ಐತಿಹಾಸಿಕ ಮುನ್ನಡೆಗೆ ಭಾರತದ ದೃಷ್ಟಿ
Team Udayavani, Feb 7, 2018, 7:45 AM IST
ಕೇಪ್‌ಟೌನ್: ಗಾಯದ ಸಮಸ್ಯೆ ಯಿಂದ ಬಳಲುತ್ತಿರುವ ದಕ್ಷಿಣ ಆಫ್ರಿಕಾ ತಂಡದೆದುರು ಅಭೂತಪೂರ್ವ 3-0 ಮುನ್ನಡೆ ಸಾಧಿಸಲು ಭಾರತ ದೃಷ್ಟಿ ಹಾಯಿಸಿದೆ. ಆರು ಪಂದ್ಯಗಳ ಏಕದಿನ ಸರಣಿಯ ಮೂರನೇ ಪಂದ್ಯ ಬುಧವಾರ ನಡೆಯಲಿದ್ದು ಭಾರತ ಗೆಲುವಿಗಾಗಿ ಪ್ರಯತ್ನಿಸಲಿದೆ. ಭಾರತ ದಕ್ಷಿಣ ಆಫ್ರಿಕಾ ನೆಲದಲ್ಲಿ ನಡೆದ ದ್ವಿಪಕ್ಷೀಯ ಸರಣಿಯಲ್ಲಿ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿಲ್ಲ. ಒಂದು ವೇಳೆ ಬುಧವಾರದ ಪಂದ್ಯದಲ್ಲಿ ಭಾರತ ಗೆಲುವು ಕಂಡರೆ ಅದೊಂದು ಐತಿಹಾಸಿಕ ಕ್ಷಣವಾಗಲಿದೆ.
ಡರ್ಬಾನ್ ಮತ್ತು ಸೆಂಚುರಿಯನ್‌ನಲ್ಲಿ ನಡೆದ ಮೊದಲೆರಡು ಪಂದ್ಯಗಳಲ್ಲಿ ಪ್ರವಾಸಿ ತಂಡ ಅನುಕ್ರಮವಾಗಿ ಆರು ಮತ್ತು 9 ವಿಕೆಟ್‌ಗಳಿಂದ ಜಯಭೇರಿ ಬಾರಿಸಿದೆ. ಉತ್ಕೃಷ್ಟ ಬೌಲಿಂಗ್ ಮತ್ತು ಬ್ಯಾಟಿಂಗ್ ಮೂಲಕ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಮಣಿಸಲು ಯಶಸ್ವಿಯಾಗಿದೆ. ಈ ಹಿಂದೆ ದ್ವಿಪಕ್ಷೀಯ ಸರಣಿ ವೇಳೆ (1992-93 ಮತ್ತು 2010-11ರಲ್ಲಿ) ಭಾರತ ಎರಡು ಪಂದ್ಯ ಗೆಲ್ಲಲು ಯಶಸ್ವಿಯಾಗಿದೆ. ಒಮ್ಮೆ 2-1 ಮುನ್ನಡೆ ಸಾಧಿಸಲು ಯಶಸ್ವಿಯಾಗಿದ್ದ ಪ್ರವಾಸಿ ತಂಡ ಆಬಳಿಕ ಐದು ಪಂದ್ಯಗಳ ಸರಣಿ ಯನ್ನು 3-2ರಿಂದಲೂ ಮತ್ತು 7 ಪಂದ್ಯಗಳ ಸರಣಿಯನ್ನು 5-2 ಅಂತರದಿಂದ ಸೋತಿತ್ತು. ಆದರೆ ಸದ್ಯದ ಭಾರತದ ಸಾಮರ್ಥ್ಯವನ್ನು ಗಮನಿಸಿದಾಗ ಪ್ರವಾಸಿ ತಂಡ ಇತಿಹಾಸ ನಿರ್ಮಿಸುವ ಸಾಧ್ಯತೆ ಹೆಚ್ಚಾಗಿದೆ. ದಕ್ಷಿಣ ಆಫ್ರಿಕಾದ ಆಟಗಾರರು ಗಾಯದ ಸಮಸ್ಯೆ ಯಿಂದ ಬಳಲುತ್ತಿರುವುದು ಭಾರತಕ್ಕೆ ಲಾಭ ವಾಗಿದೆ. ಬೆರಳ ಗಾಯಕ್ಕೆ ಒಳಗಾದ ಎಬಿ ಡಿ’ವಿಲಿಯರ್ ಮತ್ತು ಫಾ ಡು ಪ್ಲೆಸಿಸ್ ಈ ಕೂಟದಿಂದ ಹೊರಬಿದ್ದಿದ್ದಾರೆ. ಮೂರನೇ ಪಂದ್ಯದ ಮೊದಲು ಕ್ವಿಂಟನ್ ಡಿ ಕಾಕ್ ಮಣಿಗಂಟಿನ ಗಾಯದಿಂದ ಹೊರಬಿದ್ದಿದ್ದಾರೆ. ಕಾಕ್ ಅವರ ಜಾಗಕ್ಕೆ ಕ್ರಿಕೆಟ್ ದಕ್ಷಿಣ ಆಫ್ರಿಕಾ ಬದಲಿ ಆಟಗಾರನ ಹೆಸರನ್ನು ಸೂಚಿಸಿಲ್ಲ. ಆದರೆ ದೇಶೀಯ ಏಕದಿನ ಕೂಟದಲ್ಲಿ ಗರಿಷ್ಠ ರನ್ ಗಳಿಸಿರುವ ಹೆನ್ರಿಚ್ ಕ್ಲಾಸೆನ್ ಏಕದಿನ ಕ್ರಿಕೆಟಿಗೆ ಪಾದಾರ್ಪಣೆಗೈಯುವ ಸಾಧ್ಯತೆಯಿದೆ.
ಹಾಶಿಮ್ ಆಮ್ಲ ಜತೆ ಇನ್ನಿಂಗ್ಸ್ ಆರಂಭಿಸಲು ಕೇಳಿಕೊಂಡರೆ ಕ್ಲಾಸೆನ್ ಯಾವ ರೀತಿ ಆಡುತ್ತಾರೆಂಬುದನ್ನು ನೋಡಬೇಕಾಗಿದೆ. ಈ ಹಿಂದಿನ ಎರಡು ಪಂದ್ಯಗಳಲ್ಲಿ ಕಾಕ್ ಮತ್ತು ಆಮ್ಲ ಮೊದಲ ವಿಕೆಟಿಗೆ 30 ಮತ್ತು 39 ರನ್ನುಗಳ ಜತೆಯಾಟ ನೀಡಿದ್ದರು. ಆಬಳಿಕ ಪ್ಲೆಸಿಸ್ ಅವರನ್ನು ಬಿಟ್ಟರೆ ಉಳಿದವರ್ಯಾರೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿಲ್ಲ. ಮಧ್ಯಮ ಕ್ರಮಾಂಕವನ್ನು ಬಲಪಡಿಸಲು ದಕ್ಷಿಣ ಆಫ್ರಿಕಾ ಫರ್ಹಾನ್ ಬೆಹರ್ಡಿನ್ ಅವರನ್ನು ಸೇರಿಸಿ ಕೊಳ್ಳುವ ಸಾಧ್ಯತೆಯಿದೆ. ಭಾರತದ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ದಕ್ಷಿಣ ಆಫ್ರಿಕಾ ತಂಡದಲ್ಲಿ ಕೆಲವೊಂದು ಬದಲಾವಣೆ ಮಾಡುವ ಸಾಧ್ಯತೆ ಯಿದೆ. ರನ್ ಗಳಿಸಲು ಒದ್ದಾಡುತ್ತಿರುವ ಡೇವಿಡ್ ಮಿಲ್ಲರ್ ಬದಲಿಗೆ ಬೆಹರ್ಡಿನ್ ಮತ್ತು ಝೊಂಡೊ ಅವರನ್ನು ಆಡಿಸುವ ಕುರಿತು ಚರ್ಚೆ ನಡೆಯುತ್ತಿದೆ.
