India-Pak Super 4 ಫೈಟ್‌ :ರಾಹುಲ್‌, ಇಶಾನ್‌ ಕಿಶನ್‌ ನಡುವೆ ಪೈಪೋಟಿ

ಪಂದ್ಯಕ್ಕೆ ಮತ್ತೆ ಮಳೆ ಭೀತಿ, ಸೋಮವಾರ ಮೀಸಲು ದಿನ

Team Udayavani, Sep 10, 2023, 6:30 AM IST

1-saasd

ಕೊಲಂಬೊ: ಭಾರತ- ಪಾಕಿಸ್ಥಾನ ನಡುವಿನ ಮತ್ತೂಂದು ಸುತ್ತಿನ ಏಷ್ಯಾ ಕಪ್‌ ಕ್ರಿಕೆಟ್‌ ಕದನಕ್ಕೆ ಕ್ಷಣ ಗಣನೆ ಆರಂಭವಾಗಿದೆ. ಪಲ್ಲೆಕೆಲೆಯಲ್ಲಿ ನಡೆದ ಲೀಗ್‌ ಪಂದ್ಯ ಮಳೆಯಲ್ಲಿ ಕೊಚ್ಚಿಹೋದ ಬಳಿಕ ಇತ್ತಂಡಗಳು ರವಿವಾರ ಸೂಪರ್‌ ಫೋರ್‌ ಹಂತದಲ್ಲಿ ಎದುರಾಗಲಿವೆ. ಈ ಪಂದ್ಯದ ತಾಣ ಕೊಲಂಬೊದ “ಆರ್‌. ಪ್ರೇಮದಾಸ ಸ್ಟೇಡಿಯಂ’. ಆದರೆ ಈ ಪಂದ್ಯಕ್ಕೂ ಮಳೆ ಭೀತಿ ತಪ್ಪಿಲ್ಲ. ಹೀಗಾಗಿ ಮೀಸಲು ದಿನವೊಂದನ್ನು ಇರಿಸಲಾಗಿದೆ. ಆದರೂ ಭಾರತ-ಪಾಕ್‌ ಪಂದ್ಯದ ಆ ಜೋಶ್‌ ಇನ್ನೂ ಕಂಡುಬಂದಿಲ್ಲ.

ಪಾಕಿಸ್ಥಾನ ಎದುರಿನ ಲೀಗ್‌ ಮುಖಾಮುಖಿಯ ವೇಳೆ ಭಾರತಕ್ಕೆ ಮಾತ್ರ ಬ್ಯಾಟಿಂಗ್‌ ಸಾಧ್ಯವಾಗಿತ್ತು. ಅಗ್ರ ಕ್ರಮಾಂಕದಲ್ಲಿ ಕುಸಿತ ಅನುಭವಿಸಿದಾಗ ಇಶಾನ್‌ ಕಿಶನ್‌ ಮತ್ತು ಹಾರ್ದಿಕ್‌ ಪಾಂಡ್ಯ ಸೇರಿಕೊಂಡು ಮೊತ್ತವನ್ನು 266ರ ತನಕ ಏರಿಸುವಲ್ಲಿ ಯಶಸ್ವಿಯಾಗಿ ದ್ದರು. ಇಬ್ಬರೂ 80ರ ಗಡಿ ದಾಟಿದ್ದರು. ಆದರೀಗ ಆಪತಾºಂಧವನ ಪಾತ್ರ ನಿರ್ವಹಿಸಿದ ಇಶಾನ್‌ ಕಿಶನ್‌ ಸ್ಥಾನಕ್ಕೇ ಸಂಚಕಾರ ಬರುವ ಸಾಧ್ಯತೆ ಇದೆ. ಕಾರಣ, ಕೆ.ಎಲ್‌. ರಾಹುಲ್‌ ಅವರ ಪುನರಾಗಮನ. ರಾಹುಲ್‌ ಪ್ರಧಾನ ಕೀಪರ್‌ ಆಗಿರುವ ಕಾರಣ, ಇಶಾನ್‌ ಅವರನ್ನು ಆಡಿಸಲು ಸಾಧ್ಯವಾಗದು. ಇಬ್ಬರನ್ನೂ ಆಡಿಸುವುದಾದರೆ ಬೇರೊಬ್ಬ ಆಟಗಾರನನ್ನು ಹೊರಗಿರಿಸಬೇಕಾ ಗುತ್ತದೆ. ಹೀಗಾಗಿ ಆಯ್ಕೆ ಪ್ರಕ್ರಿಯೆ ಜಟಿಲಗೊಳ್ಳಲಿದೆ. ಇದನ್ನೊಂದು “ಹ್ಯಾಪ್ಪಿ ಹೆಡ್‌ಏಕ್‌’ ಎಂದು ಬಣ್ಣಿಸಲಾಗುತ್ತಿದೆ.

