ಮೆಲ್ಬರ್ನ್: ಮತ್ತೆ ಮೆರೆಯಲಿ ಭಾರತ


Team Udayavani, Dec 26, 2018, 6:00 AM IST

9.jpg

ಮೆಲ್ಬರ್ನ್: ಭಾರತ-ಆಸ್ಟ್ರೇಲಿಯ ನಡುವಿನ “ಬೋರ್ಡರ್‌-ಗಾವಸ್ಕರ್‌ ಟ್ರೋಫಿ’ ಟೆಸ್ಟ್‌ ಸರಣಿ 1-1 ಸಮಬಲದ ಬಳಿಕ ಆರಂಭ ಕಂಡುಕೊಳ್ಳುವ ಹಾದಿಯಲ್ಲಿದೆ. ಎರಡೂ ತಂಡಗಳ ಪಾಲಿಗೆ ಉಳಿದೆರಡು ಟೆಸ್ಟ್‌ಗಳು ನಿರ್ಣಾಯಕವಾಗಲಿವೆ. ಸಂಪ್ರದಾಯದಂತೆ ಡಿ. 26ರಿಂದ ಮೆಲ್ಬರ್ನ್ನಲ್ಲಿ “ಬಾಕ್ಸಿಂಗ್‌ ಡೇ ಟೆಸ್ಟ್‌’ ಆರಂಭವಾಗಲಿದ್ದು, ಇಲ್ಲಿ ಮೆರೆದಾಡುವ ತಂಡದ ಪಾಲಿಗೆ ಸರಣಿ ಕೈಹಿಡಿಯುವ ಸಂಭವ ಅಧಿಕ. ಕೊಹ್ಲಿ ಪಡೆ ಮರಳಿ ಟ್ರ್ಯಾಕ್‌ ಏರುವ ನಿಟ್ಟಿನಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿ ಯಾಗಲಿದೆ ಎಂಬುದು ಕ್ರಿಕೆಟ್‌ ಅಭಿಮಾನಿಗಳ ಕುತೂಹಲ.

ಅಡಿಲೇಡ್‌ನ‌ಲ್ಲಿ ಸಣ್ಣ ಅಂತರದ ಗೆಲುವು ಸಾಧಿಸಿದ ಟೀಮ್‌ ಇಂಡಿಯಾಕ್ಕೆ ಪರ್ತ್‌ನಲ್ಲಿ ಈ ಮುನ್ನಡೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. 146 ರನ್ನುಗಳ ಗೆಲುವು ಸಾಧಿಸುವ ಮೂಲಕ ಆಸ್ಟ್ರೇಲಿಯ ತಿರುಗಿ ಬಿತ್ತು. 0-1 ಹಿನ್ನಡೆ ಹಾಗೂ ವಾರ್ನರ್‌, ಸ್ಮಿತ್‌ ಗೈರಲ್ಲಿ ಭಾರತವನ್ನು ಮಣಿಸಿದ್ದು ಕಾಂಗರೂ ಪಾಲಿಗೆ ಹೊಸ ಸ್ಫೂರ್ತಿ ತುಂಬಿದೆ. ಅಡಿಲೇಡ್‌ ನೋವನ್ನು ಮರು ಪಂದ್ಯದಲ್ಲೇ ಮರೆತ ಪೇನ್‌ ಪಡೆ ಸಹಜವಾಗಿಯೇ ಹೆಚ್ಚಿನ ಆತ್ಮವಿಶ್ವಾಸದಲ್ಲಿದೆ.

