ಬೆಂಗಳೂರಿನಲ್ಲಿ ಆಸೀಸ್‌ ಜಯಭೇರಿ


Team Udayavani, Sep 29, 2017, 6:05 AM IST

PTI9_28_2017_000171A.jpg

ಬೆಂಗಳೂರು: ಪ್ರವಾಸಿ ಆಸ್ಟ್ರೇಲಿಯ ತಂಡವು ಭಾರತ ತಂಡದೆದುರು ಗುರುವಾರ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ತಿರುಗೇಟು ನೀಡಲು ಯಶಸ್ವಿಯಾಗಿದೆ. ಬೃಹತ್‌ ಮೊತ್ತದ ಈ ಸೆಣಸಾಟದಲ್ಲಿ ಆಸ್ಟ್ರೇಲಿಯ 21 ರನ್ನುಗಳಿಂದ ಜಯಭೇರಿ ಬಾರಿಸಿದೆ. 

ಈ ಸೋಲಿನ ಮೂಲಕ ಭಾರತದ ಸತತ 10 ಗೆಲುವಿನ ನಿರೀಕ್ಷೆಗೆ ಪ್ರಬಲ ಹೊಡೆತ ಬಿದ್ದಿದೆ. ಭಾರತ ಸತತ 9 ಬಾರಿ ಗೆಲುವನ್ನು ಎರಡು ಬಾರಿ ದಾಖಲಿಸಿತ್ತು. 

ಆರಂಭಿಕರಾದ ಫಿಂಚ್‌ ಮತ್ತು ವಾರ್ನರ್‌ ಅವರ ಭರ್ಜರಿ ಆಟ ದಿಂದಾಗಿ ಆಸ್ಟ್ರೇಲಿಯ ತಂಡವು 5 ವಿಕೆಟಿಗೆ 334 ರನ್ನುಗಳ ಬೃಹತ್‌ ಮೊತ್ತ ಪೇರಿಸಿದರೆ ಭಾರತ ಕೊನೆಕ್ಷಣದವರೆಗೂ ಪ್ರತಿ ಹೋರಾಟ ನಡೆಸಲು ಪ್ರಯತ್ನಿಸಿದರೂ ಆಗಾಗ್ಗೆ ವಿಕೆಟ್‌ ಉರುಳಿ ಒತ್ತಡಕ್ಕೆ ಸಿಲುಕಿದ್ದರಿಂದ ಅಂತಿಮವಾಗಿ 8 ವಿಕೆಟಿಗೆ 313 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.
 
ಆರಂಭಿಕರಾದ ರಹಾನೆ ಮತ್ತು ರೋಹಿತ್‌ ಶರ್ಮ ಮೊದಲ ವಿಕೆಟಿಗೆ ಶತಕದ ಜತೆಯಾಟ ನಡೆಸಿದ್ದರೂ ಈ ಹಿಂದಿನ ಪಂದ್ಯದಂತೆ ಬಿರುಸಿನ ಆಟವಾಡಿಲ್ಲ. 18.2 ಓವರ್‌ಗಳಲ್ಲಿ ಅವರಿಬ್ಬರು 106 ರನ್‌ ಪೇರಿಸಿ ಬೇರ್ಪಟ್ಟರು. 53 ರನ್‌ ಗಳಿಸಿದ ರಹಾನೆ ಮೊದಲಿಗರಾಗಿ ಔಟಾದರೆ ರೋಹಿತ್‌ ಅವರು ನಾಯಕ ಸ್ಮಿತ್‌ ಮತ್ತು ಹೆಡ್‌ ಅವರ ಅದ್ಭುತ ಫೀಲ್ಡಿಂಗ್‌ನಿಂದಾಗಿ ರನೌಟ್‌ ಆದರು. ಕೊಹ್ಲಿ ಇಲ್ಲಿ ಮತ್ತೆ ಮಿಂಚಲು ವಿಫ‌ಲರಾದರೆ ಹಾರ್ದಿಕ್‌ ಪಾಂಡ್ಯ 40 ಎಸೆತಗಳಲ್ಲಿ 41 ರನ್‌ ಗಳಿಸಿದರು. ಕೇದಾರ್‌ ಜಾಧವ್‌  ಮತ್ತು ಮನೀಷ್‌ ಪಾಂಡೆ ಉತ್ತಮವಾಗಿ ಆಡಿದರೂ ನಿರೀಕ್ಷಿತ ರನ್‌ವೇಗದಲ್ಲಿ ಆಡಲು ಅಸಮರ್ಥರಾದರು. ಕೊನೆಯ ಹಂತದಲ್ಲಿ ಒತ್ತಡಕ್ಕೆ ಒಳಗಾದ ಭಾರತ ಗೆಲುವಿನಿಂದ ದೂರವೇ ಉಳಿಯಿತು.

