![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jul 22, 2022, 11:15 PM IST
ಪೋರ್ಟ್ ಆಫ್ ಸ್ಪೇನ್: ಕ್ಯಾಪ್ಟನ್ ಶಿಖರ್ ಧವನ್ ಸೇರಿದಂತೆ ಅಗ್ರ ಕ್ರಮಾಂಕದವರ ಉತ್ತಮ ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ 7 ವಿಕೆಟಿಗೆ 308 ರನ್ ಗಳಿಸಿದೆ. ಇದರಲ್ಲಿ ಕ್ಯಾಪ್ಟನ್ ಧವನ್ ಕೊಡುಗೆ 97 ರನ್.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಈ ಅವಕಾಶವನ್ನು ಉತ್ತಮ ರೀತಿಯಲ್ಲೇ ಬಳಸಿಕೊಂಡಿತು. ಶಿಖರ್ ಧವನ್-ಶುಭಮನ್ ಗಿಲ್ ಅಬ್ಬರದ ಆರಂಭಕ್ಕೆ ಮುಂದಾದರು. ವಿಂಡೀಸ್‌ನ ಐದೂ ಬೌಲರ್‌ಗಳ ದಾಳಿಯನ್ನು ನಿಭಾಯಿಸಿ 14 ಓವರ್‌ಗಳಲ್ಲಿ ಶತಕದ ಜತೆಯಾಟ ನಿಭಾಯಿಸಿದರು. ಆಗಲೇ ಇಬ್ಬರೂ ಸೇರಿ 13 ಬೌಂಡರಿ, 3 ಸಿಕ್ಸರ್ ಸಿಡಿಸಿದ್ದರು. ಮೊದಲ ಅರ್ಧ ಶತಕ ಗಿಲ್ ಅವರಿಂದ ದಾಖಲಾಯಿತು. ಅವರು 64 ರನ್ ಮಾಡಿ ರನೌಟ್ ಆದರು (53 ಎಸೆತ, 6 ಬೌಂಡರಿ, 2 ಸಿಕ್ಸರ್). ಮೊದಲ ವಿಕೆಟಿಗೆ 17.4 ಓವರ್‌ಗಳಿಂದ 119 ರನ್ ಒಟ್ಟುಗೂಡಿತು.
ಧವನ್-ಶ್ರೇಯಸ್ ಅಯ್ಯರ್ ಕೂಡ ಭರ್ಜರಿ ಬ್ಯಾಟಿಂಗ್‌ಗೆ ಮುಂದಾದರು. 32ನೇ ಓವರ್‌ನಲ್ಲಿ 200 ರನ್ ಪೂರ್ತಿಗೊಂಡಿತು. ಆದರೆ ಧವನ್‌ಗೆ ಮೂರೇ ರನ್ನಿನಿಂದ ವಿಂಡೀಸ್ ವಿರುದ್ಧ ಮೊದಲ ಏಕದಿನ ಶತಕದ ಅವಕಾಶ ಕೈತಪ್ಪಿತು (99 ಎಸೆತ, 10 ಬೌಂಡರಿ, 3 ಸಿಕ್ಸರ್). ಅಯ್ಯರ್ 54 ರನ್ ಬಾರಿಸಿದರು (57 ಎಸೆತ, 5 ಬೌಂಡರಿ, 2 ಸಿಕ್ಸರ್). ಅನಂತರ ಭಾರತದ ರನ್‌ಗತಿ ಕುಂಟಿತಗೊಂಡಿತು. ವಿಂಡೀಸ್ ಉತ್ತಮ ನಿಯಂತ್ರಣ ಸಾಧಿಸಿತು.