ನೂತನ ಆರಂಭಿಕ ಜೋಡಿ
ಪರ್ತ್‌ನಲ್ಲಿ ಭಾರತ ಎಡವಿದ್ದೆಲ್ಲಿ ಎಂಬ ಪ್ರಶ್ನೆ ಎದುರಾದಾಗ ಸಾಲು ಸಾಲು ಕಾರಣಗಳು ಎದುರಾಗುತ್ತವೆ. ಇದರಲ್ಲಿ ಅತೀ ಮುಖ್ಯವಾದದ್ದು ಓಪನಿಂಗ್‌ ವೈಫ‌ಲ್ಯ. ಕೆ.ಎಲ್‌. ರಾಹುಲ್‌-ಮುರಳಿ ವಿಜಯ್‌ ಗಟ್ಟಿಮುಟ್ಟಾದ ಅಡಿಪಾಯ ನಿರ್ಮಿಸುವ ಬದಲು ಬಂದಷ್ಟೇ ವೇಗದಲ್ಲಿ ಕ್ಲೀನ್‌ಬೌಲ್ಡ್‌ ಆಗಿ ಮರಳುವುದರಲ್ಲೇ ಆಸಕ್ತಿ ತೋರಿದ್ದು ಭಾರತಕ್ಕೆ ಮುಳುವಾಗಿ ಪರಿಣಮಿಸಿತು. ಹೀಗಾಗಿ ಇವರಿಬ್ಬರನ್ನೂ ಮೆಲ್ಬರ್ನ್ ಟೆಸ್ಟ್‌ ತಂಡದಿಂದ ಕೈಬಿಡಲಾಗಿದೆ. ಓಪನಿಂಗ್‌ ಜವಾಬ್ದಾರಿ ಮಾಯಾಂಕ್‌ ಅಗರ್ವಾಲ್‌-ಹನುಮ ವಿಹಾರಿ ಹೆಗಲೇರಿದೆ. ಅಗರ್ವಾಲ್‌ಗೆ ಇದು ಚೊಚ್ಚಲ ಟೆಸ್ಟ್‌ ಪಂದ್ಯ ವಾದರೆ, ವಿಹಾರಿಗೆ ಹೊಸ ಅನುಭವ. ಹೈದರಾ ಬಾದ್‌ ಪರ ಆಡಲಾರಂಭಿಸಿದ ಕಾಲದಲ್ಲಿ ಅವರು ಇನ್ನಿಂಗ್ಸ್‌ ಆರಂಭಿಸುತ್ತಿದ್ದರು. ಈ ನೂತನ ಜೋಡಿಯ ಆಯ್ಕೆ ಎನ್ನುವುದು ಪ್ರಯೋಗವೂ ಹೌದು, ಗ್ಯಾಂಬ್ಲಿಂಗ್‌ ಕೂಡ ಹೌದು!

ಜಡೇಜ ಸ್ಪೆಷಲಿಸ್ಟ್‌ ಸ್ಪಿನ್ನರ್‌
ಪರ್ತ್‌ ಟ್ರ್ಯಾಕ್‌ನಲ್ಲಿ ವೇಗಿಗಳು ಮೆರೆದಾಡು ವರೆಂದು ಗ್ರಹಿಸಿ ಸ್ಪೆಷಲಿಸ್ಟ್‌ ಸ್ಪಿನ್ನರ್‌ನನ್ನು ಆಡಿಸ ದಿದ್ದುದೂ ಭಾರತದ ಸೋಲಿಗೆ ಕಾರಣವಾಗಿತ್ತು. ಎದುರಾಳಿ ಸ್ಪಿನ್ನರ್‌ ನಥನ್‌ ಲಿಯೋನ್‌ ಭರ್ಜರಿ ಬೇಟೆಯಾಡಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಾಗ ಭಾರತ ಕೈ ಕೈ ಹಿಸುಕಿಕೊಂಡದ್ದು ಸುಳ್ಳಲ್ಲ!

ಅಶ್ವಿ‌ನ್‌ ಗಾಯಾಳಾದ ಕಾರಣ ದ್ವಿತೀಯ ಟೆಸ್ಟ್‌ ಕಳೆದುಕೊಂಡಿದ್ದರು. ಈಗಲೂ ಚೇತರಿಸಿಲ್ಲ. ಹೀಗಾಗಿ ರವೀಂದ್ರ ಜಡೇಜ ಆಯ್ಕೆಯಾಗಿದ್ದಾರೆ. ಚೈನಾಮನ್‌ ಕುಲದೀಪ್‌ ಯಾದವ್‌ ಕೂಡ ಉತ್ತಮ ಆಯ್ಕೆ ಆಗುತ್ತಿತ್ತು. ಹಾಗೆಯೇ ಸೀಮರ್‌ ಭುವನೇಶ್ವರ್‌ ಕುಮಾರ್‌ ಅವರನ್ನು ಮತ್ತೆ ಕಡೆಗಣಿಸಲಾಗಿದೆ.