ಭಾರತ ತಂಡದಲ್ಲಿ ಬದಲಾವಣೆ ಇಲ್ಲ
2-0 ಮುನ್ನಡೆ ಸಾಧಿಸಿರುವ ಭಾರತ ತನ್ನ ತಂಡದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ. ಆಟಗಾರರು ಹೊಂದಾಣಿಕೆಯಿಂದ ಆಡಿ ಗೆಲುವಿಗೆ ಪ್ರಯ ತ್ನಿಸುವಾಗ ಅವರ ಗಮನ ತಪ್ಪಿಸುವ ಯತ್ನಕ್ಕೆ ಕೈಹಾಕುವುದಿಲ್ಲ. ತಂಡ ಗೆಲುವು ಸಾಧಿಸುತ್ತಿದೆ. ಹಾಗಾಗಿ ಬದಲಾವಣೆ ಮಾಡುವ ಅಗತ್ಯವಿಲ್ಲ. ಇಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಮೂರು ಪಂದ್ಯಗಳನ್ನಾಡಿದ್ದು ಎರಡರಲ್ಲಿ ಸೋತಿದ್ದರೆ ಒಂದರಲ್ಲಿ ಗೆದ್ದಿದೆ. 2010-11ರ ಸರಣಿಯಲ್ಲಿ ಭಾರತ 2 ವಿಕೆಟ್‌ಗಳ ಜಯ ಸಾಧಿಸಿತ್ತು. 1992ರ ಬಳಿಕ ಭಾರತ ಇಲ್ಲಿ ನಾಲ್ಕು ಏಕದಿನ ಪಂದ್ಯಗಳನ್ನು ಆಡಿದ್ದು ಎರಡರಲ್ಲಿ ಗೆಲುವು ಮತ್ತು ಎರಡರಲ್ಲಿ ಸೋಲನ್ನು ಕಂಡಿದೆ.
ಐವರು ಸ್ಪಿನ್ನರ್‌ಗಳ ಜತೆ ಬ್ಯಾಟಿಂಗ್ ಅಭ್ಯಾಸ
ಕೇಪ್‌ಟೌನ್: ಸತತ ಎರಡು ಏಕದಿನ ಪಂದ್ಯಗಳಲ್ಲಿ ಸೋತಿರುವ ದಕ್ಷಿಣ ಆಫ್ರಿಕಾ ಇದೀಗ ಭಾರತೀಯ ಸ್ಪಿನ್ ದಾಳಿಯನ್ನು ಎದುರಿಸಲು ಬಹಳಷ್ಟು ತಂತ್ರಗಳನ್ನು ರೂಪಿಸುತ್ತಿದೆ. ಈ ಕಾರಣಕ್ಕಾಗಿ ದಕ್ಷಿಣ ಆಫ್ರಿಕಾ ಆಟಗಾರರು ಮಂಗಳವಾರ ಐವರು ಸ್ಪಿನ್ನರ್‌ಗಳನ್ನು ನೆಟ್‌ಗೆ ಕರೆಯಿಸಿ ಅಭ್ಯಾಸ ಮಾಡಿದರು.
ಭಾರತದ ಚಾಹಲ್ ಮತ್ತು ಕುಲದೀಪ್ ಯಾದವ್ ಅವರ ದಾಳಿಯನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ದಕ್ಷಿಣ ಆಫ್ರಿಕಾದ ಆಟಗಾರರು ನೆಟ್‌ನಲ್ಲಿ ಸ್ಪಿನ್ ದಾಳಿಗೆ ಬ್ಯಾಟಿಂಗ್ ಅಭ್ಯಾಸ ಮಾಡಿದರು. ಚಾಹಲ್ ಮತ್ತು ಕುಲದೀಪ್ ಮೊದಲೆರಡು ಏಕದಿನ ಪಂದ್ಯಗಳಲ್ಲಿ ಒಟ್ಟಾರೆ 13 ವಿಕೆಟ್ ಉರುಳಿಸಿದ್ದರು.
