ಭಾರತ-ಬಾಂಗ್ಲಾದೇಶ ಟೆಸ್ಟ್ : ಕುಲ್ ದೀಪ್, ಪೂಜಾರ ಕಮಾಲ್; ಭಾರತಕ್ಕೆ ಭರ್ಜರಿ ಜಯ
Team Udayavani, Dec 18, 2022, 10:48 AM IST
ಚತ್ತೋಗ್ರಾಮ್: ಭಾರತ-ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 188 ರನ್ ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದೆ.
ಗೆಲುವಿಗೆ 513 ರನ್ನುಗಳ ಕಠಿನ ಗುರಿ ಪಡೆದಿದ್ದ ಬಾಂಗ್ಲಾ, 4ನೇ ದಿನದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 272 ರನ್ ಗಳಿಸಿತ್ತು. ವಿಕೆಟ್ ಉಳಿಸಿಕೊಂಡು ಕೊನೆಯ ದಿನ ಬಾಂಗ್ಲಾ 241 ರನ್ ಪೇರಿಸಬೇಕಿತ್ತು.ದ್ವಿತೀಯ ಇನ್ನಿಂಗ್ಸ್ ನಲ್ಲಿ ಬಾಂಗ್ಲಾ 324 ರನ್ನಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಭಾರತದ ಆಲ್ ರೌಂಡ್ ಆಟಕ್ಕೆ ಶರಣಾಗಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ಚೇತೇಶ್ವರ್ ಪೂಜಾರಾ 90 ರನ್, ಶ್ರೇಯಸ್ ಅಯ್ಯರ್ ಅವರ 86 ರನ್, ಅಶ್ವಿನ್ ಅವರ 58, ರಿಷಬ್ ಪಂತ್ 46 ರನ್ ಹಾಗೂ ಕೊನೆಯಲ್ಲಿ ಕುಲ್ ದೀಪ್ ಅವರ 40 ಸಹಾಯದಿಂದ 404 ರನ್ ಗಳಿಸಿತ್ತು.
ಮೊದಲ ಇನ್ನಿಂಗ್ಸ್ ರನ್ ಬೆನ್ನಟ್ಟಿದ ಬಾಂಗ್ಲಾ ಆಟಗಾರರು 150 ರನ್ ಗೆ ಸರ್ವಪತನವಾಯಿತು. ಕುಲ್ ದೀಪ್ 5 ವಿಕೆಟ್ ಹಾಗೂ ಸಿರಾಜ್ 3 ವಿಕೆಟ್ ಪಡೆದು ಶ್ರೇಷ್ಠಮಟ್ಟದ ಬೌಲಿಂಗ್ ನಿಭಾಯಿಸಿದರು.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: ಕಿಂಗ್ ಪಿನ್ ಆರ್.ಡಿ.ಪಾಟೀಲ್ ಜೈಲಿನಿಂದ ಬಿಡುಗಡೆ
ಎರಡನೇ ಇನ್ನಿಂಗ್ಸ್ ನಲ್ಲೂ ಭರ್ಜರಿ ಬ್ಯಾಟ್ ಮಾಡಿದ ಪೂಜಾರ 102 ರನ್ ತಂಡಕ್ಕೆ ನೀಡಿದರು. ಶುಭ್‌ಮನ್ ಗಿಲ್ ಚೊಚ್ಚಲ 110 ಗಳಿಸಿದರು. ಎರಡನೇ ಇನ್ನಿಂಗ್ ನಲ್ಲಿ ಎರಡು ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿದ ಭಾರತವು ಡಿಕ್ಲೇರ್ ಮಾಡಿಕೊಂಡು, ಬಾಂಗ್ಲಾಗೆ 513 ರನ್ ಗಳ ಗೆಲುವಿನ ಗುರಿ ನೀಡಿತ್ತು.
4ನೇ ದಿನ ಬಾಂಗ್ಲಾದ ಎಡಗೈ ಆರಂಭಕಾರ ಝಾಕಿರ್ ಹಸನ್ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿದ್ದು ಬಾಂಗ್ಲಾ ಆಸರೆಯಾಯಿತು. ನಜ್ಮುಲ್ ಅವರನ್ನು ಕೀಪರ್ ಪಂತ್ ಕೈಗೆ ಕ್ಯಾಚ್ ಕೊಡಿಸಿದ ಉಮೇಶ್ ಯಾದವ್ ಭಾರತಕ್ಕೆ ಮೊದಲ ಯಶಸ್ಸು ತಂದಿತ್ತರು. ಬಳಿಕ ಬೆನ್ನು ಬೆನ್ನಿಗೆ ವಿಕೆಟ್ ಉರುಳುತ್ತ ಹೋಯಿತು. ಯಾಸಿರ್ ಅಲಿ (5), ಲಿಟನ್ ದಾಸ್ (19), ರಹೀಂ (23), ನುರುಲ್ ಹಸನ್ (3) ಬೇಗನೇ ಪೆವಿಲಿಯನ್ ಸೇರಿಕೊಂಡರು.
ಶಾಕಿಬ್ ಅಲ್ ಹಸನ್ ಕಪ್ತಾನನಾಗಿ ಹೆಚ್ಚು ಹೊತ್ತು ಕ್ರಿಸ್ ನಲ್ಲಿ ನಿಂತರೂ ಅವರಿಗೆ ಜೊತೆಯಾಟ ನೀಡುವಲ್ಲಿ ಉಳಿದವರು ವಿಫಲರಾದರು.
ಅಂತಿಮವಾಗಿ 324 ರನ್ನಿಗೆ ಬಾಂಗ್ಲಾ ಸರ್ವಪತನ ಕಂಡಿತು. ಟೀಮ್ ಇಂಡಿಯಾದ ಪರವಾಗಿ ಅಕ್ಷರ್ ಪಟೇಲ್ 4 ವಿಕೆಟ್ ಪಡೆದರೆ, ಕುಲ್ ದೀಪ್ ಯಾದವ್ 3 ಪ್ರಮುಖ ವಿಕೆಟ್ ಗಳನ್ನು ಪಡೆದರು. ಕುಲ್ ದೀಪ್ ಯಾದವ್ ಎರಡೂ ಇನ್ನಿಂಗ್ಸ್ ಸೇರಿ 8 ವಿಕೆಟ್ ಗಳನ್ನು ಪಡೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Team India: ಇಂಗ್ಲೆಂಡ್ ಸರಣಿಗಿಲ್ಲ ಪ್ರಮುಖ ಆಟಗಾರರು; ಯುವ ಬ್ಯಾಟರ್ ಗೆ ನಾಯಕತ್ವದ ಹೊಣೆ
Vijay Hazare : ವರುಣ್, ತಿಲಕ್ ಬ್ಯಾಟಿಂಗ್ ವೈಭವ; ಹೈದರಾಬಾದ್ ವಿರುದ್ದ ಸೋತ ಕರ್ನಾಟಕ
Video: ಆಸ್ಪತ್ರೆಯಲ್ಲಿ ‘ಚಕ್ ದೇ ಇಂಡಿಯಾ’ ಹಾಡಿಗೆ ವಿನೋದ್ ಕಾಂಬ್ಳಿ ನೃತ್ಯ.. ವಿಡಿಯೋ ವೈರಲ್
Blitz Chess: ಜೀನ್ಸ್ ಧರಿಸಲು ಫಿಡೆ ಅನುಮತಿ: ಬ್ಲಿಟ್ಜ್ ಚೆಸ್ ಆಡಲು ಕಾರ್ಲ್ಸನ್ ಸಿದ್ಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.