ಚಿನ್ನಸ್ವಾಮಿ ಖೆಡ್ಡಾದಲ್ಲಿ ಆಸೀಸ್‌ ಪತನ?


Team Udayavani, Sep 28, 2017, 6:40 AM IST

Ban280.jpg

ಬೆಂಗಳೂರು: ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯನ್ನು ಈಗಾಗಲೇ ವಶಪಡಿಸಿಕೊಂಡಿರುವ ಭಾರತ ತಂಡವು ಗುರುವಾರ ನಾಲ್ಕನೇ ಏಕದಿನ ಪಂದ್ಯದಲ್ಲಿ ಸೆಣಸಾಡಲು ಸಿದ್ಧವಾಗಿದ್ದು ಮತ್ತೂಂದು ವೈಟ್‌ವಾಶ್‌ ಸನಿಹದಲ್ಲಿದೆ.

ವಿರಾಟ್‌ ಕೊಹ್ಲಿ ನೇತೃತ್ವದ ಭಾರತೀಯ ಪಡೆ ಭರ್ಜರಿ ಫಾರ್ಮ್ನಲ್ಲಿದೆ. ಬಲಿಷ್ಠ ಆಸ್ಟ್ರೇಲಿಯ ವಿರುದ್ಧ ನಡೆದ ಮೊದಲ ಮೂರು ಪಂದ್ಯಗಳಲ್ಲಿಯೂ ಅಧಿಕಾರಯುತ ಗೆಲುವು ಒಲಿಸಿಕೊಂಡ ಭಾರತ ತವರಿನಲ್ಲಿ ತನ್ನ ಸಾಮರ್ಥ್ಯ ಏನೆಂಬುದನ್ನು ತೋರಿಸಿಕೊಟ್ಟಿದೆ. ತಂಡದ ಬ್ಯಾಟಿಂಗ್‌, ಬೌಲಿಂಗ್‌ ಶಕ್ತಿಗೆ ಆಸ್ಟ್ರೇಲಿಯ ತಲೆಬಾಗಿದೆ.

ಶ್ರೀಲಂಕಾ ವಿರುದ್ಧ ವೈಟ್‌ವಾಶ್‌ ಗೆಲುವು ಸಾಧಿಸಿದ್ದ ಭಾರತ ಇದೀಗ ಆಸ್ಟ್ರೇಲಿಯ ವಿರುದ್ಧವೂ ಮತ್ತೂಂದು ವೈಟ್‌ವಾಶ್‌ ಗೆಲುವಿನ ಗುರಿ ಇಟ್ಟುಕೊಂಡಿದೆ. ಉಭಯ ತಂಡಗಳ ಇಷ್ಟರವರೆಗಿನ ನಿರ್ವಹಣೆ ಮತ್ತು ಬೆಂಗಳೂರು ಪಿಚ್‌ನಲ್ಲಿ ಭಾರತದ ಈ ಹಿಂದಿನ ದಾಖಲೆ ಭಾರತ ಪರವಾಗಿರುವ ಕಾರಣ ಭಾರತವೇ ಗೆಲ್ಲುವ ಫೇವರಿಟ್‌ ತಂಡವಾಗಿದೆ. ಸತತ 9 ಪಂದ್ಯಗಳಲ್ಲಿ ಜಯ ಸಾಧಿಸಿರುವ ಭಾರತ ಬೆಂಗಳೂರು ಪಂದ್ಯಕ್ಕೆ ಸಿದ್ಧವಾಗಿದ್ದರೆ ಆಸ್ಟ್ರೇಲಿಯ ತವರಿನ ಹೊರಗಡೆ ಸತತ 11 ಪಂದ್ಯಗಳಲ್ಲಿ ಸೋತಿದೆ.

