ಭಾರತ-ಆಸ್ಟ್ರೇಲಿಯಾ 1ನೇ ಟೆಸ್ಟ್ : ಕೊಹ್ಲಿ ಪಡೆಗೆ ಪರಮಶಿವನ ಮುನಿಸು?
Team Udayavani, Feb 25, 2017, 10:38 AM IST
ಪುಣೆ: ಎಡಗೈ ಆಫ್ ಸ್ಪಿನ್ನರ್ ಸ್ಟೀವ್ ಓ’ಕೀಫ್ ದಾಳಿಗೆ ಸಿಲುಕಿ ತನ್ನ ಟೆಸ್ಟ್ ಇತಿಹಾಸದಲ್ಲೇ ಕಂಡು ಕೇಳರಿಯದ ಬ್ಯಾಟಿಂಗ್ ಕುಸಿತ ಅನುಭವಿಸಿದ ಭಾರತ ಪುಣೆ ಪಂದ್ಯದ ದ್ವಿತೀಯ ದಿನವೇ ಆಸ್ಟ್ರೇಲಿಯಾದ ಕಪಿಮುಷ್ಟಿಯಲ್ಲಿ ಬಂಧಿಯಾಗಿದೆ. ಸ್ಮಿತ್ ಬಳಗ ಇನ್ನೂ 6 ವಿಕೆಟ್‌ಗಳನ್ನು ಕೈಲಿರಿಸಿಕೊಂಡು 298 ರನ್ನುಗಳ ಮುನ್ನಡೆಯೊಂದಿಗೆ ನಿಚ್ಚಳ ಮೇಲುಗೈ ಸಾಧಿಸಿದೆ. ಕೇವಲ 5ನೇ ಟೆಸ್ಟ್ ಆಡುತ್ತಿರುವ ಸ್ಟೀವ್ ಒ ಕೀಫ್ 35 ರನ್ನಿಗೆ 6 ವಿಕೆಟ್ ಉಡಾಯಿಸಿ ತವರಿನಲ್ಲೇ ಭಾರತದ ಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡಿದ್ದಾರೆ.ಇದಕ್ಕಿಂತ ದೊಡ್ಡ ದುರಂತವೆಂದರೆ, ಭಾರತ ತನ್ನ ಅಂತಿಮ 7 ವಿಕೆಟ್‌ಗಳನ್ನು ಕೇವಲ 11 ರನ್ ಅಂತರದಲ್ಲಿ ಉದುರಿಸಿಕೊಂಡದ್ದು. 3 ವಿಕೆಟಿಗೆ 94 ರನ್ ಮಾಡಿ ಸುಸ್ಥಿತಿಯಲ್ಲಿದ್ದ ಕೊಹ್ಲಿ ಪಡೆ, 105ಕ್ಕೆ ತಲುಪುವಷ್ಟರಲ್ಲಿ ಆಲೌಟ್ ಆಗಿತ್ತು! ತನ್ನ 85 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಭಾರತ ಇಂಥ ಘನ ಘೋರ ಕುಸಿತ ಕಂಡದ್ದು ಇದೇ ಮೊದಲು!
400ಕ್ಕೆ ಏರುತ್ತಾ ಆಸೀಸ್ ಮುನ್ನಡೆ:
ಭಾರತದ ಕುಸಿತದಿಂದ ಆಸ್ಟ್ರೇಲಿಯಾಕ್ಕೆ 155 ರನ್ನುಗಳ ಬೃಹತ್ ಮುನ್ನಡೆ ಲಭಿಸಿತು. ದ್ವಿತೀಯ ಸರದಿಯಲ್ಲಿ ಅದು 4 ವಿಕೆಟಿಗೆ 143 ರನ್ ಮಾಡಿ ಒಟ್ಟು ಮುನ್ನಡೆಯನ್ನು 298 ರನ್ನಿಗೆ ವಿಸ್ತರಿಸಿದೆ. ಇನ್ನೂ 6 ವಿಕೆಟ್‌ಗಳು ಕೈಲಿವೆ. ಇದರಿಂದ ಈ ಮುನ್ನಡೆ 400ಕ್ಕೆ ವಿಸ್ತರಿಸಿದರೂ ಅನುಮಾನವಿಲ್ಲ. ಪಂದ್ಯವಿನ್ನೂ 3 ದಿನ ಕಾಣಬೇಕಿದ್ದು, 4ನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ನಡೆಸಬೇಕಿರುವ ಭಾರತ ಈ ಪಂದ್ಯವನ್ನು ಉಳಿಸಿಕೊಳ್ಳುವುದು ಬಹುತೇಕ ಕಷ್ಟ ಎಂದೇ ಭಾವಿಸಲಾಗಿದೆ. ಕೋಲ್ಕತಾದ “ಫಾಲೋ ಆನ್ ಟೆಸ್ಟ್’ನಂತೆ ಪವಾಡವೇನಾದರೂ ಸಂಭವಿಸಿದರಷ್ಟೇ ಭಾರತ ಬಚಾವಾದೀತು!
