ಕೊಹ್ಲಿ ಸೆಂಚುರಿ ನಂ. 71; ಭಾರತ ಜಯಭೇರಿ
Team Udayavani, Sep 8, 2022, 10:59 PM IST
ದುಬಾೖ: ವಿರಾಟ್ ಕೊಹ್ಲಿ ಅವರ ಅಜೇಯ 122 ರನ್ ಪರಾಕ್ರಮ ಹಾಗೂ ಭುವನೇಶ್ವರ್ ಕುಮಾರ್ ಅವರ 5 ವಿಕೆಟ್ ಸಾಹಸದೊಂದಿಗೆ “ಸೂಪರ್ ಫೋರ್’ ವಿಭಾಗದ ಅಂತಿಮ ಪಂದ್ಯದಲ್ಲಿ ಭಾರತ 101 ರನ್ನುಗಳ ಭಾರೀ ಅಂತರದಿಂದ ಅಫ್ಘಾನಿಸ್ಥಾನವನ್ನು ಮಣಿಸಿ ಏಷ್ಯಾ ಕಪ್‌ಗೆ ಗುಡ್‌ಬೈ ಹೇಳಿತು.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ 2 ವಿಕೆಟಿಗೆ 212 ರನ್ ರಾಶಿ ಹಾಕಿದರೆ, ಅಫ್ಘಾನಿಸ್ಥಾನ 20 ಓವರ್‌ಗಳಲ್ಲಿ 8 ವಿಕೆಟಿಗೆ 111 ರನ್ ಮಾಡಿತು. ಭುವನೇಶ್ವರ್ ಕುಮಾರ್ 5 ವಿಕೆಟ್‌ಗಳನ್ನು ಕೇವಲ 4 ರನ್ನಿಗೆ ಉಡಾಯಿಸಿದರು. ಅಫ್ಘಾನ್ ಪರ ಇಬ್ರಾಹಿಂ ಜದ್ರಾನ್ ಅಜೇಯ 64 ರನ್ ಹೊಡೆದರು.
ಸರಿಯಾಗಿ 989 ದಿನಗಳ ಬಳಿಕ ಅಂತಾ ರಾಷ್ಟ್ರೀಯ ಸೆಂಚುರಿ ಬಾರಿಸುವ ಮೂಲಕ ಕೊಹ್ಲಿ ದೊಡ್ಡದೊಂದು ಬರಗಾಲ ನೀಗಿಸಿಕೊಂಡರು. ಅಜೇಯ 122 ರನ್ ಹೊಡೆ ಯುವ ಮೂಲಕ ದುಬಾೖ ಅಂಗಳದಲ್ಲಿ ಮಿಂಚು ಹರಿಸಿದರು (61 ಎಸೆತ, 12 ಬೌಂಡರಿ, 6 ಸಿಕ್ಸರ್).
ವಿರಾಟ್ ಕೊಹ್ಲಿ ಅವರ ಕೊನೆಯ ಶತಕ 2019ರ ನವಂಬರ್‌ನಲ್ಲಿ ಬಂದಿತ್ತು. ಇದು ಅವರ 71ನೇ ಅಂತಾರಾಷ್ಟ್ರೀಯ ಶತಕ. ಇದರೊಂದಿಗೆ ರಿಕಿ ಪಾಂಟಿಂಗ್ ದಾಖಲೆಯನ್ನು ಸರಿದೂಗಿಸಿದರು. 100 ಶತಕಗಳ ವೀರ ಸಚಿನ್ ತೆಂಡುಲ್ಕರ್ ಅಗ್ರಸ್ಥಾನದಲ್ಲಿದ್ದಾರೆ.
ಈ ಅಬ್ಬರದ ವೇಳೆ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಸರ್ವಾಧಿಕ ರನ್ ಹೊಡೆದರು. 2017ರ ಶ್ರೀಲಂಕಾ ಎದುರಿನ ಪಂದ್ಯದಲ್ಲಿ ರೋಹಿತ್ ಶರ್ಮ 118 ರನ್ ಮಾಡಿದ ದಾಖಲೆಯನ್ನು ಮುರಿದರು. ಇದು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿ ಬಾರಿಸಿದ ಮೊದಲ ಶತಕವೂ ಹೌದು.
ಶತಕದ ಜತೆಯಾಟ :
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತಕ್ಕೆ ನಾಯಕ ಕೆ.ಎಲ್. ರಾಹುಲ್ ಮತ್ತು ವಿರಾಟ್ ಕೊಹ್ಲಿ ಬಿರುಸಿನ ಆರಂಭ ಒದಗಿಸಿದರು. ಅಫ್ಘಾನ್ ಬೌಲರ್‌ಗಳ ಮೇಲೆ ಸವಾರಿ ಮಾಡಲಾರಂಭಿಸಿದ ಇವರಿಬ್ಬರೂ ದೊಡ್ಡ ಹೊಡೆತಗಳಿಗೆ ಮುಂದಾ ದರು. ರನ್ ಸರಾಗವಾಗಿ ಹರಿದು ಬಂದಿತು. ಪವರ್ ಪ್ಲೇಯಲ್ಲಿ 52 ರನ್ ಒಟ್ಟುಗೂಡಿತು. 10 ಓವರ್‌ಗಳಲ್ಲಿ ಮೊತ್ತ 87ಕ್ಕೆ ಏರಿತು. ಆರಂಭಿಕರಿಬ್ಬರೂ ಕ್ರೀಸ್‌ನಲ್ಲಿ ಭದ್ರವಾಗಿ ಬೇರುಬಿಟ್ಟಿದ್ದರು.
