ಭಾರತ-ಲಂಕಾ ಮತ್ತೂಮ್ಮೆ ಶಕ್ತಿ ಪರೀಕ್ಷೆ


Team Udayavani, Mar 6, 2018, 8:15 AM IST

3.jpg

ಕೊಲಂಬೊ: ಇದೇ ಕ್ರಿಕೆಟ್‌ ಋತುವಿನಲ್ಲಿ ಶ್ರೀಲಂಕಾ ವಿರುದ್ಧ 18 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಭಾರತ ಮತ್ತೂಮ್ಮೆ ಈ ದ್ವೀಪ ರಾಷ್ಟ್ರದ ತಂಡದೆದುರು ಕ್ರಿಕೆಟ್‌ ಸ್ಪರ್ಧೆಗೆ ಇಳಿಯಲಿದೆ. ಇದು ಟಿ20 ತ್ರಿಕೋನ ಸರಣಿಯಾಗಿದ್ದು, ಬಾಂಗ್ಲಾದೇಶ ತೃತೀಯ ತಂಡವಾಗಿದೆ. ಭಾರತ-ಶ್ರೀಲಂಕಾ ಮಂಗಳವಾರದ ಆರಂಭಿಕ ಪಂದ್ಯದಲ್ಲಿ ಎದುರಾಗಲಿವೆ.

ಇದು ಶ್ರೀಲಂಕಾದ 70ನೇ ಸ್ವಾತಂತ್ರ್ಯ ಸಂಭ್ರಮದ ಅಂಗವಾಗಿ ಹಮ್ಮಿಕೊಳ್ಳಲಾದ 7 ಪಂದ್ಯಗಳ ಕಿರು ಸರಣಿ- “ನಿದಹಾಸ್‌ ಟಿ20 ಸೀರೀಸ್‌’. ಸರಣಿಯ ಎಲ್ಲ ಪಂದ್ಯಗಳು ಕೊಲಂಬೋದ “ಆರ್‌. ಪ್ರೇಮದಾಸ ಸ್ಟೇಡಿಯಂ’ನಲ್ಲಿ ನಡೆಯಲಿವೆ. ಡಿಸ್ಕವರಿ ಚಾನೆಲ್‌ನ ನೂತನ ಕ್ರೀಡಾ ವಾಹಿನಿ “ಡಿ ನ್ಪೋರ್ಟ್‌’ ಮೊದಲ ಬಾರಿಗೆ ಕ್ರಿಕೆಟ್‌ ಸರಣಿಯನ್ನು ನೇರ ಪ್ರಸಾರ ಮಾಡಲಿದೆ.

ಭಾರತದ ಯುವ ಪಡೆ
ಇತ್ತೀಚೆಗಷ್ಟೇ ಯಶಸ್ವೀ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮುಗಿಸಿ ಬಂದ ಭಾರತ, ಈ ಚುಟುಕು ಕ್ರಿಕೆಟ್‌ ಸರಣಿಗಾಗಿ ಬಹುತೇಕ ಸೀನಿಯರ್‌ ಆಟಗಾರರಿಗೆ ವಿಶ್ರಾಂತಿ ನೀಡಿದೆ. ರೋಹಿತ್‌ ಶರ್ಮ ಅವರಿಗೆ ನಾಯಕತ್ವ ವಹಿಸಿ, ಯುವ ಪಡೆಯೊಂದನ್ನು ಕಳುಹಿಸಿದೆ. ಕೊಹ್ಲಿ, ಧೋನಿ, ಭುವನೇಶ್ವರ್‌, ಪಾಂಡ್ಯ, ಕುಲದೀಪ್‌ ಮೊದಲಾದವರ ಸ್ಥಾನದಲ್ಲಿ ಪಂತ್‌, ಹೂಡಾ, ಸಿರಾಜ್‌, ವಾಷಿಂಗ್ಟನ್‌, ವಿಜಯ್‌ ಶಂಕರ್‌ ಅವರಿಗೆ ಅವಕಾಶ ಲಭಿಸಿದೆ. ಧವನ್‌, ರಾಹುಲ್‌, ರೈನಾ, ಪಾಂಡೆ, ಕಾರ್ತಿಕ್‌, ಚಾಹಲ್‌ ತಂಡದಲ್ಲಿರುವ ಸ್ಟಾರ್‌ ಆಟಗಾರರು. ಒಟ್ಟಾರೆ, ಪಕ್ಕಾ ಟಿ20 ತಂಡವೊಂದು ಸ್ಪರ್ಧೆಗೆ ಅಣಿಯಾಗಿದೆ. ಇನ್ನೊಂದೇ ತಿಂಗಳಲ್ಲಿ ಆರಂಭವಾಗಲಿರುವ ಐಪಿಎಲ್‌ಗೆ ಇದನ್ನು ಅಭ್ಯಾಸ ಸರಣಿ ಎಂದು ಪರಿಗಣಿಸಲಡ್ಡಿಯಿಲ್ಲ.

