PR Sreejesh: ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಘೋಷಿಸಿದ ಭಾರತದ ಸ್ಟಾರ್ ಆಟಗಾರ
Team Udayavani, Jul 22, 2024, 4:07 PM IST
ಹೊಸದಿಲ್ಲಿ: ಭಾರತೀಯ ಹಾಕಿ ತಂಡದ ಹಿರಿಯ ಆಟಗಾರ, ಗೋಲ್ ಕೀಪರ್ ಪಿಆರ್ ಶ್ರೀಜೇಶ್ (PR Sreejesh) ಅವರು ಅಂತಾರಾಷ್ಟ್ರೀಯ ಹಾಕಿಗೆ (International Hockey) ವಿದಾಯ ಹೇಳಲು ನಿರ್ಧರಿಸಿದ್ದಾರೆ. ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಪ್ಯಾರಿಸ್ ಒಲಿಂಪಿಕ್ಸ್ (Paris Olympics) ಅವರ ಕೊನೆಯ ಅಂತಾರಾಷ್ಟ್ರೀಯ ಕೂಟವಾಗಿರಲಿದೆ.
2006ರಲ್ಲಿ ಭಾರತೀಯ ತಂಡಕ್ಕೆ ಪದಾರ್ಪಣೆ ಮಾಡಿದ ಶ್ರೀಜೇಶ್ ಅವರು ನಾಲ್ಕನೇ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಸಿದ್ದರಾಗಿದ್ದಾರೆ. 2020ರ ಟೊಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಕಂಚಿನ ಪದಕ ಗೆದ್ದುಕೊಂಡಿತ್ತು. ಈ ಬಾರಿಯೂ ಮೆಡಲ್ ನೊಂದಿಗೆ ವೃತ್ತಿಜೀವನ ಅಂತ್ಯಗೊಳಿಸಲು ಶ್ರೀಜಿತ್ ಆಶಿಸಿದ್ದಾರೆ.
ಜಿ ವಿ ರಾಜಾ ಸ್ಪೋರ್ಟ್ಸ್ ಸ್ಕೂಲ್ ನಿಂದ ಆರಂಭವಾದ ಶ್ರೀಜೇಶ್ ಕ್ರೀಡಾ ಪಯಣ ಹಲವು ತ್ಯಾಗಗಳು ಮತ್ತು ಮಹೋನ್ನತ ಸಾಧನೆಗಳನ್ನು ಹೊಂದಿದೆ. “ನನ್ನ ಮೊದಲ ಕಿಟ್ ಖರೀದಿಸಲು ತಂದೆ ನಮ್ಮ ಹಸುವನ್ನು ಮಾರಾಟ ಮಾಡಿದ್ದು ನನಗೆ ಇನ್ನೂ ನೆನಪಿದೆ” ಎಂದು ಅವರು ನೆನಪಿಸಿಕೊಳ್ಳುತ್ತಾರೆ. “ಅವರ ತ್ಯಾಗವು ನನ್ನೊಳಗೆ ಬೆಂಕಿಯನ್ನು ಹೊತ್ತಿಸಿತು, ಹೆಚ್ಚು ಶ್ರಮಿಸಲು ಮತ್ತು ದೊಡ್ಡ ಕನಸು ಕಾಣುವಂತೆ ನನ್ನನ್ನು ಪ್ರೇರೇಪಿಸಿತು” ಎಂದಿದ್ದಾರೆ.
ಒಲಿಂಪಿಕ್ ಮೆಡಲ್ ಜೊತೆಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆಲುವು, ಏಷ್ಯನ್ ಗೇಮ್ಸ್ ಗೋಲ್ಡ್ ಮೆಡಲ್ ಗಳು ಶ್ರೀಜೇಶ್ ಅವರ ಅಂತಾರಾಷ್ಟ್ರೀಯ ವೃತ್ತಿಜೀವನದ ಸಾಧನೆಗಳು. ಭಾರತೀಯ ತಂಡದ ನಾಯಕನಾಗಿ ಅವರು ಒಲಿಂಪಿಕ್ಸ್ ನಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.
2020ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಶ್ರೀಜೇಶ್ ಅವರಿಗೆ ಕಂಚಿನ ಪದಕದ ಜೊತೆಗೆ ವಿಶ್ವದ ಅತ್ಯುತ್ತಮ ಗೋಲ್ ಕೀಪರ್ ಎಂಬ ಪುರಸ್ಕಾರವೂ ಸಂದಿತ್ತು.
View this post on Instagram
ತನ್ನ ನಿವೃತ್ತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಕೇರಳದ ಆಟಗಾರ ಶ್ರೀಜೇಶ್, ಈ ಪ್ರಯಾಣವು ಅಸಾಮಾನ್ಯಕ್ಕೆ ಕಡಿಮೆ ಏನಲ್ಲ, ನನ್ನ ಕುಟುಂಬ, ತಂಡದ ಸಹ ಆಟಗಾರರು, ತರಬೇತುದಾರರು ಮತ್ತು ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾನು ಶಾಶ್ವತವಾಗಿ ಕೃತಜ್ಞನಾಗಿದ್ದೇನೆ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು. ಇಲ್ಲಿ ಒಂದು ಅಧ್ಯಾಯದ ಅಂತ್ಯ ಮತ್ತು ಹೊಸ ಸಾಹಸದ ಆರಂಭ” ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.