World Cup 2023: ಇಂಡೋ – ಕಿವೀಸ್ ಸೆಮಿ ಕದನ; ಟಾಸ್ ಗೆದ್ದ ಭಾರತ
Team Udayavani, Nov 15, 2023, 1:33 PM IST
ಮುಂಬಯಿ: ಕ್ರಿಕೆಟ್ ವಿಶ್ವಕಪ್ ಕದನದ ಮೊದಲ ಸೆಮಿಫೈನಲ್ ಪಂದ್ಯದ ಹಣಾಹಣೆ ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಇಂಡೋ – ಕಿವೀಸ್ ಪಂದ್ಯದ ಟಾಸ್ ನಲ್ಲಿ ಹಿಟ್ ಮ್ಯಾನ್ ರೋಹಿತ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ಎರಡು ಬಲಾಢ್ಯರ ಹೋರಾಟ: ಈ ಬಾರಿಯ ವಿಶ್ವಕಪ್ ನಲ್ಲಿ ಭಾರತ ಸೋಲಿಲ್ಲದ ಸರದಾರನಾಗಿ ಮೆರದಿದೆ. ಆದರೆ ಸೆಮಿಫೈನಲ್ ಹಂತದಲ್ಲಿ ಎಡವಿ ಬಿದ್ದರೆ, ಕಪ್ ಗೆಲ್ಲುವ ಕನಸನ್ನು ನಾಲ್ಕು ವರ್ಷದ ಬಳಿಕವೇ ಕಾಣಬೇಕು. ಸತತ 9 ಪಂದ್ಯಗಳನ್ನು ಗೆದ್ದರೇನಂತೆ, ಮುಂದಿನೆರಡೂ ಪಂದ್ಯಗಳನ್ನು ವಶಪಡಿಸಿಕೊಳ್ಳುವುದು ಈ 9 ವಿಜಯಗಳಿಗಿಂತ ಕಠಿನ ಎಂಬ ಅರಿವು ಖಂಡಿತವಾಗಿಯೂ ಭಾರತಕ್ಕಿದೆ.
ಇನ್ನೊಂದೆಡೆ ಕಿವೀಸ್ ಪಡೆ ಭಾರತದ ವಿರುದ್ಧ ಅದರಲ್ಲೂ ವಿಶ್ವಕಪ್ ನಂತಹ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತದೆ ಎನ್ನುವುದನ್ನು ಊಹಿಸುವುದು ಕಷ್ಟಸಾಧ್ಯ. ಇದು ಭಾರತ-ನ್ಯೂಜಿಲ್ಯಾಂಡ್ ನಡುವಿನ ಸತತ 2ನೇ ವಿಶ್ವಕಪ್ ಸೆಮಿಫೈನಲ್. ನ್ಯೂಜಿಲ್ಯಾಂಡಿಗೆ ಸತತ 5ನೇ ಉಪಾಂತ್ಯ. 2019ರ ಮ್ಯಾಂಚೆಸ್ಟರ್ ಮೇಲಾಟದಲ್ಲಿ ಕಿವೀಸ್ ಪಡೆ ಕೊಹ್ಲಿ ಬಳಗವನ್ನು 18 ರನ್ನುಗಳಿಂದ ಕೆಡವಿ ಕೂಟದಿಂದ ಹೊರದಬ್ಬಿತ್ತು. ಭಾರತದ ಪಾಳೆಯದಲ್ಲಿ ಆ ಸೇಡು ಇನ್ನೂ ಕೊತ ಕೊತ ಕುದಿಯುತ್ತಿದೆ. ಈ ಬಾರಿ ಕೇನ್ ವಿಲಿಯಮ್ಸನ್ ಪಡೆಯನ್ನು ಹೊರದಬ್ಬಿದರೆ ಅಲ್ಲಿಗೆ ಲೆಕ್ಕ ಚುಕ್ತಾ ಆದಂತಾಗುತ್ತದೆ.
