ಬಾಕ್ಸಿಂಗ್‌ ಡೇ ಟೆಸ್ಟ್‌: ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಬದಲಾವಣೆ ಅನಿವಾರ್ಯ


Team Udayavani, Dec 21, 2020, 3:32 PM IST

ಬಾಕ್ಸಿಂಗ್‌ ಡೇ ಟೆಸ್ಟ್‌: ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಬದಲಾವಣೆ ಅನಿವಾರ್ಯ

ಹೊಸದಿಲ್ಲಿ: ಆಸ್ಟ್ರೇಲಿಯ ವಿರುದ್ಧದ 4 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ಮೊದಲ ಪಂದ್ಯವನ್ನು ಅತ್ಯಂತ ಹಿನಾಯವಾಗಿ ಸೋತು ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದ್ದು ಮುಂದಿನ ಬಾಕ್ಸಿಂಗ್‌ ಡೇ ಪಂದ್ಯದಲ್ಲಿ ಭಾರತ ಎಚ್ಚರಿಕೆಯ ಹೆಜ್ಜೆಯನ್ನಿಡುವುದು ಅನಿವಾರ್ಯವಾಗಿದೆ. ಇದಕ್ಕಾಗಿ ಭಾರತ ತಂಡದಲ್ಲಿ ಹಲವು ಬದಲಾವಣೆ ಸಂಭವಿಸುವುದು ಇಲ್ಲಿ ನಿರೀಕ್ಷಿತ.

ರಾಹುಲ್‌ ಸೇರ್ಪಡೆ

ಕಳಪೆ ಲಯದಲ್ಲಿರುವ ಆರಂಭಿಕನಾದ ಪೃಥ್ವಿ ಶಾ ಅವರನ್ನು ಮುಂದಿನ ಪಂದ್ಯಗಳಿಗೆ ಕೈ ಬಿಟ್ಟು ಈ ಸ್ಥಾನಕ್ಕೆ ಕನ್ನಡಿಗ ಕೆ. ಎಲ್‌. ರಾಹುಲ್‌ಗೆ ಅವಕಾಶ ನೀಡುವ ಸಾಧ್ಯತೆಯಿದೆ. ಏಕೆಂದರೆ ಆಸೀಸ್‌ ನೆಲದಲ್ಲಿ ರಾಹುಲ್‌ ಉತ್ತಮ ಬ್ಯಾಟಿಂಗ್‌ ನಡೆಸಿದ್ದಾರೆ. ಜತೆಗೆ ರಾಹುಲ್‌ ಸೇರ್ಪಡೆಯಿಂದ ಭಾರತಕ್ಕೆ ಉತ್ತಮ ಆರಂಭಿಕ ಜೋಡಿಯೂ ಲಭಿಸಿದಂತಾಗುತ್ತದೆ. ಐಪಿಎಲ್‌ನಲ್ಲಿಯೂ ಅಗರ್ವಾಲ್‌-ರಾಹುಲ್‌ ಜೋಡಿ ಉತ್ತಮ ಜತೆಯಾಟ ನಡೆಸಿದೆ. ಅದರಂತೆ ಇಲ್ಲಿಯೂ ಈ ಜೋಡಿಯಿಂದ ತಂಡಕ್ಕೆ ಉತ್ತಮ ಆರಂಭ ಸಿಗುವಲ್ಲಿ ಯಾವುದೇ ಅನುಮಾನವಿಲ್ಲ ಎಂಬುದು ಅನೇಕ ಮಾಜಿ ಕ್ರಿಕೆಟಿಗರ ಅಭಿಪ್ರಾಯವೂ ಆಗಿದೆ.

