23 ವರ್ಷಗಳ ಸುದೀರ್ಘ ಪಯಣ ಅಂತ್ಯ: ಮಾಜಿ ನಾಯಕಿ ರುಮೇಲಿ ಧರ್ ಕ್ರಿಕೆಟ್ ವಿದಾಯ
Team Udayavani, Jun 22, 2022, 11:29 PM IST
ಕೋಲ್ಕತಾ: ಭಾರತೀಯ ವನಿತಾ ಕ್ರಿಕೆಟ್ ತಂಡದ ಮಾಜಿ ನಾಯಕಿ, ಆಲ್‌ರೌಂಡರ್ ರುಮೇಲಿ ಧರ್ ಎಲ್ಲ ಮಾದರಿಯ ಕ್ರಿಕೆಟಿಗೆ ಬುಧವಾರ ಗುಡ್‌ಬೈ ಹೇಳಿದರು.
38 ವರ್ಷದ ರುಮೇಲಿ ಧರ್ ಭಾರತದ ಪರ 4 ಟೆಸ್ಟ್, 78 ಏಕದಿನ ಹಾಗೂ 18 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. 2003ರಲ್ಲಿ ಇಂಗ್ಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆಗೈದಿದ್ದರು.
6 ವರ್ಷಗಳ ಸುದೀರ್ಘ ವಿರಾಮದ ಬಳಿಕ 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪುನರಾಗಮನ ಮಾಡಿ ಸುದ್ದಿಯಾಗಿದ್ದರು. ಅಂದು ಗಾಯಾಳು ಜೂಲನ್ ಗೋಸ್ವಾಮಿ ಬದಲು ಭಾರತ ತಂಡವನ್ನು ಪ್ರವೇಶಿಸಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ ಪಾಲ್ಗೊಂಡಿದ್ದರು. 2005ರ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಫೈನಲ್ ತಲುಪುವಲ್ಲಿ ರುಮೇಲಿ ಧರ್ ವಹಿಸಿದ ಪಾತ್ರ ಅಮೋಘವಾಗಿತ್ತು.
ಏರಿಳಿತಗಳಿಂದ ಕೂಡಿದ ಯಾನ
“ಪಶ್ಚಿಮ ಬಂಗಾಲದ ಶ್ಯಾಮ್‌ನಗರ್‌ನಿಂದ ಆರಂಭ ಗೊಂಡ ನನ್ನ 23 ವರ್ಷಗಳ ಕ್ರಿಕೆಟ್ ಪ್ರಯಾಣ ಕೊನೆಗೊಳ್ಳುತ್ತಿದೆ. ಎಲ್ಲ ಮಾದರಿಯ ಕ್ರಿಕೆಟಿಗೂ ನಾನು ವಿದಾಯ ಹೇಳುತ್ತಿದ್ದೇನೆ. ಇದೊಂದು ಏರಿಳಿತಗಳಿಂದ ಕೂಡಿದ ಯಾನವಾಗಿತ್ತು. 2005ರ ವಿಶ್ವಕಪ್ ಫೈನಲ್‌ನಲ್ಲಿ ಆಡಿದ್ದು, ಭಾರತ ತಂಡವನ್ನು ಮುನ್ನಡೆಸಿದ್ದು ನನ್ನ ಕ್ರಿಕೆಟ್ ಬದುಕಿನ ಸ್ಮರಣೀಯ ಕ್ಷಣ. ಆಗಾಗ ಗಾಯಗಳ ಸಮಸ್ಯೆಗೆ ಸಿಲುಕಿದೆ. ಬಲಿಷ್ಠವಾಗಿಯೇ ಪುನರಾಗಮನ ಸಾರಿದೆ. ಬಿಸಿಸಿಐ, ನನ್ನ ಕುಟುಂಬ, ನಾನು ಪ್ರತಿನಿಧಿಸಿದ ತಂಡಗಳ ಎಲ್ಲ ಸದಸ್ಯರಿಗೂ ಕೃತಜ್ಞತೆಗಳು’ ಎಂಬುದಾಗಿ ರುಮೇಲಿ ಧರ್ ಹೇಳಿದ್ದಾರೆ.
ದೇಶಿ ಕ್ರಿಕೆಟ್‌ನಲ್ಲಿ ಬಂಗಾಲ, ರೈಲ್ವೇಸ್, ಏರ್ ಇಂಡಿಯಾ, ದಿಲ್ಲಿ, ರಾಜಸ್ಥಾನ, ಅಸ್ಸಾಮ್, ಇಂಡಿಯಾ ರೆಡ್ ಮತ್ತು ಅಂಡರ್-21 ತಂಡಗಳನ್ನು ರುಮೇಲಿ ಧರ್ ಪ್ರತಿನಿಧಿಸಿದ್ದಾರೆ. ಜತೆಗೆ ಏಷ್ಯಾ ವನಿತಾ ಇಲೆವೆನ್ ಪರವಾಗಿಯೂ ಆಡಿದ್ದಾರೆ.
ಬಲಗೈ ಬ್ಯಾಟರ್ ಹಾಗೂ ಮಧ್ಯಮ ವೇಗಿಯಾಗಿದ್ದ ರುಮೇಲಿ ಧರ್ ಟೆಸ್ಟ್ ಕ್ರಿಕೆಟ್‌ನಲ್ಲಿ 236 ರನ್ ಹಾಗೂ 8 ವಿಕೆಟ್; ಏಕದಿನದಲ್ಲಿ 961 ರನ್ ಮತ್ತು 63 ವಿಕೆಟ್; ಟಿ20ಯಲ್ಲಿ 131 ರನ್ ಹಾಗೂ 13 ವಿಕೆಟ್ ಸಂಪಾದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.