ಬೌಲರ್‌ಗಳ ಬ್ಯಾಟಿಂಗ್‌ ವೈಫ‌ಲ್ಯ
ಆಸ್ಟ್ರೇಲಿಯದ ಬೌನ್ಸಿ ಮತ್ತು ಸೀಮಿಂಗ್‌ ಟ್ರ್ಯಾಕ್‌ಗಳಲ್ಲಿ ಭಾರತದ ಬೌಲರ್‌ಗಳ ಪ್ರದರ್ಶನ ಚೇತೋಹಾರಿಯಾಗಿಯೇ ಇತ್ತು. ಆದರೆ ನಮ್ಮ ಬೌಲರ್‌ಗಳ ಸಾಮರ್ಥ್ಯ ಕೇವಲ ಬೌಲಿಂಗಿಗಷ್ಟೇ ಸೀಮಿತವಾಗಿರುವುದೊಂದು ದುರಂತ. ಸ್ವಲ್ಪವಾದರೂ ರನ್‌ ಗಳಿಸುವುದು, ಇನ್ನಿಂಗ್ಸ್‌ ಬೆಳೆಸುವುದು, ಕ್ರೀಸ್‌ನಲ್ಲಿ ನಿಂತು ಬ್ಯಾಟ್ಸ್‌ಮನ್‌ಗೆ ಸ್ಟಾಂಡ್‌ ನೀಡುವುದು… ಇವೆಲ್ಲದರಲ್ಲೂ ಭಾರತದ ಬೌಲರ್‌ಗಳು ವಿಫ‌ಲರಾಗುತ್ತಿದ್ದಾರೆ. ಇವರೆಲ್ಲ ಸಾಲು ಸಾಲು ಸೊನ್ನೆ ಸುತ್ತುತ್ತ ಹೋಗುವುದರಿಂದ 5-6 ವಿಕೆಟ್‌ ಪತನ ಬಳಿಕ ಭಾರತದ ಇನ್ನಿಂಗ್ಸೆà ಮುಗಿದು ಹೋಗುತ್ತದೆ. ಈ ಸಂಕಟ ತಪ್ಪಬೇಕಿದೆ. 

ಟಾಸ್‌ ಗೆಲ್ಲುವುದೂ ಮುಖ್ಯ
ಕಳೆದೆರಡೂ ಟೆಸ್ಟ್‌ಗಳಲ್ಲಿ ಟಾಸ್‌ ಗೆದ್ದ ತಂಡಗಳೇ ಮೊದಲು ಬ್ಯಾಟಿಂಗ್‌ ಆಯ್ದುಕೊಂಡು ಗೆಲುವು ಸಾಧಿಸಿದ್ದನ್ನು ಗಮನಿಸಬಹುದು. ಮೆಲ್ಬರ್ನ್ನಲ್ಲೂ ಟಾಸ್‌ ಗೆಲುವು ನಿರ್ಣಾಯಕ. ಮೊದಲು ಬ್ಯಾಟಿಂಗ್‌ ನಡೆಸಿ ಕನಿಷ್ಠ 300 ರನ್‌ ಪೇರಿಸಿದರೂ ಆ ತಂಡ “ಸೇಫ್ ಝೋನ್‌’ನಲ್ಲಿರುತ್ತದೆ. ಇಲ್ಲಿಯೂ ಅಂತಿಮ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌-ಚೇಸಿಂಗ್‌ ಕಷ್ಟವಾಗಬಹುದು.