ಇಶಾನ್‌ ಸತತ 4 ಫಿಫ್ಟಿ
ಇಶಾನ್‌ ಕಿಶನ್‌ ಕೇವಲ ಪಾಕಿಸ್ಥಾನ ವಿರುದ್ಧ ಮಾತ್ರವಲ್ಲ, ಇದಕ್ಕೂ ಹಿಂದಿನ ವೆಸ್ಟ್‌ ಇಂಡೀಸ್‌ ಪ್ರವಾಸದ ಮೂರೂ ಏಕದಿನಗಳಲ್ಲಿ ಅರ್ಧ ಶತಕ ಬಾರಿಸಿ ಪ್ರಚಂಡ ಫಾರ್ಮ್ ತೋರ್ಪಡಿಸಿದ್ದಾರೆ. ಹೀಗೆ ಕಳೆದ 4 ಏಕದಿನಗಳಲ್ಲಿ 4 ಅರ್ಧ ಶತಕ ಬಾರಿಸಿದ ಸಾಹಸ ಇವರದು. ಒಂದರಿಂದ 5ನೇ ಕ್ರಮಾಂಕದ ತನಕ ಎಲ್ಲಿಯೂ ಸಲ್ಲುವ ಆಟಗಾರನೆಂಬುದು ಇಶಾನ್‌ ಕಿಶನ್‌ ಪಾಲಿನ ಮತ್ತೂಂದು ಹೆಗ್ಗಳಿಕೆ. ಜತೆಗೆ ಲೆಫ್ಟ್ ಹ್ಯಾಂಡರ್‌. ಹೀಗಾಗಿ ಬ್ಯಾಟಿಂಗ್‌ ಸರದಿಗೊಂದು ವೆರೈಟಿ ಲಭಿಸುತ್ತದೆ.

ಆರಂಭಿಕನೂ ಆಗಿರುವ ರಾಹುಲ್‌ ಸದ್ಯ 5ನೇ ಕ್ರಮಾಂಕದಲ್ಲಿ ಆಡಬೇಕಾಗು ತ್ತದೆ. ಮಾರ್ಚ್‌ನಿಂದ ಏಕದಿನ ಪಂದ್ಯ ಆಡಿಲ್ಲ. ಆದರೆ ವಿಶ್ವಕಪ್‌ ಹಿನ್ನೆಲೆಯಲ್ಲಿ ಇವರ ಫಾರ್ಮ್ ಹಾಗೂ ಫಿಟ್‌ನೆಸ್‌ ಅರಿಯುವುದು ಅತ್ಯಗತ್ಯ. ಹೀಗಾಗಿ ರಾಹುಲ್‌ ಅವರಿಗೆ ಹೆಚ್ಚಿನ ಅವಕಾಶ ನೀಡುವುದು ನ್ಯಾಯೋಚಿತ.

ಪಾಕ್‌ ವಿರುದ್ಧದ ಲೀಗ್‌ ಪಂದ್ಯದಲ್ಲಿ ಪ್ರಧಾನ ವೇಗಿ ಮೊಹಮ್ಮದ್‌ ಶಮಿ ಅವರನ್ನು ಹೊರಗಿರಿಸಲಾಗಿತ್ತು. ಇದು ಕೂಡ ಟೀಕೆಗೊಳಗಾಗಿತ್ತು. ಸದ್ಯದ ಮಟ್ಟಿಗೆ ಆಲ್‌ರೌಂಡರ್‌ ಶಾದೂìಲ್‌ ಠಾಕೂರ್‌ ಅವರ ಅನಿವಾರ್ಯತೆ ಭಾರತ ಕ್ಕಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ಸ್ಪಿನ್ನಿಗೆ ನೆರವಾಗುವ ಪಿಚ್‌ ಮೇಲೆ ತ್ರಿವಳಿ ವೇಗಿಗಳು ಸಾಕು ಎಂಬುದೊಂದು ಲೆಕ್ಕಾ ಚಾರ. ಇಲ್ಲಿ ಶಮಿ, ಬುಮ್ರಾ, ಸಿರಾಜ್‌ ಸಾಕಾಗುತ್ತಾರೆ. ಹೆಚ್ಚುವರಿಯಾಗಿ ಆಲ್‌ರೌಂಡರ್‌ ಪಾಂಡ್ಯ ಇದ್ದಾರೆ. ಸ್ಪಿನ್‌ ದಾಳಿಯನ್ನು ಕುಲದೀಪ್‌ ಯಾದವ್‌ ಮತ್ತು ಆಲ್‌ರೌಂಡರ್‌ ರವೀಂದ್ರ ಜಡೇಜ ನಿಭಾಯಿಸಲಿದ್ದಾರೆ.

ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಚಿಂತೆ
ರಾಹುಲ್‌-ಇಶಾನ್‌ ಆಯ್ಕೆ ಚರ್ಚೆಯನ್ನು ಬದಿಗಿರಿಸಿದರೆ ಗೋಚರಿಸುವುದು ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಚಿಂತೆ. ರಾಹುಲ್‌, ಗಿಲ್‌, ಅಯ್ಯರ್‌, ಕೊಹ್ಲಿ ಅವರೆಲ್ಲ ಪಾಕಿಸ್ಥಾನ ವಿರುದ್ಧ ಸಾಲು ಸಾಲಾಗಿ ವೈಫ‌ಲ್ಯ ಅನುಭವಿಸಿದ್ದಾರೆ. ಇವರೆಲ್ಲರೂ ಬ್ಯಾಟಿಂಗ್‌ ಲಯಕ್ಕೆ ಮರಳಬೇಕಿದೆ. ಮುಖ್ಯವಾಗಿ ಸೀನಿಯರ್‌ ಬ್ಯಾಟರ್‌ ಕೊಹ್ಲಿ ಹಳೆಯ ಫಾರ್ಮ್ ಕಾಣುವುದು ಮುಖ್ಯ. ಕೊಲಂಬೊದಲ್ಲಿ ಆಡಿದ ಕಳೆದ 3 ಏಕದಿನ ಪಂದ್ಯಗಳಲ್ಲಿ ಕೊಹ್ಲಿ ಶತಕ ಬಾರಿಸಿದ್ದಾರೆ ಎಂಬುದಿಲ್ಲಿ ಉಲ್ಲೇಖನೀಯ (ಅಜೇಯ 128, 131 ಮತ್ತು ಅಜೇಯ 110 ರನ್‌). ಇದು 4ಕ್ಕೆ ವಿಸ್ತರಿಸಿದರೆ ಭಾರತಕ್ಕೆ ಲಾಭ ಖಚಿತ. ಅಂದಹಾಗೆ, ನೇಪಾಲ ವಿರುದ್ಧ ಸಾಧಿಸಿದ 10 ವಿಕೆಟ್‌ ಜಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳದಿರುವುದು ಒಳ್ಳೆಯದು!

ಪಾಕಿಸ್ಥಾನವೇ ಬಲಿಷ್ಠ
ಯಾವ ಕೋನದಿಂದ ನೋಡಿದರೂ ಭಾರತಕ್ಕಿಂತ ಪಾಕಿಸ್ಥಾನವೇ ಬಲಿಷ್ಠವಾಗಿ ಗೋಚರಿಸುತ್ತದೆ. ಫ‌ಖಾರ್‌, ಬಾಬರ್‌, ಇಮಾಮ್‌, ಇಫ್ತಿಕಾರ್‌, ರಿಜ್ವಾನ್‌, ಆಲ್‌ರೌಂಡರ್‌ ಶದಾಬ್‌ ಅವರನ್ನೊಳಗೊಂಡ ಬ್ಯಾಟಿಂಗ್‌ ಲೈನ್‌ಅಪ್‌ ಅತ್ಯಂತ ವೈವಿಧ್ಯ ಮಯ. ಎಲ್ಲರೂ ಫಾರ್ಮ್ ನಲ್ಲಿರುವುದರಿಂದ ಚಿಂತಿಸಬೇಕಾದ ಅಗತ್ಯವಿಲ್ಲ.

ಪಾಕ್‌ ಬೌಲಿಂಗ್‌ ಕೂಡ ಅಪಾಯ ಕಾರಿ. ಪಲ್ಲೆಕೆಲೆಯಲ್ಲಿ ತ್ರಿವಳಿ ವೇಗಿಗಳಾದ ಅಫ್ರಿದಿ, ನಸೀಮ್‌ ಶಾ ಮತ್ತು ರವೂಫ್ ಸೇರಿಕೊಂಡು ಭಾರತದ ಅಷ್ಟೂ ವಿಕೆಟ್‌ಗಳನ್ನು ಉಡಾಯಿಸಿದ್ದರು. ಇವರನ್ನು ಎದುರಿಸಿ ನಿಂತು ರನ್‌ ಪೇರಿಸಿದರಷ್ಟೇ ಭಾರತದ ಮೇಲುಗೈ ನಿರೀಕ್ಷಿಸಬಹುದು.

ಟಾಪ್ ನ್ಯೂಸ್

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!

Riots against mosque survey: Police fire tear gas at Sambhal

Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

IPL Auction 2025: ಇಂದು, ನಾಳೆ ಐಪಿಎಲ್‌ ಬೃಹತ್‌ ಹರಾಜು

IPL Auction 2025: ಇಂದು, ನಾಳೆ ಐಪಿಎಲ್‌ ಬೃಹತ್‌ ಹರಾಜು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!

18-uv-fusion

UV Fusion: ನಿಸ್ವಾರ್ಥ ಜೀವ

17-ckm

Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.