ಇಂದೋರ್‌ನಲ್ಲಿ ಇಂದೇನು ಕಾದಿದೆ?
Team Udayavani, Jan 7, 2020, 6:55 AM IST
ಇಂದೋರ್: ಗುವಾಹಾಟಿಯಲ್ಲಿ ರವಿವಾರ ನಡೆಯಬೇಕಿದ್ದ ಭಾರತ-ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯ ಮಳೆಯಿಂದ ಕೊಚ್ಚಿಹೋದದ್ದು ಈಗ ಇತಿಹಾಸ. ಟಿ20 ವಿಶ್ವಕಪ್ ವರ್ಷದ ಮೊದಲ ಪಂದ್ಯವೇ ಒಂದೂ ಎಸೆತ ಕಾಣದೆ ರದ್ದುಗೊಂಡದ್ದು, ಮಳೆ ಬಳಿಕ “ಬರ್ಸಾಪಾರ ಕ್ರೀಡಾಂಗಣ’ದ ಪಿಚ್ ಒಣಗಿಸಲು ನಾನಾ ಕಸರತ್ತು ಮಾಡಿದ್ದೆಲ್ಲ ಕ್ರಿಕೆಟ್ ಅಭಿಮಾನಿಗಳ ಬೇಸರಕ್ಕೆ, ಟೀಕೆಗೆ ಕಾರಣವಾಗಿತ್ತು. ಜಾಗತಿಕ ಕ್ರಿಕೆಟಿನ ಮುಂದೆ ಭಾರತದ ಶ್ರೀಮಂತ ಕ್ರಿಕೆಟ್ ಸಂಸ್ಥೆಯ ಬಂಡವಾಳ, ತಾರತಮ್ಯ, ವೇಳಾಪಟ್ಟಿಯ ಎಡವಟ್ಟೆಲ್ಲ ಸಂಪೂರ್ಣ ಬಯಲಾಗಿತ್ತು.
ಗುವಾಹಾಟಿಯಲ್ಲಿ ಭಾರೀ ಮಳೆಯೇನೂ ಸುರಿದಿರಲಿಲ್ಲ. ಆದರೆ ಮಳೆ ನಿಂತು 2 ಗಂಟೆ ಕಳೆದರೂ ಪಿಚ್ ಹಾಗೂ ಅಂಗಳವನ್ನು ಆಟಕ್ಕೆ ಸಿದ್ಧಗೊಳಿಸುವ ಮೂಲಭೂತ ಸೌಕರ್ಯಗಳೇ ಇಲ್ಲಿರಲಿಲ್ಲ. ಹೀಗಾಗಿ ಇಸಿŒಪೆಟ್ಟಿಗೆ, ವ್ಯಾಕ್ಯೂಮ್ ಕ್ಲೀನರ್ ಮೊದಲಾದ ಸಲಕರಣೆಗಳು ಕ್ರಿಕೆಟ್ ಅಂಗಳದಲ್ಲಿ ಪ್ರತ್ಯಕ್ಷವಾಗಬೇಕಾಯಿತು. ಸೂಪರ್ ಸಾಪರ್ ಯಂತ್ರ ಕೂಡ ಸುಸ್ಥಿತಿಯಲ್ಲಿರಲಿಲ್ಲ. ಅಂಕಣವನ್ನು ಮುಚ್ಚುವ ಪ್ಲ್ರಾಸ್ಟಿಕ್ ಹೊದಿಕೆ ಕೂಡ ಹರಿದು ಹೋಗಿತ್ತು.
ಗುವಾಹಾಟಿಯ ಈ ಎಲ್ಲ ಅನಪೇಕ್ಷಿತ ದೃಶ್ಯಾವಳಿ ಕಣ್ಮುಂದೆ ಸುಳಿಯುತ್ತಿರುವಂತೆಯೇ ಇಂದೋರ್‌ನ “ಹೋಳ್ಕರ್ ಸ್ಟೇಡಿಯಂ’ನಲ್ಲಿ ಸರಣಿಯ 2ನೇ ಟಿ20 ಪಂದ್ಯ ಮಂಗಳವಾರವೇ ನಡೆಯಲಿದೆ. ಇದು ಇಂದೋರ್ ಆತಿಥ್ಯದಲ್ಲಿ ನಡೆಯಲಿರುವ ಕೇವಲ 2ನೇ ಟಿ20 ಪಂದ್ಯ. ಮೊದಲ ಪಂದ್ಯ ಕೂಡ ಭಾರತ-ಶ್ರೀಲಂಕಾ ನಡುವೆಯೇ ಏರ್ಪಟ್ಟಿದ್ದು ಕಾಕತಾಳೀಯ.