ಗಿಲ್‌ಗೆ ಅವಕಾಶ

ಮೊದಲ ಪಂದ್ಯವನ್ನಾಡಿದ ನಾಯಕ ವಿರಾಟ್‌ ಕೊಹ್ಲಿ ಪಿತೃತ್ವ ರಜೆಯಲ್ಲಿ ಭಾರತಕ್ಕೆ ವಾಪಸಾಗಲಿದ್ದು ಮುಂದಿನ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಈ ಸ್ಥಾನಕ್ಕೆ ಯುವ ಆಟಗಾರ ಶುಭಮನ್‌ ಗಿಲ್‌ಗೆ ಅವಕಾಶ ಸಿಗಲಿದೆಯಾ ಎಂಬ ಪ್ರಶ್ನೆಯಿದೆ. ಅಭ್ಯಾಸ ಪಂದ್ಯದಲ್ಲಿ ಗಿಲ್‌ ಉತ್ತಮ ಪ್ರದರ್ಶನವನ್ನು ತೋರಿದ್ದಾರೆ. ಜತೆಗೆ ನಿಂತು ಆಡುವ ಕೌಶಲವೂ ಗಿಲ್‌ ಅವರಲ್ಲಿದೆ. ಪ್ರಥಮ ದರ್ಜೆ ಮತ್ತು ರಣಜಿ ಕೂಟದಲ್ಲಿ ಗಿಲ್‌ ತೋರಿದ ಬ್ಯಾಟಿಂಗ್‌ ಪ್ರದರ್ಶನವೇ ಇದಕ್ಕೆ ಉತ್ತಮ ನಿದರ್ಶನ. ಆದ್ದರಿಂದ ವಿರಾಟ್‌ ಸ್ಥಾನಕ್ಕೆ ಗಿಲ್‌ ಅವರನ್ನು ಹೊರತು ಪಡಿಸಿ ಮತ್ಯಾವ ಆಟಗಾರನ ಆಯ್ಕೆ ಅಷ್ಟು ನ್ಯಾಯ ಒದಿಸುವ ಸಾಧ್ಯತೆ ತೀರ ಕಡಿಮೆ ಎಂದರು ತಪ್ಪಾಗಲಾರದು.

ರಹಾನೆಗೆ ಹೆಚ್ಚಿದ ನಾಯಕತ್ವದ ಜವಾಬ್ದಾರಿ

ವಿರಾಟ್‌ ಅನುಪಸ್ಥಿತಿಯಲ್ಲಿ ನಾಯಕತ್ವದ ಜವಾಬ್ದಾರಿ ಹೊತ್ತುಕೊಂಡ ಅಜಿಂಕ್ಯ ರಹಾನೆ ಮೊದಲ ಪಂದ್ಯದ ಸೋಲಿನಿಂದ ಹೊರಬಂದು ಟೀಕೆಗಳ ಬಗ್ಗೆ ತೆಲೆಕೆಡಿಸಿಕೊಳ್ಳದೆ ಮುಂದಿನ ಪಂದ್ಯಕ್ಕೆ ಮಾನಸಿಕವಾಗಿ ಸದೃಡತೆಯಿಂದ ಸಜ್ಜಾಗಬೇಕಿದೆ. ತಂಡದ ಆಟಗಾರರಲ್ಲಿ ಆತ್ಮವಿಶ್ವಾಸದ ನುಡಿಗಳನ್ನಾಡಿ ತಂಡವನ್ನು ಮುನ್ನಡೆಸಬೇಕಿದೆ. ಜತೆಗೆ ಬ್ಯಾಟಿಂಗ್‌ನಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರಬೇಕಿದೆ.

ಇದನ್ನೂ ಓದಿ:ಗೆಲ್ಲಬೇಕಾದರೆ ಈ ತಕ್ಷಣ ರಾಹುಲ್ ದ್ರಾವಿಡ್‌ರನ್ನು ಆಸ್ಟ್ರೇಲಿಯಕ್ಕೆ ಕಳಿಸಿಕೊಡಿ!

ಜಡೇಜ ಮರುಪ್ರವೇಶ?

ತಂಡದಲ್ಲಿ ಕಾಡುತ್ತಿರುವ ಆಲ್‌ರೌಂಡರ್‌ ಸಮಸ್ಯೆಗೆ ರವೀಂದ್ರ ಜಡೇಜ ಆಯ್ಕೆ ಉತ್ತಮ ಪರಿಹಾರವಾಗಿದೆ. ಗಾಯದ ಸಮಸ್ಯೆಯಿಂದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಜಡೇಜ ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಆದ್ದರಿಂದ ಮುಂದಿನ ಪಂದ್ಯಕ್ಕೆ ಹನುಮ ವಿಹಾರಿ ಬದಲು ಜಡೇಜ ಅವರು ಅವಕಾಶ ಪಡೆಯುವುದು ಬಹುತೇಕ ಖಾತ್ರಿ. ಜಡೇಜ ಲಭ್ಯತೆಯಿಂದ ಸ್ಪಿನ್‌ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ವಿಭಾಗ ಮತ್ತಷ್ಟು ಸದೃಢಗೊಳ್ಳಲಿದೆ.

