ಭಾರತ ಪ್ರವಾಸ: ಸ್ಟಾರ್ಕ್ ಇಲ್ಲ
Team Udayavani, Feb 8, 2019, 12:30 AM IST
ಮೆಲ್ಬರ್ನ್: ಏಕದಿನ ಹಾಗೂ ಟಿ20 ಸರಣಿಗಾಗಿ ಇನ್ನು ಕೆಲವೇ ದಿನಗಳಲ್ಲಿ ಭಾರತ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯ ತಂಡವನ್ನು ಗುರುವಾರ ಅಂತಿಮಗೊಳಿಸಲಾಗಿದೆ. ಗಾಯಾಳು ವೇಗಿ ಮಿಚೆಲ್ ಸ್ಟಾರ್ಕ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಆಲ್ರೌಂಡರ್ ಮಿಚೆಲ್ ಮಾರ್ಷ್ ಮತ್ತು ವೇಗಿ ಪೀಟರ್ ಸಿಡ್ಲ್ ಅವರನ್ನು ಕಡೆಗಣಿಸಲಾಗಿದೆ.
ಸ್ಟಾರ್ಕ್ ಶ್ರೀಲಂಕಾ ವಿರುದ್ಧದ ಕ್ಯಾನ್ಬೆರ್ರಾ ಟೆಸ್ಟ್ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಇದರಿಂದ ಭುಜ, ತೋಳು ಹಾಗೂ ಎದೆಯ ಭಾಗದಲ್ಲಿ ನೋವು ಕಾಣಿಸಿಕೊಂಡಿದೆ. ಮಾರ್ಚ್ನಲ್ಲಿ ಪಾಕಿಸ್ಥಾನ ವಿರುದ್ಧ ಯುಎಇಯಲ್ಲಿ ನಡೆಯಲಿರುವ ಏಕದಿನ ಸರಣಿಯ ವೇಳೆ ಸ್ಟಾರ್ಕ್ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆ ಇದೆ.
ಮತ್ತೋರ್ವ ಹಿರಿಯ ವೇಗಿ ಜೋಶ್ ಹ್ಯಾಝಲ್ವುಡ್ ಬೆನ್ನು ನೋವಿಗೆ ಸಿಲುಕಿದ್ದು, ಭಾರತ ಪ್ರವಾಸವನ್ನು ತಪ್ಪಿಸಿ ಕೊಳ್ಳಲಿದ್ದಾರೆ. ಉಳಿದಂತೆ ಇತ್ತೀಚೆಗೆ ಭಾರತದ ವಿರುದ್ಧ ತವರಿನಲ್ಲಿ ಆಡಿದ ತಂಡದಲ್ಲಿದ್ದ 11 ಆಟಗಾರರನ್ನು ಉಳಿಸಿಕೊಳ್ಳಲಾಗಿದೆ.
ಆಸ್ಟ್ರೇಲಿಯ ತಂಡವನ್ನು ಆರನ್ ಫಿಂಚ್ ಮುನ್ನಡೆಸಲಿದ್ದಾರೆ. ಸರಣಿ ವೇಳೆ 2 ಟಿ20 ಹಾಗೂ 5 ಏಕದಿನ ಪಂದ್ಯಗಳನ್ನು ಆಡಲಾಗುವುದು. ಟಿ20 ಪಂದ್ಯಗಳು ಕ್ರಮವಾಗಿ ವಿಶಾಖಪಟ್ಟಣ (ಫೆ. 24) ಮತ್ತು ಬೆಂಗಳೂರಿನಲ್ಲಿ ನಡೆಯಲಿವೆ (ಫೆ. 27). ಏಕದಿನ ಪಂದ್ಯಗಳ ತಾಣ ಹೈದರಾಬಾದ್ (ಮಾ. 2), ನಾಗ್ಪುರ (ಮಾ. 5), ರಾಂಚಿ (ಮಾ. 8), ಮೊಹಾಲಿ (ಮಾ. 10) ಮತ್ತು ಹೊಸದಿಲ್ಲಿ (ಮಾ. 13).
ಆಸ್ಟ್ರೇಲಿಯ ಟಿ20/ಏಕದಿನ ತಂಡ
ಆರನ್ ಫಿಂಚ್ (ನಾಯಕ), ಪ್ಯಾಟ್ ಕಮಿನ್ಸ್, ಅಲೆಕ್ಸ್ ಕ್ಯಾರಿ, ಜಾಸನ್ ಬೆಹೆಡಾಫ್ì, ನಥನ್ ಕೋಲ್ಟರ್ ನೈಲ್, ಪೀಟರ್ ಹ್ಯಾಂಡ್ಸ್ ಕಾಂಬ್, ಉಸ್ಮಾನ್ ಖ್ವಾಜಾ, ನಥನ್ ಲಿಯೋನ್, ಶಾನ್ ಮಾರ್ಷ್, ಗ್ಲೆನ್ ಮ್ಯಾಕ್ಸ್ವೆಲ್, ಜೇ ರಿಚರ್ಡ್ಸನ್, ಕೇನ್ ರಿಚರ್ಡ್ಸನ್, ಡಿ’ಆರ್ಸಿ ಶಾರ್ಟ್, ಮಾರ್ಕಸ್ ಸ್ಟೋಯಿನಿಸ್, ಆ್ಯಶrನ್ ಟರ್ನರ್, ಆ್ಯಡಂ ಝಂಪ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Syed Mushtaq Ali Trophy ಸಿಕ್ಕಿಂ ವಿರುದ್ಧ ಕರ್ನಾಟಕಕ್ಕೆ ಸುಲಭ ಜಯ
Syed Modi International: ಫೇವರಿಟ್ ಸಿಂಧು, ಲಕ್ಷ್ಯ ಸೆಮಿಫೈನಲ್ಗೆ
Pro Kabaddi;ಹರಿಯಾಣದ ಅಗ್ರಸ್ಥಾನ ಇನ್ನಷ್ಟು ಗಟ್ಟಿ
ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.