ಈ ಗೆಲುವಿನಿಂದ ಆಸ್ಟ್ರೇಲಿಯ ಸೋಲಿನ ಅಂತರವನ್ನು 3-1ಕ್ಕೆ ಇಳಿಸಿತು. ಏಕದಿನ ಸರಣಿ ಯನ್ನು ಈಗಾಗಲೇ ಭಾರತ ಗೆದ್ದುಕೊಂಡಿದೆ.

ಆರಂಭಿಕ ವಿಕೆಟಿಗೆ ದ್ವಿಶತಕ
100ನೇ ಪಂದ್ಯ ಆಡಲಿಳಿದ ಡೇವಿಡ್‌ ವಾರ್ನರ್‌ ಮತ್ತು ಕಳೆದ ಪಂದ್ಯದಲ್ಲಿ ಶತಕ ಬಾರಿಸಿ ಮೆರೆದಿದ್ದ ಆರನ್‌ ಫಿಂಚ್‌ ಭಾರತದ ಬೌಲರ್‌ಗಳ ಪಾಲಿಗೆ ಸಿಂಹಸ್ವಪ್ನರಾಗಿ ಗೋಚರಿಸಿ ದರು. ಭರ್ತಿ 35 ಓವರ್‌ಗಳ ಜತೆಯಾಟ ನಿಭಾಯಿಸಿದ ಇವರು ಮೊದಲ ವಿಕೆಟಿಗೆ 231 ರನ್‌ ಪೇರಿಸಿದರು. ಬಳಿಕ ಇದೇ ಮೊತ್ತದಲ್ಲಿ ಪೆವಿಲಿಯನ್‌ ಸೇರಿಕೊಂಡರು.

ಈ ವೈಭವದ ಜತೆಯಾಟದ ವೇಳೆ ವಾರ್ನರ್‌ 124 ರನ್‌ ಬಾರಿಸಿದರೆ, ಫಿಂಚ್‌ ಕೇವಲ 6 ರನ್ನುಗಳಿಂದ ಸತತ 2ನೇ ಶತಕವನ್ನು ತಪ್ಪಿಸಿಕೊಂಡರು. ಎಂದಿನ ಸ್ಫೋಟಕ ಆಟಕ್ಕೆ ಮುಂದಾದ ವಾರ್ನರ್‌ 103 ಎಸೆತಗಳಿಂದ ತಮ್ಮ 14ನೇ ಶತಕ ಪೂರ್ತಿಗೊಳಿಸಿದರು. 124 ರನ್ನಿಗೆ ಒಟ್ಟು 119 ಎಸೆತ ಎದುರಿಸಿದರು. ಸಿಡಿಸಿದ್ದು 12 ಬೌಂಡರಿ ಮತ್ತು 4 ಸಿಕ್ಸರ್‌. ವಾರ್ನರ್‌ 100ನೇ ಏಕದಿನದಲ್ಲಿ ಶತಕ ಬಾರಿಸಿದ ವಿಶ್ವದ 8ನೇ ಆಟಗಾರನಾದರೆ, ಆಸ್ಟ್ರೇಲಿಯದ ಮೊದಲ ಕ್ರಿಕೆಟಿಗನೆಂಬುದು ವಿಶೇಷ. ಜಾಧವ್‌ ಎಸೆತದಲ್ಲಿ “ಲಾಫೆrಡ್‌ ಶಾಟ್‌’ ಹೊಡೆಯಲು ಹೋದ ವಾರ್ನರ್‌, ಪಟೇಲ್‌ ಕೈಗೆ ಕ್ಯಾಚಿತ್ತರು.

