ಭಾರತ-ಆಸೀಸ್‌: ಬಲಿಷ್ಠ ತಂಡಗಳ ಏಕದಿನ ಪೈಪೋಟಿ

ಇಂದು ಮುಂಬಯಿಯಲ್ಲಿ ಮೊದಲ ಮುಖಾಮುಖೀ

Team Udayavani, Jan 14, 2020, 6:00 AM IST

PTI1_13_2020_000022B

ಮುಂಬಯಿ: ಈವರೆಗೆ ಏಕಪಕ್ಷೀಯವಾಗಿಯೇ ಸಾಗುತ್ತಿದ್ದ ಭಾರತದ ಕ್ರಿಕೆಟ್‌ ಸರಣಿಗಳನ್ನು ಕಂಡ ಅಭಿಮಾನಿಗಳಿಗೆ ಮುಂದಿನ ಕೆಲವು ದಿನಗಳ ಕಾಲ ಚೆಂಡು ದಾಂಡಿನ ನೈಜ ರೋಮಾಂಚನವೊಂದರ ದರ್ಶನವಾಗಲಿದೆ. ವಿಶ್ವದಲ್ಲೇ ಬಲಿಷ್ಠ ಏಕದಿನ ಪಡೆಯನ್ನು ಹೊಂದಿರುವ ಆಸ್ಟ್ರೇಲಿಯ, 3 ಪಂದ್ಯಗಳ ಏಕದಿನ ಸರಣಿ ಗಾಗಿ ಭಾರತಕ್ಕೆ ಆಗಮಿಸಿದ್ದು, ಮಂಗಳವಾರ “ವಾಂಖೇಡೆ’ಯಲ್ಲಿ ಮೊದಲ ಮುಖಾಮುಖೀ ಸಾಗಲಿದೆ.

ಅನುಮಾನವೇ ಇಲ್ಲ. ಇದು ವಿಶ್ವದ ಎರಡು ಸಶಕ್ತ ತಂಡಗಳ ನಡುವಿನ ಏಕದಿನ ಸಮರ. ಹೀಗಾಗಿ ನಿಕಟ ಪೈಪೋಟಿ ಖಂಡಿತ. ಭಾರತ ಯಾವತ್ತೂ ತವರಿನಲ್ಲಿ ಮೇಲುಗೈ ಸಾಧಿಸುವ ಪಡೆ. ಆದರೆ ಆಸ್ಟ್ರೇಲಿಯ ವಿರುದ್ಧ ಇದೇ ಮಾತನ್ನು ಹೇಳುವಂತಿಲ್ಲ. 2018-19ರಲ್ಲಿ 5 ಪಂದ್ಯಗಳ ಸರಣಿ ಯನ್ನಾಡಲು ಬಂದಿದ್ದ ಕಾಂಗರೂ ಪಡೆ, 0-2 ಹಿನ್ನಡೆ ಬಳಿಕ 3-2 ಅಂತರದಿಂದ ಸರಣಿ ವಶಪಡಿಸಿಕೊಂಡ ನಿದರ್ಶನ ಹಸುರಾಗಿಯೇ ಇದೆ. ಅನಂತರ 2019ರ ವಿಶ್ವಕಪ್‌ ಲೀಗ್‌ ಹಂತದಲ್ಲಿ ಭಾರತ ಸೇಡು ತೀರಿಸಿಕೊಂಡಿತೆಂಬುದು ಬೇರೆ ಮಾತು.

ಪೂರ್ಣ ಸಾಮರ್ಥ್ಯದ ತಂಡ
ಅನುಭವಿ ಓಪನಿಂಗ್‌ ಜೋಡಿ, ವೈವಿಧ್ಯಮಯ ಹಾಗೂ ಹೊಸತನದಿಂದ ಕೂಡಿದ ಮಧ್ಯಮ ಕ್ರಮಾಂಕ, ಘಾತಕ ವೇಗದ ಬೌಲಿಂಗ್‌ ಪಡೆ… ಇದು ಆಸ್ಟ್ರೇಲಿಯ ತಂಡದ ಹೆಚ್ಚುಗಾರಿಕೆ. ಭಾರತ ಕೂಡ ಆಸ್ಟ್ರೇಲಿಯಕ್ಕೆ ಸರಿಸಾಟಿಯಾಗಬಲ್ಲ ತಂಡ. ಆದರೆ ಇಲ್ಲಿ ಚಾಂಪಿಯನ್ನರ ಆಟವಾಡಿದರಷ್ಟೇ ಕಾಂಗರೂ ಪಡೆಯನ್ನು ಉರುಳಿಸಲು ಸಾಧ್ಯ ಎಂಬುದನ್ನು ಮರೆಯುವಂತಿಲ್ಲ. ಕೆಲವರು ಇದೇ ಮೊದಲ ಸಲ ಆಸೀಸ್‌ ವಿರುದ್ಧ ಆಡುತ್ತಿದ್ದಾರೆ. ಹಾಗೆಯೇ ಕಾಂಗರೂ ನಾಡಿನ ಕೆಲವು ಕ್ರಿಕೆಟಿಗರು ಭಾರತದಲ್ಲಿ ಆಡುತ್ತಿರುವುದು ಕೂಡ ಇದೇ ಮೊದಲು.