ಮಿಚೆಲ್ ಸ್ಟಾರ್ಕ್ ಬ್ಯಾಟಿಂಗ್ ಸಾಹಸದಿಂದ 9 ವಿಕೆಟಿಗೆ 256 ರನ್ ಮಾಡಿದ್ದ ಆಸ್ಟ್ರೇಲಿಯಾ ಎರಡನೆಯ ದಿನ 260ಕ್ಕೆ ಸರ್ವಪತನ ಕಂಡಿತು. ಸ್ಟಾರ್ಕ್ 57ರಿಂದ 61ಕ್ಕೆ ಏರಿದರು (63 ಎಸೆತ, 6 ಬೌಂಡರಿ, 3 ಸಿಕ್ಸರ್).
ವೇಗಿಗಳಿಂದ ಮೊದಲ ಆಘಾತ:
ಭಾರತಕ್ಕೆ ಆರಂಭಿಕ ಆಘಾತವಿಕ್ಕಿದವರು ವೇಗಿಗಳಾದ ಜೋಶ್ ಹೇಜಲ್‌ವುಡ್ ಮತ್ತು ಮಿಚೆಲ್ ಸ್ಟಾರ್ಕ್. 7ನೇ ಓವರಿನಲ್ಲಿ ಸ್ಕೋರ್ 26 ರನ್ ಆಗಿದ್ದಾಗ ಹೇಜಲ್‌ವುಡ್ ಆಸೀಸ್‌ಗೆ ಮೊದಲ ಬ್ರೇಕ್ ಒದಗಿಸಿದರು. 10 ರನ್ ಮಾಡಿದ್ದ ವಿಜಯ್, ಕೀಪರ್ ವೇಡ್‌ಗೆ ಕ್ಯಾಚಿತ್ತು ನಿರ್ಮಿಸಿದರು. ಇನಿಂಗ್ಸಿನ 15ನೇ ಓವರಿನಲ್ಲಿ ಸ್ಟಾರ್ಕ್ “ಅವಳಿ ಬಾಂಬ್’ ಇಟ್ಟಾಗಭಾರತ ತತ್ತರಿಸಿತು. ಚೇತೇಶ್ವರ್ ಪೂಜಾರ ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ವಿಕೆಟ್ ಕಳಚಿ ಹೋಗಿತ್ತು. ಪೂಜಾರ 6 ರನ್ ಮಾಡಿದರೆ, ಕೊಹ್ಲಿ ಅಪರೂಪದ ಸೊನ್ನೆ ಸುತ್ತಿದರು.
