ಮೊದಲ ಏಕದಿನ : ಭಾರತದ ವಿರುದ್ದ 1 ವಿಕೆಟಿನಿಂದ ಗೆದ್ದ ಬಾಂಗ್ಲಾದೇಶ
ಬಾಂಗ್ಲಾ 136 ಕ್ಕೆ 9 ವಿಕೆಟ್ ಕಳೆದುಕೊಂಡರೂ 187 ರನ್ ಗುರಿ ಮುಟ್ಟುವಲ್ಲಿ ಯಶಸ್ವಿ
Team Udayavani, Dec 4, 2022, 8:02 PM IST
ಢಾಕಾ: ಟೀಂ ಇಂಡಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ಕೇವಲ 1 ವಿಕೆಟಿನಿಂದ ಜಯ ಸಾಧಿಸಿ ತವರಿನಲ್ಲಿ ಪ್ರಾಬಲ್ಯ ತೋರಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ ಪರ ಸ್ಪಿನ್ನರ್ ಶಕೀಬ್ ಅಲ್ ಹಸನ್ ಬಿಗಿ ದಾಳಿ ನಡೆಸಿದರು. ದಾಳಿಗೆ ಸಿಲುಕಿದ ಭಾರತ 186 ರನ್ ಗಳಿಗೆ ಆಲೌಟಾಗಿದೆ. ಉಪನಾಯಕ ಕೆ.ಎಲ್. ರಾಹುಲ್ ಸಮಯೋಚಿತ ಆಟದ ಕಾರಣ ಭಾರತ ತಂಡ ಗೌರವಯುತ ಮೊತ್ತ ಗಳಿಸಲು ಸಾಧ್ಯವಾಯಿತು.
ನಾಯಕ ರೋಹಿತ್ 27 ರನ್, ಶ್ರೇಯಸ್ ಅಯ್ಯರ್ 24 ರನ್ ವಾಷಿಂಗ್ಟನ್ ಸುಂದರ್ ಸುಂದರ್ 43 ಎಸೆತಗಳಲ್ಲಿ 19 ರನ್ ಗಳಿಸಿದರು. ಬಹಳ ಸಮಯದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಆಡಿದ ರಾಹುಲ್ . 70 ಎಸೆತಗಳಲ್ಲಿ 73 ರನ್ ಗರಿಷ್ಠ ಕೊಡುಗೆ ನೀಡಿದರು. ಭಾರತ ತಂಡ 41.2 ಓವರ್ ಗಳಲ್ಲಿ 186 ರನ್ ಗೆ ಆಲೌಟಾಯಿತು. ಶಕೀಬ್ ಅಲ್ ಹಸನ್ ಐದು ವಿಕೆಟ್ ಕಿತ್ತರೆ, ಇಬಾದತ್ ಹುಸೈನ್ ನಾಲ್ಕು ವಿಕೆಟ್ ಕಬಳಿಸಿದರು.
ಗುರಿ ಬೆನ್ನಟ್ಟಿದ ಬಾಂಗ್ಲಾ, 9 ವಿಕೆಟ್ ನಷ್ಟಕ್ಕೆ 46 ಓವರ್ ಗಳಲ್ಲಿ 187 ರನ್ ಗಳಿಸಿ ಜಯದ ನಗೆ ಬೀರಿತು.
ಬಾಂಗ್ಲಾ ನಜ್ಮುಲ್ ಹುಸೇನ್ ಶಾಂಟೊ ಅವರ ವಿಕೆಟನ್ನು ಮೊದಲ ಎಸೆತದಲ್ಲೇ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಅನಾಮುಲ್ ಹಕ್ 14ರನ್ ,ಲಿಟ್ಟನ್ ದಾಸ್ 41 ರನ್ ,ಶಕೀಬ್ ಅಲ್ ಹಸನ್ 29 ರನ್ , ಮಹಮುದುಲ್ಲಾ 14 ರನ್ , ಮುಶ್ಫಿಕರ್ ರಹೀಮ್ 18 ರನ್ ಅಫೀಫ್ ಹೊಸೈನ್ 6 ರನ್ , ಮೆಹಿದಿ ಹಸನ್ ಮಿರಾಜ್ 39 ಎಸೆತಗಳಲ್ಲಿ 38 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ತಂಡ ಸಂಕಷ್ಟದಲ್ಲಿದ್ದ ವೇಳೆ ನೇರವಾದ ಮುಸ್ತಾಫಿಜುರ್ ರೆಹಮಾನ್ ಔಟಾಗದೆ 10 ರನ್ ಕೊಡುಗೆ ನೀಡಿ ಗೆಲುವಿನ ಸಂಭ್ರಮಕ್ಕೆ ಕಾರಣರಾದರು.
136 ಕ್ಕೆ 9 ವಿಕೆಟ್ ಕಳೆದು ಸಂಕಷ್ಟದಲ್ಲಿದ್ದರೂ ತಂಡಕ್ಕೆ ನೆರವಾದ ಮೆಹಿದಿ ಹಸನ್ ಮತ್ತು ಮುಸ್ತಾಫಿಜುರ್ ಬಾಲದಲ್ಲಿ ಬಲವಿದೆ ಎಂದು ತೋರಿಸಿ ಭಾರತದ ಗೆಲ್ಲುವ ಆಸೆಗೆ ತಣ್ಣೀರೆರೆಚಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.