ರೋಹಿತ್‌ ಜತೆಗಾರ ಯಾರು?
ಭಾರತದ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಶಕ್ತಿಶಾಲಿ ಯಾಗಿದೆ. ರೋಹಿತ್‌, ರಾಹುಲ್‌, ಧವನ್‌, ಕೊಹ್ಲಿ ಉತ್ತಮ ಫಾರ್ಮ್ನಲ್ಲಿದ್ದಾರೆ. ಆದರೆ ಮಧ್ಯಮ ಸರದಿ ಬಗ್ಗೆ ಇದೇ ಮಾತನ್ನು ಹೇಳುವಂತಿಲ್ಲ. ಅಯ್ಯರ್‌, ಪಂತ್‌, ಜಾಧವ್‌ ಒತ್ತಡವನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದು ನಿರ್ಣಾಯಕ. ರೋಹಿತ್‌ ಜತೆ ಇನ್ನಿಂಗ್ಸ್‌ ಆರಂಭಿಸುವ ಅವಕಾಶ ಯಾರದ್ದಾಗಲಿದೆ ಎಂಬುದಷ್ಟೇ ತಂಡದ ಆಯ್ಕೆ ಮುಂದಿರುವ ಪ್ರಶ್ನೆ. ಇತ್ತೀಚಿನ ಫಾರ್ಮ್ ಗಮನಿಸಿದರೆ ಈ ಸ್ಥಾನ ರಾಹುಲ್‌ ಪಾಲಾಗುವುದು ಬಹುತೇಕ ಖಚಿತ. ಆದರೆ ವಿಶ್ವಕಪ್‌ನಲ್ಲಿ ಕಾಂಗರೂ ಪಡೆ ಎದುರು ಶತಕ ಬಾರಿಸಿದ ಧವನ್‌ ಅವರನ್ನು ಕಡೆಗಣಿಸುವಂತಿಲ್ಲ.

ಸ್ಟಾರ್ಕ್‌, ಕಮಿನ್ಸ್‌, ರಿಚರ್ಡ್‌ಸನ್‌ ಅವರನ್ನೊಳ ಗೊಂಡ ಆಸ್ಟ್ರೇಲಿಯದ ವೇಗದ ಬೌಲಿಂಗ್‌ ಪಡೆ ಅತ್ಯಂತ ಅಪಾಯಕಾರಿ. ಇವರನ್ನು ನಿಭಾಯಿಸಿ ನಿಂತರಷ್ಟೇ ಭಾರತದ ಸ್ಕೋರ್‌ಬೋರ್ಡ್‌ನಲ್ಲಿ ದೊಡ್ಡ ಮೊತ್ತ ಕಾಣಬಹುದು.

ಬೌಲಿಂಗ್‌ ಮ್ಯಾಜಿಕ್‌ ನಡೆದೀತೇ?
ಭಾರತದ ವೇಗದ ಬೌಲಿಂಗ್‌ ವಿಭಾಗ ಕೂಡ ಇತ್ತೀಚಿನ ದಿನಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡುತ್ತ ಬಂದಿದೆ. ಬುಮ್ರಾ, ಶಮಿ, ಸೈನಿ, ಠಾಕೂರ್‌ ನಿರಂತರವಾಗಿ ವಿಕೆಟ್‌ ಬೇಟೆಯಾಡುತ್ತ ಟೀಮ್‌ ಇಂಡಿಯಾದ ಮೇಲುಗೈಗೆ ಕಾರಣರಾಗುತ್ತಿದ್ದಾರೆ. ಆದರೆ ಆಸ್ಟ್ರೇಲಿಯದ ರನ್‌ ಯಂತ್ರಗಳಿಗೆ ಬೌಲಿಂಗ್‌ ನಡೆಸುವ ಸವಾಲೇ ವಿಭಿನ್ನ. ಕಾಂಗರೂಗಳದ್ದು “ಅಟ್ಯಾಕಿಂಗ್‌ ಗೇಮ್‌’. ಎದುರಾಳಿ ತಂಡದ ಅಪಾಯಕಾರಿ ಬೌಲರ್‌ನನ್ನೇ ಗುರಿಯಾಗಿಸಿ, ಆತನನ್ನು ನರ್ವಸ್‌ ಮಾಡುವ ತಂತ್ರಗಾರಿಕೆಯಲ್ಲಿ ಆಸೀಸ್‌ ಎತ್ತಿದ ಕೈ. ಇಲ್ಲಿ ಎಚ್ಚರಿಕೆ ಅಗತ್ಯ.

