ಓವಲ್‌ನಲ್ಲಿ ಇಂದಿನಿಂದ 4ನೇ ಟೆಸ್ಟ್ ಪಂದ್ಯ: ಆಯ್ಕೆ ಗೊಂದಲದಲ್ಲಿ ಭಾರತ
Team Udayavani, Sep 2, 2021, 5:00 AM IST
ಲಂಡನ್: ಲೀಡ್ಸ್ ಟೆಸ್ಟ್ ಪಂದ್ಯದ ಮೊದಲ ದಿನವೇ 78 ರನ್ನಿಗೆ ಕುಸಿದು ಸೋಲನ್ನು ಮೈಮೇಲೆ ಎಳೆದುಕೊಂಡ ಭಾರತಕ್ಕೆ ಗುರುವಾರದಿಂದ ಓವಲ್ ಸವಾಲು ಎದುರಾಗಲಿದೆ. ಅನೇಕ ಸಮಸ್ಯೆಗಳನ್ನು ನಿವಾರಿಸಿ ಕೊಂಡು ಮತ್ತೆ ಲಯ ಕಂಡುಕೊಳ್ಳಬೇಕಾದ ತೀವ್ರ ಒತ್ತಡ ಕೊಹ್ಲಿ ಪಡೆಯ ಮೇಲಿದೆ.
ಬ್ಯಾಟಿಂಗ್ ಬರಗಾದಲ್ಲಿರುವ ಉಪನಾಯಕ ಅಜಿಂಕ್ಯ ರಹಾನೆ ಅವರನ್ನು ಆಡುವ ಬಳಗದಲ್ಲಿ ಉಳಿಸಿಕೊಳ್ಳಬೇಕೇ, ಇಶಾಂತ್ ಶರ್ಮ ಅವರನ್ನು ಮುಂದುವರಿಸಬೇಕೇ, ಹನುಮ ವಿಹಾರಿ ಮತ್ತು ಶಾದೂìಲ್ ಠಾಕೂರ್ ಅವರನ್ನು ಆಡಿಸಬಹುದೇ, ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆಗೆ ಪರಿಹಾರವೇನು, ದಿಢೀರ್ ಒಳಬಂದ ಪ್ರಸಿದ್ಧ್ ಕೃಷ್ಣ ಅವರಿಗೆ ಅವಕಾಶ ನೀಡಬೇಕೇ… ಮೊದಲಾದ ಪ್ರಶ್ನೆಗಳಿಗೆ ಸೂಕ್ತ ಉತ್ತರ ಹಾಗೂ ಪರಿಹಾರ ಕಂಡುಕೊಂಡ ಬಳಿಕವಷ್ಟೇ ಆಡುವ ಬಳಗಕ್ಕೊಂದು “ನಿರ್ದಿಷ್ಟ ರೂಪ’ ಕೊಡಬೇಕಾದ ಸ್ಥಿತಿ ಭಾರತದ್ದಾಗಿದೆ.
ಓವಲ್ ಸ್ಪಿನ್ ಟ್ರ್ಯಾಕ್ :
ಹನ್ನೊಂದರ ಬಳಗದ ಒಂದು ಖಚಿತ ಪರಿವರ್ತನೆಯೆಂದರೆ ಗಾಯಾಳು ರವೀಂದ್ರ ಜಡೇಜ ಬದಲು ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಅವಕಾಶ ಪಡೆಯುವುದು. ಓವಲ್ ಟ್ರ್ಯಾಕ್ ಸ್ಪಿನ್ನಿಗೆ ಹೆಚ್ಚು ಒಲಿಯುವುದರಿಂದ ಹಾಗೂ ಇಂಗ್ಲೆಂಡ್‌ನಲ್ಲಿ 3 ಅತ್ಯುತ್ತಮ ಮಟ್ಟದ ಎಡಗೈ ಬ್ಯಾಟ್ಸ್‌ಮನ್‌ಗಳಿರುವುದರಿಂದ ಅಶ್ವಿನ್ ಆಯ್ಕೆ ಹೆಚ್ಚು ಸಮಂಜಸ ಎನಿಸಿಕೊಳ್ಳುತ್ತದೆ. ಸರ್ರೆ ಪರ ಕೌಂಟಿ ಪಂದ್ಯವಾಡಿ 6 ವಿಕೆಟ್ ಉಡಾಯಿಸಿದ ಸಾಧನೆಯೂ ಇವರದ್ದಾಗಿದೆ. ವಿಶ್ವದ ಅತ್ಯಂತ ಅನುಭವಿ ಸ್ಪಿನ್ನರ್ ಆಗಿರುವ ಅಶ್ವಿನ್ ಅವರನ್ನು ಹಿಂದಿನ ಮೂರು ಟೆಸ್ಟ್‌ಗಳಿಂದ ಹೊರಗಿರಿಸಿದ್ದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.
