ದ್ರಾವಿಡ್‌ ಹುಡುಗರಿಗೆ ಪಾಕ್‌ ಸವಾಲು


Team Udayavani, Jan 30, 2018, 6:10 AM IST

Indian-captain-Prithvi-Shaw.jpg

ಕ್ರೈಸ್ಟ್‌ಚರ್ಚ್‌: ಈ ಬಾರಿಯ ಐಪಿಎಲ್‌ ಹರಾಜಿನಲ್ಲಿ ಎಲ್ಲ ಫ್ರಾಂಚೈಸಿಗಳ ಗಮನ ಸೆಳೆದ ಭಾರತದ ಅಂಡರ್‌-19 ಕ್ರಿಕೆಟಿಗರು ಇದೇ ಉತ್ಸಾಹದಲ್ಲಿ ಮಂಗಳವಾರದ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ಪಾಕಿಸ್ಥಾನದ ಸವಾಲನ್ನು ಎದುರಿಸಲು ಅಣಿಯಾಗಬೇಕಿದೆ. “ಕ್ರಿಕೆಟ್‌ ಗೋಡೆ’ ರಾಹುಲ್‌ ದ್ರಾವಿಡ್‌ ಅವರಿಂದ ಪಳಗಿರುವ, ಈವರೆಗೆ ಕೂಟದಲ್ಲಿ ಅಜೇಯ ತಂಡವಾಗಿ ನಾಗಾಲೋಟಗೈಯುತ್ತಿರುವ ಪೃಥ್ವಿ ಶಾ ಪಡೆ ಪಾಕ್‌ ಕಿರಿಯರನ್ನು ಮೆಟ್ಟಿನಿಂತೀತೆಂಬ ನಂಬಿಕೆ ಭಾರತದ ಕ್ರಿಕೆಟ್‌ ಅಭಿಮಾನಿಗಳದ್ದು.

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ 3 ಬಾರಿ ಚಾಂಪಿಯನ್‌ ಆದ ಹಿರಿಮೆ ಭಾರತದ್ದಾದರೆ, ಪ್ರಶಸ್ತಿ ಉಳಿಸಿಕೊಂಡ ಏಕೈಕ ತಂಡವೆಂಬುದು ಪಾಕಿಸ್ಥಾನ ಪಾಲಿನ ಹೆಗ್ಗಳಿಕೆ.

ಭಾರತದ ಅಧಿಕಾರಯುತ ಜಯ
ಭಾರತ ಲೀಗ್‌ ಹಂತದ ಎಲ್ಲ 3 ಪಂದ್ಯಗಳನ್ನು ಗೆದ್ದ ಬಳಿಕ, ಕ್ವಾರ್ಟರ್‌ ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಬಗ್ಗುಬಡಿಯಿತು. ಇನ್ನೊಂದೆಡೆ ಪಾಕಿಸ್ಥಾನದ್ದು ಸೋಲಿನ ಆರಂಭ. ಮೊದಲ ಲೀಗ್‌ ಪಂದ್ಯದಲ್ಲೇ ಅಫ್ಘಾನಿಸ್ಥಾನ ಕೈಯಲ್ಲಿ ಹೊಡೆತ ಅನುಭವಿಸಿದ ಬಳಿಕ, ಶ್ರೀಲಂಕಾ ಮತ್ತು ಅಯರ್‌ಲ್ಯಾಂಡನ್ನು ಮಣಿಸಿ ನಾಕೌಟ್‌ ಪ್ರವೇಶಿಸಿತು. ಕ್ವಾರ್ಟರ್‌ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಬುಡಮೇಲು ಮಾಡಿತು. ಆದರೆ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಪಾಕ್‌ ಗೆಲುವೇನೂ ದೊಡ್ಡದಾಗಿರಲಿಲ್ಲ. ಕೇವಲ 3 ವಿಕೆಟ್‌ಗಳ ಅಂತರದ್ದಾಗಿತ್ತು.