ಕೊಹ್ಲಿ ಮತ್ತು ಧೋನಿ ಅವರ ಸ್ಥಿರ ನಿರ್ವಹಣೆ ಮತ್ತು ಮಾರ್ಗದರ್ಶನದಿಂದ ಭಾರತ ಒಂದು ತಂಡವಾಗಿ ಆಡುತ್ತಿದೆ. ಇದರ ಜತೆ ಹಾರ್ದಿಕ್‌ ಪಾಂಡ್ಯ ಓರ್ವ ಸಮರ್ಥ ಆಲ್‌ರೌಂಡರ್‌ ಆಗಿ ಬೆಳೆಯುತ್ತಿರುವುದು ತಂಡಕ್ಕೆ ಹೊಸ ಸ್ಫೂರ್ತಿಯಾಗಿದ್ದಾರೆ. 66 ರನ್‌ ಸಿಡಿಸಿದ ಕೆಲವು ದಿನಗಳ ಬಳಿಕ ಹಾರ್ದಿಕ್‌ ಭಡ್ತಿ ಪಡೆದು ಬ್ಯಾಟಿಂಗ್‌ ನಡೆಸಿ 78 ರನ್‌ ಸಿಡಿಸಿದ್ದರಿಂದ ಭಾರತ 294 ರನ್ನುಗಳ ಸವಾಲನ್ನು ಸುಲಭವಾಗಿ ಬೆನ್ನಟ್ಟಿತ್ತು. ಈ ಮೂಲಕ 3-0 ಮುನ್ನಡೆ ಸಾಧಿಸಿ ಸರಣಿ ವಶಪಡಿಸಿಕೊಂಡಿತು.

ಆರಂಭಿಕರಾದ ರೋಹಿತ್‌ ಶರ್ಮ ಮತ್ತು ಅಜಿಂಕ್ಯ ರಹಾನೆ ಅವರ ಜವಾಬ್ದಾರಿಯ ಆಟದಿಂದಾಗಿ ಭಾರತ ಯಾವುದೇ ಹಂತದಲ್ಲೂ ಒತ್ತಡಕ್ಕೆ ಸಿಲುಕಿಲ್ಲ. ರೋಹಿತ್‌ ಮತ್ತು ರಹಾನೆ ಮೊದಲ ವಿಕೆಟಿಗೆ 131 ರನ್ನುಗಳ ಜತೆಯಾಟ ನಡೆಸಿ ಉಳಿದ ಆಟಗಾರರ ಒತ್ತಡವನ್ನು ಕಡಿಮೆ ಮಾಡಿಸಿದರು. ಕೇದಾರ್‌ ಜಾಧವ ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಅನುಭವಿಸಿದ್ದರೂ ಮನೀಷ್‌ ಪಾಂಡೆ ಉತ್ತಮವಾಗಿ ಆಡಿ ಗೆಲುವಿಗೆ ಕೊಡುಗೆ ಸಲ್ಲಿಸಿದ್ದರು. ಬೆಂಗಳೂರು ಪಂದ್ಯಕ್ಕೆ ಇವರಿಬ್ಬರ ಬದಲಿಗೆ ತವರಿನ ಕೆಎಲ್‌ ರಾಹುಲ್‌ ಅವರನ್ನು ಆಡಿಸುವ ಸಾಧ್ಯತೆಯೂ ಇದೆ.

ಬ್ಯಾಟಿಂಗ್‌ ಭಾರತದ ಶಕ್ತಿಯಾಗಿದ್ದರೂ ಬೌಲಿಂಗ್‌ನಲ್ಲಿಯೂ ಭಾರತ ಪರಿಣಾಮಕಾರಿ ದಾಳಿ ಸಂಘಟಿಸುತ್ತಿದೆ. ಇಂದೋರ್‌ನಲ್ಲಿ ಇನ್ನಿಂಗ್ಸ್‌ನ ಅಂತಿಮ 10 ಓವರ್‌ಗಳಲ್ಲಿ ಭಾರತದ ಬಿಗು ದಾಳಿಯಿಂದಾಗಿ ಆಸ್ಟ್ರೇಲಿಯದ ರನ್‌ವೇಗಕ್ಕೆ ಕಡಿವಾಣ ಬಿತ್ತು. ಇಲ್ಲದಿದ್ದರೆ ಭಾರತದ ಮೊತ್ತ 320ರ ಗಡಿ ದಾಟುವ ಸಾಧ್ಯತೆಯಿತ್ತು.

