ಭಾರತ-ನ್ಯೂಜಿಲ್ಯಾಂಡ್ ದ್ವಿತೀಯ ಟೆಸ್ಟ್, 4 ವೇಗಿಗಳ ಬೌಲಿಂಗ್ ಕಾಂಬಿನೇಶನ್?
Team Udayavani, Feb 27, 2020, 11:30 PM IST
ಕ್ರೈಸ್ಟ್‌ಚರ್ಚ್: ಭಾರತ-ನ್ಯೂಜಿಲ್ಯಾಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ತಾಣವಾದ ಕ್ರೈಸ್ಟ್‌ಚರ್ಚ್‌ನ “ಹ್ಯಾಗ್ಲಿ ಓವಲ್’ ಟ್ರ್ಯಾಕ್ ಸಂಪೂರ್ಣವಾಗಿ ವೇಗದ ಬೌಲಿಂಗಿಗೆ ನೆರವಾಗುವ ಸಾಧ್ಯತೆ ಇದೆ. ಇದಕ್ಕಾಗಿ ಆತಿಥೇಯ ಕಿವೀಸ್ 4 ಮಂದಿ ಸ್ಪೆಷಲಿಸ್ಟ್ ವೇಗಿಗಳನ್ನು ಕಣಕ್ಕಿಳಿಸಲು ನಿಧರಿಸಿದೆ. ಭಾರತ ಕೂಡ ಇದೇ ಕಾಂಬಿನೇಶನ್‌ನೊಂದಿಗೆ ಕಣಕ್ಕಿಳಿದೀತೇ ಎಂಬುದೊಂದು ಪ್ರಶ್ನೆ.
ಆಗ ಭಾರತ ತಂಡದಿಂದ ಸ್ಪಿನ್ನರ್ ಅಶ್ವಿನ್ ಹೊರಗುಳಿದು, ಈ ಸ್ಥಾನವನ್ನು ಉಮೇಶ್ ಯಾದವ್ ತುಂಬಬೇಕಾಗುತ್ತದೆ. ಆದರೆ ವೆಲ್ಲಿಂಗ್ಟನ್‌ನಲ್ಲಿ ಅಶ್ವಿನ್ ಬೌಲಿಂಗ್ ತೀರಾ ಕಳಪೆಯೇನೂ ಆಗಿರಲಿಲ್ಲ. ಅವರು 3 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾಗಿದ್ದರು. ಸಮಸ್ಯೆ ಇರುವುದು ಅವರ ಬ್ಯಾಟಿಂಗಿನಲ್ಲಿ. 2017ರ ಬಳಿಕ ಅಶ್ವಿನ್ ರನ್ ಬರಗಾಲ ಅನುಭವಿಸುತ್ತ ಬಂದಿದ್ದಾರೆ.
ಅಶ್ವಿನ್ ಬದಲು ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ರವೀಂದ್ರ ಜಡೇಜ ಅವರನ್ನು ಆಡಿಸುವ ಕುರಿತೂ ತಂಡದ ಆಡಳಿತ ಮಂಡಳಿ ಯೋಚಿಸುತ್ತಿದೆ.
ಪಟೇಲ್ ಬದಲು ವ್ಯಾಗ್ನರ್
ಪೇಸ್ ಬೌಲರ್ ನೀಲ್ ವ್ಯಾಗ್ನರ್ ನ್ಯೂಜಿಲ್ಯಾಂಡ್ ತಂಡವನ್ನು ಕೂಡಿಕೊಂಡಿದ್ದು, 2ನೇ ಟೆಸ್ಟ್ ಆಡುವುದು ಖಚಿತ ಎಂಬುದಾಗಿ ಕೋಚ್ ಗ್ಯಾರಿ ಸ್ಟೆಡ್ ಸುಳಿವು ಕೊಟ್ಟಿದ್ದಾರೆ. ಆಗ ಸ್ಪಿನ್ನರ್ ಅಜಾಜ್ ಪಟೇಲ್ ಹೊರಗುಳಿಯಲಿದ್ದಾರೆ. ಬೌಲ್ಟ್, ಸೌಥಿ, ಜಾಮೀಸನ್ ಮತ್ತು ಗ್ರ್ಯಾಂಡ್‌ಹೋಮ್ ಉಳಿದ ವೇಗಿಗಳು. ಇವರ ದಾಳಿಯನ್ನು ನಿಭಾಯಿಸಿ ನಿಲ್ಲುವುದು ಭಾರತಕ್ಕೆ ಭಾರೀ ಸಮಸ್ಯೆಯಾಗಬಹುದು. ಸರಣಿಯನ್ನು ಉಳಿಸಿಕೊಳ್ಳಬೇಕಾದರೆ ಕೊಹ್ಲಿ ಪಡೆ ಈ ಪಂದ್ಯವನ್ನು ಗೆಲ್ಲಲೇಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
FIFA ಸೌಹಾರ್ದ ಫುಟ್‌ಬಾಲ್ ಪಂದ್ಯ: ಮಾಲ್ದೀವ್ಸ್ ವಿರುದ್ಧ ಭಾರತಕ್ಕೆ 11-1 ಗೆಲುವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.