ಒಂದೇ ವಿಮಾನ ಏರಲಿರುವ ಹಿರಿಯ-ಕಿರಿಯ ಕ್ರಿಕೆಟಿಗರು
Team Udayavani, Dec 24, 2017, 6:55 AM IST
ಮುಂಬಯಿ: ಇದೇ ಮೊದಲ ಬಾರಿಗೆ ಭಾರತದ ಕಿರಿಯ ಕ್ರಿಕೆಟಿಗರಿಗೆ ಸೀನಿಯರ್ ತಂಡದ ಜತೆ ವಿಮಾನದಲ್ಲಿ ಪ್ರಯಾಣಿಸುವ ಅವಕಾಶವೊಂದು ಎದುರಾಗಿದೆ. ಈ ತಿಂಗಳ ಕೊನೆಯಲ್ಲಿ ಈ ಪ್ರಯಾಣಕ್ಕೆ ಅವಕಾಶ ಕೂಡಿಬರಲಿದೆ.
ವಿರಾಟ್ ಕೊಹ್ಲಿ ನಾಯಕತ್ವದ ಹಿರಿಯರ ತಂಡ ದಕ್ಷಿಣ ಆಫ್ರಿಕಾಕ್ಕೆ ತೆರಳಲಿದ್ದು, ಇದೇ ವೇಳೆ ಅಂಡರ್-19 ತಂಡದ ಸದಸ್ಯರು ಕಿರಿಯರ ವಿಶ್ವಕಪ್ ಪಂದ್ಯಾವಳಿಗಾಗಿ ನ್ಯೂಜಿಲ್ಯಾಂಡಿಗೆ ಪಯಣಿಸಲಿದ್ದಾರೆ. ಎರಡೂ ತಂಡಗಳ ಆಟಗಾರರು ಡಿ. 28ರ ಬೆಳಗ್ಗೆ 4 ಗಂಟೆಗೆ “ಎಮಿರೇಟ್ಸ್ ಏರ್‌ಲೈನ್’ ವಿಮಾನದಲ್ಲಿ ದುಬಾೖಗೆ ಪ್ರಯಾಣಿಸಲಿದ್ದಾರೆ. ಇತ್ತಂಡಗಳಿಗೆ ದುಬಾೖ “ಸ್ಟಾಪ್ ಓವರ್’ ನಿಲ್ದಾಣವಾಗಲಿದ್ದು, ಇಲ್ಲಿ ವಿಮಾನ ಬದಲಾಯಿಸಿ ಬೇರೆ ಬೇರೆ ದಿಕ್ಕಿಗೆ ಪ್ರಯಾಣ ಮುಂದುವರಿಸಲಾಗುವುದು.
ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಸೀನಿಯರ್-ಜೂನಿಯರ್ ತಂಡಗಳೆರಡೂ ಒಂದೇ ವಿಮಾನದಲ್ಲಿ ವಿದೇಶಕ್ಕೆ ಸಂಚರಿಸುತ್ತಿರುವುದು ಇದೇ ಮೊದಲು. ಆದರೆ ಇತ್ತಂಡಗಳ ಪ್ರಯಾಣ ದರ್ಜೆ ಮಾತ್ರ ಬೇರೆ ಬೇರೆ. ಕೊಹ್ಲಿ ಪಡೆ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪಯಣಿಸಿದರೆ, ಕಿರಿಯರು ಇಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುವರು.
ಅಂಡರ್-19 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಜ. 13ರಿಂದ ಆರಂಭವಾಗುವುದಾದರೂ ನ್ಯೂಜಿಲ್ಯಾಂಡ್ ವಾತಾವರಣಕ್ಕೆ ಹೊಂದಿಕೊಳ್ಳುವ ಸಲುವಾಗಿ 2 ವಾರ ಮೊದಲೇ ತಂಡವನ್ನು ಕಳುಹಿಸುವುದು ಬಿಸಿಸಿಐ ಯೋಜನೆ. ಕೋಚ್ ರಾಹುಲ್ ದ್ರಾವಿಡ್ ಕೂಡ ತಂಡದೊಂದಿಗೇ ತೆರಳುವರು. ಮುಂಬಯಿಯ ಉದಯೋನ್ಮುಖ ಬ್ಯಾಟ್ಸ್‌ಮನ್ ಪೃಥ್ವಿ ಷಾ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
MUST WATCH
ಹೊಸ ಸೇರ್ಪಡೆ
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.