ಆಸೀಸ್ ವಿರುದ್ಧ 8ವಿಕೆಟ್ ಜಯ; 2-1 ರಿಂದ ಸರಣಿ ಗೆದ್ದ ಟೀಮ್ ಇಂಡಿಯಾ
Team Udayavani, Mar 28, 2017, 11:27 AM IST
ಧರ್ಮಶಾಲಾ: ಇಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ನಿರ್ಣಾಯಕ ಟೆಸ್ಟ್ ಪಂದ್ಯದ 4 ನೇ ದಿನದಾಟದಲ್ಲಿ ಟೀಮ್ ಇಂಡಿಯಾ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ 4 ಪಂದ್ಯಗಳ “ಬೋರ್ಡರ್-ಗಾವಸ್ಕರ್ ಸರಣಿಯನ್ನು 2-1 ರಿಂದ ಜಯಿಸಿ ಯುಗಾದಿ ಸಂಭ್ರಮದ ಗಿಫ್ಟ್ ನೀಡಿದೆ.
ಆಸೀಸನ್ನು ಮೊದಲ ಇನ್ನಿಂಗ್ಸ್‌ನಲ್ಲಿ 32 ರನ್ ಮುನ್ನಡೆ ಪಡೆದು, 3 ನೇ ದಿನದಾಟದ 2 ನೇ ಇನ್ನಿಂಗ್ಸ್‌ನಲ್ಲಿ 137 ಕ್ಕೆ ಆಲೌಟ್ ಮಾಡುವ ಮೂಲಕ ಗೆಲುವಿನ ಸನಿಹ ಬಂದಿದ್ದ ರೆಹಾನೆ ಪಡೆ ಮಂಗಳವಾರ ಭರ್ಜರಿ ಗೆಲುವು ಸಾಧಿಸಿ ಸಂಭ್ರಮಿಸಿತು.
ಗೆಲ್ಲಲು 106 ರನ್ ಗುರಿ ಬೆನ್ನಟ್ಟಿದ ಭಾರತ 2 ವಿಕೆಟ್ ನಷ್ಟಕ್ಕೆ ಗೆಲುವನ್ನು ತನ್ನದಾಗಿಸಿಕೊಂಡಿತು. ಕೆ.ಎಲ್.ರಾಹುಲ್ ಅಜೇಯ 51 , ರೆಹಾನೆ 38 ರನ್‌ಗಳಿಸಿ ಅಜೇಯರಾಗಿ ಉಳಿದರು. ವಿಜಯ್ 8 ರನ್‌ಗೆ ಔಟಾದರೆ , ಪೂಜಾರ ಖಾತೆ ತೆರೆಯುವ ಮುನ್ನವೆ ರನ್‌ಔಟಾದರು.
ಜಡೇಜಾ ಸರಣಿ,ಪಂದ್ಯ ಶ್ರೇಷ್ಠ
ಸರಣಿಯುದ್ದಕ್ಕೂ ಭರ್ಜರಿ ಆಲ್‌ರೌಂಡ್ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 300 ಆಲೌಟ್ , 2ನೇ ಇನ್ನಿಂಗ್ಸ್ 137 ಆಲೌಟ್
ಭಾರತ ಮೊದಲ ಇನ್ನಿಂಗ್ಸ್ 332 ಆಲೌಟ್ , 2ನೇ ಇನ್ನಿಂಗ್ಸ್ 106-2
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Illegal Property Case: ಸಚಿವ ಜಮೀರ್ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್
Mangaluru: ವೆನ್ಲಾಕ್ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್
Space Science: ಸ್ಪೇಸ್‌ಎಕ್ಸ್‌ನಿಂದ ಮೊದಲ ಬಾರಿ ಇಸ್ರೋ ಉಪಗ್ರಹ ನಭಕ್ಕೆ!
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.