ಒಂದೇ ಓವರಿನಲ್ಲಿ 3 ವಿಕೆಟ್!:
ಒಂದೆಡೆ ಆರಂಭಕಾರ ಕೆ.ಎಲ್.ರಾಹುಲ್ ಕ್ರೀಸ್ ಆಕ್ರಮಿಸುವ ಸೂಚನೆ ನೀಡಿದರೂ ಇವರ ವಿಕೆಟ್ ಪತನವೇ ಪಂದ್ಯದ ತಿರುವಾಯಿತು. ರಾಹುಲ್-ರಹಾನೆ 4ನೇ ವಿಕೆಟಿಗೆ ಭರ್ತಿ 50 ರನ್ ಒಟ್ಟುಗೂಡಿಸಿ ಭರವಸೆ ಮೂಡಿಸಿದ ಹೊತ್ತಿನಲ್ಲೇ ಒ ಕೀಫ್ ಬೇಟೆ ಮೊದಲ್ಗೊಂಡಿತು. ಮೊದಲ 6 ಓವರ್‌ಗಳಲ್ಲಿ ವಿಕೆಟ್ ಪಡೆಯದಿದ್ದ ಅವರು ಒಂದೇ ಓವರಿನಲ್ಲಿ ರಾಹುಲ್, ರಹಾನೆ ಮತ್ತು ಸಹಾ ವಿಕೆಟ್ ಉಡಾಯಿಸಿ ಭಾರತಕ್ಕೆ ಬೆದರಿಕೆಯೊಡ್ಡಿದರು. ಒ ಕೀಫ್ ಅವರ ಮುಂದಿನ ಬೇಟೆ ಜಡೇಜ ಮತ್ತು ಯಾದವ್‌ರದ್ದಾಗಿತ್ತು. ಈ ನಡುವೆ ಅಶ್ವಿನ್ ವಿಕೆಟ್ ಮಾತ್ರ ಲಿಯೋನ್ ಬುಟ್ಟಿಗೆ ಬಿತ್ತು.
ಭಾರತದ ಸರದಿಯ ಟಾಪ್ ಸ್ಕೋರರ್ ಆಗಿ ಮೂಡಿಬಂದವರು ಓಪನರ್ ರಾಹುಲ್. 97 ಎಸೆತ ಎದುರಿಸಿದ ರಾಹುಲ್ 10 ಬೌಂಡರಿ, ಒಂದು ಸಿಕ್ಸರ್ ಸಿಡಿಸಿ 64 ರನ್ ಬಾರಿಸಿದರು. ಎರಡಂಕೆಯ ಗಡಿ ತಲುಪಿದ ಉಳಿದಿಬ್ಬರೆಂದರೆ ಮುರಳಿ ವಿಜಯ್ (10) ಹಾಗೂ ರಹಾನೆ (13). ಮತ್ತೆಲ್ಲರ ಗಳಿಕೆ 0, 1, 2, 4, 6….
ಕುಂಬ್ಳೆ, ಕಪಿಲ್ ದಾಖಲೆ ಮುರಿದ ಅಶ್ವಿನ್: ಈ ಪಂದ್ಯದಲ್ಲಿ ಸದ್ಯ ಒಟ್ಟು 6 ವಿಕೆಟ್ ಪಡೆಯುವ ಮೂಲಕ ಆರ್. ಅಶ್ವಿನ್ ಅವರು ಅನಿಲ್ ಕುಂಬ್ಳೆ ಮತ್ತು ಕಪಿಲ್ ದೇವ್ ಅವರ ದಾಖಲೆಯನ್ನು ಮೀರಿ ನಿಂತರು. ಒಂದು ಕ್ರಿಕೆಟ್ ಋತುವಿನಲ್ಲಿ ಅಶ್ವಿನ್ ಸದ್ಯ 67 ವಿಕೆಟ್ ಪಡೆದಂತಾಗಿದ್ದು ಈ ಮೂಲಕ ಅನಿಲ್ ಕುಂಬ್ಳೆ ಅವರ 64 ವಿಕೆಟ್‌ಗಳ ಭಾರತೀಯ ದಾಖಲೆಯನ್ನು ಮುರಿದರು. ಇದೇ ವೇಳೆ ಒಂದು ಕ್ರಿಕೆಟ್ ಋತುವಿನಲ್ಲಿ ತವರಿನಲ್ಲಿ ಗರಿಷ್ಠ ಪಡೆದ ಕಪಿಲ್ ದೇವ್ (63) ಸಾಧನೆಯನ್ನೂ ಮೀರಿದರು.
105ರನ್
ತವರಿನಲ್ಲಿ 2008ರ ಬಳಿಕ ಭಾರತದ ಕನಿಷ್ಠ ಮೊತ್ತ. 2008ರಲ್ಲಿ ದಕ್ಷಿಣ ಆμÅಕಾ ವಿರುದಟಛಿ 76 ರನ್ನಿಗೆ ಆಲೌಟಾಗಿದ್ದು ಹಿಂದಿನ ಕನಿಷ್ಠ.