ಬ್ಯಾಟಿಂಗ್ – ಬೌಲಿಂಗ್ ನಲ್ಲೂ ಟೀಮ್ ಇಂಡಿಯಾವೇ ಫೇವರೇಟ್: ಭಾರತಕ್ಕೆ ಈ ಬಾರಿ ಪ್ಲಸ್ ಆಗಿರುವುದು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಳಲ್ಲೂ ನೀಡಿರುವ ಶ್ರೇಷ್ಠ ಪ್ರದರ್ಶನವೆನ್ನುವುದು ಗಮನಿಸಬೇಕಾದ ಅಂಶ.
ರೋಹಿತ್, ಗಿಲ್ ಆರಂಭದಲ್ಲಿ ಜೊತೆಯಾದರೆ, ಮಧ್ಯಮ ಕ್ರಮಾಂಕದಲ್ಲಿ ಕೊಹ್ಲಿ, ಅಯ್ಯರ್ ಕ್ರಿಸ್ ನಲ್ಲಿ ಜಾಸ್ತಿ ಹೊತ್ತು ನಿಂತರೆ ದೊಡ್ಡ ಮೊತ್ತವನ್ನು ಕಲೆಹಾಕುವುದು ಕಷ್ಟವೇನಲ್ಲ. ಇನ್ನು ಆ ಬಳಿಕ ಬರುವ ರಾಹುಲ್, ಸೂರ್ಯ ಬಿರುಸಿನಿಂದ ಬ್ಯಾಟ್ ಬೀಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಶಮಿ ವಿಕೆಟ್ ಪಡೆದರೆ, ಸಿರಾಜ್ ಪವರ್ ಪ್ಲೇನಲ್ಲಿ ವಿಕೆಟ್ ಕಬಳಿಸಿ ಒತ್ತಡಕ್ಕೆ ಸಿಲುಕಿಸುತ್ತಾರೆ. ಇತ್ತ ಬುಮ್ರಾ ವಿಕೆಟ್ ಜೊತೆಗೆ ಬೌಲ್ ಡಾಟ್ ಮಾಡಿ ಎದುರಾಳಿ ತಂಡದ ರನ್ ಗೆ ಬ್ರೇಕ್ ಹಾಕುತ್ತಾರೆ. ಇನ್ನೊಂದೆಡೆ ಕುಲ್ ದೀಪ್ ಹಾಗೂ ಜಡೇಜಾ ಅವರ ಅವಳಿ ದಾಳಿ ತಂಡಕ್ಕೆ ಪ್ಲಸ್ ಆಗಿದೆ.
ಕಮ್ಮಿಯೇನಿಲ್ಲ ಕಿವೀಸ್.. ಭಾರತಕ್ಕೆ ಹೋಲಿಸಿದರೆ ಕಿವೀಸ್ ತಂಡ ಕೂಡ ಯಾವ ರೀತಿಯಲ್ಲೂ ಕಮ್ಮಿಯಿಲ್ಲ, ಸೌಥಿ, ಟ್ರೆಂಟ್ ಬೌಲ್ಟ್, ಲಾಕಿ ಫರ್ಗುಸನ್ ಹಾಗೂ ಸ್ಯಾಂಟರ್ ಅವರ ಬೌಲಿಂಗ್ ಮೇಲೆ ತಂಡದ ಭರವಸೆ ಇದ್ದು, ಆರಂಭಿಕ ಬ್ಯಾಟರ್ ಗಳಾದ ಕಾನ್ವೆ, ರಚಿನ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಸಿಡಿದು ನಿಲ್ಲುವ ಡೇರಿಲ್ ಮಿಚೆಲ್ ಹಾಗೂ ಕೂಲ್ ಆಗಿ ತಂಡವನ್ನು ಮುನ್ನೆಡೆಸುವ ಕೇನ್ ವಿಲಿಯಮ್ಸನ್ ತಂಡದ ಬ್ಯಾಟಿಂಗ್ ಗೆ ಆಧಾರವಾಗಿದ್ದಾರೆ.
ತಂಡಗಳು:
ಭಾರತ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್
ನ್ಯೂಜಿಲೆಂಡ್:
ಡೆವಿನ್ ಕಾನ್ವೇ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಟಾಮ್ ಲ್ಯಾಥಮ್ (ಕೀಪರ್), ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.