ಹೆಚ್ಚುವರಿ ಬ್ಯಾಟ್ಸ್‌ಮನ್ :
ಆಫ್ಸ್ಪಿನ್ನರ್ ಕೂಡ ಆಗಿರುವ ಹನುಮ ವಿಹಾರಿ ಆಯ್ಕೆಯ ರೇಸ್‌ನಲ್ಲಿದ್ದಾರೆ. ಆಗ ತಂಡದ ಬ್ಯಾಟಿಂಗ್ ವಿಭಾಗ ಕೂಡ ಬಲಿಷ್ಠ ಗೊಳ್ಳಲಿದೆ. ಭಾರತದ ಇರಾದೆಯೂ ಇದೇ ಆಗಿದೆ, ಹೆಚ್ಚುವರಿ ಬ್ಯಾಟ್ಸ್‌ಮನ್ ಒಬ್ಬರನ್ನು ಸೇರಿಸಿಕೊಂಡು ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸುವುದು. ಪೂಜಾರ, ಕೊಹ್ಲಿ, ರಹಾನೆ… ಎಲ್ಲರೂ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವುದು ಸರಣಿಯ ಆರಂಭದಿಂದಲೂ ಭಾರತವನ್ನು ಕಾಡುವ ಅತೀ ದೊಡ್ಡ ಸಮಸ್ಯೆಯಾಗಿದೆ. ಇಂಗ್ಲೆಂಡ್ ಈ ಸರಣಿಯನ್ನು ಸಮಬಲಕ್ಕೆ ತಂದಿರುವುದರಿಂದ ಭಾರತ ಈ ಸಮಸ್ಯೆಯನ್ನು ಓವಲ್‌ನಲ್ಲೇ ಬಗೆಹರಿಸಿಕೊಳ್ಳಬೇಕಿದೆ.
ರಹಾನೆ ಕಳೆದ 5 ಇನ್ನಿಂಗ್ಸ್‌ಗಳಲ್ಲಿ 19ರ ಸರಾಸರಿಯಲ್ಲಿ ಗಳಿಸಿದ್ದು 95 ರನ್ ಮಾತ್ರ. ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಹೇಳಿದಂತೆ, ರಹಾನೆ ಅವರನ್ನು ಉಳಿಸಿಕೊಂಡೇ ಹೆಚ್ಚುವರಿ ಬ್ಯಾಟ್ಸ್‌ಮನ್ ಓರ್ವನನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಜಾಣತನವಿದೆ.
ಭಾರತದ ಓಪನಿಂಗ್‌ನಲ್ಲೂ ಸ್ಥಿರತೆ ಇಲ್ಲ ಎಂಬುದು ಲೀಡ್ಸ್ ನಲ್ಲಿ ಸಾಬೀತಾಗಿತ್ತು. ಲಾರ್ಡ್ಸ್‌ನಲ್ಲಿ ಅಮೋಘ ಸೆಂಚುರಿ ಬಾರಿಸಿದ ಆರಂಭಕಾರ ಕೆ.ಎಲ್. ರಾಹುಲ್ ತೃತೀಯ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ವಿಫಲರಾಗಿದ್ದರು. ರಾಹುಲ್ ಮತ್ತೆ ಲಯ ಕಂಡುಕೊಳ್ಳಬೇಕಾದುದು ಅಗತ್ಯ.