ಸ್ಪಿನ್‌ ವಿಭಾಗದಲ್ಲಿ ಕುಲದೀಪ್‌, ಚಹಲ್‌ ಮತ್ತು ಜಡೇಜ ಇದ್ದಾರೆ. ಭಾರತದ ಟ್ರ್ಯಾಕ್‌ಗಳು ಹೆಚ್ಚು ತಿರುವಿನಿಂದ ಕೂಡಿರುವ ಕಾರಣ ಇವರಿಂದಲೂ ಮ್ಯಾಜಿಕ್‌ ನಿರೀಕ್ಷಿಸಬಹುದು.

ಲಬುಶೇನ್‌ ಎಂಬ ರನ್‌ಯಂತ್ರ!
ವಾರ್ನರ್‌-ಫಿಂಚ್‌ ಆರಂಭಿಕ ಜೋಡಿ ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿ. ಇವರಿಬ್ಬರೂ ಒಟ್ಟಿಗೇ ವಿಫ‌ಲರಾಗುವುದು ಅಪರೂಪ. ಯುವ ಆಟಗಾರ ಮಾರ್ನಸ್‌ ಲಬುಶೇನ್‌ ಬ್ಯಾಟ್‌ ಬೀಸಿ ದಲ್ಲೆಲ್ಲ ದಾಖಲೆಗಳೇ ಉದುರುತ್ತಿವೆ. ಅವರು ಈಗಾಗಲೇ ವಿಶ್ವದ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಯಾದಿಯನ್ನು ಅಲಂಕರಿಸಿ ಆಗಿದೆ. ಭಾರತದಲ್ಲಿ ಲಬುಶೇನ್‌ ಬ್ಯಾಟ್‌ ಬೀಸುವುದನ್ನು ಕಾಣಲು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಹಾಗೆಯೇ ಇವರಿಗೆ ಬ್ರೇಕ್‌ ಹಾಕಲು ಭಾರತದ ಬೌಲರ್ ಎಷ್ಟರ ಮಟ್ಟಿಗೆ ಯಶಸ್ವಿಯಾದಾರು ಎಂಬುದು ಕೂಡ ಕೌತುಕದ ಸಂಗತಿ.

ಸ್ಮಿತ್‌ ಮತ್ತೋರ್ವ ಬ್ಯಾಟಿಂಗ್‌ ದೈತ್ಯ. ಪೀಟರ್‌ ಹ್ಯಾಂಡ್ಸ್‌ಕಾಂಬ್‌, ಅಲೆಕ್ಸ್‌ ಕ್ಯಾರಿ, ಡಿ’ಆರ್ಸಿ ಶಾರ್ಟ್‌ ಕೂಡ ಉತ್ತಮ ಲಯದಲ್ಲಿದ್ದಾರೆ.

ಪಾಂಟಿಂಗ್‌ ಶತಕ ದಾಖಲೆ ಮುರಿಯುವತ್ತ ಕೊಹ್ಲಿ
ವಿರಾಟ್‌ ಕೊಹ್ಲಿ ಇನ್ನೊಂದು ಶತಕ ಬಾರಿಸಿದರೆ ರಿಕಿ ಪಾಂಟಿಂಗ್‌ ಅವರ ವಿಶಿಷ್ಟ ವಿಶ್ವದಾಖಲೆಯೊಂದನ್ನು ಮುರಿಯಲಿದ್ದಾರೆ. ಇಬ್ಬರೂ ನಾಯಕರಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ 41 ಶತಕ ಬಾರಿಸಿದ ಜಂಟಿ ದಾಖಲೆ ಹೊಂದಿ ದ್ದಾರೆ. ಇದನ್ನು ಮೀರಿ ನಿಲ್ಲುವ ಅವಕಾಶ ಕೊಹ್ಲಿ ಮುಂದಿದೆ. ಇಲ್ಲಿ ಇನ್ನಿಂಗ್ಸ್‌ ಲೆಕ್ಕಾಚಾರದಲ್ಲಿ ಕೊಹ್ಲಿಯೇ ಮುಂದಿದ್ದಾರೆ. 41 ಶತಕಗಳಿಗೆ ಅವರು ತೆಗೆದುಕೊಂಡದ್ದು 196 ಇನ್ನಿಂಗ್ಸ್‌ ಮಾತ್ರ. ಆದರೆ ಪಾಂಟಿಂಗ್‌ ಇದಕ್ಕಾಗಿ 376 ಇನ್ನಿಂಗ್ಸ್‌ ಆಡಿದ್ದಾರೆ.

