ಆಸೀಸ್ ಪ್ರವಾಸಕ್ಕೊಂದು ಅಭ್ಯಾಸ ಸರಣಿ
Team Udayavani, Nov 16, 2018, 6:15 AM IST
ಮೌಂಟ್ ಮೌಂಗನಿ (ನ್ಯೂಜಿಲ್ಯಾಂಡ್): ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರುವ ಭಾರತ “ಎ’ ತಂಡ ಶುಕ್ರವಾರದಿಂದ 4 ದಿನಗಳ ಅನಧಿಕೃತ ಟೆಸ್ಟ್ ಸರಣಿಯನ್ನು ಆರಂಭಿಸಲಿದೆ. ಆತಿಥೇಯ ನ್ಯೂಜಿಲ್ಯಾಂಡ್ “ಎ’ ವಿರುದ್ಧದ ಈ ಪಂದ್ಯ ಮೌಂಟ್ ಮೌಂಗನಿಯಲ್ಲಿ ನಡೆಯಲಿದೆ.
ಸರಣಿಯಲ್ಲಿ 3 ಟೆಸ್ಟ್ ಪಂದ್ಯಗಳ ಜತೆಗೆ 3 ಏಕದಿನ ಪಂದ್ಯಗಳನ್ನೂ ಆಡಲಾಗುವುದು. ಮುಂಬರುವ ಕಠಿನ ಆಸ್ಟ್ರೇಲಿಯ ಪ್ರವಾಸದ ಹಿನ್ನೆಲೆಯಲ್ಲಿ ಭಾರತದ ಆಟಗಾರರ ಪಾಲಿಗೆ ಇದೊಂದು ಅಭ್ಯಾಸ ಸರಣಿಯಾಗಲಿದೆ. ಭಾರತದ 5 ಮಂದಿ ಟೆಸ್ಟ್ ಆಟಗಾರರು “ಎ’ ತಂಡದಲ್ಲಿದ್ದಾರೆ.
ಇಲ್ಲಿನ ವಾತಾವರಣ ಹಾಗೂ ಪರಿಸ್ಥಿತಿಗೆ ಹೊಂದಿಕೊಳ್ಳಲು ಇದು ಸಹಕಾರಿಯಾಗಲಿದೆ. ಜತೆಗೆ “ಗೋಡೆ’ ಖ್ಯಾತಿಯ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನವೂ ಇವರಿಗೆ ಲಭಿಸಲಿದೆ.
2 ತಂಡಗಳ ಪ್ರಯೋಗ
ಈ ಸರಣಿಗಾಗಿ ಭಾರತ 2 ಪ್ರತ್ಯೇಕ ತಂಡಗಳನ್ನು ರಚಿಸಿದ್ದು ವಿಶೇಷ. ಮೊದಲ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಭಾರತ “ಎ’ ತಂಡವನ್ನು ಮುನ್ನಡೆಸಲಿದ್ದಾರೆ. ಉಳಿದೆರಡು ಟೆಸ್ಟ್ ಪಂದ್ಯಗಳ ವೇಳೆ ಕರುಣ್ ನಾಯರ್ ನಾಯಕರಾಗಿರುತ್ತಾರೆ.
ಭಾರತೀಯ ಕ್ರಿಕೆಟಿನ ನವತಾರೆ ಪೃಥ್ವಿ ಶಾ ಮತ್ತು ಮುರಳಿ ವಿಜಯ್ ಇನ್ನಿಂಗ್ಸ್ ಆರಂಭಿಸಿದರೆ, ಕರ್ನಾಟಕದ ರನ್‌ಯಂತ್ರ ಮಾಯಾಂಕ್ ಅಗರ್ವಾಲ್ ವನ್‌ಡೌನ್‌ನಲ್ಲಿ ಬರಬಹುದು. ಮಧ್ಯಮ ಕ್ರಮಾಂಕಕ್ಕೆ ಕಪ್ತಾನ ಅಜಿಂಕ್ಯ ರಹಾನೆ, ಹನುಮ ವಿಹಾರಿ ಬಲ ತುಂಬಲಿದ್ದಾರೆ. ವಿಕೆಟ್ ಕೀಪಿಂಗ್ ಜವಾಬ್ದಾರಿ ಪಾರ್ಥಿವ್ ಪಟೇಲ್ ಪಾಲಾಗಲಿದೆ. ಒಂದು ಆಲ್‌ರೌಂಡರ್ ಸ್ಥಾನಕ್ಕಾಗಿ ಕರ್ನಾಟಕದ ಕೆ. ಗೌತಮ್ ಮತ್ತು ತಮಿಳುನಾಡಿನ ವಿಜಯ್ ಶಂಕರ್ ನಡುವೆ ಸ್ಪರ್ಧೆ ಇದೆ. ರಜನೀಶ್ ಗುರ್ಬಾನಿ, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಶಾಬಾಜ್ ನದೀಂ ಸ್ಪೆಷಲಿಸ್ಟ್ ಬೌಲರ್‌ಗಳಾಗಿದ್ದಾರೆ.
ಆತಿಥೇಯ ನ್ಯೂಜಿಲ್ಯಾಂಡ್ ಆಟಗಾರರಿಗೂ ಇದೊಂದು ಮಹತ್ವದ ಸರಣಿ. ಅಗ್ರ ಕ್ರಮಾಂಕದ ಗ್ಲೆನ್ ಫಿಲಿಪ್ಸ್, 18ರ ಹರೆಯದ ರವೀಂದ್ರ ರಚಿತ, ಜಾರ್ಜ್ ವರ್ಕರ್ ಮೇಲೆ ಆಯ್ಕೆಗಾರರು ಹದ್ದಿನಗಣ್ಣಿರಿಸಿದ್ದಾರೆ.
ಸಂಭಾವ್ಯ ತಂಡಗಳು
ಭಾರತ “ಎ’: ಪೃಥ್ವಿ ಶಾ, ಮುರಳಿ ವಿಜಯ್, ಮಾಯಾಂಕ್ ಅಗರ್ವಾಲ್, ಅಜಿಂಕ್ಯ ರಹಾನೆ (ನಾಯಕ), ಹನುಮ ವಿಹಾರಿ, ಪಾರ್ಥಿವ್ ಪಟೇಲ್ (ವಿ.ಕೀ.), ಕೃಷ್ಣಪ್ಪ ಗೌತಮ್/ವಿಜಯ್ ಶಂಕರ್, ಶಾಬಾಜ್ ನದೀಂ, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ರಜನೀಶ್ ಗುರ್ಬಾನಿ.
ನ್ಯೂಜಿಲ್ಯಾಂಡ್ “ಎ’: ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಜಾರ್ಜ್ ವರ್ಕರ್, ವಿಲ್ ಯಂಗ್, ಟಿಮ್ ಸೀಫರ್ಟ್, ಡೇನ್ ಕ್ಲೆವರ್, ಲಾಗನ್ ವಾನ್ ಬೀಕ್, ಡಗ್ ಬ್ರೇಸ್‌ವೆಲ್, ಕೈಲ್ ಜಾಮಿಸನ್, ಸೇತ್ ರ್ಯಾನ್ಸ್, ಸ್ಲಾಟ್ ಕ್ಯುಗೆಲೀನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.