ವಿರಾಟ್‌ ಕೊಹ್ಲಿ ಗೈರಲ್ಲಿ ಭಾರತದ ಬ್ಯಾಟಿಂಗ್‌ ವಿಭಾಗ ಬಡವಾಗಿರುವುದಂತೂ ನಿಜ. ನಾಯಕ ರೋಹಿತ್‌ ಶರ್ಮ ಫಾರ್ಮ್ ಕೂಡ ಹೇಳಿಕೊಳ್ಳುವ ಮಟ್ಟದಲ್ಲಿಲ್ಲ. ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣಿಯಲ್ಲಿ ಶತಕವೊಂದನ್ನು ಬಾರಿಸಿದ್ದನ್ನು ಬಿಟ್ಟರೆ ರೋಹಿತ್‌ ಅವರದು ಸಂಪೂರ್ಣ ವೈಫ‌ಲ್ಯ. ಮರಳಿ ಲಯ ಕಂಡುಕೊಳ್ಳಲು ಈ ಸರಣಿ  ರೋಹಿತ್‌ಗೆ ನೆರವಾಗಬೇಕಿದೆ. ಜತೆಗಾರನಾಗಿ ಉಪನಾಯಕ ಶಿಖರ್‌ ಧವನ್‌ ಕಣಕ್ಕಿಳಿಯಲಿದ್ದಾರೆ. ವನ್‌ಡೌನ್‌ನಲ್ಲಿ ರೈನಾ ಮುಂದುವರಿಯಲಿರುವುದರಿಂದ ಕೆ.ಎಲ್‌. ರಾಹುಲ್‌ಗೆ 4ನೇ ಕ್ರಮಾಂಕ ಸಿಗಬಹುದು. ಪಾಂಡೆ, ಕೀಪರ್‌ ಕಾರ್ತಿಕ್‌ ಮಧ್ಯಮ ಕ್ರಮಾಂಕವನ್ನು ಆಧರಿಸಬೇಕಿದೆ. ಸ್ಪೆಷಲಿಸ್ಟ್‌ ಬ್ಯಾಟ್ಸ್‌ ಮನ್‌ ಎಂದೇ ಪರಿಗಣಿಸಲ್ಪಟ್ಟಿರು ರಿಷಬ್‌ ಪಂತ್‌, ಬಿಗ್‌ ಹಿಟ್ಟರ್‌ ದೀಪಕ್‌ ಹೂಡಾ ಕೂಡ ರೇಸ್‌ನಲ್ಲಿದ್ದಾರೆ. ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಸ್ಥಾನ ತುಂಬಲು ವಿಜಯ್‌ ಶಂಕರ್‌, ವಾಷಿಂಗ್ಟನ್‌ ಸುಂದರ್‌ ನಡುವೆ ಪೈಪೋಟಿ ಇದೆ.

ಭಾರತದ ಬೌಲಿಂಗ್‌ ವಿಭಾಗ ಭಾರೀ ಘಾತಕವೇನಲ್ಲ. ಠಾಕೂರ್‌, ಉನಾದ್ಕತ್‌, ಸಿರಾಜ್‌ ವೇಗದ ವಿಭಾಗದ ಪ್ರಮುಖರು. ದಕ್ಷಿಣ ಆಫ್ರಿಕನ್ನರಿಗೆ ಚಳಿ ಹಿಡಿಸಿದ ಚಾಹಲ್‌ ಪ್ರಧಾನ ಸ್ಪಿನ್‌ ಅಸ್ತ್ರ. ಲಂಕಾ ಟ್ರ್ಯಾಕ್‌ ಚಾಹಲ್‌ಗೆ ಹೆಚ್ಚಿನ ನೆರವು ನೀಡಬಹುದು. ಇವರೊಂದಿಗೆ ಅಕ್ಷರ್‌ ಪಟೇಲ್‌ ಇದ್ದಾರೆ.