ಇಂದೋರ್‌ನಲ್ಲಿ 124 ರನ್‌ ಬಾರಿಸಿದ ಫಿಂಚ್‌, ಇಲ್ಲಿ ಶತಕದತ್ತ ದಾಪುಗಾಲಿಕ್ಕುತ್ತಿದ್ದಾಗ ಉಮೇಶ್‌ ಯಾದವ್‌ ಮೋಡಿಗೆ ಸಿಲುಕಿದರು. 96 ಎಸೆತಗಳಿಂದ 94 ರನ್‌ ಮಾಡಿ ನಿರಾಶರಾಗಿ ನಿರ್ಗಮಿಸಿದರು. ಅವರ ಈ ಬ್ಯಾಟಿಂಗ್‌ ಅಬ್ಬರದ ವೇಳೆ 10 ಬೌಂಡರಿ, 3 ಸಿಕ್ಸರ್‌ ಸಿಡಿಯಲ್ಪಟ್ಟಿತು.”ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ನಡೆದ ಏಕದಿನ ಪಂದ್ಯವೊಂದರಲ್ಲಿ ದ್ವಿಶತಕದ ಜತೆಯಾಟ ದಾಖಲಾದದ್ದು ಇದೇ ಮೊದಲು. ಇದಕ್ಕೂ ಮುನ್ನ 2011ರ ವಿಶ್ವಕಪ್‌ನಲ್ಲಿ ಕೆನಡಾ ವಿರುದ್ಧ ಆಸ್ಟ್ರೇಲಿಯದ ಶೇನ್‌ ವಾಟ್ಸನ್‌-ಬ್ರಾಡ್‌ ಹ್ಯಾಡಿನ್‌ ಮೊದಲ ವಿಕೆಟಿಗೆ 183 ರನ್‌ ಪೇರಿಸಿದ್ದು ದಾಖಲೆಯಾಗಿತ್ತು.

ಕಾಂಗರೂ ಓಟಕ್ಕೆ ಬ್ರೇಕ್‌
ವಾರ್ನರ್‌-ಫಿಂಚ್‌ ಒಟ್ಟೊಟ್ಟಿಗೆ ಔಟಾದ ಕೂಡಲೇ ಆಸ್ಟ್ರೇಲಿಯದ ಓಟಕ್ಕೆ ಬ್ರೇಕ್‌ ಬಿತ್ತು. 370-375ರ ತನಕ ಸಾಗಬಹುದೆಂದು ಭಾವಿಸಿದ್ದ ಕಾಂಗರೂ ಸ್ಕೋರ್‌ 334ಕ್ಕೆ ನಿಂತಿತು. ಈ ಸರಣಿಯಲ್ಲಿ ಸತತ 2 ಅರ್ಧ ಶತಕ ಹೊಡೆದಿದ್ದ ನಾಯಕ ಸ್ಟೀವ್‌ ಸ್ಮಿತ್‌ ಕೇವಲ 3 ರನ್‌ ಮಾಡಿ 3ನೇ ವಿಕೆಟ್‌ ರೂಪದಲ್ಲಿ ಪೆವಿಲಿಯನ್‌ ಸೇರಿಕೊಂಡರು. ಈ ವಿಕೆಟ್‌ ಉಮೇಶ್‌ ಯಾದವ್‌ ಪಾಲಾಯಿತು. ಇದು ಯಾದವ್‌ ಅವರ 100ನೇ ವಿಕೆಟ್‌ ಆಗಿತ್ತು.
 
4ನೇ ವಿಕೆಟಿಗೆ ಜತೆಗೂಡಿದ ಟ್ರ್ಯಾವಿಸ್‌ ಹೆಡ್‌ ಮತ್ತು ಪೀಟರ್‌ ಹ್ಯಾಂಡ್ಸ್‌ಕಾಂಬ್‌ 63 ರನ್‌ ಪೇರಿಸಿದರು. ಹೆಡ್‌ 38 ಎಸೆತಗಳಿಂದ 29 ರನ್‌ ಹೊಡೆದರೆ (1 ಬೌಂಡರಿ, 1 ಸಿಕ್ಸರ್‌), ಹ್ಯಾಂಡ್ಸ್‌ಕಾಂಬ್‌ 30 ಎಸೆತ ಎದುರಿಸಿ 43 ರನ್‌ ಮಾಡಿದರು (3 ಬೌಂಡರಿ, 1 ಸಿಕ್ಸರ್‌). ಸ್ಟೊಯಿನಿಸ್‌ಗೆ ಹೆಚ್ಚಿನ ಬ್ಯಾಟಿಂಗ್‌ ಅವಕಾಶ ಸಿಗಲಿಲ್ಲ. 