ಶಮಿ ಸ್ಥಾನಕ್ಕೆ ಸಿರಾಜ್‌ ಸೂಕ್ತ

ಕಳೆದ ಪಂದ್ಯದಲ್ಲಿ ಗಯಾಳಾಗಿ ಟೆಸ್ಟ್‌ ಸರಣಿಯಿಂದ ಹೊರಬಿದ್ದ ಮೊಹಮ್ಮದ್‌ ಶಮಿ ಸ್ಥಾನಕ್ಕೆ ಸಿರಾಜ್‌ ಅವರನ್ನು ಆಡಿಸಿದರೆ ಉತ್ತಮ. ಅಭ್ಯಾಸ ಪಂದ್ಯದಲ್ಲಿ ಸಿರಾಜ್‌ ಉತ್ತಮ ಪ್ರದರ್ಶನ ತೋರಿದ್ದು ತಂಡದ ಆತ್ಮವಿಶ್ವಾಸ ಮೂಡಿಸಿದ್ದಾರೆ. ಉಳಿದಂತೆ ವಿಕೆಟ್‌ ಕೀಪರ್‌ ಕಮ್‌ ಬ್ಯಾಟ್ಸ್‌ಮನ್‌ ವೃದ್ಧಿಮಾನ್‌ ಸಾಹಾ ಬದಲಿಗೆ ಪಂತ್‌ಗೆ ಅವಕಾಶ ನೀಡಿದರೂ ತಪ್ಪಾಗಲಾರದು. ಪಂತ್‌ ಕಳೆದ ಆಸೀಸ್‌ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್‌ ನಡೆಸಿದ್ದಾರೆ ಜತೆಗೆ ಅಭ್ಯಾಸ ಪಂದ್ಯದಲ್ಲಿಯೂ ಶತಕ ಸಿಡಿಸಿ ಮಿಂಚಿದ್ದರು. ಸಾಹಾ ಕೀಪಿಂಗ್‌ ಹೊರತುಪಡಿಸಿ ಬ್ಯಾಟಿಂಗ್‌ನಲ್ಲಿ ಘೋರ ವೈಫ‌ಲ್ಯ ಅನುಭವಿಸುತ್ತಿದ್ದು ತಂಡಕ್ಕೆ ಹಿನ್ನಡೆಯಾಗಿದೆ ಆದ್ದರಿಂದ ಪಂತ್‌ಗೆ ಆಡುವ ಅವಕಾಶ ನೀಡಬೇಕೆನ್ನುವುದು ಹಲವರ ಅಭಿಪ್ರಾಯವಾಗಿದೆ.

ಗೆಲ್ಲಲೇ ಬೇಕಾದ ಒತ್ತಡದಲ್ಲಿ ಭಾರತ

ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೆ ಒಂದು ಪಂದ್ಯವನ್ನು ಸೋತಿದೆ. ಮುಂದಿನ ಪಂದ್ಯಕ್ಕೆ ವಿರಾಟ್‌, ಅನುಪಸ್ಥಿತಿ. ಕ್ವಾರಂಟೈನ್‌ ವಾಸದಲ್ಲಿರುವ ರೋಹಿತ್‌ ಶರ್ಮ ಕೂಡ ದ್ವಿತೀಯ ಟೆಸ್ಟ್‌ ಆಡುವುದ ಅನುಮಾನ ಆದ್ದರಿಂದ ಭಾರತಕ್ಕೆ ಅನುಭವಿ ಆಟಗಾರರ ಕೊರತೆ ಕಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ಸೋಲಿಗೆ ಅನೇಕ ಕ್ರಿಕೆಟಿಗರಿಂದ ದೊಡ್ಡಮಟ್ಟದಲ್ಲಿ ಟೀಕೆಯೂ ವ್ಯಕ್ತವಾಗುತ್ತಿದೆ.

ಇದೆಲ್ಲವನ್ನು ಮೆಟ್ಟಿನಿಂತು ಭಾರತ ಹೊಸ ಹುರುಪಿನೊಂದಿಗೆ ಮುಂದಿನ ಪಂದ್ಯದಲ್ಲಿ ಶಕ್ತಿ ಮೀರಿ ಪ್ರದರ್ಶನ ತೋರುವ ಮೂಲಕ ಎದುರಾಳಿಗಳ ವಿರುದ್ಧ ತಿರುಗಿ ಬೀಳಬೇಕಿದೆ. ಒಂದೊಮ್ಮೆ ಭಾರತ ಈ ಪಂದ್ಯವನ್ನು ಸೋತರೆ ಸರಣಿ ಗೆಲ್ಲುವ ಹೋರಾಟವೊಂದನ್ನು ಅರ್ಧ ದಾರಿಲ್ಲಿಯೇ ಕೊನೆಗೊಳಿಸಲಿದೆ ಎನ್ನಲಡ್ಡಿಯಿಲ್ಲ. ಗೆದ್ದರೆ ಹೋರಾಟ ಜಾರಿಯಲ್ಲಿರಲಿದೆ

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.