ಬಾಂಗ್ಲಾದೆದುರು ಗೆಲುವಿಗೆ ಭಾರತ ಯತ್ನ
Team Udayavani, Mar 14, 2018, 7:30 AM IST
ಕೊಲಂಬೊ: ಸತತ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಭಾರತ ತಂಡವು ನಿದಹಾಸ್ ಟ್ರೋಫಿ ಟ್ವೆಂಟಿ20 ತ್ರಿಕೋನ ಸರಣಿಯ ತನ್ನ ಅಂತಿಮ ಲಿಂಗ್ ಪಂದ್ಯದಲ್ಲಿ ಬುಧವಾರ ಬಾಂಗ್ಲಾದೇಶವನ್ನು ಎದುರಿಸಲಿದ್ದು ಗೆಲುವಿಗಾಗಿ ಪ್ರಯತ್ನಿಸಲಿದೆ.
ಸರಣಿಯ ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾಕ್ಕೆ ಸೋತಿದ್ದ ಭಾರತವು ಆಬಳಿಕ ಎಚ್ಚರಿಕೆಯ ಆಟವಾಡಿ ಸತತ ಎರಡು ಪಂದ್ಯಗಳಲ್ಲಿ ಅಧಿಕಾರಯುತವಾಗಿ ಗೆದ್ದಿದೆ. ಬುಧವಾರದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲೂ ಜಯಭೇರಿ ಬಾರಿಸಿ ಫೈನಲಿಗೇರುವ ಆತ್ಮವಿಶ್ವಾಸವನ್ನು ಭಾರತ ಹೊಂದಿದೆ. ಅದಕ್ಕಾಗಿ ಯಾವುದೇ ಪರೀಕ್ಷೆ ನಡೆಸದೇ ಇರುವ ಬಲಿಷ್ಠ ತಂಡವನ್ನೇ ಕಣಕ್ಕೆ ಇಳಿಸಲು ಯೋಚಿಸಿದೆ. ಒಂದು ವೇಳೆ ಈ ಪಂದ್ಯದಲ್ಲಿ ಭಾರತ ಸೋತರೂ ಫೈನಲಿಗೇರುವ ಅವಕಾಶ ಭಾರತಕ್ಕಿದೆ. ಮಾ. 16ರಂದು ಶ್ರೀಲಂಕಾ ಮತ್ತು ಬಾಂಗ್ಲಾ ಅಂತಿಮ ಲೀಗ್ ಪಂದ್ಯ ಆಡಲಿದ್ದು ಈ ಫಲಿತಾಂಶದ ಬಳಿಕ ಫೈನಲಿಗೆ ಯಾರು ಅರ್ಹತೆ ಗಳಿಸುತ್ತಾರೆಂದು ತಿಳಿಯುತ್ತದೆ. ಒಂದು ವೇಳೆ ಮೂರು ತಂಡಗಳು ಒಂದೇ ರೀತಿಯ ಅಂಕ ಗಳಿಸಿದ್ದರೆ ಉತ್ತಮ ರನ್‌ಧಾರಣೆಯ ಆಧಾರದಲ್ಲಿ ಅಗ್ರ ಎರಡು ತಂಡಗಳು ಫೈನಲಿಗೇರಲಿವೆ. ರನ್ ಧಾರಣೆಯಲ್ಲಿ ಸದ್ಯ ಭಾರತ ಅಗ್ರಸ್ಥಾನದಲ್ಲಿದೆ.
ಕೂಟದ ಆರಂಭದಲ್ಲಿ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಆಟಗಾರರಿಗೆ ಅವಕಾಶ ನೀಡುವ ಬಗ್ಗೆ ಆಲೋಚನೆ ಮಾಡಲಾಗಿತ್ತು. ಆದರೆ ಮೊದಲ ಪಂದ್ಯದಲ್ಲಿ ಸೋತ ಬಳಿಕ ಈ ಅಲೋಚನೆ ಕೈಬಿಟ್ಟು ಗೆಲುವಿಗಾಗಿ ಇರುವ ಬಲಿಷ್ಠ ತಂಡವನ್ನು ಕಣಕ್ಕೆ ಇಳಿಸಲು ನಿರ್ಧರಿಸಲಾಯಿತು. ಇದರಿಂದಾಗಿ ತಂಡದಲ್ಲಿರುವ ದೀಪಕ್ ಹೂಡ, ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್ ಇನ್ನೂ ಆಡುವ ಅವಕಾಶ ಪಡೆದಿಲ್ಲ. ದ್ವಿತೀಯ ದರ್ಜೆಯ ತಂಡವನ್ನು ಇಲ್ಲಿಗೆ ಕಳುಹಿಸಿದ್ದರೂ ಇದರ ಉದ್ದೇಶ ಫಲ ನೀಡಲಿಲ್ಲ. ಹೂಡ ಅವರಿಗೆ ಶ್ರೀಲಂಕಾ ವಿರುದ್ಧದ ತವರಿನ ಸರಣಿಯಲ್ಲೂ ಆಡುವ ಅವಕಾಶ ಸಿಕ್ಕಿರಲಿಲ್ಲ.