ವಾಂಖೇಡೆಯಲ್ಲಿ 4ನೇ ಮುಖಾಮುಖೀ
ಇದು ಮುಂಬಯಿಯ “ವಾಂಖೇಡೆ ಸ್ಟೇಡಿಯಂ’ನಲ್ಲಿ ಭಾರತ-ಆಸ್ಟ್ರೇಲಿಯ ನಡುವೆ ನಡೆಯಲಿರುವ 4ನೇ ಏಕದಿನ ಮುಖಾಮುಖೀ. ಈವರೆಗೆ ಆಸ್ಟ್ರೇಲಿಯ ಎರಡರಲ್ಲಿ, ಭಾರತ ಒಂದರಲ್ಲಿ ಜಯ ಸಾಧಿಸಿದೆ.

ಇಲ್ಲಿ ಭಾರತ-ಆಸ್ಟ್ರೇಲಿಯ ಮೊದಲ ಸಲ ಎದುರಾದದ್ದು 1996 “ವಿಲ್ಸ್‌ ವಿಶ್ವಕಪ್‌’ ಲೀಗ್‌ ಹಂತದಲ್ಲಿ. ಮಾರ್ಕ್‌ ಟೇಲರ್‌ ನಾಯಕತ್ವದ ಆಸೀಸ್‌ ಇದನ್ನು 16 ರನ್‌ ಅಂತರದಿಂದ ಜಯಿಸಿತ್ತು. ಮಾರ್ಕ್‌ ವೋ ಅವರ ಶತಕ ಸಾಹಸದಿಂದ (126) ಆಸ್ಟ್ರೇಲಿಯ ಸರಿಯಾಗಿ 50 ಓವರ್‌ಗಳಲ್ಲಿ 258ಕ್ಕೆ ಆಲೌಟಾದರೆ, ಭಾರತ 48 ಓವರ್‌ಗಳಲ್ಲಿ 242ಕ್ಕೆ ಕುಸಿಯಿತು. ತೆಂಡುಲ್ಕರ್‌ (90), ಮಾಂಜ್ರೆàಕರ್‌ (62) ಉತ್ತಮ ಹೋರಾಟ ಸಂಘಟಿಸಿದರೂ ಅಜರುದ್ದೀನ್‌ ಪಡೆ ಗುರಿ ಮುಟ್ಟುವಲ್ಲಿ ವಿಫ‌ಲವಾಯಿತು. ಡೆಮೀನ್‌ ಫ್ಲೆಮಿಂಗ್‌ 5 ವಿಕೆಟ್‌ ಹಾರಿಸಿದರು.

ಆಸೀಸ್‌ಗೆ ಮತ್ತೂಂದು ಜಯ
ಇಲ್ಲಿ ಇತ್ತಂಡಗಳ ದ್ವಿತೀಯ ಮುಖಾಮುಖೀ ಸಾಗಿದ್ದು 2003ರ “ಟಿವಿಎಸ್‌ ಕಪ್‌’ ಸರಣಿಯಲ್ಲಿ. ಇದನ್ನು ಆಸ್ಟ್ರೇಲಿಯ 77 ರನ್ನುಗಳಿಂದ ಗೆದ್ದಿತು. ಆಸೀಸ್‌ ಸರದಿಯಲ್ಲಿ ಶತಕ ಸಿಡಿಸುವ ಸರದಿ ಡೆಮೀನ್‌ ಮಾರ್ಟಿನ್‌ ಅವರದಾಗಿತ್ತು (100). ತಂಡದ ಮೊತ್ತ 8ಕ್ಕೆ 286 ರನ್‌ ತನಕ ಬೆಳೆಯಿತು. ಚೇಸಿಂಗ್‌ ವೇಳೆ ತೆಂಡುಲ್ಕರ್‌ (68) ಮತ್ತು ನಾಯಕ ದ್ರಾವಿಡ್‌ (59) ಮಾತ್ರ ಗಮನ ಸೆಳೆದರು.