“ಕ್ಲಿಕ್‌ ಆಗದಿದ್ದರೆ ವಿಹಾರಿಗೆ ಮಧ್ಯಮ ಕ್ರಮಾಂಕ ಇದ್ದೇ ಇದೆ’
ಹನುಮ ವಿಹಾರಿಗೆ ಮೆಲ್ಬರ್ನ್ನಲ್ಲಿ ಹೊಸ ಜವಾಬ್ದಾರಿ ವಹಿಸಲಾಗಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿರುವ ಅವರೀಗ ಭಾರತದ ಇನ್ನಿಂಗ್ಸ್‌ ಆರಂಭಿಸಬೇಕಿದೆ. ಈ ಕುರಿತು ಪ್ರತಿಕ್ರಿಯಿಸಿದ ಆಯ್ಕೆ ಸಮಿತಿ ಅಧ್ಯಕ್ಷ, ಹೈದರಾಬಾದ್‌ನವರೇ ಆದ ಎಂ.ಎಸ್‌.ಕೆ. ಪ್ರಸಾದ್‌, “ಒಂದು ವೇಳೆ ವಿಹಾರಿ ಓಪನರ್‌ ಆಗಿ ವಿಫ‌ಲರಾದರೂ ಅವರಿಗೆ ಮಧ್ಯಮ ಕ್ರಮಾಂಕದಲ್ಲಿ ಸ್ಥಾನವಿದೆ’ ಎಂಬ ಭರವಸೆ ನೀಡಿದ್ದಾರೆ.

“ವಿಹಾರಿಯನ್ನು ಆರಂಭಕಾರನಾಗಿ ಆಯ್ಕೆ ಮಾಡಿರುವುದು ಈ ಸಮಸ್ಯೆಗೆ ಶಾಶ್ವತ ಪರಿಹಾರವೇನಲ್ಲ. ಒಂದು ವೇಳೆ ಅವರು ಓಪನರ್‌ ಆಗಿ ಮಿಂಚದಿದ್ದರೂ ಮಧ್ಯಮ ಕ್ರಮಾಂಕದಲ್ಲಿ ಅವರಿಗೆ ಅವಕಾಶ ಇದ್ದೇ ಇರುತ್ತದೆ. ವಿಹಾರಿಯನ್ನು ಓಪನರ್‌ ಆಗಿ ಆಯ್ಕೆ ಮಾಡಿರುವುದು ಒಂದು ಉತ್ತಮ ನಡೆ. ವಿಹಾರಿ ಉತ್ತಮ ಆಟಗಾರ. ಹಿಂದೆ ತಂಡಕ್ಕೆ ಅಗತ್ಯವಿದ್ದ ಸಂದರ್ಭದಲ್ಲಿ ಪೂಜಾರ ಕೂಡ ಆರಂಭಿಕನಾಗಿ ಆಡಿದ್ದಾರೆ. ವಿಹಾರಿ ಇದರ‌ಲ್ಲಿ ಯಶಸ್ಸು ಸಾಧಿಸುತ್ತಾರೆ ಎಂಬ ನಂಬಿಕೆ ಇದೆ. ಆದರೆ ಖಂಡಿತವಾಗಿಯೂ ಇದು ದೀರ್ಘ‌ಕಾಲದ ಪರಿಹಾರವಲ್ಲ’