ಭಾರತದ ಪರ ವಿಕೆಟ್‌ ಕಿತ್ತವರು ಇಬ್ಬರು ಮಾತ್ರ. ಉಮೇಶ್‌ ಯಾದವ್‌ 4 ವಿಕೆಟ್‌ ಕಿತ್ತರೆ, ಉಳಿದೊಂದು ವಿಕೆಟ್‌ ಕೇದಾರ್‌ ಜಾಧವ್‌ ಪಾಲಾಯಿತು.

ಸ್ಕೋರ್‌ಪಟ್ಟಿ
ಆಸ್ಟ್ರೇಲಿಯ

ಆರನ್‌ ಫಿಂಚ್‌    ಸಿ ಪಾಂಡ್ಯ ಬಿ ಯಾದವ್‌    94
ಡೇವಿಡ್‌ ವಾರ್ನರ್‌    ಸಿ ಪಟೇಲ್‌ ಬಿ ಜಾಧವ್‌    124
ಟ್ರ್ಯಾವಿಸ್‌ ಹೆಡ್‌    ಸಿ ರಹಾನೆ ಬಿ ಯಾದವ್‌    29
ಸ್ಟೀವ್‌ ಸ್ಮಿತ್‌    ಸಿ ಕೊಹ್ಲಿ ಬಿ ಯಾದವ್‌    3
ಪೀಟರ್‌ ಹ್ಯಾಂಡ್ಸ್‌ಕಾಂಬ್‌    ಬಿ ಯಾದವ್‌    43
ಮಾರ್ಕಸ್‌ ಸ್ಟೊಯಿನಿಸ್‌    ಔಟಾಗದೆ    15
ಮ್ಯಾಥ್ಯೂ ವೇಡ್‌    ಔಟಾಗದೆ    3
ಇತರ        23
ಒಟ್ಟು  (50 ಓವರ್‌ಗಳಲ್ಲಿ 5 ವಿಕೆಟಿಗೆ)    334
ವಿಕೆಟ್‌ ಪತನ: 1-231, 2-231, 3-236, 4-299, 5-319.
ಬೌಲಿಂಗ್‌:
ಮೊಹಮ್ಮದ್‌ ಶಮಿ        10-1-62-0
ಉಮೇಶ್‌ ಯಾದವ್‌        10-0-71-4
ಅಕ್ಷರ್‌ ಪಟೇಲ್‌        10-0-66-0
ಹಾರ್ದಿಕ್‌ ಪಾಂಡ್ಯ        5-0-32-0
ಯಜುವೇಂದ್ರ ಚಾಹಲ್‌        8-0-54-0
ಕೇದಾರ್‌ ಜಾಧವ್‌        7-0-38-1

