ಗಳನ್ನು ಹಾಕಲು ಸಾಧ್ಯವಾಗಿದ್ದಿದ್ದರೆ ಲಂಕೆ ಆಲೌಟಾಗುವುದು ಗ್ಯಾರಂಟಿ ಇತ್ತು ಎಂದು ನಿರಾಶರಾದ ಭವನೇಶ್ವರ ಕುಮಾರ್ ಹೇಳಿದರು.
ಸಂಕ್ಷಿಪ್ತ ಸ್ಕೋರ್ :
ಭಾರತ 172(59.3) ಮತ್ತು 352/8 (88.4) ಡಿಕ್ಲೇರ್‌ಡ್;
ಲಂಕಾ : 294 (83.4) ಮತ್ತು 75/7 (26.3 ಓವರ್)
ಫಲಿತಾಂಶ : ಪಂದ್ಯ ಡ್ರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ
Kannada: ಮಾತೃಭಾಷಾ ಹೊಳಪು
Kannada: ಕನ್ನಡ ಎನೆ ಕುಣಿದಾಡುವುದೆನ್ನೆದೆ… ಕನ್ನಡ ಎನೆ ಕಿವಿ ನಿಮಿರುವುದು…
Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.