ಚಾಂಪಿಯನ್ಸ್‌ಟ್ರೋಫಿ ಅಭ್ಯಾಸ ಪಂದ್ಯ:ಬಾಂಗ್ಲಾವನ್ನು ಹೊಸಕಿ ಹಾಕಿದ ಭಾರತ


Team Udayavani, May 31, 2017, 11:14 AM IST

KARTHIK.jpg

ಲಂಡನ್‌: ಬ್ಯಾಟಿಂಗ್‌, ಬೌಲಿಂಗ್‌ ವಿಭಾಗ ಗಳೆರಡರಲ್ಲೂ ಅಮೋಘ ಪ್ರದರ್ಶನ ನೀಡಿದ ಭಾರತ ಮಂಗಳವಾರದ ದ್ವಿತೀಯ ಹಾಗೂ ಕೊನೆಯ ಚಾಂಪಿಯನ್ಸ್‌ ಟ್ರೋಫಿ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 240 ರನ್ನುಗಳ ಭಾರೀ ಅಂತರದಿಂದ ಬಗ್ಗುಬಡಿದಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 7 ವಿಕೆಟಿಗೆ 324 ರನ್‌ ಸೂರೆಗೈದಿತು. ಜವಾಬಿತ್ತ ಬಾಂಗ್ಲಾದೇಶ ಟೀಮ್‌ ಇಂಡಿಯಾದ ಬೌಲಿಂಗ್‌ ದಾಳಿಗೆ ದಿಕ್ಕಾಪಾಲಾಗಿ 23.5 ಓವರ್‌ಗಳಲ್ಲಿ 84 ರನ್ನಿಗೆ ರನ್ನಿಗೆ ಸರ್ವಪತನ ಕಂಡಿತು. 

ಇದರೊಂದಿಗೆ ಭಾರತ ಎರಡೂ ಅಭ್ಯಾಸ ಪಂದ್ಯಗಳನ್ನು ಗೆದ್ದಂತಾಯಿತು. ಮೊದಲ ಪಂದ್ಯದಲ್ಲೂ ನ್ಯೂಜಿಲ್ಯಾಂಡನ್ನು ಕಟ್ಟಿಹಾಕಿದ ಭಾರತ ಡಿ-ಎಲ್‌ ನಿಯಮದಂತೆ 45 ರನ್ನುಗಳಿಂದ ಗೆದ್ದಿತ್ತು. ಇನ್ನೊಂದೆಡೆ ಬಾಂಗ್ಲಾ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಎಡವಿತು. ಪಾಕಿಸ್ಥಾನ ವಿರುದ್ಧ 340ರಷ್ಟು ರನ್‌ ಗಳಿಸಿಯೂ ಅದು ಸೋತಿತ್ತು.

ಮೂರು ಅರ್ಧ ಶತಕಗಳು
ನ್ಯೂಜಿಲ್ಯಾಂಡ್‌ ವಿರುದ್ಧ ಮಳೆಯಿಂದಾಗಿ ಪರಿಪೂರ್ಣ ಬ್ಯಾಟಿಂಗ್‌ ನಡೆಸದ ಭಾರತ, ಬಾಂಗ್ಲಾದೇಶ ವಿರುದ್ಧ ಈ ಕೊರತೆಯನ್ನು ನೀಗಿಸಿಕೊಂಡಿತು. ಅಲ್ಲಿ ಅರ್ಧ ಶತಕ ಬಾರಿಸಿ ಅಜೇಯರಾಗಿ ಉಳಿದಿದ್ದ ನಾಯಕ ಕೊಹ್ಲಿ ಬಾಂಗ್ಲಾ ವಿರುದ್ಧ ಆಡಲಿಳಿಯಲಿಲ್ಲ. ಕಿವೀಸ್‌ ವಿರುದ್ಧ ಖಾತೆ ತೆರೆಯದೇ ಹೋಗಿದ್ದ ದಿನೇಶ್‌ ಕಾರ್ತಿಕ್‌ ಇಲ್ಲಿ ಸರ್ವಾಧಿಕ 94 ರನ್‌ ಬಾರಿಸಿ ನಿವೃತ್ತರಾದರು. ಅವರ 77 ಎಸೆತಗಳ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ, ಒಂದು ಸಿಕ್ಸರ್‌ ಒಳಗೊಂಡಿತ್ತು.