ಸೀಮ್‌ ಬೌಲರ್‌ಗಳಾದ ಭುವನೇಶ್ವರ್‌ ಮತ್ತು ಜಸ್‌ಪ್ರೀತ್‌ ಬುಮ್ರಾ ಆಸ್ಟ್ರೇಲಿಯದ ಅಗ್ರ ಕ್ರಮಾಂಕದ ಆಟಗಾರರಿಗೆ ಸಿಂಹಸ್ವಪ್ನರಾಗುತ್ತಿದ್ದಾರೆ. ಡೆತ್‌ ಓವರ್‌ಗಳಲ್ಲಿಯೂ ಇವರಿಬ್ಬರು ಆಸ್ಟ್ರೇಲಿಯದ ರನ್‌ವೇಗಕ್ಕೆ ಕಡಿವಾಣ ಹಾಕಲು ಸಮರ್ಥರಾಗಿದ್ದಾರೆ. ಪ್ರಚಂಡ ನಿರ್ವಹಣೆಯ ಮೂಲಕ ಯುವ ಸ್ಪಿನ್‌ದ್ವಯರಾದ ಯುಜ್ವೇಂದ್ರ ಚಾಹಲ್‌ ಮತ್ತು ಕುಲದೀಪ್‌ ಯಾದವ್‌ ಗಮನ ಸೆಳೆದಿದ್ದಾರೆ. ಹಾಗಾಗಿ ರವಿಚಂದ್ರನ್‌ ಅಶ್ವಿ‌ನ್‌ ಮತ್ತು ರವೀಂದ್ರ ಜಡೇಜ ಅವರ ಅನುಪಸ್ಥಿತಿ ಎದ್ದು ಕಾಣುತ್ತಿಲ್ಲ.

ಕೋಲ್ಕತಾ ಪಿಚ್‌ನಲ್ಲಿ ಕುಲದೀಪ್‌ ಭರ್ಜರಿ ನಿರ್ವಹಣೆ ನೀಡಿದರಲ್ಲದೇ ಹ್ಯಾಟ್ರಿಕ್‌ ಸಾಧಿಸಿ ಕಪಿಲ್‌ ದೇವ್‌ ಮತ್ತು ಚೇತನ್‌ ಶರ್ಮ ಅವರ ಸಾಲಿಗೆ ಸೇರ್ಪಡೆಯಾಗಿದ್ದರು.

ತಂಡ ಸಂಕಷ್ಟಕ್ಕೆ ಸಿಲುಕಿದಾಗ ಆಟಗಾರರು ರಕ್ಷಣೆಯ ಭಾರ ಹೊತ್ತಿರುವುದು ಒಳ್ಳೆಯ ಅಂಶವಾಗಿದೆ. ಮೊದಲ ಪಂದ್ಯದಲ್ಲಿ ಅಗ್ರ ಕ್ರಮಾಂಕ ಕುಸಿದ ಬಳಿಕ ಮಧ್ಯಮ ಮತ್ತು ಕೆಳಗಿನ ಕ್ರಮಾಂಕದ ಆಟಗಾರರು ಉತ್ತಮ ನಿರ್ವಹಣೆ ನೀಡಿ ಒಳ್ಳೆಯ ಮೊತ್ತ ಪೇರಿಸಲು ನೆರವಾಗಿದ್ದರು. ಎಲ್ಲ ಆಟಗಾರರು ಒಂದಲ್ಲ ಒಂದು ಪಂದ್ಯದಲ್ಲಿ ಅಮೋಘವಾಗಿ ಆಡಿ ಗಮನ ಸೆಳೆದಿದ್ದಾರೆ.