ರೂಟ್ ಚಿಂತೆಯಲ್ಲಿ ಭಾರತ:
ಭಾರತಕ್ಕೆ ದೊಡ್ಡ ಸವಾಲಾಗಿ ಉಳಿದಿರುವವರು ನಾಯಕ ರೂಟ್. ಹ್ಯಾಟ್ರಿಕ್ ಶತಕದೊಂದಿಗೆ ಈಗಾಗಲೇ 500 ರನ್ ಗಡಿ ದಾಟಿರುವ ರೂಟ್ ಏಕಾಂಗಿಯಾಗಿ ತಂಡವನ್ನು ಮೇಲೆತ್ತಬಲ್ಲ ಸಾಹಸಿ. ರೂಟ್ ಸ್ಪಿನ್ ನಿಭಾಯಿಸುವಲ್ಲಿ ತುಸು ಹಿಂದೆ ಎಂಬುದು ರಹಸ್ಯವೇನಲ್ಲ. ಆಗ ಅಶ್ವಿನ್ ಸೇರ್ಪಡೆ ಹೆಚ್ಚು ಅರ್ಥಪೂರ್ಣವೆನಿಸಲಿದೆ.
ಟೆಸ್ಟ್ ತಂಡಕ್ಕೆ ಪ್ರಸಿದ್ಧ್ ಕೃಷ್ಣ :
ತಂಡದ ಆಡಳಿತ ಮಂಡಳಿಯ ಕೋರಿಕೆ ಮೇರೆಗೆ 4ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಬಿಸಿಸಿಐ ಪ್ರಕಟಿಸಿದೆ. ಇದರೊಂದಿಗೆ ಓವಲ್ ಟೆಸ್ಟ್ ಪಂದ್ಯದ ಆಯ್ಕೆ ಪ್ರಕ್ರಿಯೆ ತೀವ್ರ ಕುತೂಹಲ ಮೂಡಿಸಿದೆ.
ಪ್ರಸಿದ್ಧ್ ಕೃಷ್ಣ ಈಗಾಗಲೇ ಭಾರತ ಟೆಸ್ಟ್ ತಂಡದ ಮೀಸಲು ಆಟಗಾರನಾಗಿ ಇಂಗ್ಲೆಂಡ್‌ನಲ್ಲಿದ್ದಾರೆ. ಬುಮ್ರಾ, ಶಮಿ, ಸಿರಾಜ್ ಮೇಲಿನ ಬೌಲಿಂಗ್ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ಇವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಬೌಲಿಂಗ್ ಕೋಚ್ ಬಿ. ಅರುಣ್ ತಿಳಿಸಿದರು.
ಸಂಭಾವ್ಯ ತಂಡಗಳು :
ಭಾರತ: ಕೆ.ಎಲ್. ರಾಹುಲ್, ರೋಹಿತ್ ಶರ್ಮ, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಭ್ ಪಂತ್, ಆರ್. ಅಶ್ವಿನ್, ಮೊಹಮ್ಮದ್ ಶಮಿ, ಬುಮ್ರಾ, ಸಿರಾಜ್.
ಇಂಗ್ಲೆಂಡ್: ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲಾನ್, ಜೋ ರೂಟ್ (ನಾಯಕ), ಮೊಯಿನ್ ಅಲಿ, ಜಾನಿ ಬೇರ್‌ಸ್ಟೊ, ಸ್ಯಾಮ್ ಬಿಲ್ಲಿಂಗ್ಸ್, ರಾಬಿನ್ಸನ್, ಕ್ರೆಗ್ ಓವರ್ಟನ್, ಮಾರ್ಕ್ ವುಡ್, ಜೇಮ್ಸ್ ಆ್ಯಂಡರ್ಸನ್/ ಕ್ರಿಸ್ ವೋಕ್ಸ್
ಆರಂಭ: ಅಪರಾಹ್ನ 3.30 ಪ್ರಸಾರ: ಸೋನಿ ನ್ಪೋರ್ಟ್ಸ್.
ಓವಲ್‌ನಲ್ಲಿ ಭಾರತ:
ಟೆಸ್ಟ್: 13 ,ಜಯ: 01, ಸೋಲು: 5 ಡ್ರಾ: 07
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.