ಗುವಾಹಾಟಿಯಂತೆ ಇಂದೋರ್ ವಾತಾವರಣವೇನೂ ಪ್ರತಿಕೂಲವಾಗಿಲ್ಲ. ಮಳೆಯ ಭೀತಿ ಇಲ್ಲ. ಹೀಗಾಗಿ ಪೂರ್ತಿ ಪಂದ್ಯ ನಡೆಯುವ ಬಗ್ಗೆ ಅನುಮಾನ ಉಳಿದಿಲ್ಲ.
ಆಡುವ ಬಳಗ
ಗುವಾಹಾಟಿ ಪಂದ್ಯ ಟಾಸ್ ಹಾರಿಸಲಷ್ಟೇ ಸೀಮಿತವಾಗಿತ್ತು. ಜತೆಗೆ ಎರಡೂ ತಂಡಗಳು ಆಡುವ ಬಳಗವನ್ನು ಅಂತಿಮಗೊಳಿಸಿದ್ದವು. ಇದರಲ್ಲಿ ರಾಹುಲ್ ಜತೆ ಶಿಖರ್ ಧವನ್ ಇನ್ನಿಂಗ್ಸ್ ಆರಂಭಿಸುವ ಅವಕಾಶ ಪಡೆದಿದ್ದರು. ಕ್ಯಾಪ್ಟನ್ ಕೊಹ್ಲಿಗೆ ಒನ್‌ಡೌನ್ ಮೀಸ ಲಾಗಿತ್ತು. ಮಧ್ಯಮ ಕ್ರಮಾಂಕ ಅಯ್ಯರ್, ಪಂತ್ ಪಾಲಾಗಿತ್ತು. ವಾಷಿಂಗ್ಟನ್ ಸುಂದರ್, ದುಬೆ, ಶಾದೂìಲ್ ಠಾಕೂರ್, ಸೈನಿ ಕೂಡ ಅವಕಾಶ ಪಡೆದಿದ್ದರು. ಬುಮ್ರಾ ಬಹಳ ಕಾಲದ ಬಳಿಕ ಟೀಮ್ ಇಂಡಿಯಾಕ್ಕೆ ಮರಳಿದ್ದರು. ಸ್ಪಿನ್ ವಿಭಾಗ ಕುಲದೀಪ್ ಅವರನ್ನು ನೆಚ್ಚಿಕೊಂಡಿತ್ತು. ಆದರೆ ಮನೀಷ್ ಪಾಂಡೆ, ರವೀಂದ್ರ ಜಡೇಜ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ.
ಇವರಲ್ಲಿ ಧವನ್ ಆಯ್ಕೆ ಬಗ್ಗೆ ಮಾಜಿಗಳ ಸಹಿತ ಅನೇಕರು ಅಪಸ್ವರವೆತ್ತಿದ್ದರು. ಇವರ ಬದಲು ಸಂಜು ಸ್ಯಾಮ್ಸನ್‌ಗೆ ಓಪನಿಂಗ್ ಜವಾಬ್ದಾರಿ ವಹಿಸಬಹುದಿತ್ತು ಎಂಬುದು ಇವರ ಸಲಹೆಯಾಗಿತ್ತು. ಬಹುಶಃ ಇಂದೋರ್ ಪಂದ್ಯಕ್ಕಾಗಿ ಭಾರತದ ತಂಡದಲ್ಲಿ ಬದಲಾವಣೆಯಾಗುವ ಸಂಭವ ಕಡಿಮೆ.
ರೋಹಿತ್ ಶರ್ಮ ತಂಡಕ್ಕೆ ಮರಳಿದ ಬಳಿಕ ಆರಂಭಿಕರಲ್ಲೊಬ್ಬರು ಜಾಗ ಖಾಲಿ ಮಾಡಲೇಬೇಕಾದ್ದರಿಂದ ಧವನ್ ಮತ್ತು ರಾಹುಲ್‌ಗೆ ಈ ಸರಣಿ ಅಗ್ನಿಪರೀಕ್ಷೆ ಆಗಿದೆ. ಫಾರ್ಮ್ ವಿಷಯದಲ್ಲಿ ಧವನ್‌ಗಿಂತ ರಾಹುಲ್ ಎಷ್ಟೋ ಮುಂದಿದ್ದಾರೆ. ಧವನ್ ರಣಜಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಆದರೆ ವರ್ಷಾಂತ್ಯದ ವಿಶ್ವಕಪ್ ಪಂದ್ಯಾವಳಿಗೆ ಸೂಕ್ತ ಆರಂಭಿಕ ಜೋಡಿಯೊಂದನ್ನು ಭಾರತ ಅಂತಿಮಗೊಳಿಸಬೇಕಿದೆ.