ಒತ್ತಡದಲ್ಲಿ ಆಸ್ಟ್ರೇಲಿಯ
ಸತತ ಮೂರು ಪಂದ್ಯಗಳಲ್ಲಿ ಸೋತಿರುವ ಆಸ್ಟ್ರೇಲಿಯ ಗೆಲುವು ದಾಖಲಿಸುವ ಒತ್ತಡದಲ್ಲಿದೆ. ಸರಣಿ ಕಳೆದುಕೊಂಡ ಆಸ್ಟ್ರೇಲಿಯ ಇನ್ನುಳಿದ ಎರಡು ಪಂದ್ಯಗಳಲ್ಲಿ ಗೆದ್ದು ಸಮಾಧಾನಪಡಲು ಮತ್ತು ವೈಟ್‌ವಾಶ್‌ ಸೋಲು ತಪ್ಪಿಸಲು ಶತಪ್ರಯತ್ನ ನಡೆಸಬಹುದು.

ಸದ್ಯದ ಸ್ಥಿತಿಯಲ್ಲಿ ಇದು ಬಹಳ ಕಷ್ಟವೆನಿಸಿದರೂ ಮುಂಬರುವ ಆ್ಯಶಸ್‌ ಸರಣಿ ಇರುವ ಕಾರಣ ಗೆಲುವು ಅನಿವಾರ್ಯವಾಗಿದೆ. ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು ಆಸ್ಟ್ರೇಲಿಯದ ನಿರೀಕ್ಷೆಯಾಗಿದೆ. ತವರಿನ ಹೊರಗಡೆ ಸತತ 11 ಪಂದ್ಯಗಳಲ್ಲಿ ಸೋತಿರುವುದು (ಎರಡು ಮಳೆಯಿಂದ ರದ್ದಾಗಿದೆ) ತಂಡಕ್ಕೆ ಹೊಡೆತವಾಗಿದೆ. ಇದರಲ್ಲಿ ಎಂಟು ಸೋಲುಗಳು ದಕ್ಷಿಣ ಆಫ್ರಿಕಾ ಮತ್ತು ಭಾರತ ವಿರುದ್ಧವೇ ಆಗಿರುವುದು ಆಸ್ಟ್ರೇಲಿಯಕ್ಕೆ ನುಂಗಲಾರದ ಕಷ್ಟವಾಗಿದೆ.

ಬಿಗ್‌ ಹಿಟ್ಟರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ವೈಫ‌ಲ್ಯದಿಂದ ಆಸ್ಟ್ರೇಲಿಯ ಕಳವಳಪಡುವಂತಾಗಿದೆ. ಇದರ ಜತೆ ಆರನ್‌ ಫಿಂಚ್‌ ಶತಕ ದಾಖಲಿಸಿದ್ದರೂ ಪ್ರವಾಸಿ ತಂಡ ಒಮ್ಮೆಯೂ 300ರ ಗಡಿ ದಾಟಿಲ್ಲ. ಇಂದೋರ್‌ನಲ್ಲಿ ತಂಡ 40 ಓವರ್‌ಗಳಲ್ಲಿ 2 ವಿಕೆಟಿಗೆ 232 ರನ್‌ ಪೇರಿಸಿದ್ದರೂ ಆಸ್ಟ್ರೇಲಿಯ 293 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು. ಅಂತಿಮ 10 ಓವರ್‌ಗಳಲ್ಲಿ ತಂಡ 4 ವಿಕೆಟಿಗೆ 59 ರನ್‌ ಪೇರಿಸಿತ್ತು.

ನಾಯಕ ಸ್ಟೀವನ್‌ ಸ್ಮಿತ್‌ ಮತ್ತು ಆರಂಭಿಕ ಡೇವಿಡ್‌ ವಾರ್ನರ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದರೆ ಆಸ್ಟ್ರೇಲಿಯ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಬ್ಯಾಟಿಂಗ್‌ ಜತೆ ಬೌಲರ್‌ಗಳೂ ಪರಿಣಾಮಕಾರಿಯಾಗಿ ದಾಳಿ ಸಂಘಟಿಸಬೇಕಾಗಿದೆ. ನಥನ್‌ ಕೋಲ್ಟರ್‌ ನೈಲ್‌ ಅವರನ್ನು ಹೊರತುಪಡಿಸಿ ಉಳಿದವರ್ಯಾರೂ ಗಮನಾರ್ಹ ನಿರ್ವಹಣೆ ನೀಡಿಲ್ಲ. ಗಾಯಗೊಂಡ ಆ್ಯಸ್ಟನ್‌ ಅಗರ್‌ ತವರಿಗೆ ತೆರಳಿದ್ದಾರೆ. ಅವರ ಬದಲಿಗೆ ಜೇಮ್ಸ್‌ ಫಾಕ್ನರ್‌ ತಂಡಕ್ಕೆ ಮರಳುವ ಸಾಧ್ಯತೆಯಿದೆ.

