India- New Zealand; ವನಿತಾ ಏಕದಿನ ಸರಣಿ ಗೆಲ್ಲಲು ಅಂತಿಮ ಅವಕಾಶ
Team Udayavani, Oct 29, 2024, 6:55 AM IST
ಅಹ್ಮದಾಬಾದ್: ಭಾರತ- ನ್ಯೂಜಿಲ್ಯಾಂಡ್ ನಡುವಿನ ವನಿತಾ ಏಕದಿನ ಸರಣಿಯ 3ನೇ ಹಾಗೂ ನಿರ್ಣಾಯಕ ಪಂದ್ಯ ಮಂಗಳವಾರ ನಡೆಯಲಿದೆ. ಹರ್ಮನ್‌ಪ್ರೀತ್ ಕೌರ್ ಪಡೆಗೆ ಸರಣಿ ಒಲಿದೀತೇ, ಮೊನ್ನೆಯಷ್ಟೇ ಟಿ20 ವಿಶ್ವಕಪ್ ಗೆದ್ದು ಬಂದ ಕಿವೀಸ್ ಪಡೆ ಈ ಸರಣಿಯನ್ನು ವಶಪಡಿಸಿಕೊಂಡು ಪುರುಷರಿಗೆ ಸಾಟಿಯಾದೀತೇ ಎಂಬೆಲ್ಲ ಕುತೂಹಲಗಳು ಗರಿಗೆದರಿವೆ.
ರವಿವಾರದ ಪಂದ್ಯವನ್ನು 59 ರನ್ನುಗಳಿಂದ ಗೆದ್ದು ಸರಣಿಯನ್ನು ಜೀವಂತವಾಗಿರಿಸಿದ್ದು ಸೋಫಿ ಡಿವೈನ್ ಪಡೆಯ ಭರ್ಜರಿ ಪುನರಾಗಮನಕ್ಕೆ ಸಾಕ್ಷಿ. ಮೊದಲ ಪಂದ್ಯವನ್ನು 59 ರನ್ನುಗ ಳಿಂದ ಗೆದ್ದ ಭಾರತ, ದ್ವಿತೀಯ ಪಂದ್ಯ ದಲ್ಲೂ ಇಂಥದೇ ಸಾಧನೆಯನ್ನು ಪುನ ರಾವರ್ತಿಸೀತು ಎಂಬ ನಿರೀಕ್ಷೆ ಇತ್ತು. ಆದರೆ ನ್ಯೂಜಿಲ್ಯಾಂಡ್‌ನ ಸರ್ವಾಂಗೀಣ ಪ್ರದರ್ಶನದ ಮುಂದೆ ಕೌರ್ ಪಡೆ ನೆಲಕಚ್ಚಿತು.
ಬ್ಯಾಟಿಂಗ್ ವೈಫಲ್ಯ
ಭಾರತದ ಬ್ಯಾಟಿಂಗ್ ವೈಫಲ್ಯ ಎದ್ದು ಕಂಡಿತು. 260 ರನ್ ಚೇಸಿಂಗ್ ವೇಳೆ 183ಕ್ಕೆ ಕುಸಿಯಿತು. ಸ್ಮತಿ ಮಂಧನಾ ಸೇರಿದಂತೆ ಪ್ರಮುಖ ಬ್ಯಾಟರ್‌ಗಳೆಲ್ಲ ಕಿವೀಸ್ ದಾಳಿಗೆ ತತ್ತರಿಸಿದರು. ರಾಧಾ ಯಾದವ್-ಸೈಮಾ ಠಾಕೂರ್ 9ನೇ ವಿಕೆಟಿಗೆ 70 ರನ್ ಪೇರಿಸದೇ ಹೋದಲ್ಲಿ ಭಾರತದ ಸ್ಥಿತಿ ಇನ್ನಷ್ಟು ಶೋಚನೀಯವಾಗುತ್ತಿತ್ತು.
ನ್ಯೂಜಿಲ್ಯಾಂಡ್ ನಾಯಕಿ ಸೋಫಿ ಡಿವೈನ್ ಅಮೋಘ ಆಲ್‌ರೌಂಡ್ ಶೋ ಮೂಲಕ ಗೆಲುವಿನ ರೂವಾರಿ ಎನಿಸಿದರು. ಭಾರತದ ಪರ ರಾಧಾ ಯಾದವ್ ಇಂಥದೇ ಪ್ರದರ್ಶನ ನೀಡಿದರು. 4 ವಿಕೆಟ್, 48 ರನ್ ಹಾಗೂ 3 ಕ್ಯಾಚ್ ಪಡೆದದ್ದು ಇವರ ಸಾಧನೆಯಾಗಿತ್ತು. ಆದರೆ ತಂಡವನ್ನು ದಡ ಸೇರಿಸಲು ಮಾತ್ರ ಸಾಧ್ಯವಾಗಲಿಲ್ಲ.
ಭಾರತ ಸರಣಿ ಗೆಲ್ಲಬೇಕಾದರೆ ಅಗ್ರ ಸರದಿಯ ಬ್ಯಾಟರ್ ಕ್ರೀಸ್ ಆಕ್ರಮಿಸಿ ಕೊಂಡು ನಿಲ್ಲುವುದು ಅತ್ಯಗತ್ಯ. ಮಂಧನಾ, ಶಫಾಲಿ, ಯಾಸ್ತಿಕಾ, ಕೌರ್, ಜೆಮಿಮಾ ಜಬರ್ದಸ್ತ್ ಪ್ರದರ್ಶನ ನೀಡಲೇಬೇಕಿದೆ. ಈಗಿನ ಲೆಕ್ಕಾಚಾರ ದಂತೆ ಮೊದಲು ಬ್ಯಾಟಿಂಗ್ ನಡೆಸಿ ಸವಾಲಿನ ಮೊತ್ತವನ್ನು ಪೇರಿಸಿದರೆ ಲಾಭ ಹೆಚ್ಚು.
ಆರಂಭ: ಅ. 1.30
ಪ್ರಸಾರ: ಸ್ಪೋರ್ಟ್ಸ್ 18
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.