0 ಸಾಧನೆ
ವಿರಾಟ್ ಕೊಹ್ಲಿ ಸತತ 104 ಅಂತಾರಾಷ್ಟ್ರೀಯ ಇನಿಂಗ್ಸ್‌ಗಳ ಬಳಿಕ ಮೊದಲ ಸೊನ್ನೆ ಸುತ್ತಿದರು.
4ನೇ ಕನಿಷ್ಠ
ಆಸ್ಟ್ರೇಲಿಯಾ ವಿರುದ್ಧ ಭಾರತ 4ನೇ ಕನಿಷ್ಠ ಮೊತ್ತ ದಾಖಲಿಸಿತು. 1947-48ರ ಬ್ರಿಸ್ಬೇನ್ ಟೆಸ್ಟ್‌ನಲ್ಲಿ 58ಕ್ಕೆ ಆಲೌಟ್ ಆದದ್ದು ಹಿಂದಿನ ಕನಿಷ್ಠ.
387ರನ್
ತವರಿನಲ್ಲಿ ಭಾರತ ಒಮ್ಮೆ ಮಾತ್ರ 4ನೇ ಇನಿಂಗ್ಸ್‌ನಲ್ಲಿ 387 ರನ್‌ಗಳಷ್ಟು ಗರಿಷ್ಠ ಮೊತ್ತವನ್ನು ಗೆದ್ದಿದೆ. 2008-09ರಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ನಲ್ಲಿ ಈ ಸಾಧನೆಯಾಗಿದೆ.
67ವಿಕೆಟ್
ಆರ್.ಅಶ್ವಿನ್ 2016-17ರಲ್ಲಿ 67 ವಿಕೆಟ್ ಕಿತ್ತರು. ಇದು ಋತುವೊಂದರಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಭಾರತೀಯ ದಾಖಲೆಯಾಗಿದೆ. 2004-05ರಲ್ಲಿ ಅನಿಲ್ ಕುಂಬ್ಳೆ 64 ವಿಕೆಟ್ ಕಿತ್ತ ದಾಖಲೆ ಪತನಗೊಂಡಿತು. 2007-08ರಲ್ಲಿ ಡೇಲ್ ಸ್ಟೇನ್ 78 ವಿಕೆಟ್ ಉರುಳಿಸಿದ್ದು ವಿಶ್ವದಾಖಲೆ.
19 ಎಸೆತಗಳಲ್ಲಿ 5 ವಿಕೆಟ್
ಉಡಾಯಿಸಿದ ಒ ಕೀಫ್!
ಒ ಕೀಫ್ ಸಾಧನೆ 35 ರನ್ನಿಗೆ 6 ವಿಕೆಟ್. ಅವರು ಟೆಸ್ಟ್ ಇನಿಂಗ್ಸ್‌ಒಂದರಲ್ಲಿ “5 ಪ್ಲಸ್’ ವಿಕೆಟ್ ಉಡಾಯಿಸಿದ ಮೊದಲ ಸಂದರ್ಭ ಇದಾಗಿದೆ. ಹಿಂದಿನ ಅತ್ಯುತ್ತಮ ಸಾಧನೆ 53ಕ್ಕೆ 3 ವಿಕೆಟ್. ಈ 6 ವಿಕೆಟ್‌ಗಳಲ್ಲಿ ಒ ಕೀಫ್ ಮೊದಲ 5 ವಿಕೆಟ್‌ಗಳನ್ನು ಕೇವಲ 19 ಎಸೆತಗಳ ಅಂತರದಲ್ಲಿ ಉರುಳಿಸಿದರು. ಇದು ಭಾರತದ ವಿರುದ್ಧ ಅತೀ ಕಡಿಮೆ ಎಸೆತಗಳಲ್ಲಿ 5 ವಿಕೆಟ್ ಉರುಳಿಸಿದ 2ನೇ ಜಂಟಿ ಸಾಧನೆಯಾಗಿದೆ. 2011ರ ಟ್ರೆಂಟ್‌ಬ್ರಿಜ್ ಟೆಸ್ಟ್‌ನಲ್ಲಿ ಇಂಗ್ಲೆಂಡಿನ ಬ್ರಾಡ್ 16 ಎಸೆತಗಳಲ್ಲಿ 5 ವಿಕೆಟ್ ಹಾರಿಸಿದ್ದು ದಾಖಲೆ.