ಧವನ್‌-ಕಾರ್ತಿಕ್‌ 3ನೇ ವಿಕೆಟಿಗೆ ಸರಿಯಾಗಿ 100 ರನ್‌ ಪೇರಿಸಿದರು. ಧವನ್‌ ಗಳಿಕೆ 60 ರನ್‌. 67 ಎಸೆತ ಎದುರಿಸಿದ ಅವರು 7 ಬೌಂಡರಿ ಹೊಡೆದರು. ಆದರೆ ಆರಂಭಿಕನಾಗಿ ಮರಳಿದ ರೋಹಿತ್‌ ಶರ್ಮ ಕೇವಲ ಒಂದು ರನ್‌ ಮಾಡಿ ನಿರಾಸೆ ಮೂಡಿಸಿದರು. ರಹಾನೆ (11) ಮತ್ತೂಮ್ಮೆ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದರು. ಜಾಧವ್‌ 31 ರನ್‌ ಹೊಡೆದರು (38 ಎಸೆತ, 2 ಬೌಂಡರಿ, 1 ಸಿಕ್ಸರ್‌).

ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ “ಕೆನ್ನಿಂಗ್ಟನ್‌ ಓವಲ್‌’ನ ಎಲ್ಲ ದಿಕ್ಕುಗಳಿಗೂ ಚೆಂಡನ್ನು ಬಡಿದಟ್ಟಿದರು. ಪಾಂಡ್ಯ ಸಾಹಸದಿಂದಾಗಿ ಭಾರತದ ಮೊತ್ತ ಮುನ್ನೂರರ ಗಡಿ ದಾಟಿ ಮುನ್ನುಗ್ಗುವಂತಾಯಿತು. 54 ಎಸೆತ ಎದುರಿಸಿದ ಪಾಂಡ್ಯ 4 ಸಿಕ್ಸರ್‌, 6 ಬೌಂಡರಿ ನೆರವಿನಿಂದ 80 ರನ್‌ ಹೊಡೆದು ಅಜೇಯರಾಗಿ ಉಳಿದರು. ಇದರಲ್ಲಿ ಒಂದು ಸಿಕ್ಸರ್‌ ಅಂತಿಮ ಎಸೆತದಲ್ಲಿ ಬಂದಿತ್ತು. ರವೀಂದ್ರ ಜಡೇಜ 32 ರನ್ನುಗಳ ಕೊಡುಗೆ ಸಲ್ಲಿಸಿದರು (36 ಎಸೆತ, 1 ಸಿಕ್ಸರ್‌).

ಬಾಂಗ್ಲಾದೇಶ ತೀವ್ರ ಕುಸಿತ 
ದೊಡ್ಡ ಮೊತ್ತವನ್ನು ಬೆನ್ನಟ್ಟಲಾರಂಭಿಸಿದ ಬಾಂಗ್ಲಾದೇಶಕ್ಕೆ ಭಾರತದ ವೇಗದ ಬೌಲಿಂಗ್‌ ದಾಳಿಯನ್ನು ಎದುರಿಸಿ ನಿಲ್ಲಲಾಗಲಿಲ್ಲ. ಭುವನೇಶ್ವರ್‌ ಕುಮಾರ್‌ (13ಕ್ಕೆ 3), ಉಮೇಶ್‌ ಯಾದವ್‌ (16ಕ್ಕೆ 3) ಘಾತಕ ದಾಳಿ ಸಂಘಟಿಸಿ ಬಾಂಗ್ಲಾ ಕತೆ ಮುಗಿಸಿದರು. ಶಮಿ, ಬುಮ್ರಾ, ಪಾಂಡ್ಯ, ಅಶ್ವಿ‌ನ್‌ ಒಂದೊಂದು ವಿಕೆಟ್‌ ಕಿತ್ತರು. 