ಪಿಚ್ ಹೀಗಿದೆ
ಟೆಸ್ಟ್ ಸರಣಿಗೆ ಸೂಕ್ತವಾದ ನ್ಯೂಲ್ಯಾಂಡ್ಸ್ ಪಿಚ್ ದಕ್ಷಿಣ ಆಫ್ರಿಕಾ ಪಾಲಿಗೆ ಶುಭದಾಯಕ ಎನಿಸಿಕೊಂಡಿದೆ. ಸೀಮ್ ಬೌಲರ್‌ಗಳಿಗೆ ಸ್ವಲ್ಪಮಟ್ಟಿಗೆ ನೆರವಾಗುವ ಸಾಧ್ಯತೆಯಿದ್ದರೂ ಈ ಪಿಚ್ ಬ್ಯಾಟ್ಸ್ ಮನ್‌ಗಳಿಗೆ ಹೆಚ್ಚಿನ ಪ್ರಯೋಜನ ನೀಡುತ್ತಿದೆ. ಕಳೆದ ಆರು ಏಕದಿನ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಸರಾಸರಿಯಾಗಿ 300 ಪ್ಲಸ್ ರನ್ ಗಳಿ ಸಿದೆ. ದಿನವಿಡೀ ಬಿಸಿಲು ಇರಲಿದ್ದು ಮಧ್ಯಾಹ್ನ 30 ಡಿಗ್ರಿ ತಾಪಮಾನ ಇರಲಿದೆ.
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಎಂಎಸ್ ಧೋನಿ, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಯಜುವೇಂದ್ರ ಚಾಹಲ್
ದಕ್ಷಿಣ ಆಫ್ರಿಕಾ: ಹಾಶಿಮ್ ಆಮ್ಲ, ಐಡೆನ್ ಮಾರ್ಕ್‌ರಾಮ್ (ನಾಯಕ), ಜೀನ್‌ಪಾಲ್ ಡ್ಯುಮಿನಿ, ಖಾಯ ಝೊಂಡೊ, ಡೇವಿಡ್ ಮಿಲ್ಲರ್, ಫರ್ಹಾನ್ ಬೆಹರ್ಡಿನ್, ಹೆನ್ರಿಚ್ ಕ್ಲಾಸೆನ್, ಕ್ರಿಸ್ ಮೊರಿಸ್, ಕಾಗಿಸೊ ರಬಾಡ, ಮಾರ್ನೆ ಮಾರ್ಕೆಲ್, ಇಮ್ರಾನ್ ತಾಹಿರ್
ಅಂಕಿ ಅಂಶ
ನ್ಯೂಲ್ಯಾಂಡ್ಸ್ ದಕ್ಷಿಣ ಆಫ್ರಿಕಾದ ನೆಚ್ಚಿನ ತಾಣ. ಇಲ್ಲಿ ಆಡಿದ 33 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ 28 ಪಂದ್ಯಗಳಲ್ಲಿ ಗೆದ್ದಿದೆ.
ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಭಾರತ ಈ ಹಿಂದೆ ದಕ್ಷಿಣ ಆಫ್ರಿಕಾವನ್ನು 2010ರ ಫೆಬ್ರವರಿಯಲ್ಲಿ ನಡೆದ ಪಂದ್ಯದಲ್ಲಿ ಸೋಲಿಸಿತ್ತು.
ಸದ್ಯದ ದಕ್ಷಿಣ ಆಫ್ರಿಕಾ ತಂಡದಲ್ಲಿ ಡ್ಯುಮಿನಿ ಈ ಪಿಚ್‌ನಲ್ಲಿ ಶ್ರೇಷ್ಠ ನಿರ್ವಹಣೆ ನೀಡಿದ್ದಾರೆ. ಆಡಿದ 8 ಪಂದ್ಯಗಳಲ್ಲಿ ಅವರು ಮೂರು ಅರ್ಧಶತಕ ಸಹಿತ 301 ರನ್ ಹೊಡೆದಿದ್ದಾರೆ. ಹಾಶಿಮ್ ಆಮ್ಲ ಆರು ಪಂದ್ಯಗಳನ್ನಾಡಿದ್ದು ಎರಡು ಅರ್ಧಶತಕ ಸಹಿತ 190 ರನ್ ಗಳಿಸಿದ್ದಾರೆ.
ಪಂದ್ಯ ಆರಂಭ: ಸಂಜೆ 4.30
ಪ್ರಸಾರ: ಸೋನಿ ಟೆನ್ ನೆಟ್‌ವರ್ಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.