ಮಲೇಷ್ಯಾ ಮೂಲದ
ಒ ಕೀಫ್ ಐಪಿಎಲ್ ಆಡಿದ್ದಾರೆ!
ಭಾರತದ ಸ್ಪಿನ್ ಪಿಚ್‌ನಲ್ಲಿ ಇಲ್ಲಿನ ಸ್ಪಿನ್ನರ್‌ಗಳಿಗಿಂತ ಹೆಚ್ಚು ಪರಿಣಾಮ ಕಾರಿಯಾಗಿ, ಹೆಚ್ಚು ಘಾತಕವಾಗಿ ಬೌಲಿಂಗ್ ಸಂಘಟಿಸಿ ಅರ್ಧ ಡಜನ್ ವಿಕೆಟ್ ಕಿತ್ತ ಸಾಧನೆಗೈದ ಆಸ್ಟ್ರೇಲಿಯಾದ ಎಡಗೈ ಸ್ಪಿನ್ನರ್.ಒ ಕೀಫ್ ಮೂಲತಃ ಮಲೇಷ್ಯಾದವರು. ವಯಸ್ಸು ಈಗಾಗಲೇ 33 ವರ್ಷ ಸಮೀಪಿಸಿದೆ. ಬ್ಯಾಗಿ ಗ್ರೀನ್‌ಕ್ಯಾಪ್ ಧರಿಸಿದ್ದು 2014ರಲ್ಲಿ.ಆದರೆ ಅನುಭವ ಮಾತ್ರ ಕೇವಲ 4 ಟೆಸ್ಟ್, 7 ಟಿ20 ಪಂದ್ಯಗಳಿಗೆ ಸೀಮಿತ. ಇನ್ನೂ ಏಕದಿನ ಪಂದ್ಯವಾಡಿಲ್ಲ. ಇದು ಕೇವಲ 5ನೇ ಟೆಸ್ಟ್.ಒ ಕೀಫ್ ಐಪಿಎಲ್‌ನಲ್ಲಿ ಕೊಚ್ಚಿ ಟಸ್ಕರ್ ಕೇರಳ ಪರ ಆಡಿದ್ದಾರೆ. ಆದರೆ ಭಾರತ ವಿರುದಟಛಿ, ಭಾರತದ ನೆಲದಲ್ಲಿ ಇದೇ ಮೊದಲ ಟೆಸ್ಟ್ ಅನುಭವ. ಆವರೀಗ ಮೊದಲ ಇನಿಂಗ್ಸ್‌ನಲ್ಲೇ ಕೊಹ್ಲಿ ಪಡೆಯನ್ನು ಬೆಚ್ಚಿಬೀಳಿಸಿ ಆಸ್ಟ್ರೇಲಿಯಾದ ಬೌಲಿಂಗ್ ಹೀರೋ ಆಗಿ ಮೆರೆದಿದ್ದಾರೆ.
ಸ್ಕೋರ್‌ಪಟ್ಟಿ
ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್ 260
(9 ವಿಕೆಟಿಗೆ 256 ರನ್‌ಗಳಿಂದ ಮುಂದುವರಿದಿದೆ)
ಮಿಚೆಲ್ ಸ್ಟಾರ್ಕ್ ಸಿ ಜಡೇಜ ಬಿ ಅಶ್ವಿನ್ 61
ಜೋಶ್ ಹೇಜಲ್‌ವುಡ್ ಔಟಾಗದೆ 1
ಇತರೆ: 15
ಬೌಲಿಂಗ್:
ಇಶಾಂತ್ ಶರ್ಮ 11 0 27 0
ಆರ್.ಅಶ್ವಿನ್ 34.5 10 63 3
ಜಯಂತ್ ಯಾದವ್ 13 1 58 1
ರವೀಂದ್ರ ಜಡೇಜ 24 4 74 2
ಉಮೇಶ್ ಯಾದವ್ 12 3 32 4
ಭಾರತ ಪ್ರಥಮ ಇನಿಂಗ್ಸ್ 105
ಮುರಳಿ ವಿಜಯ್ ಸಿ ವೇಡ್ ಬಿ ಹೇಜಲ್‌ವುಡ್ 10
ಕೆ.ಎಲ್.ರಾಹುಲ್ ಸಿ ವಾರ್ನರ್ ಬಿ ಓ’ಕೀಫ್ 64