ಉಭಯ ತಂಡಗಳು
ಭಾರತ:
ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮ, ಅಜಿಂಕ್ಯ ರಹಾನೆ, ಮನೀಷ್‌ ಪಾಂಡೆ, ಕೇದಾರ್‌ ಜಾಧವ್‌, ಮಹೇಂದ್ರ ಸಿಂಗ್‌ ಧೋನಿ, ಹಾರ್ದಿಕ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಕುಲದೀಪ್‌ ಯಾದವ್‌, ಯುಜ್ವೇಂದ್ರ ಚಾಹಲ್‌, ಜಸ್‌ಪ್ರೀತ್‌ ಬುಮ್ರಾ, ಉಮೇಶ್‌ ಯಾದವ್‌, ಮೊಹಮ್ಮದ್‌ ಶಮಿ, ರವೀಂದ್ರ ಜಡೇಜ, ಕೆಎಲ್‌ ರಾಹುಲ್‌.

ಆಸ್ಟ್ರೇಲಿಯ: ಡೇವಿಡ್‌ ವಾರ್ನರ್‌, ಸ್ಟೀವನ್‌ ಸ್ಮಿತ್‌, ಹಿಲ್ಟನ್‌ ಕಾರ್ಟ್‌ರೈಟ್‌, ಟ್ರ್ಯಾವಿಸ್‌ ಹೆಡ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಾರ್ಕಸ್‌ ಸ್ಟೋಯಿನಿಸ್‌, ಮ್ಯಾಥ್ಯೂ ವೇಡ್‌, ಆ್ಯಸ್ಟನ್‌ ಅಗರ್‌, ಕೇನ್‌ ರಿಚಡ್ಸìನ್‌, ಪ್ಯಾಟ್‌ ಕಮಿನ್ಸ್‌, ನಥನ್‌ ಕೋಲ್ಟರ್‌ ನೈಲ್‌, ಆರನ್‌ ಫಿಂಚ್‌, ಪೀಟರ್‌ ಹ್ಯಾಂಡ್ಸ್‌ಕಾಂಬ್‌, ಜೇಮ್ಸ್‌ ಫಾಕ್ನರ್‌, ಆ್ಯಡಂ ಝಂಪ.

ಪಂದ್ಯ ಆರಂಭ: ಮಧ್ಯಾಹ್ನ 1.30
ನೇರ ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್ , ಡಿಡಿ

ಸತತ 10ನೇ ಗೆಲುವಿನ ನಿರೀಕ್ಷೆಯಲ್ಲಿ ಭಾರತ
ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಭಾರತ ಇಷ್ಟರವರೆಗೆ ಸತತ 10 ಏಕದಿನ ಪಂದ್ಯಗಳಲ್ಲಿ ಗೆಲುವು ಒಲಿಸಿಕೊಂಡದ್ದಿಲ್ಲ. ಇದೀಗ ಸತತ 10 ಗೆಲುವಿನ ದಾಖಲೆ ಮಾಡುವ ಅವಕಾಶ ಭಾರತಕ್ಕೆ ಲಭಿಸಿದೆ. ಎರಡು ಬಾರಿ ಸತತ 9 ಪಂದ್ಯಗಳಲ್ಲಿ ಗೆದ್ದಿರುವ ಭಾರತಕ್ಕೆ ಬೆಂಗಳೂರಿನನಲ್ಲಿ 10ನೇ ಗೆಲುವು ಆಚರಿಸು ಹುಮ್ಮಸ್ಸಿನಲ್ಲಿದೆ.

