ಏಕದಿನ ಶ್ರೇಯಾಂಕ: ಅಗ್ರಸ್ಥಾನಕ್ಕೇರಿದ ಭಾರತ
Team Udayavani, Feb 6, 2018, 6:25 AM IST
ದುಬಾೖ: ದಕ್ಷಿಣ ಆಫ್ರಿಕಾ ವಿರುದ್ಧ 6 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸುವ ಮೂಲಕ ಭಾರತ ತಂಡ ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಹಾಕಿದೆ. ಆದರೆ ಸರಣಿಯಲ್ಲಿ ಇನ್ನೂ 4 ಪಂದ್ಯಗಳು ಬಾಕಿ ಉಳಿದಿದ್ದು, ಈ ಸ್ಥಾನ ಕಾಯ್ದುಕೊಳ್ಳಬೇಕಾದರೆ ಟೀಮ್ ಇಂಡಿಯಾ 4-2 ಅಂತರದ ಗೆಲುವು ಸಾಧಿಸುವುದು ಅನಿವಾರ್ಯ. ಹೀಗಾಗಿ ಸರಣಿ ಮುಗಿದ ಬಳಿಕವಷ್ಟೇ ಅಧಿಕೃತ ರ್ಯಾಂಕಿಂಗ್ ಪ್ರಕಟಗೊಳ್ಳಲಿದೆ.
ಸರಣಿ ಆರಂಭಕ್ಕೂ ಮುನ್ನ ಭಾರತ 2ನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ ಮೊದಲ ಸ್ಥಾನದಲ್ಲಿತ್ತು. ಮೊದಲ ಏಕದಿನ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದಾಗ ಉಭಯ ತಂಡಗಳು ತಲಾ 120 ಅಂಕಗಳೊಂದಿಗೆ ಸಮಬಲಕ್ಕೆ ಬಂದವು. ಸೆಂಚುರಿಯನ್ನಲ್ಲಿ ನಡೆದ 2ನೇ ಪಂದ್ಯದಲ್ಲಿ ಭಾರತ 9 ವಿಕೆಟ್ ಜಯಭೇರಿ ಮೊಳಗಿಸಿ ಒಟ್ಟು 121 ಅಂಕದೊಂದಿಗೆ ಅಗ್ರಸ್ಥಾನಕ್ಕೆ ಜಿಗಿಯಿತು. ಸತತ 2 ಪಂದ್ಯಗಳ ಸೋಲಿನಿಂದ ದಕ್ಷಿಣ ಆಫ್ರಿಕಾ (119 ಅಂಕ) 2ನೇ ಸ್ಥಾನಕ್ಕೆ ಕುಸಿದಿದೆ. ಉಳಿದಂತೆ ಇಂಗ್ಲೆಂಡ್ (116), ನ್ಯೂಜಿಲ್ಯಾಂಡ್ (115), ಆಸ್ಟ್ರೇಲಿಯ (112) ತಂಡಗಳು ಅನಂತರದ ಸ್ಥಾನದಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Asian hockey champions: ದಕ್ಷಿಣ ಕೊರಿಯಾವನ್ನು ಕೆಡವಿದ ಭಾರತ
ATP Rankings; ಸಿನ್ನರ್ಗೆ ವರ್ಷಾಂತ್ಯದ ನಂ.1 ರ್ಯಾಂಕ್ ಟ್ರೋಫಿ
ICC: ಪಾಕಿಸ್ತಾನದ ಕೈತಪ್ಪಿದ ಚಾಂಪಿಯನ್ಸ್ ಟ್ರೋಫಿ ಆಯೋಜನೆ: ಬದಲಿ ದೇಶದ ಆಯ್ಕೆ
Shami: ಕೊನೆಗೂ ವೃತ್ತಿಪರ ಕ್ರಿಕೆಟ್ ಗೆ ಮರಳಿದ ಮೊಹಮ್ಮದ್ ಶಮಿ
Japan: ಇಂದಿನಿಂದ ಕುಮಮೋಟೊ ಓಪನ್: ಸಿಂಧು, ಲಕ್ಷ್ಯ ಮೇಲೆ ಹೆಚ್ಚಿನ ನಿರೀಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.