ಪಾಕಿಗೆ ಹೋಲಿಸಿದರೆ ಭಾರತದ್ದೆಲ್ಲವೂ ಅಧಿಕಾರಯುತ ಜಯಭೇರಿ ಆಗಿತ್ತು. ಈಗ ಫೈನಲ್‌ಗೆ ಲಗ್ಗೆ ಇರಿಸಿರುವ ಬಲಿಷ್ಠ ಆಸ್ಟ್ರೇಲಿಯವನ್ನು ಮೊದಲ ಲೀಗ್‌ ಪಂದ್ಯದಲ್ಲೇ 100 ರನ್ನುಗಳಿಂದ ಉರುಳಿಸಿತ್ತು. ಬಳಿಕ ಪಪುವಾ ನ್ಯೂ ಗಿನಿ ಹಾಗೂ ಜಿಂಬಾಬ್ವೆಯನ್ನು 10 ವಿಕೆಟ್‌ಗಳಿಂದ ಕೆಡವಿ ಮುನ್ನುಗ್ಗಿತು. ಕ್ವಾರ್ಟರ್‌ ಫೈನಲ್‌ನಲ್ಲಿ ಬಾಂಗ್ಲಾಕ್ಕೆ 131 ರನ್ನುಗಳ ಆಘಾತವಿಕ್ಕಿತು. ಇದೇ ಸ್ಫೂರ್ತಿಯಲ್ಲಿ ಪಾಕಿಸ್ಥಾನವನ್ನು ಮಣಿಸುವುದು ದೊಡ್ಡ ಸಮಸ್ಯೆ ಆಗಲಿಕ್ಕಿಲ್ಲ ಎಂಬುದೊಂದು ಲೆಕ್ಕಾಚಾರ. ಆದರೆ ಭಾರತ-ಪಾಕಿಸ್ಥಾನ ಪಂದ್ಯವೆಂದ ಮೇಲೆ ಅದರ ಜೋಶ್‌, ಥ್ರಿಲ್‌, ತೀವ್ರತೆ, ಪೈಪೋಟಿ ಬೇರೆಯೇ ಆಗಿರುತ್ತದೆ.

ಅಂದಹಾಗೆ ಪಾಕಿಸ್ಥಾನ ತನ್ನ ಕ್ವಾರ್ಟರ್‌ ಫೈನಲ್‌ ಪಂದ್ಯವನನ್ನು ಇದೇ “ಹ್ಯಾಗ್ಲಿ ಓವಲ್‌’ನಲ್ಲಿ ಆಡಿತ್ತು. ಎಡಗೈ ಪೇಸರ್‌ ಶಾಹೀನ್‌ ಅಫ್ರಿದಿ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಅಲಿ ಜರ್ಯಾಬ್‌ ಆಸಿಫ್ ಉತ್ತಮ ಫಾರ್ಮ್ನಲ್ಲಿದ್ದಾರೆ.

ಸಮತೋಲಿತ ಭಾರತ ತಂಡ
ನಿರಂತರ 140-150 ಕಿ.ಮೀ. ವೇಗದಲ್ಲಿ ಬೌಲಿಂಗ್‌ ನಡೆಸುವ “ಯಂಗ್‌ ಗನ್‌’ ಕಮಲೇಶ್‌ ನಾಗರಕೋಟಿ, ಇವರ ಜತೆಗಾರ ಶಿವಂ ಮಾವಿ, ಎಡಗೈ ಸ್ಪಿನ್ನರ್‌ಗಳಾದ ಅನುಕೂಲ್‌ ರಾಯ್‌, ಅಭಿಷೇಕ್‌ ಶರ್ಮ ಅವರೆಲ್ಲ ಭಾರತದ ಅಂಡರ್‌-19 ತಂಡದ ಅಪಾಯಕಾರಿ ಬೌಲರ್‌ಗಳಾಗಿ ಹೊರಹೊಮ್ಮಿದ್ದಾರೆ. ಇಲ್ಲಿನ ಸಾಧನೆಯಿಂದಾಗಿಯೇ ಇವರೆಲ್ಲರಿಗೂ ಮೊದಲ ಬಾರಿಗೆ ಐಪಿಎಲ್‌ ಬಾಗಿಲು ತೆರೆದಿದೆ. ಈ ಬೌಲರ್‌ಗಳೆಲ್ಲರ ಸಂಭ್ರಮ ಪಾಕ್‌ ವಿರುದ್ಧದ ಪಂದ್ಯದಲ್ಲಿ ಮೇಳೈಸಬೇಕಿದೆ.

ಭಾರತದ ಬ್ಯಾಟಿಂಗ್‌ ವಿಭಾಗ ಶುಭಂ ಗಿಲ್‌, ಪೃಥ್ವಿ ಶಾ, ಮನೋಜ್‌ ಕಾಲಾ, ಹಾರ್ವಿಕ್‌ ದೇಸಾಯಿ, ಅಭಿಷೇಕ್‌ ಶರ್ಮ ಅವರಿಂದ ಹೆಚ್ಚು ಬಲಿಷ್ಠವಾಗಿದೆ. ಇವರಲ್ಲಿ ಗಿಲ್‌ ಅವರದು ಸ್ಥಿರ ಪ್ರದರ್ಶನ. ಆಸ್ಟ್ರೇಲಿಯ ವಿರುದ್ಧ 63, ಜಿಂಬಾಬ್ವೆ ವಿರುದ್ಧ ಅಜೇಯ 90, ಬಾಂಗ್ಲಾ ವಿರುದ್ಧ 86 ರನ್‌ ಸೇರಿದಂತೆ ಒಟ್ಟು 239 ರನ್‌ ಪೇರಿಸಿದ್ದಾರೆ.