ನಾಯಕ ರೋಹಿತ್ ಶರ್ಮ ಅವರ ಫಾರ್ಮ್ ಬಗ್ಗೆ ಭಾರತಕ್ಕೆ ಚಿಂತೆಯಾಗಿದೆ. ಅತ್ಯಂತ ಯಶಸ್ವಿ ಬಿಳಿ ಚೆಂಡಿನ ಆಟಗಾರರಲ್ಲಿ ಒಬ್ಬರಾಗಿರುವ ರೋಹಿತ್ ಅವರಿಂದ ಇನ್ನೂ ಶ್ರೇಷ್ಠ ಬ್ಯಾಟಿಂಗ್ ಹೊರಹೊಮ್ಮಿಲ್ಲ. ಧವನ್ ಬಿರುಸಿನ ಆಟವಾಡಿದ್ದರೂ ಭಾರತ ಉತ್ತಮ ಆರಂಭ ಪಡೆದಿಲ್ಲ. ಆಡಿದ ಮೂರು ಪಂದ್ಯಗಳಲ್ಲೂ ರೋಹಿತ್ ಅಲ್ಪ ಮೊತ್ತಕ್ಕೆ ಔಟಾಗಿ ನಿರಾಶೆ ಮೂಡಿಸಿದ್ದಾರೆ. ಸುರೇಶ್ ರೈನಾ ಮತ್ತು ಮನೀಷ್ ಪಾಂಡೆ ಮಧ್ಯಮ ಕ್ರಮಾಂಕದಲ್ಲಿ ಆಧರಿಸುವ ಪ್ರಯತ್ನ ನಡೆಸಿದ್ದಾರೆ.
ಬಾಂಗ್ಲಾ ಪ್ರತಿಹೋರಾಟ
ಶ್ರೀಲಂಕಾ ವಿರುದ್ಧ ದಾಖಲೆಯ 215 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ ಗೆದ್ದ ಬಾಂಗ್ಲಾದೇಶವು ಭಾರೀ ಆತ್ಮವಿಶ್ವಾಸದಿಂದ ಭಾರತವನ್ನು ಎದುರಿಸಲು ಸಿದ್ಧವಾಗಿದೆ. ಭಾರತ ವಿರುದ್ಧ ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸುವ ಸಾಧ್ಯತೆಯಿದೆ. ಒಂದು ವೇಳೆ ಬಾಂಗ್ಲಾ ಗೆದ್ದರೆ ಫೈನಲಿಗೇರುವ ಸಾಧ್ಯತೆಯೂ ಇದೆ, ಭಾರತವು ಮೊದಲ ಪಂದ್ಯದಲ್ಲಿ ಬಾಂಗ್ಲಾ ಮೊತ್ತವನ್ನು 139 ರನ್ನಿಗೆ ನಿಯಂತ್ರಿಸಿತ್ತು. ಆದರೆ ಮುಂದಿನ ಪಂದ್ಯದಲ್ಲಿ ತಮಿಮ್ ಇಕ್ಬಾಲ್, ಲಿಟನ್ ದಾಸ್, ಮುಶ್ಫಿàಕರ್ ರಹೀಂ ಭರ್ಜರಿಯಾಗಿ ಆಡಿದ್ದರಿಂದ ಶ್ರೀಲಂಕಾ ನೀಡಿದ ದಾಖಲೆ ಗುರಿಯನ್ನು ಮೆಟ್ಟಿ ಜಯಭೇರಿ ಸಾಧಿಸಿದ ಸಾಧನೆ ಮಾಡಿತ್ತು.
ಉಭಯ ತಂಡಗಳು
ಭಾರತ
ರೋಹಿತ್ ಶರ್ಮ (ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಸುರೇಶ್ ರೈನಾ, ಮನೀಷ್ ಪಾಂಡೆ, ದಿನೇಶ್ ಕಾರ್ತಿಕ್, ದೀಪಕ್ ಹೂಡ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ವಿಜಯ್ ಶಂಕರ್, ಶಾದೂìಲ್ ಠಾಕುರ್, ಜಯದೇವ್ ಉನಾದ್ಕತ್, ಮೊಹಮ್ಮದ್ ಸಿರಾಜ್, ರಿಷಬ್ ಪಂತ್.
ಬಾಂಗ್ಲಾದೇಶ
ಮಹಮುದುಲ್ಲ (ನಾಯಕ), ತಮಿಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಇಮ್ರುಲ್ ಕೆಯಿಸ್, ಮುಶ್ಫಿàಕರ್ ರಹೀಂ, ಶಬ್ಬೀರ್ ರೆಹಮಾನ್, ಮುಸ್ತಾಫಿಜುರ್ ರೆಹಮಾನ್, ರುಬೆಲ್ ಹೊಸೈನ್, ಟಸ್ಕಿನ್ ಅಹ್ಮದ್, ಅಬು ಹೈದರ್, ಅಬು ಜಯೇದ್, ಅರಿಫುಲ್ ಹಕ್, ನಜ್ಮುಲ್ ಇಸ್ಲಾಮ್, ನುರುಲ್ ಹಸನ್, ಮೆಹಿದಿ ಹಸನ್, ಲಿಟನ್ ದಾಸ್.
ಪಂದ್ಯ ಆರಂಭ: ರಾತ್ರಿ 7 ಗಂಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.