ಜುಲೈಯಲ್ಲಿ ಆಂಟಿಗಾದಲ್ಲಿ ವೆಸ್ಟ್‌ಇಂಡೀಸ್‌ ತಂಡಕ್ಕೆ 11 ರನ್ನುಗಳಿಂದ ಶರಣಾದ ಬಳಿಕ ಭಾರತ ಇಷ್ಟರವರೆಗೆ 9 ಏಕದಿನ ಪಂದ್ಯಗಳನ್ನಾಡಿದ್ದು ಎಲ್ಲ ಪಂದ್ಯಗಳಲ್ಲಿಯೂ ಜಯಭೇರಿ ಬಾರಿಸಿದೆ. ಇದೇ ಮೊದಲ ಬಾರಿ ಸತತ 10 ಗೆಲುವಿನ ಸಂಭ್ರಮ ಆಚರಿಸಲು ಭಾರತ ಎದುರು ನೋಡುತ್ತಿದೆ. ಬೆಂಗಳೂರಿನಲ್ಲಿ ಭಾರತ ಮತ್ತು ಆಸ್ಟ್ರೇಲಿಯ  ಈ ಹಿಂದೆ 6 ಪಂದ್ಯಗಳನ್ನಾಡಿದ್ದು ನಾಲ್ಕರಲ್ಲಿ ಗೆದ್ದಿರುವ ಭಾರತ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದೆ. ಈ ಸರಣಿಯ ಆರಂಭಿಕ ಮೂರು ಪಂದ್ಯಗಳನ್ನು ಅಧಿಕಾರಯುತವಾಗಿ ಗೆದ್ದಿರುವುದರಿಂದ ಭಾರತ ಭಾರೀ ಆತ್ಮವಿಶ್ವಾಸದಲ್ಲಿದೆ.

ಈ ಹಿಂದೆ ನ್ಯೂಜಿಲ್ಯಾಂಡ್‌ ಒಮ್ಮೆ ಸತತ 10 ಗೆಲುವಿನ ಸಂಭ್ರಮ ಆಚರಿಸಿದ್ದರೆ ದಕ್ಷಿಣ ಆಫ್ರಿಕಾ 5 ಮತ್ತು ಆಸ್ಟ್ರೇಲಿಯ ಆರು ಬಾರಿ ಈ ಸಾಧನೆ ಮಾಡಿದೆ. ಇಂಗ್ಲೆಂಡ್‌, ಪಾಕಿಸ್ಥಾನ, ವೆಸ್ಟ್‌ಇಂಡೀಸ್‌ ಮತ್ತು ಶ್ರೀಲಂಕಾ ತಲಾ ಎರಡು ಬಾರಿ ಸತತ 10 ಗೆಲುವಿನ ದಾಖಲೆ ಮಾಡಿದೆ.

ಇದೇ ವೇಳೆ ಆಸ್ಟ್ರೇಲಿಯ ಕಳೆದ ಜನವರಿಯಲ್ಲಿ ಅಡಿಲೇಡ್‌ನ‌ಲ್ಲಿ ಪಾಕಿಸ್ಥಾನವನ್ನು ಸೋಲಿಸಿದ ಬಳಿಕ ಇಷ್ಟರವರೆಗೆ ಒಂದೇ ಒಂದು ಏಕದಿನ ಪಂದ್ಯ ಗೆದ್ದಿಲ್ಲ. ತವರಿನ ಹೊರಗಡೆ ಆಸ್ಟ್ರೇಲಿಯ ಸತತ 11 ಪಂದ್ಯಗಳಲ್ಲಿ ಸೋತಿದೆ. ಹಾಗಾಗಿ ಭಾರತ ವಿರುದ್ಧ ಆಸ್ಟ್ರೇಲಿಯ ಗೆಲ್ಲಲು ಕಠಿನ ಪ್ರಯತ್ನ ನಡೆಸಬೇಕಾಗಿದೆ. ಒಂದು ವೇಳೆ ಸರಣಿಯ  ಇನ್ನುಳಿದ ಎರಡು ಪಂದ್ಯ ಸೋತರೆ ಆಸ್ಟ್ರೇಲಿಯ ಏಕದಿನ ರ್‍ಯಾಂಕಿಂಗ್‌ನಲ್ಲಿ ಕುಸಿತ ಕಾಣುವ ಸಾಧ್ಯತೆಯಿದೆ.