ಮೊದಲು ವಿಶ್ವಕಪ್‌: ದ್ರಾವಿಡ್‌
ಭಾರತಕ್ಕೆ 4ನೇ ವಿಶ್ವಕಪ್‌ ತಂದು ಕೊಡುವುದು, ಆ ಮೂಲಕ ಕಳೆದ ಏಷ್ಯಾ ಕಪ್‌ ಪಂದ್ಯಾವಳಿಯಲ್ಲಿ ಭಾರತದ ಕಿರಿಯರು ತೋರ್ಪಡಿಸಿದ ಕಳಪೆ ಪ್ರದರ್ಶನಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವುದು ಕೋಚ್‌ ರಾಹುಲ್‌ ದ್ರಾವಿಡ್‌ ಗುರಿ. ಈ ಸಲದ ಸಾಧನೆಯಿಂದ ಅಂಡರ್‌-19 ಆಟಗಾರರನೇಕರು ಐಪಿಎಲ್‌ನಲ್ಲಿ ಆಡುತ್ತಿರುವುದೂ ಅವರ ಖುಷಿಯನ್ನು ಹೆಚ್ಚಿಸಿದೆ. ಈ ಸಂದರ್ಭದಲ್ಲಿ ದ್ರಾವಿಡ್‌ ಎಚ್ಚರಿಕೆಯ ಮಾತೊಂದನ್ನೂ ಹೇಳಿದ್ದಾರೆ. “ಐಪಿಎಲ್‌ ಹರಾಜು ಪ್ರತಿ ವರ್ಷ ಇರುತ್ತದೆ. ಆದರೆ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಎಲ್ಲ ವರ್ಷ ಇರದು, ಎಲ್ಲರಿಗೂ ಲಭಿಸದು. ಹೀಗಾಗಿ ವಿಶ್ವಕಪ್‌ಗೆ ಮೊದಲ ಆದ್ಯತೆ…’ ಎಂದಿದ್ದಾರೆ ದ್ರಾವಿಡ್‌.

ಟಾಪ್ ನ್ಯೂಸ್

Bandipur:  ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

IFFI: ಪಾಪ್‌ ಸಂಗೀತಗಾರ ರಾಬಿ ವಿಲಿಯಮ್ಸ್‌ ಬೆಟರ್‌ ಮ್ಯಾನ್‌ ಚಿತ್ರೋತ್ಸವದ ಉದ್ಘಾಟನಾ ಸಿನಿಮಾ

IFFI: ಪಾಪ್‌ ಸಂಗೀತಗಾರ ರಾಬಿ ವಿಲಿಯಮ್ಸ್‌ ಬೆಟರ್‌ ಮ್ಯಾನ್‌ ಚಿತ್ರೋತ್ಸವದ ಉದ್ಘಾಟನಾ ಸಿನಿಮಾ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

vikr

Naxal: ಸರ್ಕಾರಿ ಬಸ್‌ ಅಡ್ಡ ಹಾಕಿ ಬೆಂಕಿ ಹಚ್ಚಿ ಕರಪತ್ರ ಹಂಚಿದ್ದ ವಿಕ್ರಂಗೌಡ ಮತ್ತು ತಂಡ!

Bar-Associatin

Wine Merchants: ನಾಳೆಯ ಮದ್ಯ ಮಾರಾಟ ಬಂದ್‌ ನಿರ್ಧಾರ ವಾಪಸ್‌ ಪಡೆದ ಅಸೋಸಿಯೇಷನ್‌

vital

Vitla: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

crimebb

Kasaragod ಅಪರಾಧ ವಾರ್ತೆ; ಆನೆಯ ತುಳಿತಕ್ಕೆ ಮಾವುತ ಸಹಿತ ಇಬ್ಬರ ಸಾವು

Bandipur:  ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

Arrest

Kasaragod: ವಂದೇ ಭಾರತ್‌ಗೆ ಕಲ್ಲೆಸೆತ, ಹಳಿಯಲ್ಲಿ ಕಲ್ಲಿರಿಸಿದ ಇಬ್ಬರ ಬಂಧನ

ಭಾರತ, ಚೀನಾ ನಡುವೆ ನೇರ ವಿಮಾನಯಾನ ಸೌಲಭ್ಯ ಪುನಾರಂಭ?

Flight: ಭಾರತ, ಚೀನಾ ನಡುವೆ ನೇರ ವಿಮಾನಯಾನ ಸೌಲಭ್ಯ ಪುನಾರಂಭ?

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.