ಅಗರ್ವಾಲ್‌-ವಿಹಾರಿ ಓಪನಿಂಗ್‌
ಭಾರತದ ಸರದಿಗೆ ಭದ್ರ ಬುನಾದಿ ನಿರ್ಮಿಸುವಲ್ಲಿ ಸಂಪೂರ್ಣ ವಿಫ‌ಲರಾದ  ರಾಹುಲ್‌ ಮತ್ತು ಮುರಳಿ ವಿಜಯ್‌ ಅವರನ್ನು ಮೆಲ್ಬರ್ನ್ ಟೆಸ್ಟ್‌ ಪಂದ್ಯದಿಂದ ಕೈಬಿಡಲಾಗಿದೆ. ಇವರ ಬದಲು ಮಾಯಾಂಕ್‌ ಅಗರ್ವಾಲ್‌ ಮತ್ತು ಹನುಮ ವಿಹಾರಿ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ಕರ್ನಾಟಕದ ಆರಂಭಕಾರ, ದೇಶಿ ಕ್ರಿಕೆಟಿನ ರನ್‌ ಯಂತ್ರವೆಂದೇ ಗುರುತಿಸಲ್ಪ ಡುವ ಮಾಯಾಂಕ್‌ ಅಗರ್ವಾಲ್‌ ಪಾಲಿಗೆ ಇದು ಪದಾರ್ಪಣ ಟೆಸ್ಟ್‌ ಪಂದ್ಯವಷ್ಟೇ ಅಲ್ಲ, ಮೊದಲ ಅಂತಾರಾಷ್ಟ್ರೀಯ ಪಂದ್ಯವೂ ಹೌದು. ತೀವ್ರ ಒತ್ತಡದ ಸನ್ನಿವೇಶದಲ್ಲಿ, ಕಾಂಗರೂ ನಾಡಿನಲ್ಲಿ ಒಂದೂ ಅಭ್ಯಾಸ ಪಂದ್ಯವಾಡದೆಯೇ ಅವರು ನೇರವಾಗಿ ಟೆಸ್ಟ್‌ ಆಡಲಿಳಿಯಲಿದ್ದಾರೆ. ಅಗರ್ವಾಲ್‌ ಭಾರತದ 295ನೇ ಟೆಸ್ಟ್‌ ಕ್ರಿಕೆಟಿಗ.

ವಿಹಾರಿಗೆ ಹೊಸ ಜವಾಬ್ದಾರಿ
ಟೆಸ್ಟ್‌ ಶೈಲಿಯ ಬ್ಯಾಟ್ಸ್‌ಮನ್‌ ಆಗಿರುವ ಹನುಮ ವಿಹಾರಿ ಇಲ್ಲಿಯ ತನಕ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬರುತ್ತಿದ್ದರು. ಅವರಿಗೆ ಇದು ಮೊದಲ ಓಪನಿಂಗ್‌ ಅನುಭವ. ಹೀಗೆ, ಭಾರತ ನೂತನ ಆರಂಭಿಕ ಜೋಡಿಯೊಂದನ್ನು ಪ್ರಯೋಗಿಸುವ ರಿಸ್ಕ್ ತೆಗೆದುಕೊಂಡಿದೆ.

ಹನುಮ ವಿಹಾರಿ ಅವರ ಮಧ್ಯಮ ಕ್ರಮಾಂಕವನ್ನು ರೋಹಿತ್‌ ಶರ್ಮ ತುಂಬಲಿದ್ದಾರೆ. ಅಡಿಲೇಡ್‌ನ‌ಲ್ಲಿ ಆಡಿದ್ದ ರೋಹಿತ್‌, ಪರ್ತ್‌ ಪಂದ್ಯದ ವೇಳೆ ಗಾಯಾಳಾಗಿದ್ದರು. ಮಧ್ಯಮ ವೇಗಿ ಉಮೇಶ್‌ ಯಾದವ್‌ ಅವರನ್ನೂ ಕೈಬಿಡಲಾಗಿದೆ. ಇವರ ಬದಲು ಆಲ್‌ರೌಂಡರ್‌ ರವೀಂದ್ರ ಜಡೇಜ ಆಡುವರು. ಆಸ್ಟ್ರೇಲಿಯ ಪೀಟರ್‌ ಹ್ಯಾಂಡ್ಸ್‌ಕಾಂಬ್‌ ಬದಲು ಮಿಚೆಲ್‌ ಮಾರ್ಷ್‌ ಅವರನ್ನು ಸೇರಿಸಿಕೊಂಡಿದೆ.

