ಇಂದಿನಿಂದ ಇಂಡಿಯನ್ ಓಪನ್ ಬಾಕ್ಸಿಂಗ್ ಟೂರ್ನಿ
Team Udayavani, Jan 28, 2018, 6:10 AM IST
ನವದೆಹಲಿ: ಭಾನುವಾರದಿಂದ ದೆಹಲಿಯಲ್ಲಿ ಇಂಡಿಯನ್ ಓಪನ್ ಅಂತಾರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಆರಂಭವಾಗಲಿದೆ. ಇದು ಭಾರತದಲ್ಲಿಯೇ ನಡೆಯುತ್ತಿರುವ ಅತೀ ಶ್ರೀಮಂತ ಬಾಕ್ಸಿಂಗ್ ಕೂಟವಾಗಿದೆ. ಟೂರ್ನಿಯ ಒಟ್ಟು ಬಹುಮಾನದ ಮೊತ್ತ 63 ಲಕ್ಷ ರೂ.ಗಿಂತ ಅಧಿಕವಾಗಿದೆ.
ಪ್ರತಿ ಚಿನ್ನದ ಪದಕ ವಿಜೇತ ಬಾಕ್ಸರ್‌ಗೆ 1.58 ಲಕ್ಷ ರೂ. ಹಣ ದೊರೆಯಲಿದೆ. 2010 ರಲ್ಲಿ ನಡೆದ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್ ನಂತರ ಭಾರತದಲ್ಲಿ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸ್ಪರ್ಧೆ ಇದಾಗಿದೆ.
ಟೂರ್ನಿಯಲ್ಲಿ 21 ರಾಷ್ಟ್ರಗಳಿಂದ 143 ಪುರುಷ ಬಾಕ್ಸರ್‌ಗಳು ಮತ್ತು 42 ಮಹಿಳಾ ಬಾಕ್ಸರ್‌ಗಳು ಪಾಲ್ಗೊಳ್ಳಲಿದ್ದಾರೆ. ಕೀನ್ಯಾ (22 ಬಾಕ್ಸರ್), ಥಾಯ್ಲೆಂಡ್ (19 ಬಾಕ್ಸರ್), ಇಂಡೋನೇಷ್ಯಾ (17 ಬಾಕ್ಸರ್), ಆಫ್ಘಾನಿಸ್ತಾನ್ (17 ಬಾಕ್ಸರ್), ಮಂಗೋಲಿಯಾ (17 ಬಾಕ್ಸರ್), ನೇಪಾಳ (17 ಬಾಕ್ಸರ್), ಜಿಂಬಾಬ್ವೆ (18 ಬಾಕ್ಸರ್) ಪ್ರಮುಖ ರಾಷ್ಟ್ರಗಳಾಗಿವೆ.
ಪುರುಷರ ವಿಭಾಗದಲ್ಲಿ ಭಾರತದಿಂದ ಶಿವಾ ಥಾಪ, ಮನೋಜ್ ಕುಮಾರ್, ಸುಮಿತ್ ಸಾಂಗ್ವಾನ್, ಮಹಿಳೆಯರ ವಿಭಾಗದಿಂದ ಮೇರಿ ಕೋಮ್, ಎಲ್.ಸರಿತಾದೇವಿ ಕೂಟದಲ್ಲಿ ಪಾಲ್ಗೊಳ್ಳಲಿರುವ ಪ್ರಮುಖ ಬಾಕ್ಸರ್‌ಗಳಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara ಉಪ ಅರಣ್ಯ ಸಂಕ್ಷಣಾಧಿಕಾರಿಗಳ ವಿರುದ್ಧ ಉಗ್ರ ಪ್ರತಿಭಟನೆ;ರತ್ನಾಕರ ಹೊನಗೋಡು ಎಚ್ಚರಿಕೆ
Uppunda ಜಾತ್ರೆ ಸಂಪನ್ನ: ಓಕುಳಿಯಾಟ, ತೆಪ್ಪೋತ್ಸವ
Ajekar: ಎಣ್ಣೆಹೊಳೆ ಏತ ನೀರಾವರಿ ಪವರ್ ಕಟ್!
Tollywood: ʼಪುಷ್ಪ-2ʼ ಟ್ರೇಲರ್‌ನಲ್ಲಿ ಕಾಣುವ ಅರ್ಧ ತಲೆ ಬೋಳಿಸಿರುವ ಈ ನಟ ಯಾರು?
Sagara: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರನ್ನು ತಕ್ಷಣ ಬಂಧಿಸಿ; ಕಾಂಗ್ರೆಸ್ ಆಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.