ಐಸಿಸಿ ಟಿ-20 ವಿಶ್ವಕಪ್: ಕ್ಯಾಪ್ಟನ್‌ ಕೊಹ್ಲಿಗೆ ಗೆಲುವಿನ ವಿದಾಯ

Team Udayavani, Nov 8, 2021, 10:59 PM IST

ಕ್ಯಾಪ್ಟನ್‌ ಕೊಹ್ಲಿಗೆ ಗೆಲುವಿನ ವಿದಾಯ

ದುಬಾೖ: ಟಿ20 ಕ್ರಿಕೆಟ್‌ನಲ್ಲಿ ಕೊನೆಯ ಸಲ ಭಾರತವನ್ನು ಮುನ್ನಡೆಸಿದ ವಿರಾಟ್‌ ಕೊಹ್ಲಿ ಮತ್ತು ಕೊನೆಯ ಸಲ ಮಾರ್ಗದರ್ಶನ ನೀಡಿದ ಕೋಚ್‌ ರವಿಶಾಸ್ತ್ರಿ ಅವರಿಗೆ ಗೆಲುವಿನ ವಿದಾಯ ಲಭಿಸಿದೆ.

ಕೊನೆಯ ಹಾಗೂ ಲೆಕ್ಕದ ಭರ್ತಿಯ ಸೂಪರ್‌-12 ಪಂದ್ಯದಲ್ಲಿ ಭಾರತ ನಮೀಬಿಯಾವನ್ನು 9 ವಿಕೆಟ್‌ಗಳಿಂದ ಮಣಿಸಿತು.ಬ್ಯಾಟಿಂಗಿಗೆ ಇಳಿಸಲ್ಪಟ್ಟ ನಮೀಬಿಯಾ 8 ವಿಕೆಟಿಗೆ 132 ರನ್‌ ಗಳಿಸಿದರೆ, ಭಾರತ 15.2 ಓವರ್‌ಗಳಲ್ಲಿ ಒಂದು ವಿಕೆಟಿಗೆ 136 ರನ್‌ ಬಾರಿಸಿತು.

ಚೇಸಿಂಗ್‌ ವೇಳೆ ರೋಹಿತ್‌ ಶರ್ಮ-ಕೆ.ಎಲ್‌. ರಾಹುಲ್‌ ಮೊದಲ ವಿಕೆಟಿಗೆ 86 ರನ್‌ಗಳ ಜತೆಯಾಟ ನಡೆಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ರೋಹಿತ್‌(56), ರಾಹುಲ್‌ (ಅಜೇಯ 54) ಅರ್ಧಶತಕ ಸಿಡಿಸಿ ಮಿಂಚಿದರು.

ನಮೀಬಿಯಾಕ್ಕೆ ಸ್ಟೀಫ‌ನ್‌ ಬಾರ್ಡ್‌ ಮತ್ತು ಮೈಕಲ್‌ ವಾನ್‌ ಲಿಂಜೆನ್‌ “ಕ್ವಿಕ್‌ ಸ್ಟಾರ್ಟ್‌’ ನೀಡಲು ಪ್ರಯತ್ನಿಸಿದರು. ಶಮಿ, ಬುಮ್ರಾ ದಾಳಿಯನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿ 4.4 ಓವರ್‌ಗಳಿಂದ 33 ರನ್‌ ಪೇರಿಸಿದರು. ಆದರೆ ಒಂದೇ ರನ್‌ ಅಂತರದಲ್ಲಿ 2 ವಿಕೆಟ್‌ ಕೆಡವಿದ ಭಾರತ ತಿರುಗೇಟು ನೀಡಿತು. 14 ರನ್‌ ಮಾಡಿದ ಲಿಂಜೆನ್‌ ಅವರನ್ನು ಬುಮ್ರಾ ಉರುಳಿಸಿದರೆ, ಕ್ರೆಗ್‌ ವಿಲಿಯಮ್ಸ್‌ ಖಾತೆ ತೆರೆಯುವ ಮೊದಲೇ ಜಡೇಜ ಅವರ ಮೊದಲ ಓವರ್‌ನಲ್ಲೇ ಸ್ಟಂಪ್ಡ್ ಆದರು. ಮುಂದಿನ ಓವರಿನಲ್ಲಿ ಬಾರ್ಡ್‌ (21) ವಿಕೆಟ್‌ ಕಿತ್ತ ಜಡೇಜ ನಮೀಬಿಯಕ್ಕೆ ಮತ್ತೊಂದು ಆಘಾತವಿಕ್ಕಿದರು.

ಆರ್‌. ಅಶ್ವಿ‌ನ್‌ ನಮೀಬಿಯಾದ ಮಧ್ಯಮ ಕ್ರಮಾಂಕದ ಮೇಲೆರಗಿ ಹೋದರು. ನಾಯಕ ಗೆರಾರ್ಡ್‌ ಎರಾಸ್ಮಸ್‌ (12), ಜಾನ್‌ ಈಟನ್‌ (5) ಮತ್ತು ಜೇನ್‌ ಗ್ರೀನ್‌ (0) ವಿಕೆಟ್‌ ಕಿತ್ತರು. ತಲಾ 3 ವಿಕೆಟ್‌ ಕೆಡವಿದ ಅಶ್ವಿ‌ನ್‌ ಮತ್ತು ರವೀಂದ್ರ ಜಡೇಜ ಹೆಚ್ಚಿನ ಯಶಸ್ಸು ಸಾಧಿಸಿದರು. ಬುಮ್ರಾಗೆ 2 ವಿಕೆಟ್‌ ಲಭಿಸಿತು. ಶಮಿ 39 ರನ್‌ ನೀಡಿ ದುಬಾರಿಯಾದರು.