ಭಾರತ
ಅಜಿಂಕ್ಯ ರಹಾನೆ     ಸಿ ಫಿಂಚ್‌ ಬಿ ರಿಚಡ್ಸìನ್‌    53
ರೋಹಿತ್‌ ಶರ್ಮ    ರನೌಟ್‌    65
ವಿರಾಟ್‌ ಕೊಹ್ಲಿ    ಬಿ ನೈಲ್‌    21
ಹಾರ್ದಿಕ್‌ ಪಾಂಡ್ಯ    ಸಿ ವಾರ್ನರ್‌ ಬಿ ಝಂಪ    41
ಕೇದಾರ್‌ ಜಾಧವ್‌    ಸಿ ಫಿಂಚ್‌ ಬಿ ರಿಚಡ್ಸìನ್‌    67
ಮನೀಷ್‌ ಪಾಂಡೆ    ಬಿ ಕಮಿನ್ಸ್‌    33
ಎಂಎಸ್‌ ಧೋನಿ    ಬಿ ರಿಚಡ್ಸìನ್‌    13
ಅಕ್ಷರ್‌ ಪಟೇಲ್‌    ಸಿ ಬದಲಿಗ ಬಿ ನೈಲ್‌    5
ಮೊಹಮ್ಮದ್‌ ಶಮಿ    ಔಟಾಗದೆ    6
ಉಮೇಶ್‌ ಯಾದವ್‌    ಔಟಾಗದೆ    2
ಇತರ:        7
ಒಟ್ಟು  (50 ಓವರ್‌ಗಳಲ್ಲಿ 8 ವಿಕೆಟಿಗೆ)    313
ವಿಕೆಟ್‌ ಪತನ: 1-106, 2-135, 3-147, 4-225, 5-286, 6-289, 7-301, 8-306
ಬೌಲಿಂಗ್‌: ಪ್ಯಾಟ್‌ ಕಮಿನ್ಸ್‌    10-0-59-1
ನಥನ್‌ ಕೋಲ್ಟರ್‌ ನೈಲ್‌    10-0-56-2
ಕೇನ್‌ ರಿಚಡ್ಸìನ್‌        10-0-58-3
ಮಾರ್ಕಸ್‌ ಸ್ಟೋಯಿನಿಸ್‌    4.5-0-34-0
ಆರನ್‌ ಫಿಂಚ್‌        0.1-0-1-0
ಆ್ಯಡಂ ಝಂಪ        9-0-63-1
ಟ್ರ್ಯಾವಿಸ್‌ ಹೆಡ್‌        6-0-38-0

100ನೇ ಏಕದಿನದಲ್ಲಿ ಶತಕ
ಆಸ್ಟ್ರೇಲಿಯದ ಆರಂಭಕಾರ ಡೇವಿಡ್‌ ವಾರ್ನರ್‌ ತಮ್ಮ 100ನೇ ಏಕದಿನ ಪಂದ್ಯವನ್ನು ಸ್ಮರಣೀಯಗೊಳಿಸಿದರು. ಅವರು ಇದನ್ನು ಆಕರ್ಷಕ ಶತಕ ಬಾರಿಸಿ ಸಂಭ್ರಮಿಸಿದರು. 3,917 ಪಂದ್ಯಗಳ ಏಕದಿನ ಇತಿಹಾಸದಲ್ಲಿ, ವೈಯಕ್ತಿಕ 100ನೇ ಪಂದ್ಯದಲ್ಲಿ ಸೆಂಚುರಿ ಹೊಡೆದ ವಿಶ್ವದ ಕೇವಲ 8ನೇ ಆಟಗಾರನೆಂಬುದು ವಾರ್ನರ್‌ ಹೆಗ್ಗಳಿಕೆ. ಅವರು ಈ ಸಾಧನೆಗೈದ ಆಸ್ಟ್ರೇಲಿಯದ ಮೊದಲ ಕ್ರಿಕೆಟಿಗ. ವಾರ್ನರ್‌ ಆಸ್ಟ್ರೇಲಿಯ ಪರ 100 ಏಕದಿನ ಪಂದ್ಯಗಳನ್ನಾಡಿದ 28ನೇ ಆಟಗಾರ. 100ನೇ ಪಂದ್ಯದಲ್ಲಿ ಶತಕ ಬಾರಿಸಿದ ಆಟಗಾರರ ಯಾದಿ ಇಲ್ಲಿದೆ.
 

ಟಾಪ್ ನ್ಯೂಸ್

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pro Kabaddi League-11: ಇಂದು ಎಲಿಮಿನೇಟರ್‌ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ

Pro Kabaddi League-11: ಇಂದು ಎಲಿಮಿನೇಟರ್‌ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ

ICC : 904 ರೇಟಿಂಗ್‌ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್‌ ಬುಮ್ರಾ

ICC : 904 ರೇಟಿಂಗ್‌ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್‌ ಬುಮ್ರಾ

Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್‌ ಎದುರಾಳಿ

Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್‌ ಎದುರಾಳಿ

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

ಧ್ಯಾನ್‌ಚಂದ್‌ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್‌ ಸಿಂಗ್‌ ಪ್ರಶ್ನೆ

ಧ್ಯಾನ್‌ಚಂದ್‌ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್‌ ಸಿಂಗ್‌ ಪ್ರಶ್ನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.