ಹಾಕಿ: ಡ್ರಾ ಸಾಧಿಸಿದರೂ ಭಾರತಕ್ಕೆ ಫೈನಲ್ ಅವಕಾಶ
Team Udayavani, Jun 30, 2018, 6:00 AM IST
ಬ್ರೆಡಾ (ಹಾಲೆಂಡ್): ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿಯಲ್ಲಿ ಭಾರತ ತನ್ನ ಅಂತಿಮ ಲೀಗ್ ಪಂದ್ಯವನ್ನು ಆತಿಥೇಯ ಹಾಲೆಂಡ್ ವಿರುದ್ಧ ಶನಿವಾರ ಆಡಲಿದೆ. ಈ ಪಂದ್ಯವನ್ನು ಡ್ರಾ ಮಾಡಿಕೊಂಡರೂ ಭಾರತ ಪ್ರಶಸ್ತಿ ಸುತ್ತು ಪ್ರವೇಶಿಸಲಿದೆ.
ಸದ್ಯ ಭಾರತ 2 ಗೆಲುವು, ಒಂದು ಸೋಲು ಹಾಗೂ ಒಂದು ಡ್ರಾದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ (7 ಅಂಕ). ಒಟ್ಟು 10 ಅಂಕ ಸಂಪಾದಿಸಿರುವ ಆಸ್ಟ್ರೇಲಿಯ ಈಗಾಗಲೇ ಫೈನಲ್ ತಲುಪಿದೆ. ರೌಂಡ್ ರಾಬಿನ್ ಮಾದರಿಯ ಈ ಕೂಟದಲ್ಲಿ ಅತ್ಯಧಿಕ ಅಂಕ ಸಂಪಾದಿಸಿದ 2 ತಂಡ ಗಳು ಫೈನಲ್ನಲ್ಲಿ ಮುಖಾಮುಖೀಯಾಗಲಿವೆ.
ಹಾಲೆಂಡ್ ವಿರುದ್ಧ ಸೋತರೆ ಭಾರತ ಫೈನಲ್ ಅವಕಾಶವನ್ನು ಕಳೆದುಕೊಳ್ಳಲಿದೆ. ಆಗ ಹಾಲೆಂಡ್ ಫೈನಲ್ ಪ್ರವೇಶಿಸಲಿದೆ. ಫೈನಲ್ ಪಂದ್ಯ ರವಿವಾರ ನಡೆಯಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.