ಇದನ್ನೂ ಓದಿ:ರಫೇಲ್‌ ಕಿಕ್‌ಬ್ಯಾಕ್‌ ತನಿಖೆ ನಡೆಸದಿರಲು ಸಿಬಿಐ ನಿರ್ಧಾರ: ಹೊಸ ವರದಿಯಲ್ಲಿ ಆರೋಪ

26 ರನ್‌ ಮಾಡಿದ ಡೇವಿಡ್‌ ವೀಸ್‌ ನಮೀಬಿಯಾ ಸರದಿಯ ಗರಿಷ್ಠ ಸ್ಕೋರರ್‌. 25 ಎಸೆತ ಎದುರಿಸಿದ ಅವರು 2 ಬೌಂಡರಿ ಹೊಡೆದರು.

ಈ ಪಂದ್ಯಕ್ಕಾಗಿ ಭಾರತ ಒಂದು ಬದಲಾವಣೆ ಮಾಡಿಕೊಂಡಿತು. ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಬದಲು ರಾಹುಲ್‌ ಚಹರ್‌ ಅವರಿಗೆ ಅವಕಾಶ ನೀಡಿತು.

ಸಂಕ್ಷಿಪ್ತ ಸ್ಕೋರ್‌: ನಮೀಬಿಯಾ-8 ವಿಕೆಟಿಗೆ 132 (ವೀಸ್‌ 26, ಬಾರ್ಡ್‌ 21, ಫ್ರೈಲಿಂಕ್‌ ಔಟಾಗದೆ 15, ಜಡೇಜ 16ಕ್ಕೆ 3, ಅಶ್ವಿ‌ನ್‌ 20ಕ್ಕೆ 3, ಬುಮ್ರಾ 19ಕ್ಕೆ 2). ಭಾರತ-ಒಂದು ವಿಕೆಟಿಗೆ 136 (ರೋಹಿತ್‌ 56, ರಾಹುಲ್‌ ಔಟಾಗದೆ 54, ಸೂರ್ಯಕುಮಾರ್‌ ಅಜೇಯ 25, ಜಾನ್‌ ಫ್ರೈಲಿಂಕ್‌ 19ಕ್ಕೆ 1).

ಪಂದ್ಯಶ್ರೇಷ್ಠ: ರವೀಂದ್ರ ಜಡೇಜ.

ಟಾಪ್ ನ್ಯೂಸ್

1-man-mohan

Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು

Video: ಮನಮೋಹನ್ ಸಿಂಗ್ ನಿಧನ ಹೇಳುವ ಬದಲು ಮೋದಿ ನಿಧನರಾಗಿದ್ದಾರೆ ಎಂದ ನ್ಯೂಸ್ ಆ್ಯಂಕರ್

Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!

allu arjun

Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

1-osamu

Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್‌ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ

Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್‌ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

INDWvWIW: ದೀಪ್ತಿ ಶರ್ಮಾ ಆಲ್‌ ರೌಂಡ್‌ ಶೋ; ಏಕದಿನ ಕ್ಲೀನ್‌ಸ್ವೀಪ್‌ ಮಾಡಿದ ವನಿತೆಯರು

INDWvWIW: ದೀಪ್ತಿ ಶರ್ಮಾ ಆಲ್‌ ರೌಂಡ್‌ ಶೋ; ಸರಣಿ ಕ್ಲೀನ್‌ಸ್ವೀಪ್‌ ಮಾಡಿದ ವನಿತೆಯರು

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

3rd ODI ವನಿತಾ ಏಕದಿನ: ವಿಂಡೀಸ್‌ ವಿರುದ್ಧ ಸರಣಿ ಕ್ಲೀನ್‌ ಸ್ವೀಪ್‌ಗೆ ಭಾರತ ಸಜ್ಜು

3rd ODI ವನಿತಾ ಏಕದಿನ: ವಿಂಡೀಸ್‌ ವಿರುದ್ಧ ಸರಣಿ ಕ್ಲೀನ್‌ ಸ್ವೀಪ್‌ಗೆ ಭಾರತ ಸಜ್ಜು

PAK Vs SA: ಸೆಂಚುರಿಯನ್‌ ಟೆಸ್ಟ್‌ ಪಾಕಿಸ್ಥಾನ  211ಕ್ಕೆ ಆಲೌಟ್‌

PAK Vs SA: ಸೆಂಚುರಿಯನ್‌ ಟೆಸ್ಟ್‌ ಪಾಕಿಸ್ಥಾನ 211ಕ್ಕೆ ಆಲೌಟ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10

Madikeri: ಸೇನಾ ವಾಹನ ದುರಂತ; ಕೊಡಗಿನ ಯೋಧ ಚಿಂತಾಜನಕ

1-man-mohan

Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು

Video: ಮನಮೋಹನ್ ಸಿಂಗ್ ನಿಧನ ಹೇಳುವ ಬದಲು ಮೋದಿ ನಿಧನರಾಗಿದ್ದಾರೆ ಎಂದ ನ್ಯೂಸ್ ಆ್ಯಂಕರ್

Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!

allu arjun

Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.