ಇಂಡಿಯಾ ಓಪನ್: ಸಿಂಧು ಸೆಮಿಫೈನಲಿಗೆ
Team Udayavani, Apr 1, 2017, 12:24 PM IST
ಹೊಸದಿಲ್ಲಿ: ತೀವ್ರ ಪೈಪೋಟಿಯಿಂದ ಸಾಗಿದ ಹೋರಾಟದಲ್ಲಿ ಸೈನಾ ನೆಹ್ವಾಲ್ ಅವರನ್ನು ನೇರ ಗೇಮ್‌ಗಳಿಂದ ಉರುಳಿಸಿದ ರಿಯೋ ಒಲಿಂಪಿಕ್ಸ್ ಬೆಳ್ಳಿ ವಿಜೇತೆ ಪಿವಿ ಸಿಂಧು ಅವರು ಇಂಡಿಯಾ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಕೂಟದ ಸೆಮಿಫೈನಲ್ ಹಂತಕ್ಕೇರಿದರು.
ಭಾರತದ ಇಬ್ಬರು ಖ್ಯಾತ ಶಟ್ಲರ್‌ಗಳ ಈ ಸೆಣಸಾಟದಲ್ಲಿ ಸಿಂಧು 21-16, 22-20 ಗೇಮ್‌ಗಳಿಂದ ಗೆಲುವು ಒಲಿಸಿಕೊಂಡರು. ಸೆಮಿಫೈನಲ್‌ನಲ್ಲಿ ಸಿಂಧು ದ್ವಿತೀಯ ಶ್ರೇಯಾಂಕದ ಕೊರಿಯದ ಸಂಗ್ ಜಿ ಹ್ಯುನ್ ಅವರನ್ನು ಎದುರಿಸಲಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ್ದ ಸೈನಾ ಮತ್ತು ಸಿಂಧು ಈ ಹಿಂದೆ ಒಮ್ಮೆ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಮುಖಾಮುಖೀಯಾಗಿದ್ದರು. 2014ರ ಸಯ್ಯದ್ ಮೋದಿ ಇಂಟರ್‌ನ್ಯಾಶನಲ್ ಕೂಟದಲ್ಲಿ ಸೈನಾ ನೇರ ಗೇಮ್‌ಗಳಿಂದ ಸಿಂಧು ಅವರನ್ನು ಸೋಲಿಸಿದ್ದರು. ಈ ವರ್ಷದ ಆರಂಭದಲ್ಲಿ ನಡೆದ ಪಿಬಿಎಲ್ ಕೂಟದಲ್ಲೂ ಅವರಿಬ್ಬರು ಮುಖಾಮುಖೀಯಾಗಿದ್ದು ಸಿಂಧು ಮೇಲುಗೈ ಸಾಧಿಸಿದ್ದರು. 2013ರ ಇಂಟಿಯನ್ ಬ್ಯಾಡ್ಮಿಂಟನ್ ಲೀಗ್‌ನಲ್ಲೂ ಅವರಿಬ್ಬರು ಪರಸ್ಪರ ಮುಖಾಮುಖೀಯಾಗಿದ್ದು ಸೈನಾ ಜಯಭೇರಿ ಸಾಧಿಸಿದ್ದರು.
ಈ ಮೊದಲು ನಡೆದ ಪಂದ್ಯದಲ್ಲಿ ದ್ವಿತೀಯ ಶ್ರೇಯಾಂಕದ ಕೊರಿಯದ ಸಂಗ್ ಜಿ ಹ್ಯುನ್ ಅವರು ಹಾಲಿ ಚಾಂಪಿಯನ್ ಐದನೇ ಶ್ರೇಯಾಂಕದ ರಚನಾಕ್ ಇಂತನಾನ್ ಅವರನ್ನು 21-16, 22-20 ಗೇಮ್‌ಗಳಿಂದ ಸೋಲಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
PAK Vs SA: ಸರಣಿ ಕ್ಲೀನ್ ಸ್ವೀಪ್ ಗೈದ ಪಾಕಿಸ್ಥಾನ
Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕಾರ
BCCI: ಇನ್ನೆರಡು ಟೆಸ್ಟ್ ನಿಂದ ಮೊಹಮ್ಮದ್ ಶಮಿ ಹೊರಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.