2 ಪಂದ್ಯಗಳಿಗೆ ಜಡೇಜ ಇಲ್ಲ
ಈ ಸರಣಿಯಲ್ಲಿ ಭಾರತ ತಂಡದ ಉಪನಾಯಕರಾಗಿದ್ದ ಆಲ್‌ರೌಂಡರ್ ರವೀಂದ್ರ ಜಡೇಜ ಬಲಗಾಲಿನ ಮಂಡಿ ನೋವಿನಿಂದಾಗಿ ಈ ಪಂದ್ಯದಿಂದಷ್ಟೇ ಅಲ್ಲ, ದ್ವಿತೀಯ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ. ಫಿಟ್ ಆದರೆ ಅಂತಿಮ ಏಕದಿನಕ್ಕೆ ಲಭ್ಯರಾದಾರು ಎಂದು ತಂಡದ ಪ್ರಕಟನೆ ತಿಳಿಸಿದೆ. ಜಡೇಜ ಗೈರಲ್ಲಿ ಶ್ರೇಯಸ್ ಅಯ್ಯರ್ ಅವರಿಗೆ ಉಪನಾಯಕತ್ವ ವಹಿಸಲಾಯಿತು.
ಹೋಲ್ಡರ್‌ಗೆ ಕೊರೊನಾ!
ಆತಿಥೇಯ ವಿಂಡೀಸ್‌ಗೆ ಇನ್ನೊಂದು ರೀತಿಯ ಆಘಾತ ಎದುರಾಯಿತು. ಆಲ್‌ರೌಂಡರ್ ಜೇಸನ್ ಹೋಲ್ಡರ್ ಈ ಸರಣಿಗಾಗಿ ಮರಳಿ ತಂಡಕ್ಕೆ ಕರೆ ಪಡೆದರೂ ಕೊರೊನಾ ಪಾಸಿಟಿವ್‌ನಿಂದಾಗಿ ಆಡುವ ಬಳಗದಿಂದ ಹೊರಗುಳಿದರು. ಐಸೋಲೇಶನ್‌ನಲ್ಲಿರಬೇಕಾದ್ದರಿಂದ ಅವರು ಏಕದಿನ ಸರಣಿಯಲ್ಲಿ ಪಾಲ್ಗೊಳ್ಳುವುದು ಅನುಮಾನ ಎನ್ನಲಾಗಿದೆ.
ಸ್ಕೋರ್ ಪಟ್ಟಿ
ಭಾರತ
ಶಿಖರ್ ಧವನ್ ಸಿ ಬ್ರೂಕ್ಸ್ ಬಿ ಮೋಟಿ 97
ಶುಭಮನ್ ಗಿಲ್ ರನೌಟ್ 64
ಶ್ರೇಯಸ್ ಅಯ್ಯರ್ ಸಿ ಪೂರನ್ ಬಿ ಮೋಟಿ 54
ಸೂರ್ಯಕುಮಾರ್ ಬಿ ಹೊಸೇನ್ 13
ಸಂಜು ಸ್ಯಾಮ್ಸನ್ ಎಲ್‌ಬಿಡಬುÉ é ಶೆಫರ್ಡ್ 12
ದೀಪಕ್ ಹೂಡಾ ಬಿ ಜೋಸೆಫ್ 27
ಅಕ್ಷರ್ ಪಟೇಲ್ ಬಿ ಜೋಸೆಫ್ 21
ಶಾರ್ದೂಲ್ ಠಾಕೂರ್ ಔಟಾಗದೆ 7
ಮೊಹಮ್ಮದ್ ಸಿರಾಜ್ ಔಟಾಗದೆ 1
ಇತರ 12
ಒಟ್ಟು (7 ವಿಕೆಟಿಗೆ) 308
ವಿಕೆಟ್ ಪತನ: 1-119, 2-213, 3-230, 4-247, 5-252, 6-294, 7-299.
ಬೌಲಿಂಗ್:
ಅಲ್ಜಾರಿ ಜೋಸೆಫ್ 10-0-61-2
ಜೇಡನ್ ಸೀಲ್ಸ್ 9-1-54-0
ರೊಮಾರಿಯೊ ಶೆಫರ್ಡ್ 7-0-43-1
ಕೈಲ್ ಮೇಯರ್ 2-0-17-0
ಗುಡಕೇಶ್ ಮೋಟಿ 10-0-54-2
ಅಖೀಲ್ ಹೊಸೇನ್ 10-0-51-1
ನಿಕೋಲಸ್ ಪೂರಣ್ 2-0-23-0
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.