ಸಂಕ್ಷಿಪ್ತ ಸ್ಕೋರ್‌: ಭಾರತ-7 ವಿಕೆಟಿಗೆ 324 (ಕಾರ್ತಿಕ್‌ 94, ಪಾಂಡ್ಯ ಔಟಾಗದೆ 80, ಧವನ್‌ 60, ರುಬೆಲ್‌ 50ಕ್ಕೆ 3, ಸುಂಝಾಮುಲ್‌ 74ಕ್ಕೆ 2). ಬಾಂಗ್ಲಾದೇಶ-23.4 ಓವರ್‌ಗಳಲ್ಲಿ 84 (ಮಿರಾಜ್‌ 24, ಸುಂಝಾಮುಲ್‌ 18, ಭುವನೇಶ್ವರ್‌ 13ಕ್ಕೆ 3, ಉಮೇಶ್‌ ಯಾದವ್‌ 16ಕ್ಕೆ 3).
 

ಟಾಪ್ ನ್ಯೂಸ್

Bangladeshದಲ್ಲಿ ಇಸ್ಕಾನ್‌ ನಿಷೇಧಿಸಬೇಕು: ಹೈಕೋರ್ಟ್‌ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!

Bangladeshದಲ್ಲಿ ಇಸ್ಕಾನ್‌ ನಿಷೇಧಿಸಬೇಕು: ಹೈಕೋರ್ಟ್‌ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!

Viduthalai Part 2 Trailer: ದಟ್ಟ ಕಾಡಿನಲ್ಲಿ ಸದ್ದು ಮಾಡುವ ಬಂದೂಕು – ದಮನಿತರ ಬದುಕು..

Viduthalai Part 2 Trailer: ದಟ್ಟ ಕಾಡಿನಲ್ಲಿ ಸದ್ದು ಮಾಡುವ ಬಂದೂಕು – ದಮನಿತರ ಬದುಕು..

1-lH

Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್

Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!

Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!

4-uv-fusion

Childhood Times: ಕಳೆದು ಹೋದ ಸಮಯ

Ekanath Shindhe

Maharashtra;ಏಕನಾಥ್ ಶಿಂಧೆ ಡಿಸಿಎಂ ಹುದ್ದೆ ಸ್ವೀಕರಿಸುವುದಿಲ್ಲ ಎಂದ ಶಿವಸೇನೆ!

Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ:‌ ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ

Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ:‌ ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

1-bumm

Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ

IPl-RCb

IPL Auction: ಆರ್‌ಸಿಬಿ ಫ್ರಾಂಚೈಸಿಯಿಂದ ಬಹಳ ಯೋಚಿಸಿ ಸಂತುಲಿತ ತಂಡ

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ

Hockey

Hockey: ಇಂದಿನಿಂದ ಜೂ. ಏಷ್ಯಾ ಕಪ್‌ ಹಾಕಿ; ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Bangladeshದಲ್ಲಿ ಇಸ್ಕಾನ್‌ ನಿಷೇಧಿಸಬೇಕು: ಹೈಕೋರ್ಟ್‌ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!

Bangladeshದಲ್ಲಿ ಇಸ್ಕಾನ್‌ ನಿಷೇಧಿಸಬೇಕು: ಹೈಕೋರ್ಟ್‌ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!

7-sirsi

Monkey disease: ಶೀಘ್ರ ಶಿರಸಿಗೆ‌ ಮಂಗನ ಕಾಯಿಲೆ ತಪಾಸಣಾ ಲ್ಯಾಬ್: ಭೀಮಣ್ಣ

Viduthalai Part 2 Trailer: ದಟ್ಟ ಕಾಡಿನಲ್ಲಿ ಸದ್ದು ಮಾಡುವ ಬಂದೂಕು – ದಮನಿತರ ಬದುಕು..

Viduthalai Part 2 Trailer: ದಟ್ಟ ಕಾಡಿನಲ್ಲಿ ಸದ್ದು ಮಾಡುವ ಬಂದೂಕು – ದಮನಿತರ ಬದುಕು..

5

Ullal: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು; ಸಮಸ್ಯೆ ಇರುವ ಮನೆಗಳಿಗೆ ಪೈಪ್‌ಲೈನ್‌

1-lH

Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.