ಲಂಕಾ ಹೆಚ್ಚು ಬಲಿಷ್ಠ ?
ಭಾರತಕ್ಕೆ ಹೋಲಿಸಿದರೆ ಶ್ರೀಲಂಕಾ ತಂಡ ಮೇಲ್ನೋಟಕ್ಕೆ ಹೆಚ್ಚು ಬಲಿಷ್ಠ. ಕಳೆದ ಸಲ ಭಾರತದ ವಿರುದ್ಧ ತವರಿನಲ್ಲಿ ಆಡಿದ ಎಲ್ಲ 9 ಅಂತಾರಾಷ್ಟ್ರೀಯ ಪಂದ್ಯಗಳನ್ನು ಕಳೆದುಕೊಂಡ ತಂಡಗಳಲ್ಲಿದ್ದ ಪ್ರಮುಖರೆಲ್ಲ ಈ ಸರಣಿಯಲ್ಲೂ ಮುಂದುವರಿದಿದ್ದಾರೆ. ಚಂಡಿಮಾಲ್‌, ತರಂಗ, ಮೆಂಡಿಸ್‌, ಪೆರೆರ ಅವರಿಂದ ತಂಡಕ್ಕೆ “ಬ್ಯಾಟಿಂಗ್‌ ಫೈರ್‌ ಪವರ್‌’ ಲಭಿಸಬಹುದೆಂಬ ನಿರೀಕ್ಷೆ ಆತಿಥೇಯ ರಾಷ್ಟ್ರದ ಕ್ರಿಕೆಟ್‌ ಅಭಿಮಾನಿಗಳದ್ದು. ಬೌಲಿಂಗಿನಲ್ಲಿ ಲಕ್ಮಲ್‌, ಚಮೀರ, ಶಣಕ, ಮಿಸ್ಟರಿ ಸ್ಪಿನ್ನರ್‌ ಧನಂಜಯ ಲಂಕೆಯ ನೆರವಿಗಿದ್ದಾರೆ. ಅಸೇಲ ಗುಣರತ್ನ ಮಾತ್ರ ಗಾಯಾಳಾಗಿ ಈ ಸರಣಿಯನ್ನು ತಪ್ಪಿಸಿಕೊಳ್ಳಲಿದ್ದಾರೆ.

ಭಾರತದೆದುರು ಅನುಭವಿಸಿದ 9-0 ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳುವುದು ಶ್ರೀಲಂಕಾದ ಗುರಿ. ಇತ್ತೀಚೆಗಷ್ಟೇ ಬಾಂಗ್ಲಾದೇಶದಲ್ಲಿ ನಡೆದ ಏಕದಿನ ತ್ರಿಕೋನ ಸರಣಿಯಲ್ಲಿ ಚಾಂಪಿಯನ್‌ ಆಗಿ ಮೂಡಿಬಂದದ್ದು ಲಂಕೆಗೆ ಎಷ್ಟರ ಮಟ್ಟಿಗೆ ಲಾಭವಾದೀತು ಎಂದು ಕಾದು ನೋಡಬೇಕು.

ಟಾಪ್ ನ್ಯೂಸ್

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

Sagara-Minister-Dinesh

KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2025: Here’s what all ten teams look like after the mega auction

IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

12

Sullia: ಕನಕಮಜಲು; ಅಂಗಡಿ, ಹೊಟೇಲ್‌ನಿಂದ ಕಳವು

Sagara-Minister-Dinesh

KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್

Mallika Sherawat breaks up with French boyfriend

Actress: ಫ್ರೆಂಚ್‌ ಗೆಳೆಯನೊಂದಿಗೆ ಬ್ರೇಕ್‌ಅಪ್‌ ಆಗಿದೆ: ಮಲ್ಲಿಕಾ ಶೆರಾವತ್‌

Chhattisgarh: 20 coaches of goods train derail

Chhattisgarh: ಹಳಿ ತಪ್ಪಿದ  ಗೂಡ್ಸ್‌ ರೈಲಿನ 20 ಬೋಗಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.