ಅಂಕಿ ಅಂಶ
ಎಂ. ಚಿನ್ನಸ್ವಾಮಿ ಕ್ರೀಡಾಂಗಣ ವಿರಾಟ್‌ ಕೊಹ್ಲಿ ಪಾಲಿಗೆ ತವರಿನಲ್ಲಿ ಅತ್ಯಂತ ಕೆಟ್ಟ ತಾಣವಾಗಿದೆ. ಇಲ್ಲಿ ಕಳೆದ ನಾಲ್ಕು ಪಂದ್ಯಗಳಲ್ಲಿ ಅವರ ಬ್ಯಾಟಿಂಗ್‌ ಸರಾಸರಿ ಕೇವಲ 10.50. ಅವರು ಅನುಕ್ರಮವಾಗಿ 0, 8. 34 ಮತ್ತು ಶೂನ್ಯ ರನ್‌ ಗಳಿಸಿದ್ದರು.

ನಾಲ್ಕನೇ ಪಂದ್ಯ ಡೇವಿಡ್‌ ವಾರ್ನರ್‌ ಪಾಲಿಗೆ 100ನೇ ಪಂದ್ಯವಾಗಿದೆ. 2009ರಲ್ಲಿ 50 ಓವರ್‌ಗಳ ಏಕದಿನ ಮಾದರಿಯ ಕ್ರಿಕೆಟಿಗೆ ಅವರು ಪಾದಾರ್ಪಣೆಗೈದಿದ್ದರು.

ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ
ಗುರುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯ ನಡುವಿನ 4ನೇ ಏಕದಿನ ಪಂದ್ಯಕ್ಕೆ ಹವಾಮಾನ ಇಲಾಖೆ ವರದಿಯಂತೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.

ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಿದೆ. ಬುಧವಾರ ತಂಡದ ಅಭ್ಯಾಸಕ್ಕೂ ಮಳೆಯಿಂದ ಅಡ್ಡಿಯಾಗಿದೆ. ಹವಾಮಾನ ಇಲಾಖೆ ಪ್ರಕಾರ ಗುರುವಾರ ಮಧ್ಯಾಹ್ನ ತುಂತುರು ಮಳೆ, ರಾತ್ರಿ ವೇಳೆ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಪಂದ್ಯ ವೀಕ್ಷಣೆಗೆ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿದ್ದು, ಅಭಿಮಾನಿಗಳು ಭಾರೀ ಕುತೂಹಲದಿಂದ ಇದ್ದಾರೆ. ಆದರೆ ಮಳೆಯಿಂದ ಅಭಿಮಾನಿಗಳು ನಿರಾಶೆಗೊಳ್ಳುವ ಸಾಧ್ಯತೆ ಇದೆ.

ಟಾಪ್ ನ್ಯೂಸ್

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ

Nirmala 2 a

Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ

arrested

Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Boxing legend Mike Tyson hints at retirement

Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್‌ ದಿಗ್ಗಜ ಮೈಕ್‌ ಟೈಸನ್

Tilak Varma broke Virat Kohli’s T20I record

Team India: ವಿರಾಟ್‌ ಕೊಹ್ಲಿ ದಾಖಲೆ ಮುರಿದ ತಿಲಕ್‌ ವರ್ಮಾ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

8

ಗಂಭೀರ್‌ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್‌ ಪೇನ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

byndoor

Karkala: ಕೀಟ ನಾಶಕ ಸೇವಿಸಿ ವ್ಯಕ್ತಿ ಸಾವು

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ

Nirmala 2 a

Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.