ಚೇತೇಶ್ವರ್ ಪೂಜಾರ ಸಿ ವೇಡ್ ಬಿ ಸ್ಟಾರ್ಕ್ 6
ವಿರಾಟ್ ಕೊಹ್ಲಿ ಸಿ ಹ್ಯಾಂಡ್ಸ್‌ಕಾಂಬ್ ಬಿ ಸ್ಟಾರ್ಕ್ 0
ಅಜಿಂಕ್ಯ ರಹಾನೆ ಸಿ ಹ್ಯಾಂಡ್ಸ್‌ಕಾಂಬ್ ಬಿ ಓ’ಕೀಫ್ 13
ಆರ್.ಅಶ್ವಿನ್ ಸಿ ಹ್ಯಾಂಡ್ಸ್‌ಕಾಂಬ್ ಬಿ ಲಿಯೋನ್ 1
ವೃದ್ಧಿಮಾನ್ ಸಹಾ ಸಿ ಸ್ಮಿತ್ ಬಿ ಓ’ಕೀಫ್ 0
ರವೀಂದ್ರ ಜಡೇಜ ಸಿ ಸ್ಟಾರ್ಕ್ ಬಿ ಓ’ಕೀಫ್ 2
ಜಯಂತ್ ಯಾದವ್ ಸ್ಟಂಪ್ಡ್ ವೇಡ್ ಬಿ ಓ’ಕೀಫ್ 2
ಉಮೇಶ್ ಯಾದವ್ ಸಿ ಸ್ಮಿತ್ ಬಿ ಓ’ಕೀಫ್ 4
ಇಶಾಂತ್ ಶರ್ಮ ಔಟಾಗದೆ 2
ಇತರೆ: 1
1-26, 2-44, 3-44, 4-94, 5-95, 6-95, 7-95, 8-98, 9-101.
ಬೌಲಿಂಗ್:
ಮಿಚೆಲ್ ಸ್ಟಾರ್ಕ್ 9 2 38 2
ಸ್ಟೀವ್ ಓ’ಕೀಫ್ 13.1 2 35 6
ಜೋಶ್ ಹೇಜಲ್‌ವುಡ್ 7 3 11 1
ನಥನ್ ಲಿಯೋನ್ 11 2 21 1
ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್
ಡೇವಿಡ್ ವಾರ್ನರ್ ಎಲ್‌ಬಿಡಬ್ಲ್ಯು ಅಶ್ವಿನ್ 10
ಶಾನ್ ಮಾರ್ಷ್ ಎಲ್‌ಬಿ ಅಶ್ವಿನ್ 0
ಸ್ಟೀವನ್ ಸ್ಮಿತ್ ಬ್ಯಾಟಿಂಗ್ 59
ಪೀಟರ್ ಹ್ಯಾಂಡ್ಸ್‌ಕಾಂಬ್ ಸಿ ವಿಜಯ್ ಬಿ ಅಶ್ವಿನ್ 19
ಮ್ಯಾಟ್ ರೆನ್‌ಶಾ ಸಿ ಇಶಾಂತ್ ಬಿ ಜಯಂತ್ 31
ಮಿಚೆಲ್ ಮಾರ್ಷ್ ಬ್ಯಾಟಿಂಗ್ 21
ಇತರೆ: 3
143/4
ವಿಕೆಟ್ ಪತನ: 1-10, 2-23, 3-61, 4-113.
ಬೌಲಿಂಗ್:
ಆರ್.ಅಶ್ವಿನ್ 16 3 68 3
ರವೀಂದ್ರ ಜಡೇಜ 17 6 26 0
ಉಮೇಶ್ ಯಾದವ್ 5 0 13 0
ಜಯಂತ್ ಯಾದವ್ 5 0 27 1
ಇಶಾಂತ್ ಶರ್ಮ 3 0 6 0
11 ರನ್ನಿಗೆ 7 ವಿಕೆಟ್
ಟೆಸ್ಟ್‌ನಲ್ಲಿ ಭಾರತದ ಹೀನಾಯ ಪತನ!