ಯಾರ್ಕರ್ ಸ್ಪೆಷಲಿಸ್ಟ್ ಜಸ್‌ಪ್ರೀತ್ ಬುಮ್ರಾ 4 ತಿಂಗಳ ವಿಶ್ರಾಂತಿ ಬಳಿಕ ತಂಡಕ್ಕೆ ಮರಳಿದ್ದರಿಂದ ಅವರ ಫಾರ್ಮ್ ಹೇಗಿದೆ ಎಂಬುದನ್ನು ಗಮನಿಸಬೇಕಿದೆ. ಎಂದಿನಂತೆ ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಬುಮ್ರಾ ಮ್ಯಾಜಿಕ್ ಮಾಡಿದರೆ ಭಾರತದ ಬೌಲಿಂಗ್ ಹೆಚ್ಚು ಅಪಾಯಕಾರಿ ಆಗುವುದರಲ್ಲಿ ಅನುಮಾನವಿಲ್ಲ.
ಮ್ಯಾಥ್ಯೂಸ್ ಮಾಯ!
ಟಿ20 ಕ್ರಿಕೆಟಿಗೆ ಮರಳಿದ ಲಂಕೆಯ ಅನುಭವಿ ಕ್ರಿಕೆಟಿಗ, ಮಾಜಿ ನಾಯಕ ಏಂಜೆಲೊ ಮ್ಯಾಥ್ಯೂಸ್ ಗುವಾಹಾಟಿ ತಂಡದಲ್ಲಿ ಕಾಣಿಸಿಕೊಳ್ಳದಿದ್ದುದೊಂದು ಅಚ್ಚರಿ. ಭಾರತದಂತೆ ಲಂಕಾ ಕೂಡ 3 ಸ್ಪೆಷಲಿಸ್ಟ್ ಪೇಸರ್, ಇಬ್ಬರು ಸ್ಪಿನ್ನರ್‌ಗಳೊಂದಿಗೆ ಬೌಲಿಂಗ್ ವಿಭಾಗವನ್ನು ಅಂತಿಮಗೊಳಿಸಿತ್ತು. ಇಂದೋರ್‌ನಲ್ಲೂ ಮ್ಯಾಥ್ಯೂಸ್ ಆಡುವ ಸಾಧ್ಯತೆ ಕಡಿಮೆ.
ಇದೀಗ ಸರಣಿ 2 ಪಂದ್ಯಗಳಿಗೆ ಸೀಮಿತಗೊಂಡಿದೆ. ಸರಣಿ ಜಯಿಸಬೇಕಾದರೆ ತಂಡವೊಂದು ಎರಡೂ ಪಂದ್ಯಗಳು° ಗೆಲ್ಲಬೇಕು. ಇಲ್ಲವೇ ಇದು 1-1 ಸಮಬಲದಲ್ಲಿ ಕೊನೆಗೊಳ್ಳಲಿದೆ. ಅಂದಹಾಗೆ, ಭಾರತದೆದುರು ಶ್ರೀಲಂಕಾ ತಂಡ ಯಾವ ಪ್ರಕಾರದ ಸರಣಿಯನ್ನೂ ಗೆಲ್ಲದೆ 10 ವರ್ಷಗಳೇ ಉರುಳಿವೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಆಸ್ಟ್ರೇಲಿಯ ಸೋಲಿಗಿಂತ ತವರಿನ ವೈಟ್‌ವಾಶ್ ಆಘಾತಕಾರಿ: ಯುವಿ
ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್ ಬಹಿಷ್ಕಾರ?
Jasprit Bumrah: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಬುಮ್ರಾ
WTC “ಟೆಸ್ಟ್ ಫೈನಲ್’ಗೂ ಮುನ್ನ ಒಂದು ಟೆಸ್ಟ್ ಆಡಲು ದ. ಆಫ್ರಿಕಾ ಯೋಜನೆ
Team India; ದ್ರಾವಿಡ್ ಇದ್ದಾಗ ಎಲ್ಲ ಸರಿಯಿತ್ತು: ಹರ್ಭಜನ್
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.