ತ್ರಿಶತಕ ವೀರರ ಟೆಸ್ಟ್‌!
ಮಾಯಾಂಕ್‌ ಅಗರ್ವಾಲ್‌ ಟೆಸ್ಟ್‌ ಕ್ಯಾಪ್‌ ಧರಿಸುವ ಕಾರಣ ಮೆಲ್ಬರ್ನ್ ಟೆಸ್ಟ್‌ ಪಂದ್ಯ ಭಾರತದ ಪಾಲಿಗೆ ಸ್ಮರಣೀಯವೂ ವಿಶಿಷ್ಟವೂ ಆಗಲಿದೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಭಾರತದ ಗರಿಷ್ಠ 6 ಮಂದಿ ಆಟಗಾರರು ಈ ಟೆಸ್ಟ್‌ನಲ್ಲಿ ಆಡುವುದು ವಿಶೇಷ. ಭಾರತದ ಟೆಸ್ಟ್‌ ಇತಿಹಾಸದಲ್ಲಿ ಇದೊಂದು ದಾಖಲೆಯೂ ಹೌದು. ಈ ಆರು ಮಂದಿ ತ್ರಿಬ್ಬಲ್‌ ಸೆಂಚುರಿ ಸರದಾರರೆಂದರೆ ಮಾಯಾಂಕ್‌ ಅಗರ್ವಾಲ್‌, ಹನುಮ ವಿಹಾರಿ, ಚೇತೇಶ್ವರ್‌ ಪೂಜಾರ, ರೋಹಿತ್‌ ಶರ್ಮ, ರಿಷಬ್‌ ಪಂತ್‌ ಮತ್ತು ರವೀಂದ್ರ ಜಡೇಜ!

ಆಡುವ ಬಳಗ
ಭಾರತ: ಮಾಯಾಂಕ್‌ ಅಗರ್ವಾಲ್‌, ಹನುಮ ವಿಹಾರಿ, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರೋಹಿತ್‌ ಶರ್ಮ, ರಿಷಬ್‌ ಪಂತ್‌, ರವೀಂದ್ರ ಜಡೇಜ, ಇಶಾಂತ್‌ ಶರ್ಮ, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ.

ಆಸ್ಟ್ರೇಲಿಯ: ಮಾರ್ಕಸ್‌ ಹ್ಯಾರಿಸ್‌, ಆರನ್‌ ಫಿಂಚ್‌, ಉಸ್ಮಾನ್‌ ಖ್ವಾಜಾ, ಟ್ರ್ಯಾವಿಸ್‌ ಹೆಡ್‌, ಶಾನ್‌ ಮಾರ್ಷ್‌, ಮಿಚೆಲ್‌ ಮಾರ್ಷ್‌, ಟಿಮ್‌ ಪೇನ್‌ (ನಾಯಕ), ನಥನ್‌ ಲಿಯೋನ್‌, ಮಿಚೆಲ್‌ ಸ್ಟಾರ್ಕ್‌, ಪ್ಯಾಟ್‌ ಕಮಿನ್ಸ್‌, ಜೋಶ್‌ ಹ್ಯಾಝಲ್‌ವುಡ್‌.

ಆರಂಭ: ಬೆಳಗ್ಗೆ 5.00 
ಪ್ರಸಾರ: ಸೋನಿ ಸಿಕ್ಸ್‌

ಟಾಪ್ ನ್ಯೂಸ್

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ | Video

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

IRCTC: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

Pro Kabaddi League-11: ಇಂದು ಎಲಿಮಿನೇಟರ್‌ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ

Pro Kabaddi League-11: ಇಂದು ಎಲಿಮಿನೇಟರ್‌ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ

ICC : 904 ರೇಟಿಂಗ್‌ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್‌ ಬುಮ್ರಾ

ICC : 904 ರೇಟಿಂಗ್‌ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್‌ ಬುಮ್ರಾ

Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್‌ ಎದುರಾಳಿ

Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್‌ ಎದುರಾಳಿ

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

5

Mangaluru: ಪದವು ಜಂಕ್ಷನ್‌- ಶರ್ಬತ್‌ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್‌

4

Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ

3(1

Uppunda: ಪಾಳು ಕೆರೆ ಈಗ ಈಜುಕೊಳ!; ಚೌಂಡಿ ಕೆರೆಗೆ ಊರಿನ ಯುವಕರಿಂದ ಕಾಯಕಲ್ಪ

2

Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ | Video

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.