ತೀವ್ರ ಬ್ಯಾಟಿಂಗ್ ಬರಗಾಲದಲ್ಲಿದ್ದ ಈ ಇಬ್ಬರೂ ಆಟಗಾರರು ಏಷ್ಯಾ ಕಪ್ ಕೂಟದ ಅಂತಿಮ ಅವಕಾಶವನ್ನು ಚೆನ್ನಾಗಿಯೇ ಬಳಸಿ ಕೊಂಡರು. ಒಂದು ದಿನದ ಹಿಂದಷ್ಟೇ ಪಾಕಿಸ್ಥಾನ ವನ್ನು ನಿಯಂತ್ರಿಸಿದ ಅದೇ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿತೊಡಗಿದರು. ದುಬಾೖ ಅಂಗಳದಲ್ಲಿ ಬೌಂಡರಿ, ಸಿಕ್ಸರ್‌ಗಳು ಸರಾಗವಾಗಿ ಸಿಡಿಯಲ್ಪಟ್ಟವು. 11.2 ಓವರ್‌ಗಳಲ್ಲಿ ಶತಕದ ಜತೆಯಾಟ ಪೂರ್ತಿಗೊಂಡಿತು. ಮೊದಲು ಕೊಹ್ಲಿ, ಬಳಿಕ ರಾಹುಲ್ ಅರ್ಧ ಶತಕ ಪೂರೈಸಿದರು. ಆಗಲೇ ಅಫ್ಘಾನ್ 6 ಮಂದಿಯನ್ನು ಬೌಲಿಂಗ್ ದಾಳಿಗಿಳಿಸಿದರೂ ಪ್ರಯೋಜನವಾಗಲಿಲ್ಲ.
ಆರಂಭಿಕ ವಿಕೆಟಿಗೆ 12.4 ಓವರ್‌ಗಳಿಂದ 119 ರನ್ ಒಟ್ಟುಗೂಡಿತು. ಆಗ ಫರೀದ್ ಅಹ್ಮದ್ ಮಲಿಕ್ ಒಂದೇ ಓವರ್‌ನಲ್ಲಿ ಅವಳಿ ಯಶಸ್ಸು ತಂದಿತ್ತರು. ಮೊದಲು ರಾಹುಲ್, ಒಂದೇ ಎಸೆತದ ಅಂತರದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಪೆವಿಲಿಯನ್ನಿಗೆ ಅಟ್ಟಿದರು. ಸತತ ಎರಡನೇ ಸಿಕ್ಸರ್ ಬಾರಿಸಲು ಮುಂದಾದ ರಾಹುಲ್ ಬೌಂಡರಿ ಲೈನ್‌ನಲ್ಲಿದ್ದ ನಜೀಬುಲ್ಲ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ರಾಹುಲ್ ಗಳಿಕೆ 41 ಎಸೆತಗಳಿಂದ 62 ರನ್ (6 ಬೌಂಡರಿ, 2 ಸಿಕ್ಸರ್). ಸೂರ್ಯ ಒಂದು ಸಿಕ್ಸರ್ ಎತ್ತಿದ ಬೆನ್ನಲ್ಲೇ ಕ್ಲೀನ್ ಬೌಲ್ಡ್ ಆದರು (6). ಪಂತ್ ಅಜೇಯ 20 ರನ್ ಮಾಡಿದರು.
ರೋಹಿತ್‌ಗೆ ವಿಶ್ರಾಂತಿ : ನಾಯಕ ರೋಹಿತ್ ಶರ್ಮ ಈ ಪಂದ್ಯದಿಂದ ಬ್ರೇಕ್ ಪಡೆದರು. ಹೀಗಾಗಿ ಕೆ.ಎಲ್. ರಾಹುಲ್ ತಂಡವನ್ನು ಮುನ್ನಡೆಸಿದರು. ಚಹಲ್, ಹಾರ್ದಿಕ್ ಪಾಂಡ್ಯ ಕೂಡ ಆಡಲಿಳಿಯಲಿಲ್ಲ.
ಫೈನಲ್ ರಿಹರ್ಸಲ್ :
ದುಬಾೖ: ಸೂಪರ್ ಫೋರ್ ಹಂತದ ಕೊನೆಯ ಮುಖಾಮುಖಿ ಶ್ರೀಲಂಕಾ ಮತ್ತು ಪಾಕಿಸ್ಥಾನ ತಂಡಗಳ ನಡುವೆ ಶುಕ್ರವಾರ ನಡೆಯಲಿದೆ. ಈಗಾಗಲೇ ಈ ಎರಡೂ ತಂಡಗಳು ಮೊದಲೆರಡೂ ಪಂದ್ಯಗಳನ್ನು ಗೆದ್ದು ಫೈನಲ್‌ಗೆ ಲಗ್ಗೆ ಹಾಕಿವೆ. ರವಿವಾರ ಪ್ರಶಸ್ತಿ ಸಮರ ಏರ್ಪಡಲಿದೆ. ಹೀಗಾಗಿ ಶುಕ್ರವಾರದ ಈ ಪಂದ್ಯಕ್ಕೆ ಯಾವುದೇ ಮಹತ್ವವಿಲ್ಲ. ಆದರೆ ಫೈನಲ್ ಪಂದ್ಯಕ್ಕೆ ಇದೊಂದು ಉತ್ತಮ ರಿಹರ್ಸಲ್ ಆಗಲಿದೆ. ಯಾವ ತಂಡ ಸೂಪರ್ ಫೋರ್ ಹಂತದಲ್ಲಿ ಅಜೇಯವಾಗಿ ಉಳಿಯಲಿದೆ ಎಂಬುದೊಂದು ಕುತೂಹಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.