Women’s Asian Hockey Semi-Finals: ಜಪಾನ್ ವಿರುದ್ಧ ಭಾರತ ಫೇವರಿಟ್
Team Udayavani, Nov 19, 2024, 12:34 AM IST
ರಾಜ್‌ಗಿರ್ (ಬಿಹಾರ): ತುಂಬು ಆತ್ಮವಿಶ್ವಾಸದಿಂದ ಕೂಡಿರುವ ಆತಿಥೇಯ ಹಾಗೂ ಹಾಲಿ ಚಾಂಪಿಯನ್ ಭಾರತ ತಂಡ ಮಂಗಳವಾರದ ವನಿತಾ ಏಷ್ಯನ್ ಹಾಕಿ ಸೆಮಿಫೈನಲ್‌ನಲ್ಲಿ ಜಪಾನ್ ವಿರುದ್ಧ ಸೆಣಸಲಿದೆ. ತನ್ನ ಕೊನೆಯ ಲೀಗ್ ಪಂದ್ಯ ದಲ್ಲಿ ಜಪಾನ್‌ಗೆ 3-0 ಅಂತರದ ಸೋಲುಣಿಸಿದ ಸಲೀಮಾ ಟೇಟೆ ನಾಯಕತ್ವದ ಭಾರತ ಇಲ್ಲಿಯೂ ಫೇವರಿಟ್ ಎಂಬು ದರಲ್ಲಿ ಎರಡು ಮಾತಿಲ್ಲ. ಇನ್ನೊಂದು ಸೆಮಿಫೈನಲ್‌ನಲ್ಲಿ ಚೀನ-ಮಲೇಷ್ಯಾ ಮುಖಾಮುಖಿ ಆಗಲಿವೆ.
ಕೂಟದುದ್ದಕ್ಕೂ ಭಾರತದ ವನಿತೆಯರು ಅಮೋಘ ಪ್ರದ ರ್ಶನ ಕಾಯ್ದುಕೊಂಡು ಬಂದಿ ದ್ದಾರೆ. ಎಲ್ಲ ವಿಭಾಗಗಳಲ್ಲೂ ಮೇಲುಗೈ ಸಾಧಿಸಿ ಸರ್ವಾಂ ಗೀಣ ಪ್ರದರ್ಶನ ನೀಡಿದ್ದಾರೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ 9ನೇ ಸ್ಥಾನದಲ್ಲಿರುವ ಭಾರತ ಆಡಿದ ಐದೂ ಪಂದ್ಯಗಳಲ್ಲಿ ಅಧಿಕಾರ ಯುತ ಜಯ ಸಾಧಿಸಿದೆ. ಇದರಲ್ಲಿ ಮಹತ್ವದ ಗೆಲುವು ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಚೀನ ವಿರುದ್ಧ ದಾಖಲಾಗಿತ್ತು.
ನಿರ್ಲಕ್ಷ್ಯ ಸಲ್ಲದು…
“ನಮ್ಮವರು ಆಕ್ರಮಣಕಾರಿ ಹಾಗೂ ಅಷ್ಟೇ ರಕ್ಷಣಾತ್ಮಕ ಆಟದ ಮೂಲಕ ಗಮನ ಸೆಳೆದಿದ್ದಾರೆ. ಎದುರಾಳಿಯ ಸಾಮರ್ಥ್ಯ ಹಾಗೂ ದೌರ್ಬಲ್ಯವನ್ನು ಅರಿತಾಗ ಕಾರ್ಯತಂತ್ರದಲ್ಲಿ ದೊಡ್ಡ ಯಶಸ್ಸು ಸಾಧ್ಯ. ನಮ್ಮ ಹುಡುಗಿ ಯರ ಈವರೆಗಿನ ಸಾಧನೆ ಯನ್ನು ಪ್ರಶಂಸಿಸಲೇ ಬೇಕು. ಆದರೆ ಸೆಮಿಫೈನಲ್ ಎಂಬುದು ಬೇರೆಯೇ ಪಂದ್ಯ. ಇಲ್ಲಿ ಯಾವ ನಿರ್ಲಕ್ಷ್ಯವೂ ಸಲ್ಲದು. ಜಪಾನ್‌ನಿಂದ ಪ್ರಬಲ ಹೋರಾಟ ಕಂಡುಬರಬಹುದು’ ಎಂಬು ದಾಗಿ ಕೋಚ್ ಹರೇಂದ್ರ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಯುವ ಡ್ರ್ಯಾಗ್‌ಫ್ಲಿಕರ್ ದೀಪಿಕಾ ಈ ಕೂಟದಲ್ಲಿ ಅಮೋಘ ನಿರ್ವಹಣೆ ನೀಡಿದ್ದು, ಕೂಟದಲ್ಲೇ ಸರ್ವಾಧಿಕ 10 ಗೋಲು ಬಾರಿಸಿದ್ದಾರೆ.
ಫಾರ್ವರ್ಡ್ ಆಟಗಾರ್ತಿ ಯರಾದ ಶರ್ಮಿಳಾದೇವಿ, ಸಂಗೀತಾ ಕುಮಾರಿ, ಪ್ರೀತಿ ದುಬೆ, ಲಾಲ್ರೆಮಿÕಯಾಮಿ ಅವರ ಆಟ ಅಮೋಘ ಮಟ್ಟದ ಲ್ಲಿದೆ. ಉದಿತಾ, ಸುಶೀಲಾ ಚಾನು ಮತ್ತು ವೈಷ್ಣವಿ ವಿಟಲ್ ಫಾಲ್ಕೆ, ನಾಯಕಿ ಸಲೀಮಾ ಟೇಟೆ ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಸೆಮಿಫೈನಲ್‌ನಲ್ಲೂ ನಮ್ಮವರು ಇದೇ ಮಟ್ಟವನ್ನು ಕಾಯ್ದುಕೊಂಡು ಬರಬೇಕಿದೆ. ಜತೆಗೆ ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿಸುವಲ್ಲಿ ಇನ್ನಷ್ಟು ಪರಿಪೂರ್ಣತೆ ಸಾಧಿಸಬೇಕಿದೆ ಎಂಬುದು ಕೋಚ್ ಹರೇಂದ್ರ ಸಿಂಗ್ ಅಭಿಪ್ರಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.