ಇದು ಪುಣೆ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದಲ್ಲಿ ಭಾರತದ ಬ್ಯಾಟಿಂಗ್ ಕುಸಿತದ ಪರಿ. ಭಾರತ ತನ್ನ ಟೆಸ್ಟ್ ಇತಿಹಾಸದಲ್ಲೇ ಇಂಥದೊಂದು ಶೋಚನೀಯ ಕುಸಿತ ಕಂಡದ್ದಿಲ್ಲ ಎಂಬುದು ತಂಡದ ಬ್ಯಾಟಿಂಗ್ ಸಂಕಟಕ್ಕೆ ಕನ್ನಡಿ ಹಿಡಿಯುತ್ತದೆ. ಭಾರತ 94 ರನ್ ತನಕ ಮೂರೇ ವಿಕೆಟ್ ಕಳೆದುಕೊಂಡು ಬ್ಯಾಟಿಂಗ್ ಹೋರಾಟ ಜಾರಿಯಲ್ಲಿರಿಸಿತ್ತು. ಆರಂಭಕಾರ ಕೆ.ಎಲ್.ರಾಹುಲ್ ಒಂದೆಡೆ ಕ್ರೀಸ್‌ಆಕ್ರಮಿಸಿಕೊಂಡು ಆಸೀಸ್ ದಾಳಿಯನ್ನು ದಿಟ್ಟ ರೀತಿಯಲ್ಲಿ ನಿಭಾಯಿಸುತ್ತಿದ್ದರು.ಈ ಹಂತದಲ್ಲಿ ಸ್ಟೀವ್ ಓ’ಕೀಫ್ ಮೊದಲ ಬೇಟೆಯಾಡಿ ರಾಹುಲ್ ವಿಕೆಟ್ ಪಡೆದರು. ಮತ್ತೆ 11 ರನ್ ಒಟ್ಟುಗೂಡುವಷ್ಟರಲ್ಲಿ ಭಾರತ ಆಲೌಟ್! ಭಾರತ ತನ್ನ ಟೆಸ್ಟ್ ಚರಿತ್ರೆಯಲ್ಲಿ ಕೊನೆಯ 7 ವಿಕೆಟ್‌ಗಳನ್ನು ಇದಕ್ಕಿಂತ ಬೇಗ ಕಳೆದುಕೊಂಡದ್ದಿಲ್ಲ. ನ್ಯೂಜಿಲೆಂಡ್ ಎದುರಿನ 1990ರ ಕ್ರೈಸ್ಟ್‌ಚರ್ಚ್ ಪಂದ್ಯದಲ್ಲಿ 18 ರನ್ ಅಂತರದಲ್ಲಿ ಅಂತಿಮ 7 ವಿಕೆಟ್ ಉರುಳಿಸಿಕೊಂಡದ್ದು ಈವರೆಗಿನ ಕ್ಷಿಪ್ರ ಪತನ. ಇಂಗ್ಲೆಂಡ್ ವಿರುದ್ಧ 2 ಸಲ 21 ರನ್ ಆಂತರದಲ್ಲಿ 7 ವಿಕೆಟ್ ಕಳೆದುಕೊಂಡಿತ್ತು. 1979ರಲ್ಲಿನ ಲಾರ್ಡ್ಸ್ ಟೆಸ್ಟ್ ಹಾಗೂ 2011ರ ಓವಲ್ ಟೆಸ್ಟ್‌ನಲ್ಲಿ ಇದೇ ರೀತಿ ಪತನ ನಡೆದಿತ್ತು.
ತಂಡದ ಪಾಲಿಗೆ ಇದೊಂದು ಕೆಟ್ಟದಿನ. ಇದರಿಂದ ತೀವ್ರ ನಿರಾಸೆಯಾಗಿದೆ ಅನ್ನುವುದು ನಿಜ. ಕೆಲವೊಂದು ಬಾರಿ ಹೀಗೆ ಆಗುತ್ತದೆ. ಇದನ್ನೆಲ್ಲ ಮೀರಿ ಪ್ರಯತ್ನ ನಡೆಸಬೇಕಿದೆ.
– ಅನಿಲ್ ಕುಂಬ್ಳೆ,
ಭಾರತ ತಂಡದ ಕೋಚ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಕಾರು ಢಿಕ್ಕಿ; ಸ್ಕೂಟರ್ ಸವಾರನಿಗೆ ಗಾಯ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.