ಮೊದಲ ಗೆಲುವಿನ ಸಡಗರ
ಆಸ್ಟ್ರೇಲಿಯ ವಿರುದ್ಧ ವಾಂಖೇಡೆಯಲ್ಲಿ ಭಾರತದ ಏಕೈಕ ಗೆಲುವು ದಾಖಲಾದದ್ದು 2007ರಲ್ಲಿ. ಅಂತರ 2 ವಿಕೆಟ್‌. ಅದು 7 ಪಂದ್ಯಗಳ ದ್ವಿಪಕ್ಷೀಯ ಸರಣಿಯ ಕೊನೆಯ ಪಂದ್ಯವಾಗಿತ್ತು. ಭಾರತದ ಸರಣಿ ಸೋಲಿನ ಅಂತರ 2-4ಕ್ಕೆ ಇಳಿಯಿತು. ಮುರಳಿ ಕಾರ್ತಿಕ್‌ 6 ವಿಕೆಟ್‌ ಉಡಾಯಿಸಿ ಆಸ್ಟ್ರೇಲಿಯವನ್ನು 193ಕ್ಕೆ ನಿಯಂತ್ರಿಸಿದರು. ಭಾರತವೂ ಕುಸಿತ ಅನುಭವಿಸಿ 64ಕ್ಕೆ 6 ವಿಕೆಟ್‌ ಕಳೆದುಕೊಂಡಿತು. ಆದರೆ ನಾಯಕ ಧೋನಿ (47), ಜಹೀರ್‌ ಖಾನ್‌ (ಅಜೇಯ 31), ಮುರಳಿ ಕಾರ್ತಿಕ್‌ (ಅಜೇಯ 21) ಸಾಹಸದಿಂದ 8ಕ್ಕೆ 195 ರನ್‌ ಮಾಡಿತು.

ಭಾರತ
ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮ, ಧವನ್‌, ಕೆ.ಎಲ್‌. ರಾಹುಲ್‌, ಶ್ರೇಯಸ್‌ ಅಯ್ಯರ್‌, ಮನೀಷ್‌ ಪಾಂಡೆ, ಕೇದಾರ್‌ ಜಾಧವ್‌, ರಿಷಭ್‌ ಪಂತ್‌,
ಶಿವಂ ದುಬೆ, ರವೀಂದ್ರ ಜಡೇಜ, ಯಜುವೇಂದ್ರ ಚಹಲ್‌, ಕುಲದೀಪ್‌ ಯಾದವ್‌, ಸೈನಿ, ಬುಮ್ರಾ, ಶಾದೂìಲ್‌ ಠಾಕೂರ್‌, ಶಮಿ.

ಆಸ್ಟ್ರೇಲಿಯ
ಆರನ್‌ ಫಿಂಚ್‌ (ನಾಯಕ), ಡೇವಿಡ್‌ ವಾರ್ನರ್‌, ಡಿ’ಆರ್ಸಿ ಶಾರ್ಟ್‌, ಮಾರ್ನಸ್‌ ಲಬುಶೇನ್‌, ಸ್ಟೀವ್‌ ಸ್ಮಿತ್‌, ಪೀಟರ್‌ ಹ್ಯಾಂಡ್ಸ್‌ಕಾಂಬ್‌, ಅಲೆಕ್ಸ್‌ ಕ್ಯಾರಿ, ಪ್ಯಾಟ್ರಿಕ್‌ ಕಮಿನ್ಸ್‌, ಆ್ಯಶrನ್‌ ಅಗರ್‌, ಜೋಶ್‌ ಹ್ಯಾಝಲ್‌ವುಡ್‌, ಕೇನ್‌ ರಿಚರ್ಡ್‌ಸನ್‌, ಮಿಚೆಲ್‌ ಸ್ಟಾರ್ಕ್‌, ಆ್ಯಶrನ್‌ ಟರ್ನರ್‌, ಆ್ಯಡಂ ಝಂಪ.

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-prathvi

Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

1-crick

Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ

1-eqeeqwe

Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ

KLR

Australia vs India: ಬ್ರಿಸ್ಬೇನ್‌ ಟೆಸ್ಟ್‌ನಲ್ಲಿ ಫಾಲೋಆನ್‌ ತೂಗುಗತ್ತಿಯಿಂದ ಪಾರಾದ ಭಾರತ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.