ಕಿವೀಸ್ ವಿರುದ್ಧ ಭಾರತ ಗೆಲುವಿನ ಆರಂಭ
ಮೂರು ರಾಷ್ಟ್ರಗಳ ವನಿತಾ ಹಾಕಿ ಸರಣಿ
Team Udayavani, Dec 4, 2019, 11:47 PM IST
ಕ್ಯಾನ್‌ಬೆರಾ (ಆಸ್ಟ್ರೇಲಿಯ):ಮೂರು ರಾಷ್ಟ್ರಗಳ ಜೂನಿಯರ್ ವನಿತಾ ಹಾಕಿ ಪಂದ್ಯಾವಳಿಯಲ್ಲಿ ಭಾರತ ಗೆಲುವಿನ ಆರಂಭ ಪಡೆದಿದೆ. ಬುಧವಾರ ನಡೆದ ಮುಖಾಮುಖೀ ಯಲ್ಲಿ ಭಾರತ 2-0 ಗೋಲುಗಳಿಂದ ನ್ಯೂಜಿಲ್ಯಾಂಡಿಗೆ ಸೋಲುಣಿಸಿತು.
ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕಿಳಿದ ಭಾರತ 15ನೇ ನಿಮಿಷದಲ್ಲೇ ಗೋಲಿನ ಖಾತೆ ತೆರೆಯಿತು. ಸ್ಟ್ರೈಕರ್ ಲಾಲಿÅಂದಿಕಿ ಭಾರತಕ್ಕೆ ಮುನ್ನಡೆ ಒದಗಿಸಿದರು. ಇದಕ್ಕೂ ಮೊದಲು 3ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಭಾರತ ಕೈಚೆಲ್ಲಿತ್ತು.
ದ್ವಿತೀಯ ಕ್ವಾರ್ಟರ್‌ನಲ್ಲಿ ನ್ಯೂಜಿ ಲ್ಯಾಂಡಿಗೆ ಸಮಬಲದ ಅವಕಾಶ ಲಭಿಸಿತಾದರೂ ಭಾರತದ ಗೋಲ್‌ಕೀಪರ್ ಬಿಚೂ ದೇವಿ ಇದಕ್ಕೆ ತಡೆ ಯೊಡ್ಡಿದರು.
3ನೇ ಕ್ವಾರ್ಟರ್ ತೀವ್ರ ಪೈಪೋಟಿ ಯಿಂದ ಕೂಡಿತ್ತು. ಆರಂಭ ದಲ್ಲೇ ಭಾರತಕ್ಕೆ 2 ಪೆನಾಲ್ಟಿ ಕಾರ್ನರ್ ಲಭಿಸಿತಾದರೂ ಕಿವೀಸ್ ಗೋಲ್‌ಕೀಪರ್ ಕೆಲ್ಲಿ ಕಾರ್ಲಿನ್ ಇವೆರಡನ್ನೂ ಅಮೋಘ ರೀತಿಯಲ್ಲಿ ತಡೆದರು. ನ್ಯೂಜಿಲ್ಯಾಂಡಿನ ಅವಕಾಶವನ್ನು ಭಾರತ ವ್ಯರ್ಥಗೊಳಿಸಿತು.
ಕೊನೆಯ ನಿಮಿಷದಲ್ಲಿ ಗೋಲ್
4ನೇ ಕ್ವಾರ್ಟರ್‌ನ ಕೊನೆಯ ತನಕವೂ ಭಾರತ 1-0 ಮುನ್ನಡೆಯನ್ನು ಕಾಯ್ದುಕೊಂಡೇ ಬಂತು. ಪಂದ್ಯ ಮುಗಿಯಲು ಇನ್ನೇನು 30 ಸೆಕೆಂಡ್‌ಗಳು ಇರುವಾಗ ಲಭಿಸಿದ ಪೆನಾಲ್ಟಿ ಯೊಂದನ್ನು ಮಿಡ್ ಫೀಲ್ಡರ್ ಪ್ರಭಲೀನ್ ಕೌರ್ ಗೋಲಾಗಿಸುವಲ್ಲಿ ಯಶಸ್ವಿಯಾದರು.ಗುರುವಾರ ಭಾರತ ಆತಿಥೇಯ ಆಸ್ಟ್ರೇಲಿಯವನ್ನು ಎದುರಿಸಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.